ಬಾಳು ಬೆಳಗುಂದಿ: ಸರಿಗಮಪ ಆಡಿಷನ್‌ನಲ್ಲಿ ಮಿಂಚಿದ ಜವಾರಿ ಹೈದನ ಜನಪ್ರಿಯ ಹಾಡುಗಳು ಇಲ್ಲಿವೆ ನೋಡಿ; ಲಂಗಾ ದಾವನ್ಯಾಗ ಮಸ್ತ್ ಕಾಣತಿ ಲಾವಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ಬಾಳು ಬೆಳಗುಂದಿ: ಸರಿಗಮಪ ಆಡಿಷನ್‌ನಲ್ಲಿ ಮಿಂಚಿದ ಜವಾರಿ ಹೈದನ ಜನಪ್ರಿಯ ಹಾಡುಗಳು ಇಲ್ಲಿವೆ ನೋಡಿ; ಲಂಗಾ ದಾವನ್ಯಾಗ ಮಸ್ತ್ ಕಾಣತಿ ಲಾವಣ್ಯ

ಬಾಳು ಬೆಳಗುಂದಿ: ಸರಿಗಮಪ ಆಡಿಷನ್‌ನಲ್ಲಿ ಮಿಂಚಿದ ಜವಾರಿ ಹೈದನ ಜನಪ್ರಿಯ ಹಾಡುಗಳು ಇಲ್ಲಿವೆ ನೋಡಿ; ಲಂಗಾ ದಾವನ್ಯಾಗ ಮಸ್ತ್ ಕಾಣತಿ ಲಾವಣ್ಯ

ಬಾಳು ಬೆಳಗುಂದಿ ಜಾನಪದ ಸಾಂಗ್: ಸರಿಗಮಪ ಆಡಿಷನ್‌ನಲ್ಲಿ ಈ ಬಾರಿ ಎಲ್ಲರ ಗಮನ ಸೆಳೆದ ದೇಸಿ ಪ್ರತಿಭೆ ಬಾಳು ಬೆಳಗುಂದಿ ಲಕ್ಷಾಂತರ ಫಾಲೋವರ್ಸ್‌ ಹೊಂದಿದ್ದಾರೆ. ಕುಣೀತಾಳೋ ಕುಣೀತಾಳ ನೆಲಕ್ ಕಾಲ್ ಹತ್ತದಂಗ್ ಕುಣೀತಾಳೋ, ಲಂಗಾ ದಾವನ್ಯಾಗ ಮಸ್ತ್ ಕಾಣತಿ ಲಾವಣ್ಯ ಸೇರಿದಂತೆ ನೂರಾರು ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ.

ಬಾಲು ಬೆಳಗುಂದಿ ಜಾನಪದ ಸಾಂಗ್: ಸರಿಗಮಪ ಆಡಿಷನ್‌ನಲ್ಲಿ ಗಮನಸೆಳೆದ ಜವಾರಿ ಹೈದನ ಜನಪ್ರಿಯ ಹಾಡುಗಳು
ಬಾಲು ಬೆಳಗುಂದಿ ಜಾನಪದ ಸಾಂಗ್: ಸರಿಗಮಪ ಆಡಿಷನ್‌ನಲ್ಲಿ ಗಮನಸೆಳೆದ ಜವಾರಿ ಹೈದನ ಜನಪ್ರಿಯ ಹಾಡುಗಳು

ಬಾಳು ಬೆಳಗುಂದಿ ಜಾನಪದ ಸಾಂಗ್: ಸರಿಗಮಪ ಆಡಿಷನ್‌ನಲ್ಲಿ ಈ ಬಾರಿ ಎಲ್ಲರ ಗಮನ ಸೆಳೆದ ಪ್ರತಿಭೆ ಬಾಲು ಬೆಳಗುಂದಿ. ಯೂಟ್ಯೂಬ್‌ನಲ್ಲಿ ಹನ್ನೆರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ಬಾಳು ಬೆಳಗುಂದಿ ಪ್ರತಿಭೆ ಈಗ ಜೀ ಕನ್ನಡ ವಾಹಿನಿಯ ಮಹಾ ಅಡಿಷನ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಈತನ ದೇಸಿ ಪ್ರತಿಭೆಗೆ ಜಡ್ಜ್‌ಗಳು ಈಗಾಗಲೇ ವಾಹ್‌ ಎಂದಿದ್ದಾರೆ. ಈ ಜವಾರಿ ಹೈದ ಸ್ವತಃ "ಆಂಕರ್‌ ಅನುಶ್ರೀ" ಮೇಲೆ ಕವಿತೆಯೊಂದನ್ನು ಕಟ್ಟಿ ವೇದಿಕೆಯ ಮೇಲೆ ಹಾಡಿದ್ದರು. ಸರಿಗಮಪ ಆಡಿಷನ್‌ಗೆ ಬರುವ ಮೊದಲೇ ಇವರು ತನ್ನ ಫ್ಯಾನ್ಸ್‌ಗೆ ಪರಿಚಯ. ಸೋಷಿಯಲ್‌ ಮೀಡಿಯಾದಲ್ಲಿ ತನ್ನನ್ನು ಫಾಲೋ ಮಾಡುವವರ ಅಚ್ಚುಮೆಚ್ಚಿನ ಗಾಯಕ ಎಂದೇ ಹೇಳಬಹುದು. ಗೂಗಲ್‌ನಲ್ಲಿಯೂ ಇವರನ್ನು ಮತ್ತು ಇವರ ಹಾಡುಗಳನ್ನು ಸಾಕಷ್ಟು ಜನರು "ಬಾಳು ಬೆಳಗುಂದಿ ಜಾನಪದ ಸಾಂಗ್" "ಬಾಳು ಬೆಳಗುಂದಿ ಡಿಜೆ ಸಾಂಗ್" ಎಂದು ಹುಡುಕುತ್ತಾರೆ. ಈ ಬಾರಿಯ ಸರಿಗಮಪ ಶೋನಲ್ಲಿ ಬಾಲು ಬೆಳಗುಂದಿಯೇ ಪ್ರಮುಖ ಹೈಲೈಟ್‌ ಆಗುವ ಸೂಚನೆ ಇದೆ.

ಯಾರಿವರು ಬಾಳು ಬೆಳಗುಂದಿ?

ಜೀ ಕನ್ನಡ ವೇದಿಕೆಯಲ್ಲಿ ಬಾಳು ಬೆಳಗುಂದಿ ತನ್ನನ್ನು ಪರಿಚಯಿಸಿಕೊಂಡಿದ್ದಾರೆ. "ನಾನೇ 500-600 ಹಾಡುಗಳನ್ನು ಬರೆದು ಹಾಡಿದ್ದೇನೆ. ಯಾವುದಾದರೂ ಜನಪದ ಅಥವಾ ಜನಪ್ರಿಯ ಹಾಡುಗಳಿದ್ದರೆ ಅದಕ್ಕೆ ನನ್ನದೇ ಸ್ಟೈಲ್‌ನಲ್ಲಿ ಹಾಡು ಬರೆದು ಹಾಡುವ ಅಭ್ಯಾಸ ಮಾಡಿಕೊಂಡಿದ್ದೇನೆ. ಕುರಿ ಕಾಯುವ ಕೆಲಸದ ಜತೆಗೆ ಸೋಷಿಯಲ್‌ ಮೀಡಿಯಾಕ್ಕಾಗಿ ಹಾಡುವೆ" ಎಂದು ಹೇಳಿದ್ದರು. ಇದನ್ನೆಲ್ಲ ಕೇಳಿದಾಗ ಸರಿಗಮಪ ವೇದಿಕೆಯಲ್ಲಿ ಅನುಶ್ರೀ ಅವರು "ಎಷ್ಟು ಓದಿದ್ದೀಯಾ" ಎಂದು ಕೇಳಿದ್ದಾರೆ. ಅದಕ್ಕೆ ಅವರು ಮೂರನೇ ಕ್ಲಾಸ್‌ ಎಂದಿದ್ದಾರೆ. ಶಾಲಾ ಶಿಕ್ಷಣ ಕಡಿಮೆ ಪಡೆದರೂ ಅಚ್ಚಕನ್ನಡದ ಸುಂದರ ಹಾಡುಗಳನ್ನು ದೇಸಿ ಸ್ಟೈಲ್‌ನಲ್ಲಿ ಬರೆದು ಹಾಡುವ ಇವರ ಪ್ರತಿಭೆ ಎಲ್ಲರಿಗೂ ಅಚ್ಚರಿ ತಂದಿದೆ.

ಇವರ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ರೀಲ್ಸ್‌ಗಳು, ಹಾಡುಗಳು ಗಮನ ಸೆಳೆಯುತ್ತವೆ. ಇದರೊಂದಿಗೆ ಇವರ ವೈಯಕ್ತಿಕ ಮಾಹಿತಿಗಳೂ ದೊರಕಿವೆ. ಇವರು ಮಾಲಾಶ್ರೀ ಎಂಬ ಗಾಯಕಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಬಾಳು ಬೆಳಗುಂದಿ ಮೂಲತಃ ಹಾವೇರಿಯ ಕತ್ರಿಕೊಪ್ಪ ಎಂಬ ಹಳ್ಳಿಯವರು. ಇವರ ಶಾರ್ಟ್‌ ವಿಡಿಯೋಗಳು ಮಾತ್ರವಲ್ಲದೆ ಇವರ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ನೂರಾರು ಜನಪದ ಶೈಲಿಯ ಹಾಡುಗಳಿವೆ. ಇವು ನಿಮಗೂ ಇಷ್ಟವಾಗಬಹುದು. ಕೆಲವೊಂದು ರಚನೆಗಳು ನಗು ತರಿಸುತ್ತವೆ.

ಕುಣೀತಾಳೋ ಕುಣೀತಾಳ ನೆಲಕ್ ಕಾಲ್ ಹತ್ತದಂಗ್ ಕುಣೀತಾಳೋ

ಇವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಅತ್ಯಧಿಕ ಜನಪ್ರಿಯತೆ ಪಡೆದ ಹಾಡು ಯಾವುದೆಂದು ಹುಡುಕಿದಾಗ ಸಿಕ್ಕಿದ್ದು "ಕುಣೀತಾಳೋ ಕುಣೀತಾಳ ನೆಲಕ್ ಕಾಲ್ ಹತ್ತದಂಗ್ ಕುಣೀತಾಳೋ" ಎಂಬ ಹಾಡು. ಯೂಟ್ಯೂಬ್‌ನಲ್ಲಿ ಈ ಹಾಡು 11 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ.

 

ಲಂಗಾ ದಾವನ್ಯಾಗ ಮಸ್ತ್ ಕಾಣತಿ ಲಾವಣ್ಯ

ಲಂಗಾ ದಾವನ್ಯಾಗ ಮಸ್ತ್ ಕಾಣತಿ ಲಾವಣ್ಯ ಎಂಬ ಹಾಡು ಯೂಟ್ಯೂಬ್‌ನಲ್ಲಿ ಟಾಪ್‌ನಲ್ಲಿದೆ. ಹೆಚ್ಚು ವೀಕ್ಷಣೆಯಲ್ಲಿ ಇದಕ್ಕೆ ಎರಡನೇ ಸ್ಥಾನವಿದೆ. ಇದನ್ನೂ 11 ಕೋಟಿಗಿಂತ ಹೆಚ್ಚು ಜನರು ವೀಕ್ಷಿಸಿದ್ದಾರೆ. "ನಿನ್ನ ಫೋನ್‌ ನಂಬರ್‌ ಕೊಟ್ಟರೆ ಬರ್ತೈತೆ ಪುಣ್ಯ" ಎಂಬ ಧಾಟಿಯ ಈ ಹಾಡು ಮಜವಾಗಿದೆ. ಈ ಹಾಡಿಗೆ ಸಾಕಷ್ಟು ಜನರ ಕಾಮೆಂಟ್‌ ಮಾಡಿದ್ದಾರೆ. ಜೀ ಕನ್ನಡ ಸರಿಗಮಪ ನೋಡಿ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದೆಲ್ಲ ಜನರು ಕಾಮೆಂಟ್‌ ಮಾಡಿದ್ದಾರೆ. ಸರಿಗಮಪ ವೇದಿಕೆಯಲ್ಲಿ ಹಾಡಿರುವುದು ಈಗಾಗಲೇ ಫೇಮಸ್‌ ಆಗಿರುವ ಇವರನ್ನು ಇನ್ನಷ್ಟು ಫೇಮಸ್‌ ಮಾಡುವಂತೆ ಕಾಣಿಸುತ್ತಿದೆ.

ಕಿತ್ತ ಒಗದ ಬರಬೇಕ ಕೊಳ್ಳಾನ ತಾಳಿ ಅಪ್ಪಗ ಹುಟ್ಟಿರ ನಾಳಿ

ಬಾಳು ಬೆಳಗುಂದಿ ಬರೆದು ಹಾಡಿ ನಟಿಸಿರುವ ಈ ಹಾಡು ಮೂರನೇ ಸ್ಥಾನದಲ್ಲಿದೆ. ಇದು ಯೂಟ್ಯೂಬ್‌ನಲ್ಲಿ ಎರಡೂವರೆ ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. "ಅದ್ಬುತ ಸಾಹಿತ್ಯ. ಸುಂದರವಾದ ಗಾಯನ.....ಬಹುಶಃ ನಾನು ಈ ಹಾಡನ್ನು ಇಪ್ಪತ್ತೈದರಿಂದ ಮೂವತ್ತು ಸಲ ಕೇಳಿನಿ..." "ನಮ್ಮ ಉತ್ತರ ಕರ್ನಾಟಕ ದ ಸಾಹಿತ್ಯ ಕ್ಕೆ ಇನ್ನೂ ಬರ ಬಂದಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತು ಮಾಡಿದ್ದಿಯ ಅಭಿನಂದನೆಗಳು" ಎಂದೆಲ್ಲ ಅಭಿಮಾನಿಗಳು ಇವರ ಹಾಡಿಗೆ ಕಾಮೆಂಟ್‌ ಮಾಡಿದ್ದಾರೆ.

ಹಿಂಗ ನಗಬ್ಯಾಡ ಎದಿಯಾಗ ಎಳತಾವ ಹುಳಾ

ಬಾಲು ಬೆಳಗುಂದಿ ಹಾಡಿ ಬರೆದು ನಲಿದ ಇನ್ನೊಂದು ಹಾಡು "ಹಿಂಗ ನಗಬ್ಯಾಡ ಎದಿಯಾಗ ಎಳತಾವ ಹುಳಾ". ಇದು ಕೂಡ ಎರಡೂವರೆ ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. "ಅಣ್ಣ ಒಂದೊಂದ್ ಲಿರಿಕ್ಸ್ ಸೂಪರ್ , ನಾನು ಜಾನಪದ ಹಾಡು ಕೇಳಲ್ಲ ಆದ್ರೆ ನಿಮ್ಮ ಈ ಹಾಡು ಕೇಳಿ ಇನ್ಮುಂದೆ ನಾನು ಜಾನಪದ ಹಾಡು ಕೇಳೋ ಆಸೆ ಆಗಿದೆ" "ಜಾನಪದ ಸಾಹಿತ್ಯದಲ್ಲಿ ಶಬ್ಬೀರ ಡಾಂಘ್ಹೆ ಅವರ ಹಾಡನ್ನ ಬಿಟ್ರೆ ಅತೀ ಹೆಚ್ಚು ಕೇಳಿದ್ದು ನಿಮ್ಮ ಹಾಡುಗಳನ್ನೆ ನೋಡ್ರಿ ಮಸ್ತ್ ಇರ್ತಾವು ನಿಮ್ಮ ಸಾಹಿತ್ಯ ಮತ್ತು ಹಾಡ. ಇಂತಿ ನಿಮ್ಮ ಹಾಡುಗಳ ಅಭಿಮಾನಿ" ಎಂದೆಲ್ಲ ಅಭಿಮಾನಿಗಳು ಈ ಹಾಡಿಗೆ ಕಾಮೆಂಟ್‌ ಮಾಡಿದ್ದಾರೆ.

ಬಾಳು ಬೆಳಗುಂದಿ ಅವರ ಚಾನೆಲ್‌ನಲ್ಲಿ ಇಂತಹ ನೂರಾರು ಹಾಡುಗಳು ಜನಪ್ರಿಯತೆ ಪಡೆದಿವೆ. ಇವರ ಹಾಡುಗಳಿಗೆ ನೂರಾರು, ಸಾವಿರಾರು ಕಾಮೆಂಟ್‌ಗಳು ಬಂದಿರುವುದು ಇವರ ಜನಪ್ರಿಯತೆಗೆ ಸಾಕ್ಷಿ ಬರೆದಿವೆ. ಇದೇ ಸಮಯದಲ್ಲಿ ಚಾನೆಲ್‌ನಲ್ಲಿ ವೃತ್ತಿಪರವಾಗಿ ವಿಡಿಯೋ ಹೊರಬಿಡುವುದು ಇನ್ನೊಂದು ಹೆಚ್ಚುಗಾರಿಕೆ. ಜತೆಗೆ, ಇವರ ಟೀಮ್‌ ಕೂಡ ಇವರಿಗೆ ಸಾಥ್‌ ನೀಡಿದೆ. ಇವರ ಪತ್ನಿ ಮಾಲಾಶ್ರೀ ಕೂಡ ಇವರ ಬಹುತೇಕ ಹಾಡುಗಳಲ್ಲಿ ಮಿಂಚಿದ್ದಾರೆ.

Whats_app_banner