Annayya Serial: ಹೊಂದಿಕೊಂಡು ಬಾಳಲು ರೆಡಿಯಾದ ಶಿವು, ಪಾರು; ರೌಡಿಗಳಿಂದ ಪಾರಾದ ಜೋಡಿ ಸುದ್ದಿ ತಿಳಿದ ವೀರಭದ್ರ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಹೊಂದಿಕೊಂಡು ಬಾಳಲು ರೆಡಿಯಾದ ಶಿವು, ಪಾರು; ರೌಡಿಗಳಿಂದ ಪಾರಾದ ಜೋಡಿ ಸುದ್ದಿ ತಿಳಿದ ವೀರಭದ್ರ

Annayya Serial: ಹೊಂದಿಕೊಂಡು ಬಾಳಲು ರೆಡಿಯಾದ ಶಿವು, ಪಾರು; ರೌಡಿಗಳಿಂದ ಪಾರಾದ ಜೋಡಿ ಸುದ್ದಿ ತಿಳಿದ ವೀರಭದ್ರ

ಅಣ್ಣಯ್ಯ ಹಾಗೂ ಪಾರು ಮಧ್ಯ ಒಂದು ಹೊಂದಾಣಿಕೆ ಮೂಡಿದೆ. ಅಣ್ಣಯ್ಯ ಮಾಡಿದ ಯಾವ ಕೆಲಸವನ್ನೂ ಈಗ ಪಾರು ತಿರಸ್ಕಾರ ಮಾಡೋದಿಲ್ಲ. ಆದರೆ ವೀರಭದ್ರನಿಗೆ ಮಾತ್ರ ಇವರಿಬ್ಬರು ಸುಖದಿಂದ ಇರೋದು ಇಷ್ಟವಿಲ್ಲ.

ಹೊಂದಿಕೊಂಡು ಬಾಳಲು ರೆಡಿಯಾದ ಶಿವು, ಪಾರು
ಹೊಂದಿಕೊಂಡು ಬಾಳಲು ರೆಡಿಯಾದ ಶಿವು, ಪಾರು (ಜೀ ಕನ್ನಡ)

ಅಣ್ಣಯ್ಯ ಹಾಗೂ ಪಾರು ಮಧ್ಯ ಒಂದು ಹೊಂದಾಣಿಕೆ ಮೂಡಿದೆ. ಅಣ್ಣಯ್ಯ ಮಾಡಿದ ಯಾವ ಕೆಲಸವನ್ನೂ ಈಗ ಪಾರು ತಿರಸ್ಕಾರ ಮಾಡೋದಿಲ್ಲ. ನಾವು ಹೊಂದಿಕೊಂಡು ಹೋಗೋಣ ಎಂದು ಹೇಳಿದ್ದಾಳೆ. ಇನ್ನು ಅಣ್ಣಯ್ಯ ಮಾತ್ರ ತನ್ನ ಗಡಿಯನ್ನು ದಾಟಿ ಪಾರು ಇದ್ದಲ್ಲಿಗೆ ನಾನು ಹೋಗಬಾರದು ಎಂದು ಅಂದುಕೊಂಡಿದ್ದಾನೆ. ಹೀಗಿದ್ದಾಗ ಅಣ್ಣಯ್ಯ ತನ್ನ ಕೋಣೆ ಒಳಗಡೆ ಹೋಗಬೇಕು ಎಂದು ಅಂದುಕೊಳ್ಳುತ್ತಾನೆ. ಆಗ ಪಾರು ಕೋಣೆಯಿಂದ ಹೊರಕ್ಕೆ ಬರುತ್ತಾ ಇರುತ್ತಾಳೆ. ಹಾಗೆ ಬರುವಾಗ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಳ್ಳುತ್ತಾರೆ. ಹೀಗಿರುವಾಗ ಪಾರುಗೆ ನೋವಾಗಬಾರದು ಎಂದು ಅಣ್ಣಯ್ಯ ತುಂಬಾ ಕಾಳಜಿವಹಿಸುತ್ತಾನೆ. ಪಾರು ಈ ಬಗ್ಗೆ ಏನೂ ಅಪಾರ್ಥ ಮಾಡಿಕೊಳ್ಳುವುದಿಲ್ಲ. ಅವಳಿಗೆ ಸಮಾಧಾನ ಆದ ನಂತರ ಇಬ್ಬರೂ ಮಲಗಲು ಹೋಗುತ್ತಾರೆ.

ಆಗ ಅಣ್ಣಯ್ಯ ಹೇಳುತ್ತಾನೆ, ನಾನು ಇಲ್ಲೇ ಹೊರಗಡೆ ಮಲಗ್ತೀನಿ. ನೀನು ಒಳಗಡೆ ಮಲಗಿಕೋ ಎಂದು. ಆದರೆ ಪಾರು ಅದನ್ನು ನಿರಾಕರಿಸುತ್ತಾಳೆ. ಇಲ್ಲ ಮಾವ ನನ್ನಿಂದ ನಿನಗೆ ತೊಂದರೆ ಆಗೋದು ಬೇಡ ನಾನು ನೀನು ಇಬ್ಬರೂ ಒಳಗಡೆ ಮಲಗಿಕೊಳ್ಳೋಣ. ನೀನು ಹೋಗಿ ಹೊರಗಡೆ ಮಲಗಿಕೊಂಡರೆ ನಿನ್ನ ತಂಗಿಯರಿಗೆ ಅನುಮಾನ ಬರುತ್ತದೆ. ಅದೆಲ್ಲ ಬೇಡ ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಅಣ್ಣಯ್ಯನಿಗೆ ಖುಷಿ ಆಗುತ್ತದೆ. ಪಾರು ತನ್ನ ತಂಗಿಯರ ಬಗ್ಗೆ ನನ್ನ ಮನೆಯ ಬಗ್ಗೆ ಎಷ್ಟೆಲ್ಲ ಕಾಳಜಿ ಮಾಡುತ್ತಿದ್ದಾಳೆ ಎಂದು ಆನಂದಪಡುತ್ತಾನೆ. ಅದಾದ ನಂತರದಲ್ಲಿ ಪಾರು ಹತ್ತಿರ ನೀನು ಮಂಚಕ್ಕೆ ಮಲಗು ನಾನು ಕೆಳಗಡೆ ಮಲಗಿಕೊಳ್ಳುವೆ ಎಂದು ಹೇಳುತ್ತಾನೆ. ಹೀಗೇ ಹೊಂದಾಣಿಕೆ ಮಾಡಿಕೊಂಡು ಅವರಿಬ್ಬರು ಒಂದೇ ಕೋಣೆಯಲ್ಲಿ ಮಲಗಿದ್ದಾರೆ.

ಇನ್ನು ವೀರಭದ್ರನಿಗೆ ಪಾರು ಹಾಗೂ ಅಣ್ಣಯ್ಯನಿಗೆ ಹೊಡೆಯಲು ಯಾರೋ ರೌಡಿಗಳು ಬಂದಿದ್ದರು ಎಂಬ ವಿಚಾರ ಗೊತ್ತಾಗಿದೆ. ಆಗ ಅವನು ತುಂನಾ ಸಿಟ್ಟಾಗಿ ಸೀದಾ ತನ್ನ ಮಗ ಎಲ್ಲಿದ್ದಾನೆ ಎನ್ನುವುದನ್ನು ಹುಡುಕಿಕೊಂಡು ಹೋಗಿದ್ದಾನೆ. ಇದನ್ನೆಲ್ಲ ತನ್ನ ಮಗನೇ ಮಾಡಿಸಿದ್ದಾನೆ ಎಂದು ಅವನು ಅಂದುಕೊಂಡಿದ್ದಾನೆ. ಪಾರು ಮಾತ್ರ ಈಗ ತನ್ನ ಮನೆಯಲ್ಲಿ ತಾನು ಇರುತ್ತಿದ್ದ ಹತ್ತು ಪಟ್ಟು ಹೆಚ್ಚು ಸುಖದಲ್ಲಿ ಅಣ್ಣಯ್ಯನ ಮನೆಯಲ್ಲಿ ಇದ್ಧಾಳೆ. ಅದನ್ನು ಅವಳು ಅಣ್ಣಯ್ಯನ ಹತ್ತಿರ ಹೇಳಿಕೊಂಡಿದ್ದಾಳೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner