Annayya Serial: ಅತ್ತಿಗೆ ಈಗ ತಂಗಿಯರ ಪರ; ಸತ್ಯ ಗೊತ್ತಾದರೂ ಅಣ್ಣಯ್ಯನಿಗೆ ತಿಳಿಸದ ಪಾರು ಅಂದ್ರೆ ಈಗ ಎಲ್ಲರಿಗೂ ಅಚ್ಚುಮೆಚ್ಚು
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಅತ್ತಿಗೆ ಈಗ ತಂಗಿಯರ ಪರ; ಸತ್ಯ ಗೊತ್ತಾದರೂ ಅಣ್ಣಯ್ಯನಿಗೆ ತಿಳಿಸದ ಪಾರು ಅಂದ್ರೆ ಈಗ ಎಲ್ಲರಿಗೂ ಅಚ್ಚುಮೆಚ್ಚು

Annayya Serial: ಅತ್ತಿಗೆ ಈಗ ತಂಗಿಯರ ಪರ; ಸತ್ಯ ಗೊತ್ತಾದರೂ ಅಣ್ಣಯ್ಯನಿಗೆ ತಿಳಿಸದ ಪಾರು ಅಂದ್ರೆ ಈಗ ಎಲ್ಲರಿಗೂ ಅಚ್ಚುಮೆಚ್ಚು

ಅಣ್ಣಯ್ಯ ಧಾರಾವಾಹಿಯಲ್ಲಿ ತಂಗಿಯರೆಲ್ಲ ಅಣ್ಣನಿಂದ ಮುಚ್ಚಿಟ್ಟ ಸತ್ಯವನ್ನು ಈಗ ಅತ್ತಿಗೆಗೆ ಹೇಳುತ್ತಿದ್ದಾರೆ. ಆದರೆ ಅತ್ತಿಗೆ ಪಾರು ಮಾತ್ರ ಶಿವುಗೆ ಆ ಎಲ್ಲ ಸತ್ಯವನ್ನು ತಿಳಿಸದೆ ತಂಗಿಯರ ಪರ ನಿಂತಿದ್ದಾಳೆ. ಇದರಿಂದ ತಂಗಿಯರೆಲ್ಲರೂ ಅತ್ತಿಗೆಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.

ಪಾರು ಅಂದ್ರೆ ಈಗ ಎಲ್ಲರಿಗೂ ಅಚ್ಚುಮೆಚ್ಚು
ಪಾರು ಅಂದ್ರೆ ಈಗ ಎಲ್ಲರಿಗೂ ಅಚ್ಚುಮೆಚ್ಚು (ಜೀ ಕನ್ನಡ)

ಅಣ್ಣಯ್ಯ ಧಾರಾವಾಹಿಯಲ್ಲಿ ತಂಗಿಯರೆಲ್ಲ ಅಣ್ಣನಿಂದ ಮುಚ್ಚಿಟ್ಟ ಸತ್ಯವನ್ನು ಈಗ ಅತ್ತಿಗೆಗೆ ಹೇಳುತ್ತಿದ್ದಾರೆ. ಅಣ್ಣಯ್ಯ ಇಲ್ಲದ ಸಂದರ್ಭ ನೋಡಿಕೊಂಡು ಅವರು ಟಿವಿ ಬಳಕೆ ಮಾಡೋದು ಹಾಗೇ ಮೊಬೈಲ್ ಫೋನ್ ಯೂಸ್‌ ಮಾಡೋದು. ಈ ಎಲ್ಲವನ್ನೂ ಈಗ ಅತ್ತಿಗೆಗೆ ಹೇಳುತ್ತಿದ್ದಾರೆ. ಅವರೆಲ್ಲ ಅತ್ತಿಗೆಯಿಂದಲೂ ಈ ಸತ್ಯವನ್ನು ಮುಚ್ಚಿಡಬೇಕು ಎಂದು ಅಂದುಕೊಂಡಿರುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ರಶ್ಮಿ ಚೇರ್‌ ಮೇಲೆ ಕುಳಿತುಕೊಂಡು ಪುಸ್ತಕ ಓದುತ್ತಿದ್ದಂತೆ ನಾಟಕ ಮಾಡುತ್ತಾ ಇರುತ್ತಾಳೆ. ಆ ಸಂದರ್ಭದಲ್ಲಿ ಟಿವಿ ಕೂಡ ಆನ್ ಆಗಿರುತ್ತದೆ. ಅಣ್ಣ ಬಂದ ಗಾಬರಿಗೆ ಅವಳು ಪುಸ್ತಕ ಹಾಗೂ ಅದರೊಳಗಿನ ಮೊಬೈಲ್ ಎರಡನ್ನೂ ಅಲ್ಲೇ ಬಿಟ್ಟು ಹೋಗುತ್ತಾಳೆ.

ಮತ್ತೆ ಬಂದು ಪುಸ್ತಕವನ್ನು ಎತ್ತಿಕೊಳ್ಳುವ ಸಂದರ್ಭದಲ್ಲಿ ಪಾರು ರಶ್ಮಿಯನ್ನು ಗಮನಿಸುತ್ತಾಳೆ. ಆಗ ಅವಳಿಗೆ ಮೊಬೈಲ್ ಮುಚ್ಚಿಡುವುದು ಕಾಣಿಸುತ್ತದೆ. ಏನದು ಎಂದು ಪ್ರಶ್ನೆ ಮಾಡುತ್ತಾಳೆ.ಪ್ರಶ್ನೆ ಮಾಡಿದಾಗ ಗಾಬರಿಯಾಗಿ ಅದು.. ಅದು… ಎಂದು ಅವಳು ತಡವರಿಸುತ್ತಾಳೆ. ಅದಾದ ನಂತರದಲ್ಲಿ ಪಾರು ಹತ್ತಿರ ಬಂದು ಹೇಳು ಎಂದು ಕೇಳಿದಾಗ ಮೋಬೈಲ್ ಎಂದು ಉತ್ತರಿಸುತ್ತಾಳೆ. ಯಾಕೆ ಮೊಬೈಲ್ ಅಡಗಿಸಿಕೊಂಡಿದ್ದೀಯಾ ಎಂದಾಗ ಮೊದಲನೇ ತಂಗಿ ರತ್ನ ಬರುತ್ತಾಳೆ.

ರತ್ನ ಬಂದು ಎಲ್ಲ ಸತ್ಯ ಹೇಳುತ್ತಾಳೆ. ನಾವೆಲ್ಲ ಒಂದೇ ಮೊಬೈಲ್ ಬಳಕೆ ಮಾಡೋದು. ಈ ವಿಷಯ ಇನ್ನೂ ಅಣ್ಣನಿಗೆ ಗೊತ್ತಿಲ್ಲ. ಗೊತ್ತಾದ್ರೆ ಅವನು ಕೋಪ ಮಾಡಿಕೊಳ್ತಾನೆ. ಹಾಗಾಗಿ ಅವನಿಗೆ ಗೊತ್ತಿಲ್ಲದ ಹಾಗೆ ಆಗಾಗ ಮಾತ್ರ ನಾವು ಇದನ್ನು ಉಪಯೋಗಿಸುತ್ತೀವಿ. ಇದರ ನಂಬರ್ ಕೂಡ ಇನ್ನೂ ಯಾರಿಗೂ ಗೊತ್ತಿಲ್ಲ. ಆಗಾಗ ಒಂದೊಂದು ಸೆಲ್ಫಿ ಫೋಟೋ ತಗೊತೀವಿ ಅದನ್ನು ಬಿಟ್ರೆ ಮತ್ತೇನೂ ಇಲ್ಲ ಎಂದು ಹೇಳುತ್ತಾಳೆ.

ಅಷ್ಟರಲ್ಲಿ ಅಲ್ಲಿಗೆ ಅಣ್ಣಯ್ಯ ಬರುತ್ತಾನೆ. ರಶ್ಮಿ ಕಣ್ಣಲ್ಲೇ ಅಣ್ಣನಿಗೆ ಹೇಳಬೇಡ ಎನ್ನುವ ರೀತಿಯಲ್ಲಿ ಸನ್ನೆ ಮಾಡುತ್ತಾಳೆ. ಆ ಸನ್ನೆಯನ್ನು ಗಮನಿಸಿದ ಪಾರು ಏನೂ ಹೇಳೋದಿಲ್ಲ. ಶಿವು ಬಂದ ತಕ್ಷಣ ಅವನ ಕೈ ಒರೆಸಿಕೊಳ್ಳಲು ಒಂದು ಟವೆಲ್ ತಂದು ಕೊಡುತ್ತಾಳೆ.

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner