Amruthadhaare serial: ಭಾಗ್ಯಮ್ಮನ ಕಥೆ ಮುಗಿಸಲು ಬಂದ ಶಕುಂತಲಾದೇವಿ; ಗೌತಮ್‌ ತಾಯಿಯ ರಕ್ಷಣೆ ಹೇಗೆ? ಅಮೃತಧಾರೆ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare Serial: ಭಾಗ್ಯಮ್ಮನ ಕಥೆ ಮುಗಿಸಲು ಬಂದ ಶಕುಂತಲಾದೇವಿ; ಗೌತಮ್‌ ತಾಯಿಯ ರಕ್ಷಣೆ ಹೇಗೆ? ಅಮೃತಧಾರೆ ಧಾರಾವಾಹಿ

Amruthadhaare serial: ಭಾಗ್ಯಮ್ಮನ ಕಥೆ ಮುಗಿಸಲು ಬಂದ ಶಕುಂತಲಾದೇವಿ; ಗೌತಮ್‌ ತಾಯಿಯ ರಕ್ಷಣೆ ಹೇಗೆ? ಅಮೃತಧಾರೆ ಧಾರಾವಾಹಿ

Amruthadhaare serial yesterday episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆಯಲ್ಲಿ ಭಾಗ್ಯಮ್ಮನ ಕಥೆ ಮುಗಿಸಲು ಶಕುಂತಲಾದೇವಿ ಮುಂದಾಗಿದ್ದಾರೆ. ಇದಕ್ಕೂ ಮೊದಲು ಶಕುಂತಲಾದೇವಿಯ ಮುಖಕ್ಕೆ ಭಾಗ್ಯಮ್ಮ ಉಗಿದಿದ್ದಾರೆ. ಬನ್ನಿ ನಿನ್ನೆಯ ಎಪಿಸೋಡ್‌ನಲ್ಲಿ ಏನೇನಾಯ್ತು ನೋಡೋಣ.

Amruthadhaare serial: ಭಾಗ್ಯಮ್ಮನ ಕಥೆ ಮುಗಿಸಲು ಬಂದ ಶಕುಂತಲಾದೇವಿ
Amruthadhaare serial: ಭಾಗ್ಯಮ್ಮನ ಕಥೆ ಮುಗಿಸಲು ಬಂದ ಶಕುಂತಲಾದೇವಿ

ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಶಕುಂತಲಾದೇವಿಯೇ ಭಾಗ್ಯಮ್ಮನಿಗೆ ಊಟ ತಿನ್ನಿಸುತ್ತಾಳೆ. ಆದರೆ, ಶಕುಂತಲಾದೇವಿಯನ್ನು ನೋಡಿದಾಗ ಭಾಗ್ಯಮ್ಮನಿಗೆ ಭಯ ಇರುತ್ತದೆ. ಶಕುಂತಲಾ ದೇವಿ ಬಾಯಿಗೆ ತುತ್ತು ನೀಡಲು ಬಂದಾಗ ಭಾಗ್ಯಮ್ಮ ದುರುಗಟ್ಟಿ ನೋಡುತ್ತಾಳೆ. ಇವಳಿಗೆ ಹಳೆಯದು ನೆನಪಾಯ್ತ ಎಂಬ ಆತಂಕ ಶಕುಂತಲಾದೇವಿಯನ್ನು ಕಾಡುತ್ತದೆ. ಆ ಸಮಯದಲ್ಲಿ ಅನ್ನವನ್ನು ಶಕುಂತಲಾದೇವಿಯ ಮೇಲೆ ಉಗಿಯುತ್ತಾರೆ ಭಾಗ್ಯಮ್ಮ. "ಅವರಿಗೆ ಗೊತ್ತಾಗಿಲ್ಲ" ಎಂದು ಸುಧಾ ಪೇಚಾಡುತ್ತ ಇದ್ದಾಳೆ. ಶಕುಂತಲಾದೇವಿಗೆ ಟೆನ್ಷನ್‌ ಆಗುವ ಸಮಯವಿದು. ಭಾಗ್ಯಮ್ಮನ ಸಾಯಿಸುವ ಕುರಿತು ಶಕುಂತಲಾ ಯೋಚನೆ ಗಟ್ಟಿಯಾಗುತ್ತದೆ.

ಇನ್ನೊಂದೆಡೆ ಗೌತಮ್‌ ಮತ್ತು ಭೂಮಿಕಾ ಲಹರಿ ನಡೆಯುತ್ತಿದೆ. ಇಷ್ಟು ದಿನ ಇಬ್ಬರು ಒಬ್ಬರನೊಬ್ಬರು ಮಿಸ್‌ ಮಾಡಿಕೊಂಡಿದ್ದರು. ಈಗ ಪ್ರೀತಿಯ ಮಾತುಗಳು ಅಮೃತಧಾರೆಯಾಗಿದೆ. ಇದೇ ಸಮಯದಲ್ಲಿ ಭೂಪತಿ ಮತ್ತು ಜೀವನ ಕುರಿತೂ ಚರ್ಚೆಯಾಗುತ್ತದೆ. ಇನ್ನೊಂದೆಡೆ ಭೂಮಿಕಾ ಮತ್ತು ಗೌತಮ್‌ನ ನಾಟಕದ ಕುರಿತು ಆನಂದ್‌ ಮತ್ತು ಅಪರ್ಣಾ ಮಾತನಾಡುತ್ತಿದ್ದಾರೆ. ಇದೇ ಸಮಯದಲ್ಲಿ ಇವರಿಬ್ಬರ ನಡುವೆ ಸಂಧಾನ ಮಾಡಿದ್ದು ಪಾರ್ಥ ಎಂಬ ವಿಚಾರ ಹೇಳುತ್ತಾರೆ ಆನಂದ್‌. ಪಾರ್ಥನಿಗೆ ಸಂಸಾರ, ಸಂಸ್ಕೃತಿ ಬಗ್ಗೆ ಚೆನ್ನಾಗಿ ಅರಿವಿದೆ ಎಂದು ಆನಂದ್‌ ಹೇಳುತ್ತಾರೆ.

