Amruthadhaare: ಹೆತ್ತವರಲ್ಲಿ ಒರಟಾಗಿ ಮಾತನಾಡಿದ ಅಪೇಕ್ಷಾಗೆ ಗೌತಮ್ ಮಾತಿನೇಟು, ಜೀವನ್-ಮಹಿಮಾ ಗೃಹ ಪ್ರವೇಶ- ಅಮೃತಧಾರೆ ಇಂದಿನ ಕಥೆ
Amruthadhaare serial Yesterday Episode: ಜೀ ಕನ್ನಡ ಚಾನೆಲ್‌ನ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಕೆಲವೊಂದು ಬೆಳವಣಿಗೆಗಳು ನಡೆದಿವೆ. ವಿಶೇಷವಾಗಿ ಹೆತ್ತವರಲ್ಲಿ ಒರಟಾಗಿ ಮಾತನಾಡಿದ ಅಪೇಕ್ಷಾಗೆ ಗೌತಮ್ ದಿವಾನ್ ಕಣ್ತೇರೆಸುವ ಪ್ರಯತ್ನ ಮಾಡಿದ್ದಾರೆ.
Amruthadhaare serial Yesterday Episode: ಸದಾಶಿವ ತನಗೆ ಭಾಗ್ಯಮ್ಮ ಹೇಗೆ ಪರಿಚಯ ಎಂದು ಹೇಳುತ್ತಾರೆ. ತಾನು ಓದುವ ಸಮಯದಲ್ಲಿ ವಾರನ್ನ ಪಡೆಯುತ್ತಿದ್ದೆ. ಒಂದೊಂದು ವಾರ ಒಬ್ಬರೊಬ್ಬರ ಮನೆಯಲ್ಲಿ ಇದ್ದುಕೊಂಡು ಬಡ ವಿದ್ಯಾರ್ಥಿಗಳು ಓದುತ್ತಿದ್ದರು. ನಾನು ಕೂಡ ಅದೇ ರೀತಿ ಭಾಗ್ಯಕ್ಕನ ಮನೆಯಲ್ಲೂ ವಾರನ್ನ ಮಾಡುತ್ತಿದ್ದೆ. ಅವರ ಮನೆಯಲ್ಲಿ ವಾರನ್ನ ಅಂದರೆ ಮೃಷ್ಟಾನ್ನ ಸಿಗುತ್ತಿತ್ತು. ಹೈಸ್ಕೂಲ್‌ನಲ್ಲಿ ನನಗೆ ಅಕ್ಕ ನೆರವಾದ್ರು. ತನ್ನ ತಂದೆಗೆ ಹೇಳಿ ನನ್ನ ಓದಿಗೆ ನೆರವಾದ್ರು. ನನ್ನ ವಿದ್ಯಾಭ್ಯಾಸ, ಹಾಸ್ಟೇಲ್ ಖರ್ಚು ಎಲ್ಲವನ್ನೂ ಭಾಗ್ಯಕ್ಕ ನೋಡುತ್ತಿದ್ದರು. ನನ್ನಲ್ಲಿ ಭಾಗ್ಯಕ್ಕ ಒಂದು ದಿನ ಮುಂದೆ ಏನಾಗ್ತಿ ಎಂದು ಕೇಳಿದ್ರು. ನಾನು ಟೀಚರ್ ಆಗ್ತಿನಿ ಅಂದಿದ್ದೆ. ಅದಕ್ಕೆ ಭಾಗ್ಯಕ್ಕ "ನಾನು ನಿನಗೊಂದು ದೊಡ್ಡ ಸ್ಕೂಲ್ ಕಟ್ಟಿ ಕೊಡುವೆ. ಅದರಲ್ಲಿ ಡೊನೆಷನ್ ಇರೋದಿಲ್ಲ. ಆ ಸ್ಕೂಲ್ ನೀನೇ ನಡೆಸಿಕೊಂಡು ಹೋಗಬೇಕು ಎಂದು ಹೇಳಿದ್ರು. ತನ್ನ ಬಾಲ್ಯದಲ್ಲಿಯೇ ಸಮಾಜದ ಕುರಿತು, ಶಿಕ್ಷಣದ ಕುರಿತು ಸಂಕಲ್ಪ ಮಾಡಿಕೊಂಡಿದ್ದರು" ಎಂದು ಭಾಗ್ಯಕ್ಕನ ಬಗ್ಗೆ ಸದಾಶಿವ ಹೇಳಿದಾಗ ಭೂಮಿಕಾ ಮತ್ತು ಗೌತಮ್ ಅವರು ಭಾವುಕರಾಗುತ್ತಾರೆ.
"ಆ ವಯಸ್ಸಿಗೆ ಅವರಿಗೆ ಇದ್ದ ವ್ಯಕ್ತಿತ್ವ, ದೊಡ್ಡತನ ಎಲ್ಲವೂ ಅದ್ಭುತವಾಗಿತ್ತು. ನನಗೆ ತಿಳಿದ ಪ್ರಕಾರ ಅಕ್ಕ ಸ್ಕೂಲ್ ಕಟ್ಟಲು ಪ್ರಯತ್ನ ಮಾಡುತ್ತಿದ್ದರು. ಅವರ ಯೋಜನೆ ಮುಂದಕ್ಕೆ ಹೋಗುತ್ತಿತ್ತು. ಮತ್ತೆ ಮದುವೆಯಾಗಿ ಹೋದ್ರು. ನಮ್ಮ ಸಂಪರ್ಕ ತಪ್ಪಿ ಹೋಗಿತ್ತು" ಎಂದು ಸದಾಶಿವ ಹೇಳುತ್ತಾರೆ. "ಇಷ್ಟು ವರ್ಷವಾದರೂ ಅವರನ್ನು ಗುರುತು ಹಿಡಿದ್ರಲ್ಲ" ಎಂದು ಗೌತಮ್ ಹೇಳುತ್ತಾರೆ. "ನೀವು ಇಷ್ಟು ಒಳ್ಳೆಯವರು ಎನ್ನುವುದಕ್ಕೆ ನನಗೆ ಈಗ ಕಾರಣ ಗೊತ್ತಾಯ್ತು. ಎಲ್ಲವೂ ಅಮ್ಮನಿಂದ ಬಂದದ್ದು" ಎಂದು ಸದಾಶಿವ ಹೊಗಳುತ್ತಾರೆ.
ಹೆತ್ತವರಿಗೆ ಅಪೇಕ್ಷಾ ಎದುರುತ್ತರ
ಇನ್ನೊಂದೆಡೆ ಅಪೇಕ್ಷಾ ಮುನಿಸಿನಿಂದ ಇದ್ದಾಳೆ. ಅಪ್ಪನನ್ನು ಮಾತನಾಡಿಸಲು ಹೋಗುವುದಿಲ್ಲ. ಮಲ್ಲಿ ಹೇಳಿದ್ರೂ ಹೋಗುವುದಿಲ್ಲ. "ಇಷ್ಟು ದಿನ ಒಂದು ಫೋನ್ ಮೆಸೆಜ್ ಇಲ್ಲ. ಅವರಾಗಿಯೇ ಎದುರಿಗೆ ಸಿಕ್ಕಿದ್ರೆ ಮಾತನಾಡ್ತಿನಿ. ಆದರೆ, ಸೆಂಟಿಮೆಂಟ್ ಏನೂ ಇಲ್ಲ" ಎಂದು ಅಪೇಕ್ಷಾ ಹೇಳಿದ್ದಾರೆ. "ಅವರು ನಿಮ್ಮ ಹೆತ್ತವರು. ಕರಳುಬಳ್ಳಿ ಸಂಬಂಧ" ಎಂದು ಮಲ್ಲಿ ಹೇಳುತ್ತಾಳೆ. "ನನಗೆ ಉಪದೇಶದ ಅಗತ್ಯವಿಲ್ಲ" ಎಂದು ಅಪೇಕ್ಷಾ ಹೇಳುತ್ತಾಳೆ. ಒಟ್ಟಾರೆ ಅಪೇಕ್ಷಾನ ಕ್ಯಾರೆಕ್ಟರ್ ಬದಲಾಗಿಲ್ಲ.
ಭೂಮಿಕಾಳ ಜತೆ ಅಪ್ಪ ಮತ್ತು ಅಮ್ಮ ಮಾತನಾಡುತ್ತ ಇದ್ದಾರೆ. "ಅಪೇಕ್ಷಾ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಾಳೆ" ಎಂದು ಭೂಮಿಕಾ ಸುಳ್ಳು ಹೇಳುತ್ತಾಳೆ. "ಈ ಮನೆಯಲ್ಲಿ ಅಪೇಕ್ಷಾ ತುಂಬಾ ಜವಾಬ್ದಾರಿಯಿಂದ ಇದ್ದಾಳೆ. ಎಲ್ಲರ ಜತೆ ಹೊಂದಿಕೊಂಡು ಹೋಗುತ್ತಿದ್ದಾಳೆ" ಎಂದು ಭೂಮಿಕಾ ಸುಳ್ಳು ಹೇಳುತ್ತಾಳೆ. "ನೀನು ಹೇಳುತ್ತಿರುವುದು ನಿಜಾನ, ನಮ್ಮ ಖುಷಿಗೆ ಹೇಳ್ತಾ ಇದ್ದೀಯ" ಎಂದು ಸದಾಶಿವ ಅನುಮಾನದಿಂದ ಕೇಳುತ್ತಾರೆ. ನಾವೇ ಹೋಗಿ ಮಾತನಾಡಿಸ್ತಿವಿ ಎಂದು ಅಪೇಕ್ಷಾನ ಕೋಣೆಗೆ ಹೋಗುತ್ತಾರೆ.
ಮಂದಾಕಿನಿ ತನ್ನ ಮಗಳ ಕಣ್ಣು ಮುಚ್ಚಿ ಸರ್‌ಪ್ರೈಸ್ ಎನ್ನುತ್ತಾರೆ. "ನಿನ್ನನ್ನು ನೋಡಲು ಬಂದ್ವಿ. ನೀನು ಇಲ್ಲಿದ್ದೀಯಾ" ಎಂದು ಮಂದಾಕಿನಿ ಕೇಳುತ್ತಾರೆ. "ಏನೂ ನೀವು ನನ್ನನ್ನು ನೋಡಲು ಬಂದ್ರ. ನಿಜಾವಾಗ್ಲೂ. ನಿಮಗಿನ್ನೂ ನಾನು ನೆನಪಿದ್ನಾ" ಎಂದು ಅಪೇಕ್ಷಾ ಒರಟಾಗಿ ಮಾತನಾಡುತ್ತಾಳೆ. "ಬೈದ ವೇ, ನನ್ನ ಹೆಸರು ಅಪೇಕ್ಷಾ ಸದಾಶಿವ ಅಲ್ಲ. ಅಪೇಕ್ಷಾ ಪಾರ್ಥ ದಿವಾನ್" ಎಂದು ಹೇಳುತ್ತಾಳೆ. ಸದಾಶಿವನಿಗೆ ಎಲ್ಲವೂ ಅರ್ಥವಾಗುತ್ತದೆ. "ಇಷ್ಟು ದಿನದಲ್ಲಿ ನಿಮಗೆ ನನ್ನ ನೆನಪಾಗಿಲ್ಲ ಅಲ್ವ. ನಾನು ಅಷ್ಟು ಕಾಲ್ ಮಾಡಿದ್ರೂ ರಿಸೀವ್ ಮಾಡಬೇಕು ಅನಿಸಿಲ್ವ. ನಿಮಗೆ ಮನಸ್ಸು ಕರಗಿಲ್ಲ ಅಲ್ವಾ. ಈಗ ಅಕ್ಕ ಭಾವ ಕರೆದ್ರು ಅಂತ ಬಂದಿರ್ತಿರಿ. ನಾನು ನಿಮಗೆ ಲೆಕ್ಕಕ್ಕೆ ಇಲ್ಲ" ಎಂದು ಅಪೇಕ್ಷಾ ಹೇಳುತ್ತಾಳೆ. ಅಪ್ಪ ಮತ್ತು ಅಮ್ಮ ಇಬ್ಬರು ದುಃಖಗೊಳ್ಳುತ್ತಾರೆ. "ಅವತ್ತು ಅಷ್ಟೆಲ್ಲ ನೋವು ಕೊಟ್ರಿ. ಅಷ್ಟೆಲ್ಲ ಮಾಡಿದ್ರೂ ಈಗ ಯಾವ ಮುಖ ಇಟ್ಟುಕೊಂಡು ಬಂದ್ರಿ. ನೀವಿನ್ನು ಹೊರಡಬಹುದು" ಎಂದೆಲ್ಲ ಮಾತನಾಡುತ್ತಾಳೆ. ಅದನ್ನು ದೂರದಲ್ಲಿ ಗೌತಮ್ ನೋಡುತ್ತ, ಕೇಳುತ್ತಾ ಇರುತ್ತಾರೆ.
ಅಪೇಕ್ಷಾಗೆ ಗೌತಮ್ ಮಾತಿನೇಟು
"ಅಪೇಕ್ಷಾ ಯಾರ ಜತೆ ಮಾತನಾಡ್ತಾ ಇದ್ದೀಯಾ ಎನ್ನುವುದು ಗೊತ್ತಾ" ಎಂದು ಗೌತಮ್ ಕೇಳುತ್ತಾರೆ. "ಭಾವ ಇವರು ಆ ರೀತಿ ಮಾಡಿದ್ದಾರೆ" ಎಂದು ಅಪೇಕ್ಷಾ ಹೇಳುತ್ತಾಳೆ. "ಕಾರಣ ಏನೇ ಇರಲಿ. ನೀನು ಮಾಡಿದ್ದು ತಪ್ಪು. ಅಮ್ಮ ಮತ್ತು ಅಮ್ಮ ಎನ್ನುವುದನ್ನು ನೋಡದೆ ನೀನು ಈ ರೀತಿ ಮಾತನಾಡಬಾರದಿತ್ತು. ನಿನಗೆ ಇತ್ತೀಚಿನ ಘಟನೆ ಮಾತ್ರ ನೆನಪಿರಬಹುದು. ಅದಕ್ಕಿಂತ ಮೊದಲು ನಿನ್ನನ್ನು ಸಾಕಿ ಬೆಳೆಸಿದ್ರಲ್ವ. ನಿನ್ನನ್ನು ತಲೆಯ ಮೇಲೆ ಹೊತ್ತು ಮೆರೆಸಿದ್ರಲ್ವ. ಅದು ನೆನಪಿಲ್ವ. ನೀನು ಕೇಳಿದ್ದೆಲ್ಲ ಕೊಟ್ಟು ಮೆರೆಸಿದ್ರಲ್ವ. ಯಾವುದೂ ನೆನಪಿಲ್ವ. ಯಾವುದನ್ನೂ ನಮ್ಮ ಮೂಗಿನ ನೇರಕ್ಕೆ ನಿಂತು ಯೋಚನೆ ಮಾಡಬಾರದು. ಒಂದು ಬಾರಿ ಅವರ ಜಾಗದಲ್ಲಿ ನಿಂತು ನೋಡು ಆಗ ಗೊತ್ತಾಗುತ್ತದೆ. ಹೆತ್ತವರ ಒದ್ದಾಟ ಏನು, ಕಷ್ಟ ಏನು ಅಂತ. ತಾಯಿಯಾದವಳು ಹೊತ್ತು ಹೆತ್ತು ಕಷ್ಟಪಡುತ್ತಾರೆ. ತಂದೆಯವನು ನಾವು ಬೆಳೆಯಲು ಸಾಕಷ್ಟು ಕಷ್ಟಪಡುತ್ತಾನೆ. ನಮ್ಮ ಬೆಳವಣಿಗೆಯಲ್ಲಿ ಅವರ ಹಾರೈಕೆ, ಶ್ರಮ ಇದೆ. ಅಪ್ಪ ಮತ್ತು ಅಮ್ಮ ತಮ್ಮ ಜೀವನವನ್ನು ಕಡೆಗಣಿಸಿ ಮಕ್ಕಳಿಗಾಗಿ ಕಷ್ಟಪಡುತ್ತಾರೆ" ಎಂದು ಗೌತಮ್ ದಿವಾನ್ ಹೇಳುತ್ತಾರೆ.
"ನೀನು ಈ ಮನೆಗೆ ಬಂದಾಗ ನಾನು ಖುಷಿಯಾಗಿದ್ದೆ. ಆದರೆ, ಅಪ್ಪ ಮತ್ತು ಅಮ್ಮನ ಜತೆ ಮಾತನಾಡಿದ ರೀತಿ ನೋಡಿ ನನಗೆ ಬೇಸರವಾಗಿದೆ. ಸಾರಿ ಕೇಳು" ಎಂದು ಗೌತಮ್ ಹೇಳುತ್ತಾರೆ. ಒಲ್ಲದ ಮನಸ್ಸಿನಿಂದ ಅಪೇಕ್ಷಾ ಸಾರಿ ಕೇಳುತ್ತಾಳೆ. ಇದಾದ ಬಳಿಕ ಸದಾಶಿವ "ನಮಗೆ ನೀವು ಮಕ್ಕಳಿಗಿಂತ ಹೆಚ್ಚು ಗೌರವ ಕೊಟ್ರಿ" ಎಂದು ಕಣ್ಣೀರಾಗುತ್ತಾರೆ. ಇದೇ ಸಮಯದಲ್ಲಿ ನಿಮ್ಮ ಸ್ಪೂರ್ತಿಯಿಂದ ಜೀವನ್ ಮತ್ತು ಮಹಿಮಾ ಮನೆ ಕಟ್ಟಿದ್ರು. ನೀವು ಎಲ್ಲರೂ ಗೃಹ ಪ್ರವೇಶಕ್ಕೆ ಬರಬೇಕು ಎಂದು ಸದಾಶಿವ ಆಹ್ವಾನಿಸುತ್ತಾರೆ. ಮುಂದಿನ ಎಪಿಸೋಡ್‌ಗಳಲ್ಲಿ ಜೀವ ಮತ್ತು ಮಹಿಮಾರ ಎಂಟ್ರಿಯಾಗುವ ಸೂಚನೆ ಈ ಮೂಲಕ ದೊರಕಿದೆ.
ವಿಭಾಗ