Amruthadhaare: ಅಮೃತಧಾರೆಯಲ್ಲಿ ಸಾರಾ ಅಣ್ಣಯ್ಯ ಜಾಗಕ್ಕೆ ಇಶಿತಾ ವರ್ಷ; ಮಹಿಮಾಳಿಗೆ ಇಷ್ಟವಿಲ್ವಂತೆ ಬದಲಾದ ಜೀವ
Amruthadhare Serial: ಅಮೃತಧಾರೆ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ನಿರ್ವಹಿಸುತ್ತಿದ್ದ ಪಾತ್ರವನ್ನು ಈಗ ಇಶಿತಾ ವರ್ಷ ನಿರ್ವಹಿಸುತ್ತಿದ್ದಾಳೆ. ಜೀವ ಪಾತ್ರವನ್ನೂ ಹೊಸ ನಟ ನಿಭಾಯಿಸುತ್ತಿದ್ದಾನೆ. ಈ ಬದಲಾದ ಪಾತ್ರಗಳ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ಅಮೃತಧಾರೆ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ನಿರ್ವಹಿಸುತ್ತಿದ್ದ ಪಾತ್ರವನ್ನು ಈಗ ಇಶಿತಾ ವರ್ಷ ನಿರ್ವಹಿಸುತ್ತಿದ್ದಾಳೆ. ಜೀವ ಪಾತ್ರವನ್ನೂ ಹೊಸ ನಟ ನಿಭಾಯಿಸುತ್ತಿದ್ದಾನೆ. ಇಲ್ಲಿಯವರೆಗೆ ಜೀವನ್ ಪಾತ್ರದಲ್ಲಿ ಶಶಿ ಹೆಗ್ಗಡೆ ಎಲ್ಲರಿಗೂ ಇಷ್ಟವಾಗಿದ್ದರು. ಆದರೆ, ಹೊಸ ಪಾತ್ರದಾರಿ ನೆಗೆಟಿವ್ ರೋಲ್‌ಗೆ ಬದಲಾಗಿರುವ ಕಾರಣ ಪ್ರೇಕ್ಷಕರು ಎಷ್ಟು ಇಷ್ಟಪಡುತ್ತಾರೋ ಕಾದು ನೋಡಬೇಕಿದೆ. ಇದೇ ಸಮಯದಲ್ಲಿ ಮಹಿಮಾ ಪಾತ್ರ ಬದಲಾಗಿದೆ. ಆದರೆ, ಆಕೆಯ ಕ್ಯಾರೆಕ್ಟರ್ ಅಂದ್ರೆ ಗುಣ ಬದಲಾಗಿಲ್ಲ. ಪಾರ್ಥ ಮತ್ತು ಅಪೇಕ್ಷಾ ಜೋಡಿ ಆರಂಭದಲ್ಲಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದ್ದರು. ಆದರೆ, ಯಾವಾಗ ಅಪೇಕ್ಷಾನ ಪಾತ್ರವನ್ನು ನೆಗೆಟಿವ್ ಮಾಡಿದ್ರೋ ಆಗ ಅಪ್ಪಿ ಬಗ್ಗೆ ಪ್ರೇಕ್ಷಕರು ಬಯ್ಯಲು ಆರಂಭಿಸಿದ್ದಾರೆ. ಆದರೆ, ಇಲ್ಲಿ ಜೀವನ್ ಗುಣ ಬದಲಾಗಿದೆ. ಗುಣ ಬದಲಾಗದೆ ಇರುವ ಕಾರಣದಿಂದ ಇಶಿತಾ ವರ್ಷ ಸೇಫ್ ಎನ್ನಬಹುದು.
ಅಪ್ಪ ನನ್ನನ್ನು ಪ್ರೀತಿಯಿಂದ ಕರೆದಿಲ್ಲ. ಅವರೆಲ್ಲ ಭೂಮಿಕಾನ ತಲೆ ಮೇಲೆ ಹೊತ್ತುಕೊಂಡಿದ್ದಾರೆ ಎಂದು ಕೋಪದಿಂದ ಗೃಹ ಪ್ರವೇಶಕ್ಕೆ ಬರಲು ಅಪೇಕ್ಷಾ ಒಪ್ಪುವುದಿಲ್ಲ. ಪಾರ್ಥ ಮಾಡಿದ ಪ್ರಯತ್ನ ವ್ಯರ್ಥವಾಗುತ್ತದೆ. ಇದೇ ಸಮಯದಲ್ಲಿ ಗೃಹ ಪ್ರವೇಶಕ್ಕೆ ಆಗಮಿಸುವರನ್ನು ಸದಾಶಿವ ಆತ್ಮೀಯವಾಗಿ ಸ್ವಾಗತಿಸುತ್ತಾರೆ. ತನ್ನ ಮಗ ಕಷ್ಟಪಟ್ಟು ದುಡಿದು ಮನೆ ಕಟ್ಟಿದ್ದಾನೆ ಎಂಬ ಖುಷಿ ಅವರ ಮುಖದಲ್ಲಿದೆ. ಆದರೆ, ಜೀವ ಬದಲಾಗಿದ್ದಾನೆ, ಈ ಮನೆ ನಿರ್ಮಾಣದ ಹಿಂದೆ ಭೂಪತಿಯ ಕೊಡುಗೆ ಇದೆ ಎನ್ನುವುದು ಆತನಿಗೆ ಗೊತ್ತಿಲ್ಲ. ಗೊತ್ತಾದರೆ, ಜೀವನ ಬಗ್ಗೆ ಅವರ ಅಭಿಪ್ರಾಯ ಬದಲಾಗಬಹುದು.
ಇನ್ನೊಂದೆಡೆ ಕೋಣೆಯಲ್ಲಿ ಮಹಿಮಾ ರೆಡಿಯಾಗುತ್ತಿದ್ದಾಳೆ. ಮಹಿಮಾ ಅಂದ್ರೆ ಸಾರಾ ಅಣ್ಣಯ್ಯ ಅಲ್ಲ. ಈಕೆ ಇಶಿತಾ ಶರ್ಮಾ. ಅಲ್ಲಿಗೆ ಜೀವ ಬರುತ್ತಾನೆ. ಜೀವ ಅಂದ್ರೆ ಶಶಿ ಹೆಗಡೆ ಅಲ್ಲ ಎನ್ನುವುದೂ ನಿಮಗೆ ಗೊತ್ತು. ಅಲಂಕಾರ ಮಾಡುತ್ತಿರುವ ಮಹಿಯನ್ನು ಜೀವ ಪ್ರೀತಿಯಿಂದ "ಯಾಕೆ ಹೀಗೆ ನೋಡ್ತಿಯಾ" ಎಂದು ಕೇಳುತ್ತಾನೆ. "ನೀನು ಈಗ ಹಳೆಯ ಜೀವ ಅಲ್ಲ. ಸಕ್ಸಸ್‌ಫುಲ್ ಬಿಸ್ನೆಸ್‌ಮ್ಯಾನ್. ನನ್ನ ಕಣ್ಣಿಗೆ ನೀನು ಬೇರೆ ತರಹನೇ ಕಾಣ್ತಾ ಇದ್ದೀಯಾ" ಎಂದು ಮಹಿಮಾ ಹೇಳುತ್ತಾಳೆ. "ನೀನು ಕೂಡ ಹೊಸದಾಗಿಯೇ ಕಾಣಿಸ್ತಾ ಇದ್ದೀಯ" ಎಂದು ಜೀವ ಹೇಳುತ್ತಾನೆ. "ಅದದೇ ಕ್ಯಾರೆಕ್ಟರ್ಸ್, ಆದರೆ ಆಟಿಟ್ಯೂಡ್ ಚೇಂಜ್ ಆಗಿದೆ. ಒಂಥರ ಡಿಫರೆಂಟ್ ಫೀಲಿಂಗ್. ಖುಷಿಯಿದೆ. ಟೈಮ್ ಹೇಗೆ ಎಲ್ಲವನ್ನೂ ಚೇಂಜ್ ಮಾಡುತ್ತೆ ಅಲ್ವಾ" ಎಂದು ಮಹಿಮಾ ಹೇಳುತ್ತಾಳೆ. ಇನ್ನೊಂದು ಪ್ರೊಮೊದಲ್ಲಿ ಮಹಿಮಾಳಿಗೆ ಜೀವನ ಬದಲಾದ ಕ್ಯಾರೆಕ್ಟರ್ ಇಷ್ಟವಿಲ್ಲ ಎನ್ನುವುದನ್ನೂ ತೋರಿಸಲಾಗಿದೆ. ನೀನು ಮೊದಲಿನಂತೆ ಇಲ್ಲ, ಬದಲಾಗಿದ್ದೀಯ, ನನಗೆ ಇಷ್ಟವಾಗ್ತಾ ಇಲ್ಲ ಎನ್ನುವ ಅರ್ಥದಲ್ಲಿ ಮಹಿಮಾ ಮಾತನಾಡಿದ್ದಾಳೆ.
ಈ ಮೂಲಕ ಹೊಸ ಪಾತ್ರದಾರಿಗಳನ್ನು ಪ್ರೇಕ್ಷಕರಿಗೆ ಒಪ್ಪಿಸುವ ಪ್ರಯತ್ನವನ್ನು ಡೈರೆಕ್ಟರ್ ಮಾಡಿದ್ದಾರೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಜೀವ ಮತ್ತು ಮಹಿಮಾನ ಬದಲಾಯಿಸಿದ್ದಕ್ಕೆ ಪ್ರೇಕ್ಷಕರು ಮನಸೋ ಇಚ್ಛೆ ಬಯ್ಯುತ್ತಿದ್ದಾರೆ. ಪಾತ್ರದಾರಿಗಳನ್ನು ಬದಲಾಯಿಸುವ ಸಂದರ್ಭ ಯಾಕೆ ಬಂತೆಂದು ಬಹಿರಂಗವಾಗಿಲ್ಲ. ಹಲವು ವರ್ಷಗಳ ಕಾಲ ನಡೆಯುವ ಸೀರಿಯಲ್‌ಗಳಲ್ಲಿ ಪಾತ್ರದಾರಿಗಳನ್ನು ಕೈಬಿಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಮತ್ತೊಬ್ಬರನ್ನು ಆ ಪಾತ್ರಕ್ಕೆ ತರುವುದು ಸಾಮಾನ್ಯ. ಇದು ಪ್ರೇಕ್ಷಕರಿಗೂ ಹಲವು ಸೀರಿಯಲ್‌ಗಳಲ್ಲಿ ಅಭ್ಯಾಸವಾಗಿದೆ.
ಯಾರಿದು ಇಶಿತಾ ವರ್ಷ?
ಮಹಿಮಾ ಪಾತ್ರದಾರಿಯಾಗಿ ಅಮೃತಧಾರೆಗೆ ಹೊಸದಾಗಿ ಎಂಟ್ರಿ ನೀಡಿರುವ ಇಶಿತಾ ಶರ್ಮಾ ಈಗಾಗಲೇಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಇವರು ಮನೆಮಾತಾಗಿದ್ದರು. ಈ ಸೀರಿಯಲ್‌ನಲ್ಲಿ ಮಾಯಾ ಪಾತ್ರದ ಮೂಲಕ ಮಿಂಚಿದ್ದರು. ಇದೀಗ ಮಹಿಮಾ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ರಾಜಾ ರಾಣಿ, ಸುವರ್ಣ ಸೂಪರ್‌ಸ್ಟಾರ್ ಮುಂತಾದ ರಿಯಾಲಿಟಿ ಶೋಗಳಲ್ಲಿಯೂ ಇಶಿತಾ ಭಾಗವಹಿಸಿದ್ದಾರೆ.

ವಿಭಾಗ