Amruthadhaare: ಇದೇನಾಶ್ಚರ್ಯ! ಭೂಪತಿ ಮಾತ್ರವಲ್ಲ ಮಲ್ಲಿ ಕಂಡ್ರೆ ಜೈದೇವ್‌ಗೂ ನಡುಕ; ಅಮೃತಧಾರೆಯಲ್ಲಿ ಮಲ್ಲಿ ಈಗ ಜ್ವಾಲಾಮುಖಿ
Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ವರ್ತನೆ ಬದಲಾಗಿದೆ. ಪಾಪದ ಮಲ್ಲಿ ಈಗ ರಣ ಚಂಡಿಯಾಗಿದ್ದಾಳೆ. ಭೂಪತಿಯ ಕೊರಳಿಗೆ ಕತ್ತಿ ಹಿಡಿದ ಬಳಿಕ ಭೂಪತಿ ಮಾತ್ರವಲ್ಲದೆ ಜೈದೇವ್ ಕೂಡ ಈಕೆಗೆ ಭಯ ಬೀಳುತ್ತಿದ್ದಾನೆ.

Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಒಂದಿಷ್ಟು ಬೆಳವಣಿಗೆಗಳು ನಡೆದಿವೆ. ಮಲ್ಲಿ ಭೂಪತಿಗೆ ಬೈದದ್ದು, ಬೆದರಿಸಿದ್ದು ಗೌತಮ್‌ಗೆ ಇಷ್ಟವಾಗಲಿಲ್ಲ. "ಭೂಪತಿನ ಹೆದರಿಸು, ಬೆದರಿಸು ಅಂತ ನಿನಗೆ ಯಾರು ಹೇಳಿದ್ರು, ಅವರಿಗೆ ನಿನ್ನ ತಂದೆಯ ವಯಸ್ಸು, ಅವರ ಬಳಿ ಹೀಗೆಲ್ಲ ಮಾತನಾಡಬಾರದು" ಎಂದು ಗೌತಮ್ ಮಲ್ಲಿಗೆ ಬುದ್ದಿವಾದ ಹೇಳುತ್ತಾರೆ. ಭೂಪತಿಯ ಕತ್ತಿಗೆ ಕತ್ತಿ ಹಿಡಿದು ಮಲ್ಲಿ ಬೆದರಿಸಿದ್ದಳು. "ನಿಮ್ಮಿಬ್ಬರಿಗೆ ಅವರು ಮಾಡುವ ತೊಂದರೆ ನೋಡಲು ಆಗಲಿಲ್ಲ. ಅದಕ್ಕೆ ಹೋಗಿ ಬೈದೆ" ಎಂದು ಮಲ್ಲಿ ಹೇಳುತ್ತಾಳೆ. "ತಪ್ಪು ಮಾಡಿದ್ದು ಅವರು ತಾನೇ, ತಪ್ಪನ್ನು ಪ್ರಶ್ನಿಸಿದ್ದು ತಪ್ಪೇ" ಎಂದು ಮಲ್ಲಿ ಹೇಳುತ್ತಾಳೆ. "ಇದು ನೀನಲ್ಲ ಮಲ್ಲಿ. ನೀನು ಗಲಾಟೆ ಮಾಡೋದು ನನಗೆ ಇಷ್ಟವಾಗೋಲ್ಲ. ನೀನು ತಾತಾನ ಮೊಮ್ಮಗಳು. ಅವರಿಗೆ ಇದು ಗೊತ್ತಾದ್ರೆ ಬೇಸರವಾಗಬಹುದು. ಇನ್ಯಾವಾಗಲಾದ್ರು ಭೂಪತಿ ಸಿಕ್ರೆ ಅವರಲ್ಲಿ ಕ್ಷಮೆ ಕೇಳಬೇಕು" ಎಂದು ಗೌತಮ್ ಹೇಳುತ್ತಾರೆ. ಇದನ್ನು ನೋಡಿದಾಗ ಭೂಮಿಕಾಗೆ ಅಚ್ಚರಿಯಾಗುತ್ತದೆ.
ಹೆಣ್ಣಲ್ಲ, ಅವಳು ಜ್ವಾಲಾಮುಖಿ
ಭೂಪತಿ ಮತ್ತು ಜೈದೇವ್ ಕುಡಿಯುತ್ತಾ ಇದ್ದಾರೆ. "ನಿನ್ನ ವೈಫ್ ಕೊಟ್ಟ ಶಾಕ್ ಜೀವನದಲ್ಲಿ ಮರೆಯಲು ಆಗೋದಿಲ್ಲ" ಎಂದು ಭೂಪತಿ ಹೇಳುತ್ತಾರೆ. "ನಿಮಗೆ ಭಯನಾ? ವಿಲನ್‌ಗೆ" ಎಂದು ಜೈದೇವ್ ಕೇಳುತ್ತಾನೆ. "ಅದು ಹೆಣ್ಣಲ್ಲ, ಹೆಮ್ಮಾರಿ. ಥೌಸಂಡ್ ವಾಲ್ಟೇಜ್ ಶಾಕ್. ನಿನಗೆ ದಿಯಾ ರೀತಿಯ ಹೆಣ್ಣೇ ಉತ್ತಮ" ಎಂದು ಭೂಪತಿ ಭಯದಿಂದಲೇ ಹೇಳುತ್ತಾನೆ. "ನನ್ನ ಬದುಕಿನ ಕೆಟ್ಟ ಅಂಟು. ನನಗೆ ಅವಳಿಂದ ಮುಕ್ತಿ ದೊರಕಿದರೆ ಸಾಕು" ಎಂದು ಜೈದೇವ್ ಹೇಳುತ್ತಾನೆ. "ನಿನ್ನ ಹೆಂಡ್ತಿ ಅಂದಾಗ ಮುಗ್ಧೆ ಎಂದುಕೊಂಡಿದ್ದೆ. ಪುಣ್ಯಕೋಟಿ ಅಂದುಕೊಂಡಿದ್ದೆ. ಆದರೆ, ಅವಳು ಡೇಂಜರ್. ಇವತ್ತು ನನಗೆ ಅವಾಜ್ ಹಾಕಿದವಳು ನಾಳೆ ನೀನು ದಿಯಾಳನ್ನು ಮದುವೆಯಾದ್ರೆ ಹೇಗೆ ರಿಯಾಕ್ಟ್ ಆಗಬಹುದು. ಜ್ವಾಲಾಮುಖಿ ಆಗ್ತಾಳೆ" ಎಂದು ಜೈದೇವ್‌ಗೆ ಭಯವಾಗುವಂತೆ ಭೂಪತಿ ಹೇಳುತ್ತಾರೆ. "ನನಗೆ ಅವಾಜ್ ಹಾಕಿದ್ಲ . ನಾನೇ ವಿಚಾರಿಸಿಕೊಳ್ಳುವೆ. ಅವಳ ಕಥೆಯನ್ನು ನಾನೇ ಮುಗಿಸುವೆ" ಎಂದು ಭೂಪತಿ ಹೇಳುತ್ತಾರೆ. "ಅದೊಂದು ಮಾಡಿ. ಅವಳ ಕಥೆ ಮುಗಿಸಿ ನನಗೂ ದಿಯಾಳಿಗೂ ಮದುವೆ ಮಾಡಿಸಿ" ಎಂದು ಭೂಪತಿ ಹೇಳುತ್ತಾರೆ. "ದಿಯಾಳನ್ನು ಮೊದಲು ನಿನಗೆ ಮದುವೆ ಮಾಡಿಕೊಡುವೆ. ಬಳಿಕ ಅವಳ ಕಥೆ ಮುಗಿಸುವೆ" ಎಂದು ಭೂಪತಿ ಹೇಳುತ್ತಾರೆ.
ಭೂಮಿಕಾ ಮತ್ತು ಗೌತಮ್ ಮಾತನಾಡುತ್ತಾರೆ. "ನೀವು ನನ್ನಲ್ಲಿ ಏನೂ ಮುಚ್ಚಿಡುತ್ತಿಲ್ಲ ಅಲ್ವಾ" ಎಂದು ಭೂಮಿಕಾ ಕೇಳುತ್ತಾರೆ. "ಮಲ್ಲಿ ಭೂಪತಿಗೆ ಅವಾಜ್ ಹಾಕಿದ್ಲು. ನೀವು ಅವಳಿಗೆ ಬೈದ್ರಿ. ನೀವು ಭೂಪತಿ ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ರಿ. ಅದು ನನಗೆ ಅಚ್ಚರಿ ತಂದಿದೆ" ಎಂದು ಭೂಮಿಕಾ ಹೇಳುತ್ತಾಳೆ. "ಇವತ್ತು ಆ ಭೂಪತಿ ಏನೇ ಆಗಿರಬಹುದು. ಒಂದು ಕಾಲದಲ್ಲಿ ನಮ್ಮ ಫ್ಯಾಮಿಲಿಗೆ ತುಂಬಾ ಬೇಕಾದವ್ರು. ವಯಸ್ಸಾಗಿದೆ. ಒಂದು ಕೈ ಇಲ್ಲ. ಅವರ ಬದಲು ಮಲ್ಲಿಯ ಒಳ್ಳೆಯದಕ್ಕೆ ಮಾತು ಹೇಳಿದೆ" ಎಂದು ಭೂಮಿಕಾ ಕೇಳುತ್ತಾರೆ. ಹೀಗಿದ್ದರೂ ಗೌತಮ್ ಬಾಯಿ ಬಿಡೋದಿಲ್ಲ. ಮಲ್ಲಿ ಮತ್ತು ಭೂಪತಿ ತಂದೆ ಮಗಳು ಎಂದು ಗೊತ್ತಾದ್ರೆ ಇವರನ್ನು ಒಂದು ಮಾಡಲು ಭೂಮಿಕಾ ಪ್ರಯತ್ನಿಸುತ್ತಾಳೆ. ಆದರೆ, ನನ್ನಿಂದ ಅಜ್ಜ ಮಾತು ತೆಗೆದುಕೊಂಡಿದ್ದಾರೆ ಎಂದು ಗೌತಮ್ ಯೋಚಿಸುತ್ತಾರೆ. ಭೂಮಿಕಾಳಿಗೆ ಗೌತಮ್ ಸತ್ಯ ಏನೆಂದು ಹೇಳುವುದಿಲ್ಲ.
ಜೈದೇವ್‌ಗೂ ಶುರುವಾಯ್ತು ನಡುಕ
ಮಲ್ಲಿ ಮನೆಯಲ್ಲಿದ್ದಾಳೆ. ಜೈದೇವ್ ಬಂದಿದ್ದಾನೆ. "ಯಾಕೆ ಲೇಟಾಯ್ತು?" ಎಂದು ಕೇಳುತ್ತಾಳೆ. ಎಂದಿನಂತೆ "ಕೆಲಸದ ಕಾರಣದಿಂದ ಲೇಟಾಯ್ತು" ಎನ್ನುತ್ತಾನೆ ಜೈದೇವ್. "ಬನ್ನಿ ಊಟ ಮಾಡೋಣ" ಎಂದು ಕರೆಯುತ್ತಾಳೆ. "ನನ್ನದು ಊಟ ಆಯ್ತು" ಎಂದು ಹೇಳಲು ಯೋಚಿಸುತ್ತಾನೆ. ಆಗ ಕತ್ತಿ ಹಿಡಿದ ಮಲ್ಲಿಯ ನೆನಪಾಗುತ್ತದೆ. ಭಯದಿಂದಲೇ ಊಟಕ್ಕೆ ಬರಲು ಒಪ್ಪುತ್ತಾನೆ. "ಅಬ್ಬಾ ನಾನು ಮಲ್ಲಿಗೆ ಹೆದರಿದ್ನಾ? ಅವಳು ಮಾರಿಯಾಗುವ ಮುನ್ನ ಕೈತೊಳೆದು ಊಟ ಮಾಡಬೇಕು" ಎಂದು ಜೈದೇವ್ ಯೋಚಿಸುತ್ತಾನೆ. ಮಲ್ಲಿ ಊಟ ತಂದು ತಿನ್ನಿ ಎನ್ನುತ್ತಾಳೆ. ಕೈಯಲ್ಲಿ ಕತ್ತಿ ಹಿಡಿದುಕೊಂಡು ತಿನ್ರಿ ಎಂದು ಬೆದರಿಸುವಂತೆ ಜೈದೇವ್‌ಗೆ ಕಾಣಿಸುತ್ತದೆ. ಒಟ್ಟಾರೆ, ಭೂಪತಿಗೆ ಬೆದರಿಸಿದ ಮಲ್ಲಿ ಜೈದೇವ್‌ಗೂ ಭಯ ಹುಟ್ಟಿಸಿದ್ದಾಳೆ. ಒಂದೇ ಕಲ್ಲಿಗೆ ಎರಡು ಹಣ್ಣು ಉದುರಿದಂತೆ ಆಗಿದೆ.
ಧಾರಾವಾಹಿ ಹೆಸರು: ಅಮೃತಧಾರೆ.
ಎಪಿಸೋಡ್: ಏಪ್ರಿಲ್ 10, 2025
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ವರ್ಷ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).

ವಿಭಾಗ