Annayya Serial: ಪ್ರತಿ ಹೆಜ್ಜೆಯಲ್ಲೂ ಶಿವುಗೆ ಕಾವಲಾಗಿ ನಿಂತ ಪಾರು; ವೀರಭದ್ರನಿಗೆ ಈ ಬಾರಿಯೂ ನಿರಾಸೆ
ಅಣ್ಣಯ್ಯ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ವೀರಭದ್ರ ತನ್ನ ಕೆಟ್ಟಗುಣಗಳನ್ನು ಮತ್ತೆ ಪ್ರದರ್ಶಿಸಲು ರೆಡಿಯಾಗಿದ್ದ. ಆದರೆ ಪಾರು ಅವನಿಗೆ ಅವಕಾಶ ಮಾಡಿಕೊಡಲಿಲ್ಲ. ತಾನು ಶಿವು ಪರವಾಗಿ ನಿಂತು ಎಲ್ಲವನ್ನೂ ನೋಡಿಕೊಂಡಿದ್ದಾಳೆ.
ಅಣ್ಣಯ್ಯ ಧಾರಾವಾಹಿಯಲ್ಲಿ ವೀರಭದ್ರ ಆಸ್ತಿ ಬರೆಸಿಕೊಳ್ಳಲು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಏನೇ ಮಾಡಿದರೂ ಪಾರು ಅದಕ್ಕೆ ಅಡ್ಡಿಯಾಗುತ್ತಲೇ ಬಂದಿದ್ದಾಳೆ. ಇದರಿಂದ ನಿರಾಸೆಯಾಗಿ ವೀರಭದ್ರ ಈಗ ಇನ್ನೊಂದು ಹೊಸ ಉಪಾಯ ಮಾಡಿದ್ದಾನೆ. ದೀಪಾವಳಿ ಹಬ್ಬಕ್ಕೆಂದು ಅಳಿಯ ಹಾಗೂ ಮಗಳನ್ನು ಮನೆಗೆ ಕರೆದ ನೆಪ ಮಾಡಿ ಆಗ ಆಸ್ತಿ ಬರೆಸಿಕೊಳ್ಳಲು ಮುಂದಾಗಿದ್ದ ಆದರೆ ಯಾವ ಪತ್ರದಲ್ಲಿ ಏನಿದೆ ಅನ್ನೋದನ್ನು ನೋಡಿಕೊಂಡು ಆಮೇಲೆ ನೀವು ಅದಕ್ಕೆ ಸಹಿ ಹಾಕಬೇಕು ಮಾವ ಎನ್ನುತ್ತಾ ಆ ಆಸ್ತಿ ಪತ್ರವನ್ನು ಪಾರು ಹರಿದು ಹಾಕಿದ್ದಳು. ಆದರೆ ಈ ಬಾರಿ ಶಿವು ಒಬ್ಬನನ್ನೇ ಮನೆಗೆ ಕರೆಸಿಕೊಳ್ಳುವ ಪ್ರಯತ್ನ ನಡೆದಿತ್ತು.
ವೀರಭದ್ರ ಶಿವುಗೆ ಕಾಲ್ ಮಾಡಿ ನಮ್ಮ ಮನೆಗೆ ಒಂದಷ್ಟು ಕಿರಾಣಿ ಸಾಮಗ್ರಿಗಳು ಬೇಕಿದೆ. ನೀನು ಆ ಸಾಮಗ್ರಿಗಳನ್ನು ತೆಗೆದುಕೊಂಡು ಬರಬೇಕು ಎಂದು ಹೇಳುತ್ತಾನೆ.ಮಾವ ಹೇಳಿದ ಮೇಲೆ ಮುಗೀತು ನಾನು ಅದನ್ನು ತೆಗೆದುಕೊಂಡು ಹೋಗಲೇಬೇಕು ಎಂದುಕೊಂಡು ಶಿವು ಎಲ್ಲವನ್ನೂ ರೆಡಿ ಮಾಡಿಕೊಂಡು ಸ್ಕೂಟರ್ ಹತ್ತಿರ ಬರುತ್ತಾನೆ. ಆಗ ಯಾಕೋ ಅಲ್ಲಿಗೆ ಪಾರು ಬಂದಿರುತ್ತಾಳೆ. ಅವಳು ಎಲ್ಲಿಗೆ ಹೋಗ್ತಾ ಇದ್ದೀಯಾ? ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅವನು ವಿಷಯ ಹೇಳುತ್ತಾನೆ.
ಅಂಗಡಿಯಲ್ಲಿ ಹುಡುಗರು ಇದ್ದಾರಲ್ಲ ಅವರನ್ನೇ ಕಳಿಸು ಆದ್ರೆ ನೀನು ಮಾತ್ರ ಹೋಗೋದು ಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿ ಶಿವು ಯಾಕೆ ಎಂದು ಪ್ರಶ್ನೆ ಮಾಡಿದಾಗ, ನಾನು ಹೇಳಿದಷ್ಟು ಮಾಡು ನೀನು ಸಾಕು ಎಂದು ರೇಗುತ್ತಾಳೆ. ಅವನೊಬ್ಬನಿಗೆ ತನ್ನ ತವರಿಗೆ ಹೋಗಲು ಅವಳು ಬಿಡೋದಿಲ್ಲ. ಯಾಕೆಂದರೆ ಅಲ್ಲಿ ಅವಳ ತಂದೆ ಮೋಸ ಮಾಡುತ್ತಾನೆ ಎಂಬ ವಿಷಯ ಅವಳಿಗೆ ಗೊತ್ತಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.