Amruthadhaare: ಅಮ್ಮನ ಮಡಿಲಲ್ಲಿ ಗೌತಮ್‌, ದಿಯಾಳ ತೋಳಿನಲ್ಲಿ ಜೈದೇವ್‌; ಅಮೃತಧಾರೆ ಧಾರಾವಾಹಿಗೆ ಸದಾಶಿವ ಕುಟುಂಬ ಮರುಪ್ರವೇಶ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಅಮ್ಮನ ಮಡಿಲಲ್ಲಿ ಗೌತಮ್‌, ದಿಯಾಳ ತೋಳಿನಲ್ಲಿ ಜೈದೇವ್‌; ಅಮೃತಧಾರೆ ಧಾರಾವಾಹಿಗೆ ಸದಾಶಿವ ಕುಟುಂಬ ಮರುಪ್ರವೇಶ

Amruthadhaare: ಅಮ್ಮನ ಮಡಿಲಲ್ಲಿ ಗೌತಮ್‌, ದಿಯಾಳ ತೋಳಿನಲ್ಲಿ ಜೈದೇವ್‌; ಅಮೃತಧಾರೆ ಧಾರಾವಾಹಿಗೆ ಸದಾಶಿವ ಕುಟುಂಬ ಮರುಪ್ರವೇಶ

Amruthadhaare Serial yesterday Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಸದಾಶಿವ ಕುಟುಂಬ ಮರುಪ್ರವೇಶವಾಗಿದೆ. ಕಳೆದ ಹಲವು ತಿಂಗಳುಗಳಿಂದ ಸದಾಶಿವ ಕುಟುಂಬ ಸೀರಿಯಲ್‌ನಲ್ಲಿ ಇರಲಿಲ್ಲ. ಪಾರ್ಥನ ಮದುವೆ ಬಳಿಕ ಸದಾಶಿವ ಮನೆ ಬಿಟ್ಟು ಹೊರಗೆ ಹೋಗಿದ್ದರು.

ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ

Amruthadhaare Serial yesterday Episode: ಅಮ್ಮ ಮನೆಗೆ ಬಂದ ಬಳಿಕ ಗೌತಮ್‌ ತುಂಬಾ ಖುಷಿಯಾಗಿದ್ದಾರೆ. ಗೌತಮ್‌ ರಾತ್ರಿ ಲೈಟ್‌ ಆನ್‌ ಮಾಡಿ ಕುಳಿತಾಗ "ಯಾಕೆ ನಿದ್ದೆ ಬರಲಿಲ್ವ" ಎಂದು ಭೂಮಿಕಾ ಕೇಳುತ್ತಾಳೆ. ಇದಾದ ಬಳಿಕ ಇಬ್ಬರೂ ಮಾತನಾಡುತ್ತಾರೆ. ಮೊದಲು ಗೌತಮ್‌ಗೆ ಚಿಂತೆಯಿಂದ ನಿದ್ದೆ ಬರ್ತಾ ಇರಲಿಲ್ಲ. ಈಗ ಖುಷಿಯಿಂದ ನಿದ್ದೆ ಬರ್ತಾ ಇಲ್ಲ. ಇನ್ನೊಂದೆಡೆ ಮಲ್ಲಿ ತನ್ನ ಪತಿಗಾಗಿ ಕಾಯುತ್ತಿದ್ದಾಳೆ. ಜೈದೇವ್‌ಗೆ ಕಾಲ್‌ ಮಾಡುತ್ತಿದ್ದಾಳೆ. ಆದರೆ, ಆತ ಚಮಕ್‌ಚಲ್ಲೋ ಜತೆ ಜಾಲಿ ಮಾಡುತ್ತಿದ್ದಾನೆ. ಈ ಸಮಯದಲ್ಲಿ ಮಲ್ಲಿಯ ಕಾಲ್‌ ಬರುತ್ತದೆ. ಎಂದಿನಂತೆ ಸಬೂಬು ಹೇಳುತ್ತಾನೆ. ಇದಾದ ಬಳಿಕ ಚಮಕ್‌ಚಲ್ಲೋ ದಿಯಾಳ ಜತೆ ಪ್ರೀತಿ ಮುಂದುವರೆಸುತ್ತಾನೆ

ಇನ್ನೊಂದೆಡೆ ಗೌತಮ್‌ಗೆ ನಿದ್ದೆ ಬರುತ್ತಿಲ್ಲ ಎಂದಾಗ ಭೂಮಿಕಾ ಒಂದು ಐಡಿಯಾ ಮಾಡಿದ್ದಾಳೆ. ಗೌತಮ್‌ನನ್ನು ನೇರವಾಗಿ ಭಾಗ್ಯಮ್ಮನ ಕೋಣೆಗೆ ಕರೆದುಕೊಂಡು ಬಂದಿದ್ದಾಳೆ. ನೀವು ಮಲಗಬೇಕಾದ ಜಾಗ ಇದು, ನಿಮ್ಮ ಅಮ್ಮನ ಮಡಿಲು ಎನ್ನುತ್ತಾಳೆ. ಗೌತಮ ಭಾವುಕರಾಗಿ ಅಮ್ಮನ ಪಕ್ಕ ಹೋಗುತ್ತಾರೆ. "ಅಮ್ಮನ ಮಡಿಲಿಗಿಂತ ಒಳ್ಳೆಯ ತೊಟ್ಟಿಲು ಪ್ರಪಂಚದಲ್ಲಿ ಎಲ್ಲೂ ಇರಲಿಕ್ಕಿಲ್ಲ" ಎಂದುಕೊಳ್ಳುತ್ತಾನೆ. ಅಮ್ಮನ ಮಡಿಲಿಲ್ಲಿ ಮಲಗುತ್ತಾರೆ.

"ಅಮ್ಮ ನನಗೆ ನಿನ್ನ ಮಡಿಲಲ್ಲಿ ಮಲಗುತ್ತಾ ನಿನ್ನ ಹಾಡು ಕೇಳಬೇಕು ಎನಿಸುತ್ತದೆ. ಆದರೆ, ನಿನಗೆ ಈಗ ಮಾತನಾಡಲು ಆಗುತ್ತಿಲ್ಲ. ಸದ್ಯ ನೀನು ಸಿಕ್ಕಿದೆ ಅಲ್ವಾ. ಅಷ್ಟು ಸಾಕು" ಎಂದು ಗೌತಮ್‌ ಹೇಳುತ್ತಾರೆ. ಒಂದಿಷ್ಟು ಭಾವುಕ ಹಾಡುಗಳು ಹಿನ್ನೆಲೆಯಲ್ಲಿ ಇರುತ್ತವೆ. ಅಮ್ಮನಿಗೂ ಮಗನ ಮುಟ್ಟಿದಾಗ ಹಳೆಯ ನೆನಪುಗಳು ಬರುತ್ತವೆ.

ಭೂಮಿಕಾಗೆ ತಂದೆ ಸದಾಶಿವ ಕಾಲ್‌ ಮಾಡುತ್ತಾರೆ. ಈ ಮೂಲಕ ಸದಾಶಿವ ಫ್ಯಾಮಿಲಿ ಮತ್ತೆ ಅಮೃತಧಾರೆ ಸೀರಿಯಲ್‌ಗೆ ಆಗಮಿಸಿದೆ. "ಕಂದಾ ಎಂದು ಇನ್ನೊಮ್ಮೆ ಕರಿ ಅಪ್ಪಾ. ನಾನು ನಿಮ್ಮನ್ನು ತುಂಬಾ ಮಿಸ್‌ ಮಾಡಿಕೊಳ್ತಾ ಇದ್ದೆ" ಎಂದು ಭೂಮಿಕಾ ಹೇಳುತ್ತಾಳೆ. "ನಾನು ನಿನ್ನ ಅಮ್ಮ ನಿನ್ನ ಮನೆಗೆ ಬರ್ತಾ ಇದ್ದೇವೆ. ಅಲ್ಲೇ ಮಾತನಾಡೋಣ" ಎಂದು ಹೇಳುತ್ತಾರೆ ಸದಾಶಿವ. ಅಪ್ಪ ಮತ್ತು ಅಮ್ಮ ಬರುವ ಸುದ್ದಿ ಕೇಳಿ ಭೂಮಿಕಾ ಖುಷಿಯಿಂದ ಮಾತನಾಡುತ್ತಾಳೆ.

ಮಲ್ಲಿ ನಿದ್ದೆ ತೂಗುತ್ತ ಇದ್ದಾಳೆ. ಬೆಳಗ್ಗಿನ ತನಕ ಅಲ್ಲೇ ಇದ್ದಾಳೆ. ಆ ಸಮಯದಲ್ಲಿ ಜೈದೇವ್‌ ಬರುತ್ತಾನೆ. "ಕೆಲಸ ಮಾಡುತ್ತಾ ಬೆಳಕು ಹರಿದದ್ದೇ ಗೊತ್ತಾಗಲಿಲ್ಲ" ಎಂದು ಜೈದೇವ್‌ ಹೇಳುತ್ತಾನೆ. "ಭಾವ ಬೇಗ ಬರುತ್ತಾರೆ, ಪಾರ್ಥ ಬೇಗ ಬರ್ತಾರೆ, ನೀವು ಬರೋದಿಲ್ಲ" ಎಂದು ಕೋಪಗೊಳ್ಳುತ್ತಾಳೆ ಮಲ್ಲಿ. ಎಂದಿನಂತೆ ಸುಳ್ಳು ಹೇಳಿ ಮಲ್ಲಿಯ ಮನಸ್ಸು ಒಲಿಸಲು ಪ್ರಯತ್ನಿಸುತ್ತಾನೆ. "ನಿನಗೆ ನನ್ನ ಮೇಲೆ ಡೌಟ್‌ ಇದೆ ಅಲ್ವ. ಪಾರ್ಥನಿಗೆ ಹೇಳ್ತಿನಿ" ಎಂದು ಪಾರ್ಥನಿಗೆ ಕಾಲ್‌ ಮಾಡಿ ಕರೆಯುತ್ತಾನೆ. ಆತನಲ್ಲಿ ಯಾವುದೋ ಅಪಾರ್ಟ್‌ಮೆಂಟ್‌ ಸುದ್ದಿ ಮಾತನಾಡಿ ತುಂಬಾ ಕೆಲಸ ಇರುವ ರೀತಿ ಮಾತನಾಡುತ್ತಾನೆ. ಈ ಮೂಲಕ ಆ ಕೆಲಸದಲ್ಲಿ ರಾತ್ರಿ ಎಲ್ಲಾ ಬಿಝಿ ಇದ್ದೆ ಎನ್ನುವಂತೆ ನಾಟಕವಾಡುತ್ತಾನೆ.

ಮನೆಗೆ ಭೂಮಿಕಾನ ಅಪ್ಪ ಮತ್ತು ಅಮ್ಮ ಬರುತ್ತಾರೆ. ಒಂದಿಷ್ಟು ಉಭಯ ಕುಶಲೋಪರಿ ಮಾತನಾಡುತ್ತಾರೆ. ಆಗ ಯಾವುದೋ ಕೆಲಸದ ಮೇಲೆ ಪಾರ್ಥ ಕೆಳಗೆ ಬರುತ್ತಾನೆ. ತನ್ನ ಮಾವನನ್ನು ನೋಡಿ ಆತಂಕವಾಗುತ್ತದೆ. ಆಗ ಸದಾಶಿವ "ಪಾರ್ಥ ಹೇಗಿದಿಯಪ್ಪ?" ಎಂದು ಕೇಳುತ್ತಾರೆ. ಇದನ್ನು ಕೇಳಿ ಪಾರ್ಥನಿಗೆ ತುಂಬಾ ಖುಷಿಯಾಗುತ್ತದೆ. ಅತ್ತೆ ಮತ್ತು ಮಾವನ ಆಶೀರ್ವಾದ ಪಡೆಯುತ್ತಾನೆ. ಎಲ್ಲರಿಗೂ ಖುಷಿಯಾಗುತ್ತದೆ, ಶಕುಂತಲಾ ಮತ್ತು ಮನೆಹಾಳ ಮಾವನನ್ನು ಹೊರತುಪಡಿಸಿ. ಸೀರಿಯಲ್‌ ಮುಂದುವರೆಯುತ್ತದೆ.

ಧಾರಾವಾಹಿ ಹೆಸರು: ಅಮೃತಧಾರೆ.

ಎಪಿಸೋಡ್‌: ಜನವರಿ 7, 2024

ಯಾವ ಚಾನೆಲ್‌: ಜೀ ಕನ್ನಡ

ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

Whats_app_banner