ಶಕುಂತಲಾದೇವಿ ಕೋಪದಿಂದ ಕುದಿಯುತ್ತಿದ್ದಾರೆ. ಲಕ್ಕಿ ಲಕ್ಷ್ಮಿಕಾಂತ್‌ ಆಕೆಯ ಕೋಪಕ್ಕೆ ಇನ್ನಷ್ಟು ಬೆಂಕಿ ಹಾಕುತ್ತಾನೆ. ನಿನ್ನ ಮುಖಕ್ಕೆ ತುಪುಕ್‌ ಎಂದು ಉಗಿದ ವಿಷಯವನ್ನು ಮತ್ತೆ ಮತ್ತೆ ನೆನಪಿಸುತ್ತಾಳೆ. "ಅವಳು ಮಾಡಿರುವ ಅವಮಾನಕ್ಕೆ ತಕ್ಕ ಶಾಸ್ತ್ರಿಯಾಗಬೇಕು" ಎಂದು ಶಕುಂತಲಾದೇವಿ ಘೋಷಿಸುತ್ತಾರೆ. ಇದೇ ಸಮಯದಲ್ಲಿ ಭಾಗ್ಯಮ್ಮನ ಕೊನೆಗೊಳಿಸುವ ಯೋಜನೆಯನ್ನೂ ಲಕ್ಷ್ಮಿಕಾಂತ್‌ ಅಚ್ಚರಿಗೊಳ್ಳುತ್ತಾನೆ. "ನಾವು ಉಳಿಯಬೇಕು ಎಂದರೆ, ಅವಳು ಉಳಿಯಬಾರದು" ಎಂದು ಶಕುಂತಲಾ ದೃಢನಿರ್ಧಾರ ಮಾಡುತ್ತಾರೆ.

ಇನ್ನೊಂದೆಡೆ ಜೈದೇವ್‌ ತನ್ನ ಪ್ರೇಯಸಿ ಜತೆ ಇದ್ದಾನೆ. ಸ್ಟೀಮ್‌ಬಾತ್‌ ಮಾಡಲು ಹೋಗಬೇಕು ಎಂದು ಹೇಳುತ್ತಾಳೆ. ಈ ಮೂಲಕ ನನಗೆ ಸ್ಟೀಮ್‌ಬಾತ್‌ ವ್ಯವಸ್ಥೆ ಬೇಕು ಎಂದು ಪರೋಕ್ಷವಾಗಿ ದಿಯಾ ಹೇಳುತ್ತಾಳೆ. ನನ್ನನ್ನೂ ನಿಮ್ಮ ಮನೆಗೆ ಸೇರಿಸಿ ಎಂದು ಹೇಳುತ್ತಾಳೆ.

ಇನ್ನೊಂದೆಡೆ ಶಕುಂತಲಾದೇವಿ ಭಾಗ್ಯಮ್ಮನ ಮುಗಿಸಲು ಸಿದ್ಧರಾಗಿದ್ದಾರೆ. ಭಾಗ್ಯಮ್ಮ ಒಂಟಿಯಾಗಿರುವಾಗ ಆಕೆಯ ಕೊಠಡಿಗೆ ಹೋಗಿ ಸಾಯಿಸುವ ನಿರ್ಧಾರ ಮಾಡುತ್ತಾಳೆ. ಸುಧಾ ಹಾಲು ತರಲು ಹೋದಾಗ ಕೊಠಡಿಗೆ ಹೋಗುವ ನಿರ್ಧಾರ ಮಾಡುತ್ತಾಳೆ. ಗೌತಮ್‌ ಮಲಗಿರುವುದನ್ನು ಖಾತ್ರಿ ಪಡಿಸಿಕೊಂಡು ಶಕುಂತಲಾದೇವಿ ಭಾಗ್ಯಮ್ಮನ ಕೊಠಡಿಗೆ ಹೋಗುತ್ತಾಳೆ. ನಿದ್ದೆ ಮಾಡಿರುವ ಭಾಗ್ಯಮ್ಮನ ಮುಂದೆ ಬರುತ್ತಾಳೆ. ಕೈಯಲ್ಲಿ ದಿಂಬು ಹಿಡಿದುಕೊಳ್ಳುತ್ತಾಳೆ. ದಿಂಬು ಮೂಗಿಗೆ ಒತ್ತಿ ಸಾಯಿಸುವ ನಿರ್ಧಾರಕ್ಕೆ ಬರುತ್ತಾಳೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ). ಮಹಿಮಾ (ಹೊಸ ನಟಿ): ಇಶಿತಾ.

Whats_app_banner