Annayya Serial: ಅಣ್ಣಯ್ಯ ಧಾರಾವಾಹಿ ಮದುವೆ ಶೂಟಿಂಗ್ ತೆರೆ ಹಿಂದಿನ ಕಥೆ; ಹೇಗಿತ್ತು ನೋಡಿ ತಯಾರಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಅಣ್ಣಯ್ಯ ಧಾರಾವಾಹಿ ಮದುವೆ ಶೂಟಿಂಗ್ ತೆರೆ ಹಿಂದಿನ ಕಥೆ; ಹೇಗಿತ್ತು ನೋಡಿ ತಯಾರಿ

Annayya Serial: ಅಣ್ಣಯ್ಯ ಧಾರಾವಾಹಿ ಮದುವೆ ಶೂಟಿಂಗ್ ತೆರೆ ಹಿಂದಿನ ಕಥೆ; ಹೇಗಿತ್ತು ನೋಡಿ ತಯಾರಿ

ಅಣ್ಣಯ್ಯ ಹಾಗೂ ಪಾರು ಮದುವೆ ಎಪಿಸೋಡ್‌ ನೀವೆಲ್ಲರೂ ಖಂಡಿತ ನೋಡಿರ್ತೀರಾ. ಆದ್ರೆ ಮದುವೆ ಶೂಟಿಂಗ್ ಮಾಡುವಾಗ ಅದರ ಹಿಂದೆ ಎಷ್ಟೆಲ್ಲ ಪ್ರಯತ್ನ ಇರುತ್ತದೆ. ಧಾರಾವಾಹಿಯಲ್ಲಿ ಅಭಿನಯಿಸುವ ಕಲಾವಿದರ ಸರ್ಕಸ್‌ ಹೇಗಿರುತ್ತದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.

ಅಣ್ಣಯ್ಯ ಧಾರಾವಾಹಿ ಮದುವೆ ಶೂಟಿಂಗ್ ತೆರೆ ಹಿಂದಿನ ಕಥೆ
ಅಣ್ಣಯ್ಯ ಧಾರಾವಾಹಿ ಮದುವೆ ಶೂಟಿಂಗ್ ತೆರೆ ಹಿಂದಿನ ಕಥೆ ((ಗುಡ್‌ ಟು ಗೋ ಯುಟ್ಯೂಬ್‌ ಚಾನೆಲ್))

ಅಣ್ಣಯ್ಯ ಹಾಗೂ ಪಾರು ಮದುವೆ ಶೂಟಿಂಗ್ ಸಂದರ್ಭದಲ್ಲಿ ತೆರೆ ಹಿಂದೆ ಏನೆಲ್ಲ ನಡೆದಿದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ. ಅಣ್ಣಯ್ಯ ಧಾರಾವಾಹಿಯಲ್ಲೇ ಅಭಿನಯಿಸುತ್ತಿರುವ ಕಲಾವಿದೆ ದೀಪಿಕಾ ಅವರ ಗುಡ್‌ ಟು ಗೋ ಯುಟ್ಯೂಬ್‌ ಚಾನೆಲ್‌ನಲ್ಲಿ ತೆರೆಯ ಹಿಂದೆ ನಡೆದ ಏನೆಲ್ಲ ಮಾಡ್ತಾರೆ. ಕಲಾವಿದರು ಎಷ್ಟು ಕಷ್ಟಪಡ್ತಾರೆ. ಸೀರಿಯಲ್ ಶೂಟಿಂಗ್‌ ಮಾಡಲು ಎಷ್ಟೆಲ್ಲ ತಯಾರಿ ಬೇಕು ಎಂದು ತಿಳಿಸಿದ್ದಾರೆ. ಅವರು ಬೆಳಿಗ್ಗೆ ಬೇಗನೇ ರೆಡಿಯಾಗಿ ಶೂಟಿಂಗ್ ಸೆಟ್‌ಗೆ ಬರುತ್ತಾರೆ. ಇನ್ನು ಸ್ಕೂಲ್‌ಗೆ ಹೋಗುತ್ತಿರುವ ಸೀನ ಪಾತ್ರದ ತಂಗಿ ಭಾನು ಕಾರ್‌ನಲ್ಲಿ ಬರುವಾಗಲೇ ಶಾಲೆಯಲ್ಲಿ ಹೇಳಿಕೊಟ್ಟ ಪಾಠಗಳನ್ನು ಮತ್ತವರ ನೋಟ್ಸ್‌ಗಳನ್ನು ಓದಿಕೊಳ್ಳುತ್ತಾ ಬರುತ್ತಾರೆ.

ಬಂದ ನಂತರದಲ್ಲಿ ಎಲ್ಲರೂ ಗಂಟೆಗಳ ಕಾಲ ಮೇಕಪ್ ಮಾಡಿಸಿಕೊಳ್ಳುತ್ತಾರೆ. ಹಿಂದಿನ ದಿನ ಶೂಟಿಂಗ್ ಪ್ಯಾಕಪ್ ಆಗೋವಾಗಲೇ ಮರುದಿನ ಆಗಿ ಹೋಗಿತ್ತು ಎಂದು ಕೆಲವರು ಹೇಳುತ್ತಾರೆ. ಇನ್ನು ಸಾಕಷ್ಟು ಜನ ಅದಾಗಲೇ ಮದುವೆ ಸೀನ್ ಶೂಟಿಂಗ್ ಮಾಡಲು ಬುಕ್ ಆಗಿದ್ದ ಹಾಲ್‌ನಲ್ಲಿ ಇರ್ತಾರೆ. ಇನ್ನು ಅಣ್ಣಯ್ಯನ ಅತ್ತೆ ಪಾತ್ರ ಮಾಡುತ್ತಿರುವವರ ಕಾಲಿಗೆ ಏಟಾಗಿ ಅವರು ವೀಲ್‌ಚೇರ್‌ನಲ್ಲಿ ಶೂಟಿಂಗ್‌ಗೆ ಬಂದಿದ್ದಾರೆ. ಇದೇ ರೀತಿ ಸಾಕಷ್ಟು ಜನ ಕಲಾವಿದರು ಮನರಂಜನೆ ನೀಡುವ ಸಲುವಾಗಿ ಅವಿರತ ಶ್ರಮಪಡುವುದು ಅಲ್ಲಿ ಕಾಣಿಸುತ್ತದೆ.

ಇನ್ನು ಪಾರು ಹಾಗೂ ಶಿವು ಪಾತ್ರಧಾರಿಗಳು ಬಂದು ರೆಡಿಯಾಗಿತ್ತಾರೆ. ಅದಾದ ನಂತರದಲ್ಲಿ ಶೂಟಿಂಗ್ ಸೆಟ್‌ನಲ್ಲೇ ಅವರಿಗೆ ತಿಂಡಿ ಕೊಡುತ್ತಾರೆ. ಎಲ್ಲರೂ ತಮ್ಮ ತಮ್ಮ ಸ್ಕ್ರಿಪ್ಟ್‌ ಹಿಡಿದು ಓದಿಕೊಂಡು ಅರ್ಥ ಮಾಡಿಕೊಳ್ಳುತ್ತಾರೆ. ಒಂದೇ ದಿನ ಮೂರು ಬೇರೆ ಬೇರೆ ಸೀನ್ ಶೂಟ್ ಆಗುವಾಗ ಮೂರು ಸಾರಿ ಮೇಕಪ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಪಾರು ಪಾತ್ರಧಾರಿ ನಿಶಾಕೃಷ್ಣ ಹೇಳುತ್ತಾರೆ.

ಇನ್ನು ಕೆಲವು ತಾಯಂದಿರು ಶೂಟಿಂಗ್‌ ಸೆಟ್‌ಗೆ ಬಂದು ತಮ್ಮ ಮಕ್ಕಳ ಕಾಳಜಿ ಮಾಡುತ್ತಾರೆ. ತಾವೇ ಸ್ವತಃ ಅಲ್ಲಿ ನಿಂತು ಅವರಿಗೆ ಏನು ಬೇಕು? ಏನು ಬೇಡ ಎನ್ನುವುದನ್ನು ನೋಡಿಕೊಳ್ಳುತ್ತಾರೆ. ಮಕ್ಕಳ ಜೊತೆ ಅವರೂ ಕೂಡ ಸೀರಿಯಲ್‌ ಸೆಟ್‌ಗೆ ಬಂದಿರುತ್ತಾರೆ. ಇನ್ನು ಒಂದೇ ಡೈಲಾಗ್‌ಗೆ ತುಂಬಾ ಸಲ ಟೇಕ್ ತೆಗೆದುಕೊಳ್ಳುವ ಪ್ರಸಂಗವೂ ಇರುತ್ತದೆ ಎಂದು ದೀಪಿಕಾ ಹೇಳುತ್ತಾರೆ. ಒಂದು ಮದುವೆ ಮನೆಯ ಸೆಟ್‌ ಹಾಕಬೇಕು ಎಂದರೆ ಒಂದು ಮದುವೆ ಮಾಡಿದಷ್ಟೇ ಕಷ್ಟ ಇದೆ ಎನ್ನುವುದು ಅಲ್ಲಿ ಕೆಲಸ ಮಾಡುತ್ತಿರುವವರನ್ನು ನೋಡಿದರೆ ಅರ್ಥ ಆಗುತ್ತದೆ.

ಇನ್ನು ಬಿಡುವಿಲ್ಲದ ಶೂಟಿಂಗ್‌ ನಡೆದಾಗ ಅಲ್ಲೇ ಮಲಗಿ ನಿದ್ರೆ ಮಾಡುವವರೂ ಇರುತ್ತಾರೆ. ಇನ್ನು ಎಲ್ಲರೂ ತುಂಬಾ ಲವಲವಿಕೆಯಿಂದ ಶೂಟಿಂಗ್‌ನಲ್ಲಿ ಭಾಗಿಯಾಗಿರುವುದನ್ನೂ ಸಹ ನಾವು ಈ ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ನೋಡಿದ ವೀಕ್ಷಕರು ಅಣ್ಣಯ್ಯ ಧಾರಾವಾಹಿಯ ಟೀಮ್‌ ಜೊತೆ ಇನ್ನಷ್ಟು ವಿಡಿಯೋ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.

Whats_app_banner