ಗೌತಮ್‌ ಕಂಪನಿಯ ಷೇರುಗಳನ್ನು ಭೂಪತಿಗೆ ನೀಡಿದ ಜೀವನ್‌, ಗೌತಮ್‌ ದಿವಾನ್‌ ಬೃಹತ್‌ ಸಾಮ್ರಾಜ್ಯ ಮುಳುಗುವ ಆತಂಕ- ಅಮೃತಧಾರೆ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಗೌತಮ್‌ ಕಂಪನಿಯ ಷೇರುಗಳನ್ನು ಭೂಪತಿಗೆ ನೀಡಿದ ಜೀವನ್‌, ಗೌತಮ್‌ ದಿವಾನ್‌ ಬೃಹತ್‌ ಸಾಮ್ರಾಜ್ಯ ಮುಳುಗುವ ಆತಂಕ- ಅಮೃತಧಾರೆ ಧಾರಾವಾಹಿ

ಗೌತಮ್‌ ಕಂಪನಿಯ ಷೇರುಗಳನ್ನು ಭೂಪತಿಗೆ ನೀಡಿದ ಜೀವನ್‌, ಗೌತಮ್‌ ದಿವಾನ್‌ ಬೃಹತ್‌ ಸಾಮ್ರಾಜ್ಯ ಮುಳುಗುವ ಆತಂಕ- ಅಮೃತಧಾರೆ ಧಾರಾವಾಹಿ

Amruthadhaare serial Yesterday Episode: ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ಬೆಳೆಸಿದ ಬೃಹತ್‌ ದಿವಾನ್‌ ಕಂಪನಿ ಧರಶಾಹಿಯಾಗುವ ಆತಂಕ ಕಂಡುಬಂದಿದೆ. ದಿವಾನ್‌ ಕಂಪನಿಯ ಚೇರ್ಮನ್‌ ಪಟ್ಟದಲ್ಲಿ ಕುಳಿತುಕೊಳ್ಳುವ ಕನಸಿನಲ್ಲಿ ಜೈದೇವ್‌ ಇದ್ದಾನೆ. ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿವೆ.

ಗೌತಮ್‌ ಕಂಪನಿಯ ಷೇರನ್ನು ಭೂಪತಿಗೆ ನೀಡಿದ ಜೀವನ್‌ - ಅಮೃತಧಾರೆ ಧಾರಾವಾಹಿ
ಗೌತಮ್‌ ಕಂಪನಿಯ ಷೇರನ್ನು ಭೂಪತಿಗೆ ನೀಡಿದ ಜೀವನ್‌ - ಅಮೃತಧಾರೆ ಧಾರಾವಾಹಿ

Amruthadhaare serial Yesterday Episode: ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ಬೆಳೆಸಿದ ಬೃಹತ್‌ ದಿವಾನ್‌ ಕಂಪನಿ ಧರಶಾಹಿಯಾಗುವ ಆತಂಕ ಕಂಡುಬಂದಿದೆ. ರಾಜೇಂದ್ರ ಭೂಪತಿ ಮಾಡಿದ ಕಿತಾಪತಿಗೆ ದಿವಾನ್‌ ಕಂಪನಿಯ ಷೇರುಗಳನ್ನು ಕಳೆದುಕೊಳ್ಳುವ ಆತಂಕದಲ್ಲಿ ಗೌತಮ್‌ ಇದ್ದಾರೆ. ದಿವಾನ್‌ ಕಂಪನಿಯ ಚೇರ್ಮನ್‌ ಪಟ್ಟದಲ್ಲಿ ಕುಳಿತುಕೊಳ್ಳುವ ಕನಸಿನಲ್ಲಿ ಜೈದೇವ್‌ ಇದ್ದಾನೆ. ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿವೆ.

ಆನಂದ್‌ ಮತ್ತು ಗೌತಮ್‌ ಮಾತನಾಡುತ್ತಿದ್ದಾರೆ. "ಇಲ್ಲಿ ಇತಿಹಾಸ ಬೇಕಿಲ್ಲ. ಈಗ ಏನು ನಡೆಯುತ್ತಿದೆ ಎನ್ನುವುದೇ ಮುಖ್ಯ. ನಮ್ಮ ಸೆಂಟಿಮೆಂಟ್‌ಗೆ ಜಾಗವಿಲ್ಲ. ಮಾರುಕಟ್ಟೆ ಸೆಂಟಿಮೆಂಟ್‌ಗೆ ತಕ್ಕಂತೆ ನಡೆಯುತ್ತದೆ. ಇಲ್ಲಿ ಯಾರೂ ನಮ್ಮವರಲ್ಲ. ಎಲ್ಲವೂ ಭ್ರಮೆ" ಎಂದೆಲ್ಲ ಗೌತಮ್‌ ಷೇರುಪೇಟೆಯ ಕುರಿತು ಆನಂದ್‌ಗೆ ತಿಳಿಸುತ್ತಾನೆ. ಇದೇ ಸಮಯದಲ್ಲಿ ಜನರ ಮನೋಭಾವದ ಕುರಿತೂ ಹೇಳುತ್ತಾರೆ. "ಆದರೂ ಇದನ್ನು ಡೈಜೆಸ್ಟ್‌ ಮಾಡಲು ಆಗುತ್ತಿಲ್ಲ ಗೆಳೆಯ. ನಿನ್ನ ಮುಂದೆಯೇ ಇವರೆಲ್ಲರೂ ಮಾತನಾಡುತ್ತಿದ್ದಾರೆ" ಎಂದು ಆನಂದ್‌ ಹೇಳುತ್ತಾರೆ. "ಷೇರು ಪೇಪರ್‌ ಎಲ್ಲಾ ಸೇಫ್‌ ಆಗಿದೆಯಾ. ಅಪ್ಪ ಬರೆದಿಟ್ಟ ವಿಲ್‌ ತುಂಬಾ ಇಂಪಾರ್ಟೆಂಟ್‌" ಎಂದು ಆನಂದ್‌ ಹೇಳುತ್ತಾನೆ. "ಎಲ್ಲಾ ಮನೆಯಲ್ಲಿ ಇದೆ ಕಣೋ" ಎಂದು ಗೌತಮ್‌ ಹೇಳುತ್ತಾರೆ.

ನಾನು ಬೊಗಳುವ ನಾಯಿಯುಲ್ಲ, ಕಚ್ಚುವ ನಾಯಿ- ಭೂಪತಿ

ಭೂಪತಿ ಮತ್ತು ಜೈದೇವ್‌ ಮಾತನಾಡುತ್ತಾ ಇದ್ದಾರೆ. "ನಾನು ಬೊಗಳುವ ನಾಯಿಯುಲ್ಲ, ಕಚ್ಚುವ ನಾಯಿ" ಎಂದು ಭೂಪತಿ ಹೇಳುತ್ತಾನೆ. "ಏನು ಅಂಕಲ್‌ ನೀವು ಹುಲಿ" ಎಂದು ಜೈದೇವ್‌ ಹೇಳುತ್ತಾನೆ. "ನಾನು ಕೊಡುವ ಏಟಿಗೆ ಅವನು ವಿಲವಿಲ ಒದ್ದಾಡುತ್ತಾನೆ. ನಿನ್ನ ಅಣ್ಣ ಆಕಾಶ ನೋಡುತ್ತಾನೆ" ಎಂದು ಭೂಪತಿ ಹೇಳುತ್ತಾನೆ. "ಅಣ್ಣನಲ್ಲಿ ಹೆಚ್ಚು ಷೇರು ಇದೆ, ಅದು ಹೇಗೆ ಸಾಧ್ಯ" ಎಂದು ಜೈದೇವ್‌ ಕೇಳುತ್ತಾನೆ. "ನಿನ್ನ ಅಣ್ಣ ತನ್ನ ಹೆಸರಿನಲ್ಲಿರುವ ಒಂದಿಷ್ಟು ಷೇರುಗಳನ್ನು ಫ್ಯಾಮಿಲಿಯವರ ಹೆಸರಿಗೂ ಮಾಡಿರುತ್ತಾನೆ ಅಲ್ವಾ?" ಎಂದು ಭೂಪತಿ ಕೇಳುತ್ತಾನೆ. "ನಮ್ಮ ಹೆಸರಿಗೆ ಮಾಡಿಲ್ಲ, ಮಹಿಮಾಳಿಗೆ ಮದುವೆ ಮಾಡಿದ ಸಮಯದಲ್ಲಿ ಅವಳ ಹೆಸರಿಗೆ ಗಿಫ್ಟ್‌ ಅಂತ ಕೆಲವು ಷೇರು ನೀಡಿದ್ದಾನೆ" ಎಂದು ಜೈದೇವ್‌ ಹೇಳುತ್ತಾನೆ. ಇದೇ ಷೇರನ್ನು ಜೀವನ್‌ ಭೂಪತಿಗೆ ನೀಡಲಿದ್ದಾನೆ.

ಇನ್ನೊಂದೆಡೆ ಭೂಮಿಕಾ ಪೂಜೆ ಮಾಡುತ್ತಿದ್ದಾರೆ. ತೆಂಗಿನಕಾಯಿ ಒಡೆಯುವಾಗ ಕಾಯಿ ಕೆಟ್ಟು ಹೋಗಿದೆ. "ಕಾಯಿ ಕೆಟ್ಟು ಹೋಗಿದ್ರೆ ಅಪಶಕುನ, ದೇವರ ಪೂಜೆ ಮಾಡುವಾಗ ಕಾಯಿ ಕೆಟ್ಟು ಹೋದರೆ ಅದು ಅಪಶಕುನ" ಎಂದು ಅಜ್ಜಿ ಹೇಳುತ್ತಾರೆ. ಭೂಮಿಕಾ ಅಪಶಕುನದ ವಿರುದ್ಧ ಒಂದಿಷ್ಟು ಮಾತನಾಡುತ್ತಾರೆ. ಆದರೆ, ಅಜ್ಜಿ ಅದನ್ನು ಒಪ್ಪುವುದಿಲ್ಲ. "ಹಿಂದಿನವರು ಏನೋ ಒಂದು ಕಾರಣದಿಂದ ಹೀಗೆ ಮಾಡಿರುತ್ತಾರೆ, ಗೌತಮ್‌ ಬಂದಾಗ ದೃಷ್ಟಿ ತೆಗೆ" ಎಂದು ಅಜ್ಜಿ ಹೇಳುತ್ತಾರೆ. "ದೇವರು ಅಪಶಕುನದ ಹೆಸರಿನಲ್ಲಿ ಯಾವುದಾದರೂ ಒಂದು ಸೂಚನೆ ನೀಡಿರುತ್ತಾರೆ" ಎಂದು ಅಜ್ಜಿ ಹೇಳುತ್ತಾರೆ.

ಟಿವಿಯಲ್ಲಿ ಸುದ್ದಿ ಬರುತ್ತಿದೆ. ಗೌತಮ್‌ ಕಂಪನಿಯ ಕುರಿತು ಸುದ್ದಿ ಬರುತ್ತಿದೆ. ದಿವಾನ್‌ ಕಂಪನಿ ಪತನವಾಗುವುದೇ ಎಂದು ಸುದ್ದಿ ಬಿತ್ತರವಾಗುತ್ತಿದೆ. ಒಟ್ಟಾರೆ, ಗೌತಮ್‌ ಕಂಪನಿಯ ಕುರಿತು ಬಿಸಿಬಿಸಿ ಚರ್ಚೆಯಾಗುತ್ತಿದೆ.

ಭೂಪತಿ ಕಾಯುತ್ತಿರುವಾಗ ಜೀವನ್‌ ಬರುತ್ತಾನೆ. "ಒಂದು ಸಮಸ್ಯೆ ಆಗಿದೆ. ನಾನು ಇನ್ವೆಸ್ಟ್‌ ಮಾಡಿದ್ದಕ್ಕೆ ಏನು ಶ್ಯೂರಿಟಿ ಇದೆ ಎಂದು ಆಡಿಟರ್ಸ್‌ ಕೇಳ್ತಾ ಇದ್ದಾರೆ. ಐಟಿಯವರು ರೈಡ್‌ ಮಾಡಿದರೆ ಏನು ತೋರಿಸ್ತಿರಿ ಎನ್ನುವುದು ಅವರ ಆತಂಕ" ಎಂದು ಭೂಪತಿ ಹೇಳುತ್ತಾನೆ. "ನನ್ನಲ್ಲಿ ಶ್ಯೂರಿಟಿಗೆ ಏನೂ ಇಲ್ಲ. ಅಣ್ಣನ ಕಂಪನಿಯ ಕೆಲವು ಷೇರುಗಳು ಇವೆ" ಎಂದು ಜೀವನ್‌ ಹೇಳುತ್ತಾನೆ. ಭೂಪತಿಗೆ ಬೇಕಾದದ್ದು ಕೂಡ ಇದೇ. ಅರ್ಧ ಗಂಟೆಯಲ್ಲಿ ತರುವೆ ಎಂದು ಜೀವನ್‌ ಹೋಗುತ್ತಾನೆ. ಸ್ವಲ್ಪ ಹೊತ್ತಲ್ಲಿ ಷೇರುಪತ್ರಗಳನ್ನು ತಂದು ಭೂಪತಿಗೆ ನೀಡುತ್ತಾನೆ.

ಗೌತಮ್‌ ಮತ್ತು ಭೂಮಿಕಾ ಮಾತನಾಡುತ್ತಿದ್ದಾರೆ. ಬೆಳಗ್ಗೆ ಕಾಯಿ ಒಡೆದಾಗ ಏನೋ ಅಪಶಕುನ ಕಾಣಿಸಿದೆ. ಒಮ್ಮೆ ಕ್ರಾಸ್‌ ಚೆಕ್‌ ಮಾಡಿಕೊಳ್ಳಿ. ಡಾಕ್ಯುಮೆಂಟ್‌ ಎಲ್ಲಾ ಪಕ್ಕಾ ಇದೆಯಾ ಎಂದು ನೋಡಿ ಎಂದು ಭೂಮಿಕಾ ಹೇಳುತ್ತಾಳೆ.

ಭೂಪತಿ ಷೇರುಗಳನ್ನು ಜೈದೇವ್‌ಗೆ ತೋರಿಸುತ್ತಾನೆ. "ಇದು ಮಹಿಮಾಗೆ ನೀಡಿದ ಷೇರು. ಆದರೆ, ಇದು ಗೌತಮ್‌ ಪಾಲಿನ ಷೇರು ಅಲ್ಲ. ಇದು ಪ್ರಮೋಟರ್‌ ಪಾಲಿನ ಷೇರು" ಎಂದು ಜೈದೇವ್‌ ಹೇಳುತ್ತಾನೆ. "ಹಾಗಾದರೆ, ನಿನ್ನ ಅಣ್ಣನ ಫೈಲ್‌ಗಳು ಅವನ ಕೈಗೆ ಸಿಗದ ಹಾಗೆ ಮಾಡು" ಎಂದು ಭೂಪತಿ ಉಪಾಯ ಹೇಳುತ್ತಾನೆ. ಈ ಪ್ರಯತ್ನದಲ್ಲಿ ಜೈದೇವ್‌ ಯಶಸ್ಸು ಕಾಣಬಹುದೇ? ಅಮೃತಧಾರೆ ಧಾರಾವಾಹಿಯ ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner