Annayya Serial: ರಾಣಿಯನ್ನು ಕೂರಿಸಿ ಊಟ ಬಡಿಸಿದ ಪಾರು; ಅತ್ತಿಗೆಯ ಪ್ರೀತಿ ಕಂಡು ಭಾವುಕರಾದ ಶಿವು ತಂಗಿಯರು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಈಗ ಎಲ್ಲವನ್ನೂ ಒಪ್ಪಿಕೊಂಡಿದ್ದಾಳೆ. ಅಣ್ಣಯ್ಯನ ಜೊತೆ ಹೊಂದಿಕೊಂಡು ಹೋಗುತ್ತಿದ್ದಾಳೆ. ಅವನ ತಂಗಿಯರಿಗೆ ಪ್ರೀತಿ ತೋರಿಸುತ್ತಿದ್ದಾಳೆ. ಇದನ್ನೆಲ್ಲ ನೋಡಿ ತಂಗಿಯರು ಭಾವುಕರಾಗಿದ್ದಾರೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಯಾವಾಗಲೂ ರಾಣಿ ಮಾತ್ರ ಮನೆ ಕೆಲಸ ಮಾಡುತ್ತಾ ಎಲ್ಲರ ಕಾಳಜಿ ಮಾಡುತ್ತಾ ಇರುತ್ತಾಳೆ. ಅವಳು ಮನೆಯ ಅಷ್ಟೂ ಜವಾಬ್ಧಾರಿಯನ್ನು ತೆಗೆದುಕೊಂಡಿರುತ್ತಾಳೆ. ಹೀಗಿರುವಾಗ ಯಾವಾಗ, ಯಾರಿಗೆ, ಏನು ಮಾಡಿಕೊಡಬೇಕು ಅನ್ನೋದು ಸಹ ಅವಳಿಗೆ ತಿಳಿದಿರುತ್ತದೆ. ಅಣ್ಣಯ್ಯನ ತಂಗಿ ರಾಣಿ ಹೋಗಿ ಅವನನ್ನು ಊಟಕ್ಕೆ ಕರೆಯುತ್ತಾಳೆ. ಮೊದಲಿಗೆ ಆಯ್ತು ಊಟಕ್ಕೆ ಬರ್ತಿನಿ ಹೋಗು ಎಂದು ಹೇಳುತ್ತಾನೆ. ಆದರೆ ನಂತರದಲ್ಲಿ ಪಾರು? ಎಂದು ಪ್ರಶ್ನೆ ಮಾಡುತ್ತಾನೆ. ಪಾರು ಅತ್ಗೆನಾ ನಾನು ಕರೀದೆ ಇರ್ತೀನಾ? ಬಾ ನೀನು ಮೊದಲು ಎಂದು ಹೇಳುತ್ತಾಳೆ.
ಇನ್ನು ಎಲ್ಲರನ್ನೂ ಊಟಕ್ಕೆ ಕರೆದು ಬಡಿಸಲು ರೆಡಿ ಆಗ್ತಾಳೆ. ಆದರೆ ಈ ಸಲ ರಾಣಿಯನ್ನು ಪಾರು ತಡೆಯುತ್ತಾಳೆ. ನಾನೇ ಬಡಸ್ತೀನಿ ನೀವೆಲ್ಲ ಕೂತು ಊಟ ಮಾಡಿ ಎಂದು ಹೇಳುತ್ತಾಳೆ. ಆಗ ಎಲ್ಲರೂ ಕೂತು ಊಟ ಮಾಡುತ್ತಾರೆ. ಅದಕ್ಕೂ ಮೊದಲು ರತ್ನ ಬೇಡ ಅತ್ಗೆ ನೀನು ಈಗ ತಾನೆ ಹೊಸದಾಗಿ ನಮ್ಮ ಮನೆಗೆ ಬಂದಿದೀಯಾ. ಎಲ್ಲ ಕೆಲಸ ಮಾಡಬೇಕು ಅಂತ ನಾವೇನು ಬಯಸೋದಿಲ್ಲ. ಮೊದಲು ನೀನು ಹೊಂದಿಕೋ ಆಮೇಲೆ ನೋಡೋಣ ಎನ್ನುತ್ತಾಳೆ. ಆಗ ಪಾರು ಹೇಳುತ್ತಾಳೆ. ಇಲ್ಲ ನನಗೆ ಅಡುಗೆ ಮಾಡೋಕಂತು ಬರೋದಿಲ್ಲ.
ಆದ್ರೆ ನಾನು ಚೆನ್ನಾಗಿ ಬಡಸ್ತೀನಿ ಹಾಗಾಗಿ ಇಂದಿನಿಂದ ಪ್ರತಿದಿನ ನಾನೇ ನಿಮಗೆಲ್ಲ ಬಡಸ್ತೀನಿ ಎಂದು ಹೇಳುತ್ತಾಳೆ. ರಾಣಿಯನ್ನು ಬಲವಂತವಾಗಿ ಅಣ್ಣಯ್ಯನ ಪಕ್ಕ ಕೂರಿಸಿ ಊಟ ಹಾಕ್ತಾಳೆ. ನಂತರ ರಶ್ಮಿಗೆ ಎಷ್ಟು ಅನ್ನ ಬೇಕು ಅನ್ನೋದನ್ನು ಅರ್ಥ ಮಾಡಿಕೊಂಡು ಬಡಿಸಿದ್ದಕ್ಕೆ ಅವಳಿಗೆ ತುಂಬಾ ಖುಷಿ ಆಗುತ್ತದೆ. ಅತ್ಗೆ ನೀವು ಬಂದ ಎರಡೇ ದಿನಕ್ಕೆ ನನ್ನ ಪೂರ್ತಿಯಾಗಿ ಅರ್ಥ ಮಾಡ್ಕೊಂಡಿದಿರಾ ಐ ಲವ್ ಯು ಎಂದು ಹೇಳುತ್ತಾಳೆ. ಅದಕ್ಕೆ ಪಾರು ಕೂಡ ಖುಷಿಯಾಗುತ್ತಾಳೆ. ನಂತರ ಎಲ್ಲರೂ ಭಾವುಕರಾಗುತ್ತಾರೆ. ಯಾಕೆಂದರೆ ಅಮ್ಮ ಇಲ್ಲದೆ ಬೆಳೆದ ಮಕ್ಕಳು ಇವರಾಗಿರುವುದರಿಂದ ಈ ರೀತಿ ಪ್ರೀತಿಯನ್ನು ಅವರು ಮೊದಲ ಬಾರಿಗೆ ಕಂಡಿರುತ್ತಾರೆ.
ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
