ಮನೆಯಲ್ಲಿ ಜೈದೇವ್-ದಿಯಾ ಚಕ್ಕಂದ, ಹಳೆ ಲೆಟರ್ ವಿಷಯ ಹೇಳಿ ಸುಧಾಳ ದ್ವೇಷ ಕಟ್ಟಿಕೊಂಡ ಸೃಜನ್- ಅಮೃತಧಾರೆ
ಅಮೃತಧಾರೆ ಧಾರಾವಾಹಿಯ ನಿನ್ನೆಯ ಎಪಿಸೋಡ್‌ನನಲ್ಲಿ ಜೈದೇವ್ ತನ್ನ ಮನೆಗೆ ದಿಯಾಳನ್ನು ಕರೆದುಕೊಂಡು ಬಂದಿದ್ದಾನೆ. ಇನ್ನೊಂದಡೆ ಗೌತಮ್ ದಿವಾನ್ ತನ್ನ ಕುಟುಂಬದ ಜತೆ ಕನಕದುರ್ಗ ಗೆಸ್ಟ್ ಹೌಸ್‌ಗೆ ಬರುತ್ತಾರೆ. ಹಳೆ ಲೆಟರ್ ವಿಷಯ ಹೇಳಿ ಸುಧಾಳ ಕೋಪಕ್ಕೆ ತುತ್ತಾಗುತ್ತಾನೆ ಸೃಜನ್.

ಅಮೃತಧಾರೆ ಧಾರಾವಾಹಿಯ ನಿನ್ನೆಯ ಎಪಿಸೋಡ್‌ನನಲ್ಲಿ ಜೈದೇವ್ ತನ್ನ ಮನೆಗೆ ದಿಯಾಳನ್ನು ಕರೆದುಕೊಂಡು ಬಂದಿದ್ದಾನೆ. ಇನ್ನೊಂದಡೆ ಗೌತಮ್ ದಿವಾನ್ ತನ್ನ ಕುಟುಂಬದ ಜತೆ ಕನಕದುರ್ಗ ಗೆಸ್ಟ್ ಹೌಸ್‌ಗೆ ಬರುತ್ತಾರೆ. ಆ ಗೆಸ್ಟ್ ಹೌಸ್ ನೋಡಿ ಭೂಮಿಕಾಗೆ ಅಚ್ಚರಿಯಾಗುತ್ತದೆ. ಇಷ್ಟೆಲ್ಲ ಯಾಕೆ ಖರ್ಚು ಮಾಡಬೇಕು, ಕ್ಲಯೆಂಟ್‌ಗಳಿಗೆ ಹೋಟೆಲ್ ರೂಂ ಮಾಡಿ ಕೊಡಬಹುದಲ್ವ ಎಂದು ಭೂಮಿಕಾ ಹೇಳುತ್ತಾಳೆ. ಇದು ತಂದೆ ಆ ಕಾಲದಲ್ಲಿ ಕಟ್ಟಿರುವ ಗೆಸ್ಟ್ ಹೌಸ್ ಎಂದು ಗೌತಮ್ ಹೇಳುತ್ತಾರೆ. ಹೀಗೆ, ಭೂಮಿಕಾ- ಗೌತಮ್, ಆನಂದ್- ಅಪರ್ಣ ಗೆಸ್ಟ್ ಹೌಸ್‌ನಲ್ಲಿ ಇಂದು ಹಾಯಾಗಿ ಕಾಲ ಕಳೆಯುತ್ತಿದ್ದಾರೆ.
ಇನ್ನೊಂದೆಡೆ ಸುಧಾ ಮತ್ತು ಸೃಜನ್ ಮಾತನಾಡುತ್ತಿದ್ದಾರೆ. ಇವರಿಬ್ಬರ ಬಾಲ್ಯದ ಪರಿಚಯ ಗೊತ್ತಾಗಿದೆ. ಹಳೆಯದನ್ನು ನೆನಪಿಸಿಕೊಂಡಿದ್ದಾರೆ. ನಿಮಗೆ ಅಂದು ತುಂಬಾ ಕಷ್ಟ ಇತ್ತು ಅಲ್ವಾ? ಅಷ್ಟೆಲ್ಲ ಹೇಗೆ ಓದಿದ್ರಿ ಎಂದು ಸುಧಾ ಕೇಳುತ್ತಾಳೆ. "ಪ್ರಪಂಚದ ಕಷ್ಟ ಎಲ್ಲಾ ನನ್ನ ಮನೆಯಲ್ಲಿ ಟೆಂಟ್ ಹಾಕಿ ಕೂತಿತ್ತು." ಎಂದು ಸೃಜನ್ ಹೇಳುತ್ತಾನೆ. "ಅಷ್ಟೆಲ್ಲ ಕಷ್ಟದ ನಡುವೆ ಇಷ್ಟೆಲ್ಲ ಓದಿದ್ರಿ, ಗ್ರೇಟ್" ಎಂದು ಸುಧಾ ಹೇಳುತ್ತಾಳೆ. "ಅಬ್ಬಾ ಇದೇ ಮೊದಲ ಬಾರಿಗೆ ನನ್ನ ಹೊಗಳಿದ್ರಿ" ಎಂದು ಸೃಜನ್ ಖುಷಿ ಪಡುತ್ತಾನೆ. ಈ ಸಮಯದಲ್ಲಿ ಏಕವಚನದಲ್ಲಿ ಮಾತನಾಡುತ್ತಾನೆ. ಆಮೇಲೆ ಕ್ಷಮೆ ಕೇಳುತ್ತಾನೆ. "ನೀವು ಚೆನ್ನಾಗಿ ಓದ್ತಾ ಇದ್ರಿ. ಓದು ಯಾಕೆ ಬಿಟ್ರಿ" ಎಂದು ಕೇಳುತ್ತಾನೆ. "ಅದೊಂದು ದೊಡ್ಡ ಕಥೆ. ನಾನು ಅಣ್ಣನ ಮನೆಯಿಂದ ಹೊರಬರಬೇಕಾಯಿತು. ಅಮ್ಮನ ಬದುಕು ಹೀಗಾಯಿತು. ಆ ಸಮಯದಲ್ಲಿ ಯಾರ ಜತೆಗೋ ಮದುವೆಯಾಗಿತ್ತು. ಮದುವೆಯಾದ ಬಳಿಕ ಬದುಕು ಇನ್ನಷ್ಟು ಕಷ್ಟವಾಯಿತು" ಎನ್ನುತ್ತಾಳೆ. "ಮುಗಿದು ಹೋದ ವಿಷಯದ ಬಗ್ಗೆ ಚಿಂತೆ ಮಾಡಬಾರದು" ಎಂದು ಸೃಜನ್ ಹೇಳುತ್ತಾನೆ. ನಿಮ್ಮ ಅಪ್ಪ ಅಮ್ಮ ಏನು ಮಾಡ್ತಾರೆ ಎಂದು ಕೇಳುತ್ತಾಳೆ. "ಅಪ್ಪ ಹೋದ ಬಳಿಕ ನಾನು ಜೀವನದಲ್ಲಿ ಸೀರಿಯಸ್ ಆದೆ" ಎಂದು ತನ್ನ ಬಗ್ಗೆ ಹೇಳುತ್ತಾರೆ. ಹೀಗೆ, ಇಬ್ಬರು ಹಳೆಯ ನೆನಪುಗಳಲ್ಲಿ ಭಾವುಕರಾಗುತ್ತಾರೆ.
ಜೈದೇವ್ ಮತ್ತು ದಿಯಾ ಚಕ್ಕಂದ
ತನ್ನ ಮನೆಗೆ ಜೈದೇವ್ ದಿಯಾಳನ್ನು ಕರೆದುಕೊಂಡು ಬಂದಿದ್ದಾನೆ. ಇವತ್ತು ಈ ಮನೆಯಲ್ಲಿ ನಾವಿಬ್ಬರೇ. ಇವತ್ತು ನಾನೇ ಬೇಟೆಯಾಡುವೆ. ತುಂಬಾ ಖುಷಿಯಾಗಿದೆ ಎಂದು ಜೈದೇವ್ ಹೇಳುತ್ತಾನೆ. "ನನಗೂ ಈ ಮನೆಯ ಸೊಸೆಯಾದಷ್ಟೇ ಖುಷಿಯಾಗಿದೆ" ಎನ್ನುತ್ತಾಳೆ ದಿಯಾ. ಇದಾದ ಬಳಿಕ ಹೆಂಡತಿ ರೀತಿ ಸೇರು ಒದ್ದು ಮನೆಗೆ ಪ್ರವೇಶಿಸಲು ವ್ಯವಸ್ಥೆ ಮಾಡುತ್ತಾನೆ. ಆಕೆ ಬಲಗಾಲಿಟ್ಟು ಒಳಗೆ ಪ್ರವೇಶಿಸುತ್ತಾಳೆ.
ಸುಧಾಳ ದ್ವೇಷ ಕಟ್ಟಿಕೊಂಡ ಸೃಜನ್
ಲಚ್ಚಿ ತನ್ನ ತಾಯಿಯಲ್ಲಿ ಮಾತನಾಡುತ್ತಾಳೆ. "ನನ್ನ ಫ್ರೆಂಡ್ ನಿಮಗೂ ಫ್ರೆಂಡ್ ಎಂದು ಯಾಕೆ ಹೇಳಿಲ್ಲ. ನಿಮಗೆ ಆ ಸಮಯದಲ್ಲಿ ಲೆಟರ್ ಬರೆದಿದ್ರಂತೆ" ಎಂದು ಲಚ್ಚಿ ಕೇಳುತ್ತಾಳೆ. ಇದನ್ನು ಕೇಳಿ ಸುಧಾಳಿಗೆ ಕೋಪ ಬರುತ್ತದೆ. "ಇವನಿಗೆ ಕಲಿಸ್ತಿನಿ" ಎಂದು ಸೃಜನ್ ಬಳಿಗೆ ಹೋಗಿ ಬಯ್ಯುತ್ತಾಳೆ. "ಹೋಗಿ ಹೋಗಿ ಮಗುವಿನ ಹತ್ತಿರ ಇಲ್ಲದ ವಿಷಯ ಎಲ್ಲಾ ಹೇಳಿದ್ರಲ್ವ ಬುದ್ದಿ ಇಲ್ವಾ" ಎಂದು ಬಯ್ಯುತ್ತಾಳೆ. ಸೃಜನ್ ತಲೆ ಮೇಲೆ ಕೈಯಿಟ್ಟುಕೊಳ್ಳುತ್ತಾನೆ. "ನೀವು ಅವಳಿಗೆ ಓದಿಸಿದ್ದು ಸಾಕು, ಎಲ್ಲಾ ಸಾಕು" ಎಂದು ಹೇಳುತ್ತಾಳೆ. "ಏನು ಕರ್ಮ ಗುರು, ಎಲ್ಲಾ ಸರಿಯಾದಗ ಹೀಗಾಯ್ತಲ್ವ" ಎಂದು ಸೃಜನ್ ಬೇಸರಪಟ್ಟುಕೊಳ್ಳುತ್ತಾನೆ.
ದಿಯಾ ಬಲಗಾಲಿಟ್ಟು ಒಳಪ್ರವೇಶಿಸುವ ಸಮಯದಲ್ಲಿ ಮನೆಯ ಹತ್ತಿರ ಮಲ್ಲಿ ಬರುತ್ತಾಳೆ. ದಿಯಾ ಮತ್ತು ಜೈದೇವ್ ಇದ್ಯಾವುದೂ ಗೊತ್ತಿಲ್ಲದೆ ಗುಡ್ ಮೂಡ್‌ನಲ್ಲಿದ್ದಾರೆ. ಸಾಕಷ್ಟು ಮಾತನಾಡುತ್ತಾರೆ. ಮಲ್ಲಿ ದುರ್ಗಿಯಂತೆ, ಉಗ್ರಂ ಮಲ್ಲಿಯಾಗಿ ಮನೆಯ ಒಳಗೆ ಪ್ರವೇಶಿಸುತ್ತಾಳೆ. "ಈ ಮನೆಗೆ ಯಾರೂ ಬರಲು ಸಾಧ್ಯವಿಲ್ಲ, ಇಲ್ಲಿ ನಾನೇ ರಾಜ, ರಾಣಿ" ಎನ್ನುತ್ತಾನೆ. "ಈ ಮಿಟಕಲಾಡಿಗೆ ಈ ಮಲ್ಲಿ ಯಾರು ಎಂದು ನಾನು ತೋರಿಸುವೆ" ಎಂದು ಮಲ್ಲಿಯ ಸ್ವಗತ ಇರುತ್ತದೆ. ಸೀರಿಯಲ್ ಮುಂದುವರೆದಿದೆ.