Bigg Boss 11: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ರಂಜಿತ್ ಮತ್ತೆ ವಾಪಸ್ ಬರ್ತಾರಾ? ಏನಿದು ಹೊಸ ಸುಳಿವು
Bigg Boss Kannada: ಬಿಗ್ ಬಾಸ್ ಮನೆಯಿಂದ ಹೊರ ಹೋದ ರಂಜಿತ್ ಮತ್ತೆ ಬಿಗ್ ಬಾಸ್ ಮನೆಗೆ ಮರಳಿ ಬರ್ತಾರಾ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದಕ್ಕೆ ತಕ್ಕಹಾಗೆ ಸುಳಿವೊಂದು ದೊರೆತಿದೆ. ಏನದು ಸುಳಿವು? ಇಲ್ಲಿದೆ ಮಾಹಿತಿ.

ಬಿಗ್ ಬಾಸ್ ಸೀಸನ್ 11ರಿಂದ ಇಬ್ಬರು ಸ್ಪರ್ಧಿಗಳನ್ನು ಮನೆಯಿಂದ ಹೊರ ಹಾಕಲಾಗಿದೆ. ಈ ಬಗ್ಗೆ ಬಿಗ್ ಬಾಸ್ ಕೂಡ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಹೀಗಿರುವಾಗ ಲಾಯರ್ ಜಗದೀಶ್ ಹಾಗೂ ರಂಜಿತ್ ಈ ಇಬ್ಬರು ಸ್ಪರ್ಧಿಗಳನ್ನು ಮತ್ತೆ ಮನೆಯೊಳಗಡೆ ಸೇರಿಸಿಕೊಳ್ಳಬೇಕು ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇಲ್ಲ ಅವರನ್ನು ಕಳಿಸಿದ್ದೇ ಒಳ್ಳೆದಾಯ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ರೀತಿ ಚರ್ಚೆಯ ನಡುವೆ ಲಾಯರ್ ಜಗದೀಶ್ ಅವರು ನೀಡಿದ ಪ್ರತಿಕ್ರಿಯೆ ಆಡಿಯೋ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಯಾರೂ ಕೂಡ ಅವರನ್ನು ಕಂಡಿರಲಿಲ್ಲ. ಇದು ಜನರಲ್ಲಿ ಇನ್ನಷ್ಟು ಕುತೂಹಲವನ್ನು ಸೃಷ್ಟಿ ಮಾಡಿದೆ.
ಯಾಕೆ ಜಗದೀಶ್ ಹಾಗೂ ರಂಜಿತ್ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿಲ್ಲ? ಯಾಕೆ ಅವರು ಒಂದೂ ವಿಡಿಯೋ ಮಾಡಿಲ್ಲ? ಅಥವಾ ಮಾಧ್ಯಮಗಳಿಗೆ ಸಂದರ್ಶನ ನೀಡಿಲ್ಲ? ಎಂದು ಜನರು ಕೇಳುತ್ತಿದ್ದಾರೆ. ಇನ್ನು ಸ್ಪರ್ಧಿಗಳ ಅಧಿಕೃತ ಖಾತೆಗಳಿಂದಲೂ ಯಾವುದೇ ಪ್ರತಿಕ್ರಿಯೆಗಳು ಅಥವಾ ಸುಳಿವುಗಳು ಸಿಕ್ಕಿಲ್ಲ. ಹಾಗಾಗಿ ಮತ್ತೆ ರಂಜಿತ್ ಬಿಗ್ ಬಾಸ್ ಮನೆಗೆ ವಾಪಸ್ ಬರ್ತಾರಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಯಾರೇ ಆಗಲಿ ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ತಮ್ಮ ಬಿಗ್ ಬಾಸ್ ಜರ್ನಿಯ ಬಗ್ಗೆ ಮಾತನಾಡುತ್ತಾರೆ. ಅಥವಾ ಯಾವುದೇ ವಿಷಯ ಇದ್ದರೆ ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ. ರಂಜಿತ್ ಮಾತ್ರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂದರೂ, ಈ ಬಗ್ಗೆ ಸುದ್ದಿಯಾಗುತ್ತಿದ್ದರೂ ಎಲ್ಲಿಯೂ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಈ ಬೆಳವಣಿಗೆಯನ್ನು ಗಮನಿಸಿದ ಅನೇಕರು ರಂಜಿತ್ ಮತ್ತೆ ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂದು ಹೇಳುತ್ತಿದ್ದಾರೆ.
ಇನ್ನು ಈ ವಾರದ ಪಂಜಾಯ್ತಿಯಲ್ಲೂ ಸಹ ಬಿಗ್ ಬಾಸ್ ತಪ್ಪು ನಿರ್ಧಾರ ತೆಗೆದುಕೊಂಡ್ರಾ? ಸ್ಪರ್ಧಿಗಳನ್ನು ಹೊರಹಾಕಿದ್ದು ಸರಿ ಅಲ್ವಾ? ಎನ್ನುವ ಪ್ರಶ್ನೆಗಳನ್ನು ಸುದೀಪ್ ಅವರು ಕೇಳಿದ್ದಾರೆ. ಹಾಗಾಗಿ ಇನ್ನಷ್ಟು ನಿರೀಕ್ಷೆಗಳು ವೀಕ್ಷಕರಿಗೆ ಹುಟ್ಟಿಕೊಂಡಿದೆ.
ಇಲ್ಲಿದೆ ಇಂದಿನ ಪ್ರೋಮೋ
ಈ ಹಿಂದೆ ಬಿಡುಗಡೆಯಾಗಿದ್ದ ಪ್ರೊಮೋದಲ್ಲಿ ಜಗದೀಶ್ ಅವರು ಹಾಗೂ ರಂಜಿತ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗಡೆ ಕಳಿಸಲಾಗಿದೆ ಎನ್ನುವುದರ ಬಗ್ಗೆ ಸ್ಪಷ್ಟನೆ ಸಿಕ್ಕಿತ್ತು. ಈ ಹಿಂದೆಯೇ ರಂಜಿತ್ ಹಾಗೂ ಜಗದೀಶ್ ಅವರನ್ನು ಮನೆಯಿಂದ ಹೊರ ಹಾಕಲಾಗಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಬಿಗ್ ಬಾಸ್ ಕಡೆಯಿಂದ ಯಾವುದೇ ನಿಖರ ಮಾಹಿತಿ ಇಲ್ಲದ ಕಾರಣದಿಂದಾಗಿ ಈ ಬಗ್ಗೆ ಜನರು ಇನ್ನೂ ಗೊಂದಲದಲ್ಲಿದ್ದರು. ಆದರೆ ಇದೀಗ ಅದಕ್ಕೆ ನೇರವಾಗಿ ಬಿಗ್ ಬಾಸ್ ಉತ್ತರ ನೀಡಿದ್ದಾರೆ.