Amruthadhaare: ಗೌತಮ್ ದಿವಾನ್ ಕಂಪನಿ ಮುಳುಗಿಸಲು ಮುಂದಾದ ಭೂಪತಿ, ಭೂಮಿಕಾಗೆ ಕಾಣಿಸಿದೆ ಅಪಶಕುನದ ಸುಳಿವು- ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ ನಿನ್ನೆಯ ಸಂಚಿಕೆ: ಜೀ ಕನ್ನಡ ವಾಹಿನಿನ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಕಂಪನಿಗೆ ಆತಂಕವಾಗುವ ಸುದ್ದಿಗಳು ಇವೆ. ಭೂಪತಿಯ ಆಟಕ್ಕೆ ಗೌತಮ್‌ಗೆ ಕಂಪನಿಯ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಈ ಸಮಸ್ಯೆಯನ್ನು ಭೂಮಿಕಾ, ಗೌತಮ್ ಹೇಗೆ ಸರಿಪಡಿಸಲಿದ್ದಾರೆ?

Amruthadhaare serial Yesterday Episode: ಒಂದೆಡೆ ಶಕುಂತಲಾದೇವಿಯು ಭಾಗ್ಯಕ್ಕನ ಮನಗೆಲ್ಲಲು ಪ್ರಯತ್ನಿಸುತ್ತಾಳೆ. ಈಕೆಯ ಗೆಳೆತನ ಮಾಡಿಕೊಂಡರೆ ಹೇಗೋ ಬದುಕಬಹುದು ಎಂಬ ಆಲೋಚನೆ ಅವರದ್ದು. ಇದೇ ಸಮಯದಲ್ಲಿ ಲಕ್ಕಿ ಲಕ್ಷ್ಮಿಕಾಂತ್ ಭಾಗ್ಯಮ್ಮನ ಮಾತ್ರೆಯನ್ನೂ ಬದಲಾಯಿಸುತ್ತಾನೆ. ಈ ಮೂಲಕ ಈಕೆ ಗುಣವಾಗಬಾರದು ಎಂದು ಇವರಿಬ್ಬರು ಪ್ಲ್ಯಾನ್ ಮಾಡುತ್ತಾರೆ. ಈ ಸಮಯದಲ್ಲಿ ಸುಧಾ ಬರುತ್ತಾರೆ. "ಇವರನ್ನು ಆಗದಿಂದ ಮಾತನಾಡಿಸಲು ಪ್ರಯತ್ನಿಸ್ತಾ ಇದ್ದೆ. ಮಾತನಾಡ್ತಾ ಇಲ್ಲ" ಎಂದು ಶಕುಂತಲಾದೇವಿ ಹೇಳುತ್ತಾರೆ. ಈ ಸಮಯದಲ್ಲಿ ಸುಧಾ ಹಾಲು ನೀಡಲು ಮುಂದಾಗುತ್ತಾರೆ. ಅದರಲ್ಲಿ ಶಕುಂತಲಾ ಮಿಕ್ಸ್ ಮಾಡಿರುವ ಔಷಧ ಇರುತ್ತದೆ.
ಮಹಿಮಾ ಚಿಂತೆಯಿಂದ ಯೋಚಿಸುತ್ತಾಳೆ. ಆಗ ಅಲ್ಲಿಗೆ ಮಂದಾಕಿನಿ ಬರುತ್ತಾರೆ. ಮಹಿಮಾಗೆ ಒಂದಿಷ್ಟು ಸಮಾಧಾನ ಮಾಡುತ್ತಾರೆ. "ನಿನ್ನೆ ಆಗಿರುವ ಕೆಟ್ಟದ್ದನ್ನು ಮರೆತು ನಾಳೆಯ ಬಗ್ಗೆ ಯೋಚನೆ ಮಾಡಬೇಕು" ಎಂದು ಮಂದಾಕಿನಿ ಹೇಳುತ್ತಾರೆ. "ನೀನು ಮತ್ತು ಜೀವ ಒಂದು ಮಗು ಮಾಡಿಕೊಳ್ಳಿ. ಬದುಕು ಚೆನ್ನಾಗಿ ಇರುತ್ತದೆ. ತಡ ಮಾಡಬೇಡಿ" ಎಂದು ಮಂದಾಕಿನಿ ಹೇಳುತ್ತಾರೆ. "ಸರಿ ಅತ್ತೆ" ಎಂದು ಮಹಿಮಾ ಬೇಸರದಲ್ಲಿ ಹೇಳುತ್ತಾಳೆ. ಮೊದಲ ಬಾರಿ ಅಬಾರ್ಷನ್ ಮಾಡಿಕೊಂಡಿರುವ ಕಾರಣ ಮಗು ಆಗುವ ಕುರಿತು ಆಕೆಗೆ ಚಿಂತೆ ಇದೆ.
ಗೌತಮ್ ಕೂಡ ಟೆನ್ಷನ್‌ನಲ್ಲಿದ್ದಾರೆ. ಕಂಪನಿಯ ವಿಚಾರ ಚಿಂತೆ ಉಂಟು ಮಾಡಿದೆ. "ಭೂಪತಿ ಆಟ ಆಡುತ್ತಿದ್ದಾನೆ. ಈಗ ಜೀವನ್ ಜತೆ ಆಟ ಆಡುತ್ತಿದ್ದಾನೆ. ಈಗ ಕಂಪನಿಯ ಷೇರುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾನೆ" ಎಂದು ಗೌತಮ್ ಹೇಳುತ್ತಾರೆ. "ಷೇರು ಖರೀದಿಸಿದರೆ ಏನಾಗುತ್ತದೆ" ಎಂದು ಭೂಮಿಕಾ ಕೇಳುತ್ತಾರೆ. "ಈ ಕಂಪನಿಯನ್ನು ಕಟ್ಟಿ ಬೆಳೆಸಿದವನು ನಾನು. ಒಂದಿಷ್ಟು ಷೇರು ಪಬ್ಲಿಕ್‌ನಲ್ಲಿ ಇರುತ್ತದೆ. ನನ್ನಲ್ಲಿ ಮೆಜಾರಿಟಿ ಷೇರು ಇದ್ದರೆ ನಾನು ಓನರ್ ಆಗಿರುತ್ತೇನೆ. ಅದು ಕಡಿಮೆಯಾದರೆ ನನಗೆ ಪವರ್ ಇರೋದಿಲ್ಲ" ಎಂದು ಗೌತಮ್ ಹೇಳುತ್ತಾರೆ. "ಭೂಪತಿ ಟ್ರೈ ಮಾಡುತ್ತಿದ್ದಾನೆ. ಅವನಲ್ಲಿ ಏನೋ ಕೆಟ್ಟ ಯೋಜನೆ ಇದೆ" ಎಂದು ಗೌತಮ್ ಆತಂಕಪಡುತ್ತಾರೆ.
ಇನ್ನೊಂದೆಡೆ ಆನಂದ್ ಟೆನ್ಷನ್‌ನಿಂದ ಆಫೀಸ್‌ಗೆ ಬಂದು ಗೌತಮ್ ಜತೆ ಮಾತನಾಡುತ್ತಾರೆ. ಕಂಪನಿಯ ಆಡಳಿತ ಮಂಡಳಿ ಮೀಟಿಂಗ್ ಫಿಕ್ಸ್ ಮಾಡಿ ಎಂದು ಹೇಳುತ್ತಿದ್ದಾರೆ ಎಂಬ ಮಾಹಿತಿ ನೀಡುತ್ತಾರೆ ಆನಂದ್. ಇದು ನಾರ್ಮಲ್ ಮೀಟಿಂಗ್ ಆಗಿರೋದಿಲ್ಲ, ಷೇರು ವಿಷಯಕ್ಕೆ ಆಗಿರುತ್ತದೆ ಎಂಬ ಮಾಹಿತಿ ನೀಡುತ್ತಾರೆ ಆನಂದ್. "ಭಯಪಡುವುದು ಬೇಡ, ನೀನು ಮೀಟಿಂಗ್ ಆರೇಂಜ್ ಮಾಡು" ಎಂದು ಗೌತಮ್ ಹೇಳುತ್ತಾರೆ.
ಮೀಟಿಂಗ್ ಆರಂಭವಾಗಿದೆ. "ಒಬ್ಬನೇ ವ್ಯಕ್ತಿ ಮಾರ್ಕೆಟ್‌ನಲ್ಲಿ ನಮ್ಮ ಷೇರುಗಳನ್ನು ಖರೀದಿಸುತ್ತಾ ಇದ್ದಾನೆ. ಇದು ತುಂಬಾ ಸೀರಿಯಸ್ ವಿಷಯ ಸರ್" ಎಂದು ಮೀಟಿಂಗ್‌ನಲ್ಲಿ ಆಡಳಿತ ಮಂಡಳಿಯ ಸದಸ್ಯರು ಹೇಳುತ್ತಾರೆ. "ಇದು ಫ್ಯಾಮಿಲಿ ರನ್ನಿಂಗ್ ಬಿಸ್ನೆಸ್. ನನ್ನಲ್ಲಿ ಮೆಜಾರಿಟಿ ಷೇರು ಇದೆ" ಎಂದು ಗೌತಮ್ ಹೇಳುತ್ತಾರೆ. "ಅವರಲ್ಲಿ ಇರುವ ಷೇರುಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಿದರೆ ಷೇರು ದರ ಬಿದ್ದು ಹೋಗುತ್ತದೆ" ಎಂದು ಸದಸ್ಯರು ಹೇಳುತ್ತಾರೆ. "ಇದರಿಂದ ಸಮಸ್ಯೆ ಆಗದು" ಎಂದು ಗೌತಮ್ ಹೇಳುತ್ತಾರೆ. "ನಮ್ಮಲ್ಲಿಯೇ ಜಾಸ್ತಿ ಷೇರುಗಳಿವೆ. ಮೆಜಾರಿಟಿ ಷೇರು ಹೋಲ್ಡರ್ಸ್ ನಾವೇ ಎಂದು ಅವರು ಹೇಳ್ತಾ ಇದ್ದಾರೆ" ಎಂದು ಮತ್ತೊಬ್ಬರು ಹೇಳುತ್ತಾರೆ. "ಹೊರಗಡೆ ಬೇರೆ ಮಾತು ಹರಿದಾಡುತ್ತಿದೆ. ಕಂಪನಿಯ ಸ್ಥಿತಿ ಸರಿ ಇಲ್ಲ ಎನ್ನುತ್ತಿದ್ದಾರೆ" ಎಂದು ಇನ್ನೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ. "ಎಲ್ಲೋ ಗೋಲ್‌ಮಾಲ್ ನಡೆಯುತ್ತ ಇದೆ, ಎಂದು ಹೊರಗೆ, ಒಳಗೆ, ನಮಗೂ ಡೌಟ್ ಇದೆ" ಎಂದು ಎಲ್ಲರೂ ಹೇಳುತ್ತಾರೆ. "ಈ ಕಂಪನಿಗೆ ಹಲವು ಜನರು ಹೂಡಿಕೆ ಮಾಡಿದ್ದಾರೆ. ನಿಮಗೆ ಕಷ್ಟ ಆದರೆ ಇನ್ನೊಬ್ಬರನ್ನು ಕೂರಿಸಬಹುದು" ಎಂದು ಹೇಳುತ್ತಾರೆ.
ಭೂಮಿಕಾಗೆ ಕಾಣಿಸಿದೆ ಅಪಶಕುನದ ಸುಳಿವು
ಇನ್ನೊಂದೆಡೆ ಭೂಪತಿ ನಗುತ್ತಾ ಇದ್ದಾನೆ. ಅಲ್ಲಿ ಜೈದೇವ್ ಕೂಡ ಇದ್ದಾನೆ. ನಾನು ಬರೆದ ಸ್ಟೋರಿ ಕ್ಲೈಮ್ಯಾಕ್ಸ್ ಕಾಣ್ತಾ ಇದೆ. ನಿನ್ನ ಅಣ್ಣ ಪಾತಾಳಕ್ಕೆ ಬೀಳುತ್ತಾನೆ ಎಂದು ಭೂಪತಿ ಹೇಳುತ್ತಾನೆ. "ಮಾರ್ಕೆಟ್‌ನಲ್ಲಿರುವ ಅಷ್ಟು ಷೇರು ಖರೀದಿಸಿ ಆಗಿದೆ. ಇನ್ನು ನನ್ನ ಆಟ ತೋರಿಸುವೆ" ಎಂದು ಭೂಪತಿ ಹೇಳುತ್ತಾನೆ. ಅಮೃತಧಾರೆ ಸೀರಿಯಲ್ ಮುಂದುವರೆದಿದೆ. ಜೀ ಕನ್ನಡ ವಾಹಿನಿಯು ಮಂಗಳವಾರ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಭೂಮಿಕಾ ಪೂಜೆ ಮಾಡುವ ಸಮಯದಲ್ಲಿ ಹಾಳಾದ ತೆಂಗಿನಕಾಯಿ ಸಿಗುತ್ತದೆ. ಇದು ಅಪಶಕುನ ಎಂದು ಅಜ್ಜಿ ಹೇಳುತ್ತಾರೆ. ಈ ಮೂಲಕ ಭೂಮಿಕಾಗೆ ಏನೋ ಕೆಟ್ಟದ್ದಾಗುತ್ತದೆ ಎಂಬ ಸುಳಿವು ದೊರಕುತ್ತದೆ. ಇನ್ನೊಂದೆಡೆ ಜೀವನ್ ಶ್ಯೂರಿಟಿಗೆ ಅಂತ ಗೌತಮ್ ದಿವಾನ್ ಕಂಪನಿಯ ಷೇರನ್ನು ಭೂಪತಿಗೆ ನೀಡಲು ಮುಂದಾಗುತ್ತಾನೆ. ಅಮೃತಧಾರೆ ಧಾರಾವಾಹಿ ಮುಂದುವರೆದಿದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ). ಮಹಿಮಾ (ಹೊಸ ನಟಿ): ಇಶಿತಾ.

ವಿಭಾಗ