Annayya Serial: ಇನ್ನು ಮುಂದೆ ಅಣ್ಣಯ್ಯನ ಜೊತೆಗೇ ಇರ್ತಾಳಂತೆ ಪಾರು; ನಿರ್ಧಾರ ಬದಲಿಸಿದ್ದಕ್ಕೆ ಖುಷಿಯಾದ ಶಿವು
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಇನ್ನು ಮುಂದೆ ಅಣ್ಣಯ್ಯನ ಜೊತೆಗೇ ಇರ್ತಾಳಂತೆ ಪಾರು; ನಿರ್ಧಾರ ಬದಲಿಸಿದ್ದಕ್ಕೆ ಖುಷಿಯಾದ ಶಿವು

Annayya Serial: ಇನ್ನು ಮುಂದೆ ಅಣ್ಣಯ್ಯನ ಜೊತೆಗೇ ಇರ್ತಾಳಂತೆ ಪಾರು; ನಿರ್ಧಾರ ಬದಲಿಸಿದ್ದಕ್ಕೆ ಖುಷಿಯಾದ ಶಿವು

ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು, ಶಿವುಗೆ ಭರವಸೆ ನೀಡಿದ್ದಾಳೆ. ಇನ್ನು ಮುಂದೆ ನಾನು ನೀನು ಅದೇ ಹಳೆ ಪಾರು ಮತ್ತು ಶಿವು ಮಾವ ಆಗಿ ಇರೋಣ ಎಂದಿದ್ದಾಳೆ. ಅಣ್ಣಯ್ಯನ ತಂಗಿಯರ ಖುಷಿಗೆ ಏನು ಬೇಕೋ ಅದನ್ನು ತಾನು ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದಾಳೆ.

ಅಣ್ಣಯ್ಯನಿಗೆ ಧೈರ್ಯ ನೀಡಿದ ಪಾರು - ಇನ್ಮುಂದೆ ಜೊತೆಗೇ ಇರ್ತಾರೆ
ಅಣ್ಣಯ್ಯನಿಗೆ ಧೈರ್ಯ ನೀಡಿದ ಪಾರು - ಇನ್ಮುಂದೆ ಜೊತೆಗೇ ಇರ್ತಾರೆ (ಜೀ ಕನ್ನಡ)

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಇಬ್ಬರೂ ಈಗ ತಾನೆ ಲಾಯರ್‌ ಆಫೀಸಿನಿಂದ ಹೊರ ಬಂದಿದ್ದಾರೆ. ಅಣ್ಣಯ್ಯ ತೆಗೆದುಕೊಂಡು ನಿರ್ಧಾರವನ್ನು ಮೆಚ್ಚಿದ ಪಾರು ಶಿವು ಹೇಳಿದ್ದನ್ನೆಲ್ಲ ಕೇಳುತ್ತಿದ್ದಾಳೆ. ತಾನು ಸ್ವಾರ್ಥಿ ಆಗಬಾರದು ಎಂದು ಈಗ ಅವಳು ಅಂದುಕೊಂಡಿದ್ದಾಳೆ. ಅದೇ ರೀತಿ ನಡೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾಳೆ. ಶಿವು ಹತ್ತಿರ ನಿಂತುಕೊಂಡು ಅವನ ಕೈ ಹಿಡಿದು ಪಾರು ಅವನಿಗೆ ಮಾತು ಕೊಟ್ಟಿದ್ದಾಳೆ. “ಮಾವ ಹಳೆದನ್ನೆಲ್ಲ ನಾವಿಬ್ಬರೂ ಮರೆತು ಬಿಡೋಣ, ಎಲ್ಲರ ಮುಂದೆ ನಾವು ತುಂಬಾ ಚನಾಗಿದಿವಿ ಎಂದು ನಾಟಕ ಮಾಡಬೇಕು, ಹಾಗಿದ್ರೆ ಮಾತ್ರ ಈಗ ಬದುಕು ಸುಲಭ. ನಿನ್ನ ತಂಗಿಯರಿಗೂ ನೆಮ್ಮದಿ. ನಾನು ಸ್ವಾರ್ಥಿ ಆಗೋದಿಲ್ಲ ಮಾವ. ನಿನ್ನ ಕಷ್ಟ ಅರ್ಥ ಮಾಡ್ಕೊತೀನಿ" ಎಂದು ಹೇಳಿದ್ಧಾಳೆ.

ಆ ಮಾತನ್ನು ಕೇಳಿ ಶಿವುಗೆ ತುಂಬಾ ಖುಷಿಯಾಗಿದೆ. ಅವನಿಗೆ ಅವನ ತಂಗಿಯರ ಖುಷಿಯೊಂದನ್ನು ಬಿಟ್ಟರೆ ಮತ್ತೇನೂ ಬೇಕು ಎಂದಿಲ್ಲ. ಅವನಿಗೆ ಆ ಮಾತು ಕೇಳ್ತಾ ಇದ್ದ ಹಾಗೇ ಆನಂದ ಆಗುತ್ತದೆ. ಆಯ್ತು ಪಾರು ಎಂದು ಅವನೂ ಖುಷಿಯಿಂದ ಒಪ್ಪಿಕೊಳ್ಳುತ್ತಾನೆ. ನಂತರ ಇಬ್ಬರೂ ಒಟ್ಟಿಗೆ ಮನೆಕಡೆ ತೆರಳುತ್ತಾರೆ. ಅಲ್ಲಿಗೆ ಹೋಗಿ ನೋಡುವಷ್ಟರಲ್ಲಿ ತಂಗಿಯರೆಲ್ಲ ಒಟ್ಟಿಗೆ ನಿಂತುಕೊಂಡು ಇವರು ಬರುವ ದಾರಿಯನ್ನೇ ಕಾಯುತ್ತಾ ಇರುತ್ತಾರೆ. ಅವರು ಬಂದ ತಕ್ಷಣ ಆರತಿ ಅವರಿಗೆ ದೃಷ್ಟಿ ತೆಗೆಯುತ್ತಾಳೆ ರಾಣಿ.

ಯಾಕಮ್ಮ ಇದೆಲ್ಲ ಎಂದು ಅಣ್ಣಯ್ಯ ಕೇಳುತ್ತಾನೆ. ಆಗ ಇನ್ನೂ ನಿಮ್ಮದು ಹಸಿಮೈ. ಹೊರಗಡೆ ಹೋಗಿ ಬಂದ್ರೆ ದೃಷ್ಟಿ ಆಗುತ್ತದೆ ಎಂದು ಹೇಳುತ್ತಾಳೆ. ನಂತರ ಇಬ್ಬರೂ ಒಟ್ಟಿಗೆ ಹೋದರೆ ಪಾರುಗೆ ಬೇಸರ ಆಗಬಹುದು ಎಂದು ಅವನು ಬೇರೆ ದಾರಿಯಿಂದ ಹೋಗಲು ಪ್ರಯತ್ನ ಮಾಡುತ್ತಾ. ನಾನು ಸ್ವಲ್ಪ ಅಂಗಡಿಗೆ ಹೋಗಿ ಬರ್ತೀನಿ ಎಂದು ಹೇಳುತ್ತಾನೆ. ಆದ್ರೆ ಪಾರುನೇ ಅವನ ಕೈಹಿಡಿದು ತಡೆಯುತ್ತಾ, ಒಳಗಡೆ ಕರೆದುಕೊಂಡು ಹೋಗ್ತಾಳೆ.

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner