Annayya Serial: ಲಾಯರ್ ಆಫೀಸಿಗೆ ಕರ್ಕೊಂಡೋಗು ಎಂದು ಹಠ ಮಾಡಿದ ಪಾರು; ಡಿವೊರ್ಸ್ ಪೇಪರ್‌ಗೆ ಸಹಿ ಹಾಕ್ತಾನ ಅಣ್ಣಯ್ಯ
ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ತುಂಬಾ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾಳೆ. ಎಂದಿನಂತೆ ಇಂದೂ ಸಹ ಶಿವು ಪಾರ್ವತಿಯ ನಿರ್ಧಾರಕ್ಕೆ ತನ್ನ ಸಮ್ಮತಿ ಸೂಚಿಸುತ್ತಾನಾ ಅಥವಾ ನಿರಾಕರಿಸುತ್ತಾ ಎಂಬ ಕುತೂಹಲ ಹೆಚ್ಚಿದೆ.
ಅಣ್ಣಯ್ಯ ಧಾರಾವಾಹಿಯಲ್ಲಿ ಹೊಸದಾಗಿ ಮದುವೆಯಾದ ಜೋಡಿಯನ್ನು ಮಲ್ಲಪ್ಪಣ್ಣನ ಮನೆಗೆ ಊಟಕ್ಕೆ ಕರೆದಿದ್ದಾರೆ. ಅಣ್ಣಯ್ಯನ ತಂಗಿಯರೆಲ್ಲ ತುಂಬಾ ಖುಷಿಯಿಂದ ಅತ್ತಿಗೆಯನ್ನು ರೆಡಿ ಮಾಡಿದ್ದಾರೆ. ಅಣ್ಣನೂ, ಅತ್ತಿಗೆಯೂ ಲವ್ ಮಾಡಿ ಮದುವೆ ಆಗಿದ್ದಾರೆ ಎಂದೇ ಅವರೆಲ್ಲರೂ ಅಂದುಕೊಂಡಿದ್ದಾರೆ. ಆದರೆ ಸತ್ಯ ಬೇರೆನೇ ಇದೆ. ಪಾರು ಹಾಗೂ ಅಣ್ಣಯ್ಯ ಸಂಕಷ್ಟದ ಪರಿಸ್ಥಿತಿಯಲ್ಲಿ ಮದುವೆ ಆಗಿದ್ದಾರೆ. ಮೊದಲ ರಾತ್ರಿ ದಿನವೇ ಪಾರು ತನ್ನ ಕಷ್ಟವನ್ನು ಹೇಳಿಕೊಂಡು ಅಣ್ಣಯ್ಯನಿಗೆ ಬೈದು ಡಿವೋರ್ಸ್ ಬೇಕು ಎಂದು ಹೇಳಿದ್ದಾಳೆ. ಅದಕ್ಕೆ ಅವನು ಒಪ್ಪಿಕೊಂಡಿದ್ದಾನೆ.
ಇನ್ನು ಊಟಕ್ಕೆ ಹೋಗಿ ಅಲ್ಲಿನ ಪ್ರಸಂಗಕ್ಕೆ ಹೊಂದಿಕೊಳ್ಳುವುದೇ ಪಾರು ಹಾಗೂ ಅಣ್ಣಯ್ಯನಿಗೆ ಒಂದು ಟಾಸ್ಕ್ ಆಗಿರುತ್ತದೆ. ಎಲ್ಲರ ಮುಂದೆ ಒಂದೇ ಬಾಳೆಎಲೆಯಲ್ಲಿ ಊಟ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಅವರಿಬ್ಬರಿಗೂ ಇದು ಇರುಸು ಮುರುಸಾಗುತ್ತದೆ. ಆದರೂ ಗತಿ ಇಲ್ಲದೇ ಇಬ್ಬರೂ ಊಟ ಮಾಡಲೇಬೇಕಾಗಿರುತ್ತದೆ. ಅಣ್ಣಯ್ಯನಿಗಂತೂ ತುಂಬಾ ಭಯವಾಗಿದೆ. ಪಾರು ಎಲ್ಲಿ ಕೋಪ ಮಾಡಿಕೊಳ್ಳುತ್ತಾಳೋ ಎಂದು ಆಲೋಚಿಸುತ್ತಾನೆ. ಆದರೆ ಪಾರು ಹಾಗೇನು ಬೈಯ್ಯೋದಿಲ್ಲ. ಒಟ್ಟಿಗೆ ಊಟ ಮಾಡೋಣ ಎಂದು ಆಲೋಚಿಸುತ್ತಾರೆ. ಕಣ್ಣಲ್ಲೇ ಸನ್ನೆ ಮಾಡಿ ಮಾತಾಡಿಕೊಳ್ತಾರೆ. ಅಣ್ಣ ಅತ್ತಿಗೆ ಪ್ರೀತಿಯಿಂದ ಇದ್ದಾರೆ ಎಂದು ತಂಗಿಯರೆಲ್ಲ ಅಂದುಕೊಳ್ಳುತ್ತಾರೆ. ಆದರೆ ರಾಣಿಗೆ ಎಲ್ಲ ಸತ್ಯ ಗೊತ್ತಿರುತ್ತದೆ. ಇವರಿಬ್ಬರೂ ಪ್ರೀತಿ ಮಾಡಿಲ್ಲ ಇದು ಬಲವಂತದ ಮದುವೆ ಎಂದು ತಿಳಿದಿದ್ದರೂ ಸುಮ್ಮನಾಗುತ್ತಾಳೆ. ಊಟ ಮುಂದುವರೆಸುತ್ತಾರೆ. ಅದಾದ ನಂತರದಲ್ಲಿ ಪಾರು ಹಾಗೂ ಶಿವು ಇಬ್ಬರೇ ಸ್ಕೂಟರ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ.
ರುಜು ಹಾಕ್ತಾನಾ ಅಣ್ಣಯ್ಯ?
ಮಾವ ನನ್ನ ಎಲ್ಲಿಗೆ ಕರ್ಕೊಂಡು ಹೋಗ್ತಾ ಇದೀಯಾ? ಎಂದು ಪಾರು ಕೇಳುತ್ತಾಳೆ. ಆಗ ಅವನು ನಮ್ಮ ಮನೆಯಲ್ಲಿ ನಿನಗೇನೂ ಪ್ರಾಬ್ಲಂ ಆಗ್ತಾ ಇಲ್ಲ ತಾನೇ ಎಂದು ಪ್ರಶ್ನೆ ಮಾಡುತ್ತಾನೆ. ಆಗ ಅವಳು ಇಲ್ಲ ನನಗೇನೂ ಸಮಸ್ಯೆ ಇಲ್ಲ. ಆದ್ರೆ ಈಗ ನೀನು ನನ್ನ ಲಾಯರ್ ಆಫೀಸಿಗೆ ಕರ್ಕೊಂಡು ಹೋಗ್ತೀಯಾ? ಅಂತ ಕೇಳುತ್ತಾಳೆ. ಅವನು ತಡ ಮಾಡದೇ ಕರೆದುಕೊಂಡು ಹೋಗುತ್ತಾನೆ. ಅದಾದ ನಂತರದಲ್ಲಿ ಅವರಿಬ್ಬರೂ ಲಾಯರ್ ಎದುರಲ್ಲಿರುತ್ತಾರೆ. ನಮಗೆ ಡಿವೋರ್ಸ್ ಬೇಕು ಎಂದು ಪಾರು ಹೇಳುತ್ತಾಳೆ. ಆಗ ಲಾಯರ್ ಯಾಕೆ ನಿಮಗೆ ಡಿವೋರ್ಸ್ ಬೇಕು ಎಂದು ಪ್ರಶ್ನೆ ಮಾಡಿದಾಗ ನನ್ನ ಪಾರು ಖುಷಿಗೆ ಎಂದು ಅಣ್ಣಯ್ಯ ಉತ್ತರ ನೀಡಿದ್ದಾನೆ. ಪಾರು ಸಹಿ ಹಾಕಿದ್ದಾಳೆ. ಆದರೆ ಅಣ್ಣಯ್ಯ ಏನ್ಮಾಡ್ತಾನೆ ಎಂದು ಕಾದು ನೋಡಬೇಕಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.