ಅಮೃತಧಾರೆ ಧಾರಾವಾಹಿ: ಪಂಕಜಾ, ಕಾಂತನ ಕಥೆ ಕೇಳಿದ ಆನಂದ್‌ಗೆ ಆಪತ್ತು, ಶಕುಂತಲಾದೇವಿ ಗ್ಯಾಂಗ್‌ನಿಂದ ಕೊಲೆಗೆ ಸಂಚು
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಧಾರಾವಾಹಿ: ಪಂಕಜಾ, ಕಾಂತನ ಕಥೆ ಕೇಳಿದ ಆನಂದ್‌ಗೆ ಆಪತ್ತು, ಶಕುಂತಲಾದೇವಿ ಗ್ಯಾಂಗ್‌ನಿಂದ ಕೊಲೆಗೆ ಸಂಚು

ಅಮೃತಧಾರೆ ಧಾರಾವಾಹಿ: ಪಂಕಜಾ, ಕಾಂತನ ಕಥೆ ಕೇಳಿದ ಆನಂದ್‌ಗೆ ಆಪತ್ತು, ಶಕುಂತಲಾದೇವಿ ಗ್ಯಾಂಗ್‌ನಿಂದ ಕೊಲೆಗೆ ಸಂಚು

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಕೆಲವೊಂದು ಬೆಳವಣಿಗೆಗಳು ನಡೆದಿವೆ. ನಂಜಮ್ಮನ ಪತಿಯಲ್ಲಿ ಪಂಕಜಾಳ ರಹಸ್ಯ ತಿಳಿದುಕೊಳ್ಳುತ್ತಿದ್ದ ಆನಂದ್‌ಗೆ ಶಕುಂತಲಾದೇವಿ ಕಡೆಯಿಂದ ತೊಂದರೆಯಾಗುವ ಸೂಚನೆ ದೊರಕಿದೆ.

ಅಮೃತಧಾರೆ ಧಾರಾವಾಹಿ: ಪಂಕಜಾ, ಕಾಂತನ ಕಥೆ ಕೇಳಿದ ಆನಂದ್‌ಗೆ ಆಪತ್ತು
ಅಮೃತಧಾರೆ ಧಾರಾವಾಹಿ: ಪಂಕಜಾ, ಕಾಂತನ ಕಥೆ ಕೇಳಿದ ಆನಂದ್‌ಗೆ ಆಪತ್ತು

ಅಮೃತಧಾರೆ ಧಾರಾವಾಹಿ: ಆನಂದ್‌ ಮತ್ತು ನಂಜಮ್ಮನ ಪತಿ ಮಾತನಾಡುತ್ತಾರೆ. "ಪಂಕಜಾಳಿಗೆ ಒಬ್ಬಳು ತಂಗಿ ಇದ್ದಳು ಅಲ್ವಾ?" ಎಂದು ಆನಂದ್‌ ಕೇಳುತ್ತಾನೆ. "ತಪ್ಪು ಮಾಹಿತಿ... ಸರಿಯಾದ ಮಾಹಿತಿ ನಾನು ನೀಡುವೆ" ಎಂದು ಎಣ್ಣೆಯ ಅಮಲಿನಲ್ಲಿ ತಾತಾ ಹೇಳುತ್ತಾರೆ. "ಪಂಕಜಾಳಿಗೆ ತಂಗಿ- ತಮ್ಮ ಇಲ್ಲ, ಅಣ್ಣಾ ಇದ್ದ. ಅಣ್ಣನ ಹೆಸರು ಕಾಂತಾ... ಕಿತಾಪತಿ ಕಾಂತ..." ಎನ್ನುತ್ತಾರೆ. ಈ ಊರಲ್ಲಿ ಅವರು ಏನು ಮಾಡಿಕೊಂಡಿದ್ರು ಎಂದು ಆನಂದ ಕೇಳುತ್ತಾನೆ. "ಅವರು ಇದೇ ಊರಿನಲ್ಲಿದ್ರು... " ಎಂದು ತಾತಾ ಪಂಕಜಾಳ ಕಥೆ ಹೇಳುತ್ತಾನೆ. "ಬೇಸಿಕಲಿ ನಾವು ರಾಯಲ್‌ ಫ್ಯಾಮಲಿಯವರು" ಎಂದು ಶಕುಂತಲಾದೇವಿ ಇತ್ತೀಚೆಗೆ ಹೇಳಿದ್ದು ಆನಂದ್‌ಗೆ ನೆನಪಾಗುತ್ತದೆ.

ಇನ್ನೊಂದೆಡೆ ಶಕುಂತಲಾದೇವಿ ಮತ್ತು ಲಕ್ಕಿ ಲಕ್ಷ್ಮಿಕಾಂತ್‌ ಟೆನ್ಷನ್‌ನಲ್ಲಿದ್ದಾರೆ. ನಂಜಮ್ಮನ ಗಂಡ ಎಲ್ಲಾ ವಿವರ ಬಾಯಿ ಬಿಡ್ತಾರ ಎಂಬ ಸಂದೇಹದಲ್ಲಿ ಅವರು ಭಯಪಡುತ್ತಿದ್ದಾರೆ. ಇನ್ನೊಂದೆಡೆ ನಂಜಮ್ಮ ಕೂಡ ತನ್ನ ಗಂಡನ ಹುಡುಕುತ್ತಾಳೆ. ಎಲ್ಲಿಯೂ ಸಿಗುವುದಿಲ್ಲ. ಆಗ ಶಕುಂತಲಾದೇವಿ ಕಾಲ್‌ ಮಾಡುತ್ತಾರೆ. ಗಂಡ ಸಿಕ್ಕಿದ್ದಾನ ಎಂದು ಕೇಳುತ್ತಾರೆ. "ಇಲ್ಲ ಹುಡುಕುತ್ತಿದ್ದೀನಿ, ಇಲ್ಲೊಂದು ಬಾರ್‌ ಇದೆ, ಹುಡುಕುವೆ" ಎಂದು ಹೇಳುತ್ತಾಳೆ. "ಅವನು ಬಾಯಿ ಬಿಡದಂತೆ ತಡೆ, ಅವನು ಸತ್ಯ ಹೇಳಿದರೆ ನಿನ್ನ ಅನ್ನಕ್ಕೂ ಕನ್ನ ಬೀಳುತ್ತದೆ. ನಿನಗೆ ನಾನು ಹಣ ನೀಡುವುದು ನಿಲ್ಲುತ್ತದೆ" ಎಂದು ಹೇಳುತ್ತಾಳೆ. "ಅವನು ಸತ್ಯ ಹೇಳಿದ್ರೆ ಅವರಿಬ್ಬರು ವಾಪಸ್‌ ಬರಬಾರದು. ನಿನ್ನ ಊರಿನ ರೌಡಿಗಳಿಂದ ಮುಗಿಸು" ಎಂದು ಹೇಳುತ್ತಾಳೆ. "ನಮ್ಮ ಹುಡುಗರಿಗೆ ಅಲ್ಲಿಗೆ ಹೋಗೋಕ್ಕೆ ಹೇಳು" ಎಂದು ಶಕುಂತಲಾದೇವಿ ಲಕ್ಷ್ಮಿಕಾಂತ್‌ಗೆ ಸೂಚನೆ ನೀಡುತ್ತಾರೆ.

ಇನ್ನೊಂದೆಡೆ ಗೌತಮ್‌ ಮತ್ತು ಭೂಮಿಕಾ ಮಾತನಾಡುತ್ತಾ ಇದ್ದಾರೆ. ಅಪರ್ಣಾ ಕೂಡ ಅಲ್ಲಿ ಇದ್ದಾರೆ. ಆದರೆ, ಆ ಕಡೆ ಆನಂದ್‌ ತೊಂದರೆಯಲ್ಲಿರುವ ವಿಚಾರ ಅವರಿಗೆ ಗೊತ್ತಿಲ್ಲ. ಇನ್ನೊಂದೆಡೆ ಜೈದೇವ್‌ ಮತ್ತು ದಿಯಾ ಮಾತನಾಡುತ್ತಿದ್ದಾರೆ. ದಿಯಾ ಭಯಗೊಂಡಿದ್ದಾಳೆ. ಇವತ್ತು ಇಲ್ಲಿಂದ ಹೋಗಿ, ನಾಳೆ ಸಿಗ್ತಿನಿ ಎಂದು ಹೇಳುತ್ತಾಳೆ. ಜೈದೇವ್‌ ಹಠ ಮಾಡಿ ಅಲ್ಲಿಯೇ ಉಳಿಯುತ್ತಾನೆ. "ಟೆನ್ಷನ್‌ನಲ್ಲಿ ಏಕೋ ಕೋಪದಲ್ಲಿ ಮಾತನಾಡಿದೆ" ಎಂದು ಜೈದೇವ್‌ ಕೇಳುತ್ತಾನೆ. "ನಿನ್ನೆ ಏನಾಯಿತು ಹೇಳು" ಎಂದು ಜೈದೇವ್‌ ಕೇಳುತ್ತಾನೆ. "ಅಲ್ಲಿ ನಾವಿಬ್ಬರು ಅಲ್ಲ, ಇನ್ನೊಬ್ಬರು ಇದ್ರು.... " ಎಂದು ಎಲ್ಲಾ ಕಥೆ ಹೇಳುತ್ತಾಳೆ. "ಇಷ್ಟೆಲ್ಲ ಆಯ್ತಾ.... " ಎಂದು ಕೇಳುತ್ತಾನೆ. "ನಿಮ್ಮ ಮನೆಯಲ್ಲಿ ಹಂಡ್ರೆಡ್‌ ಪರ್ಸೆಂಟ್‌ ದೆವ್ವ ಇದೆ" ಎಂದು ದಿಯಾ ಹೇಳಿದಾಗ ನಗುತ್ತಾನೆ.

"ಮಲ್ಲಿ ಊರಿಗೆ ಹೋಗಿ ಇವತ್ತು ಬೆಳಗ್ಗೆ ಬಂದಿದ್ದಾಳೆ" ಎಂದು ಜೈದೇವ್‌ ಹೇಳುತ್ತಾನೆ. "ಹಾಗಾದರೆ, ಇದು ಅವಳೇ ಮಾಡಿರೋದು, ರಾತ್ರಿ ಮನೆಯಲ್ಲಿ ಇದ್ದು ನಿನ್ನನ್ನು ಫೂಲ್‌ ಮಾಡಿದ್ದಾಳೆ" ಎನ್ನುತ್ತಾಳೆ ದಿಯಾ. ಬಳಿಕ ಡ್ರೈವರ್‌ಗೆ ಫೋನ್‌ ಮಾಡುತ್ತಾನೆ. ಮಲ್ಲಿ ವಾಪಸ್‌ ಬಂದಿರುವ ವಿಷಯವನ್ನು ಡ್ರೈವರ್‌ ಹೇಳುತ್ತಾನೆ.

ಕಥೆ ಕೇಳಿದ ಆನಂದ್‌ಗೆ ಆಪತ್ತು

ತಾತಾ ಲಕ್ಷ್ಮಿಕಾಂತ್‌ ಮತ್ತು ಪಂಕಜಾಳ ಕಥೆ ಹೇಳುತ್ತಾನೆ. "ಹಣ ಇರುವಲ್ಲಿಗೆ ಹೋಗುತ್ತಿದ್ದಳು. ಕಿಲಾಡಿ, ಜಗತ್‌ ಕಿಲಾಡಿ ಅವಳು" ಎನ್ನುತ್ತಾರೆ ತಾತಾ. "ಕಾಂತಾ, ಡ್ರೈವರ್‌ ಕೆಲಸ ಮಾಡುತ್ತಿದ್ದ" ಎಂದು ತಾತಾ ಹೇಳುತ್ತಾನೆ. ವಿಜಯನಗರದ ಸಾಮಂತರು ತಾವೆಂದು ಲಕ್ಷ್ಮಿಕಾಂತ್‌ ಹೇಳಿದ್ದು ಆನಂದ್‌ನಿಗೆ ನೆನಪಾಗುತ್ತದೆ. ಅವನು ಊರಲ್ಲಿ ಸ್ಮಗ್ಲಿಂಗ್‌ ಮಾಡುತ್ತಿದ್ದ. ಒಂದು ದಿನ ಸ್ಮಗ್ಲಿಂಗ್‌ ಮಾಡುವಾಗ ಆಕ್ಸಿಡೆಂಟ್‌ ಮಾಡಿದ. ಅದರಲ್ಲಿ ಒಬ್ಬ ಸತ್ತ. ಅಣ್ಣ ತಂಗಿ ಊರು ಬಿಟ್ರು. ಅವರು ಊರು ಬಿಡಲು ನಾವೇ ಸಹಾಯ ಮಾಡಿದ್ವಿ" ಎಂದು ತಾತಾ ಹೇಳುತ್ತಾನೆ. ತಾತಾ ಟೈಟಾಗಿ ನಿದ್ದೆ ಮಾಡುತ್ತಾನೆ. ಆನಂದ್‌ ಹೊರಬರುತ್ತಾನೆ.

ನಂಜಮ್ಮಳಿಗೆ ಆನಂದ್‌ ಕಾಣುತ್ತಾನೆ. ಇವನೇ ಅಲ್ವಾ ಅವತ್ತು ನನಗೆ ಡಿಕ್ಕಿ ಹೊಡೆದದ್ದು ಎಂದು ನೆನಪಾಗುತ್ತದೆ. ತಕ್ಷಣ ಶಕುಂತಲಾದೇವಿಗೆ ಫೋನ್‌ ಮಾಡುತ್ತಾಳೆ. ಆನಂದನ ಮುಗಿಸಲು ಶಕುಂತಲಾದೇವಿ ಪ್ಲ್ಯಾನ್‌ ಮಾಡುತ್ತಾರೆ. ಸೀರಿಯಲ್‌ ಮುಂದುವರೆದಿದೆ.

ಧಾರಾವಾಹಿ ಹೆಸರು: ಅಮೃತಧಾರೆ.

ಯಾವ ಚಾನೆಲ್‌: ಜೀ ಕನ್ನಡ

ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ವರ್ಷ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in