Bigg Boss Kannada: ರಾಜಕೀಯ ಪಕ್ಷಗಳ ಕಿತ್ತಾಟದಲ್ಲಿ ಸುಸ್ತಾದ ಹನುಮಂತ; ಫಿಸಿಕಲ್ ಟಾಸ್ಕ್ ಮುಗಿಯುವಷ್ಟರಲ್ಲಿ ಅಸ್ವಸ್ಥ
ಬಿಗ್ ಬಾಸ್ ಸೀಸನ್ 11ರ ಆಟದಲ್ಲಿ ಬಿಗ್ ಬಾಸ್ ಒಂದು ಟಾಸ್ಕ್ ನೀಡಿರುತ್ತಾರೆ. ತಮ್ಮ ತಮ್ಮ ಪಕ್ಷದ ಪ್ರಚಾರ ಮಾಡಬೇಕು ಎಂದು. ಆ ರೀತಿ ಪ್ರಚಾರದ ಸಂದರ್ಭದಲ್ಲಿ ಪ್ರತಿರೋಧ ಮಾಡುವವರೂ ಇರುತ್ತಾರೆ. ಅದನ್ನು ತಡೆದು ಪ್ರಚಾರ ಮಾಡುವುದು ಆಟ ಆಗಿರುತ್ತದೆ. ಆದರೆ ಈ ಆಟದಲ್ಲಿ ಹನುಮಂತ ಅಸ್ವಸ್ಥರಾಗಿದ್ದಾರೆ.
ಬಿಗ್ ಬಾಸ್ ನೀಡಿದ್ದ ರಾಜಕೀಯ ಪಕ್ಷದ ಟಾಸ್ಕ್ ಆಡುವಾಗ ಎಲ್ಲರೂ ಒಬ್ಬರ ಮೇಲೆ ಒಬ್ಬರು ಸಿಟ್ಟಾಗಿದ್ದಾರೆ. ಕಿತ್ತಾಡಿಕೊಂಡೇ ಆಟ ಆಡುತ್ತಿದ್ದಾರೆ. ಈ ಮನೆಯಲ್ಲಿ ತಾನು ಹೇಗಿರೋದು ಎಂದು ಆಲೋಚನೆ ಮಾಡುತ್ತಾ ಇದ್ದ ಹನುಂತನಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಆಟ ಆಡುತ್ತಾ, ಆಡುತ್ತಾ ಹನುಮಂತ ಅಸ್ವಸ್ಥರಾಗಿದ್ದಾರೆ. ಏಳಲೂ ಆಗದ ಸ್ಥಿತಿಯಲ್ಲಿ ಇದ್ದ ಅವರನ್ನು ಇಬ್ಬರು ಎತ್ತಿಕೊಂಡು ಒಳಗಡೆ ಕರೆದುಕೊಂಡು ಹೋಗಿರುವುದು ಕಾಣಿಸುತ್ತದೆ.
ಆಟದ ಆರಂಭದಲ್ಲಿ ತಿಳಿಸಲಾದಂತೆ ಪ್ರಚಾರವನ್ನು ಮತ್ತೊಂದು ಪಕ್ಷ ಮಾಡದೇ ಇರುವಂತೆ ತಡೆಯಬೇಕಾಗಿರುತ್ತದೆ. ಹೀಗಾದಾಗ ಆಟವನ್ನು ಆಡುತ್ತಾ ಇರುವವರು ಇನ್ನೊಂದು ಪಕ್ಷದವರು ಅಂಟಿಸಿದ ಬಿತ್ತಿ ಪತ್ರವನ್ನು ಹರಿದು ಹಾಕಲು ಆರಂಭಿಸುತ್ತಾರೆ. ಇದರಿಂದ ಎರಡೂ ಪಕ್ಷದ ನಡುವೆ ಘರ್ಷಣೆ ಆರಂಭವಾಗುತ್ತದೆ. ನೀವ್ಯಾಕೆ ನಮ್ಮ ಪತ್ರವನ್ನು ಹರಿದುಹಾಕಬೇಕಿತ್ತು? ನಾವು ನಿಮ್ಮ ಪತ್ರ ಹಾಳು ಮಾಡುತ್ತೇವೆ ಎನ್ನುವ ರೀತಿಯಲ್ಲಿ ಇದು ಆರಂಭವಾಗುತ್ತದೆ. ಕೊನೆ ಕೊನೆಗೆ ಇದು ಹೊಡೆದಾಟವಾಗಿ ಪರಿಣಮಿಸುತ್ತದೆ.
ನಮ್ಮ ರಕ್ಷಣೆಗಾಗಿ ನಾವು ಭಲ ಪ್ರಯೋಗ ಮಾಡಲೇಬೇಕಾಗಿತ್ತು ಎಂದು ಚೈತ್ರಾ ಹೇಳುತ್ತಾರೆ. ಇನ್ನು ಧರ್ಮ ಹಾಗೂ ಉಗ್ರಂ ಮಂಜು ಇವರೆಲ್ಲರೂ ತುಂಬಾ ಹೊಡೆದಾಡಿಕೊಂಡಿದ್ದಾರೆ, ಎಳೆದಾಡಿಕೊಂಡಿದ್ದಾರೆ. ತುಂಬಾ ತೊಂದರೆ ಅನುಭವಿಸಿದ್ದಾರೆ. ಆದರೂ ಆಟವನ್ನು ಮಾತ್ರ ಬಿಟ್ಟಿಲ್ಲ. ಇನ್ನು ಮೋಕ್ಷಿತಾ ಯಾಕೆ ಇಷ್ಟೊಂದು ಅಗ್ರೆಸ್ಸಿವ್ ಆಗಿ ಆಟ ಆಡ್ತಾ ಇದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಆಸಂದರ್ಭದಲ್ಲಿ ಯಾರೂ ಮಾತುಗಳನ್ನು ಕೇಳುತ್ತಾ ಇರಲಿಲ್ಲ. ನಂತರ ಈ ಕಿತ್ತಾಟದಲ್ಲಿ ಸಿಕ್ಕಿಬಿದ್ದ ಹನುಮಂತ ಅಸ್ವಸ್ಥರಾಗಿದ್ದಾರೆ.
ನಂತರ ಅವರಿಗೆ ನೀರು ಕುಡಿಸುವ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರು ಗಾಳಿ ಹಾಕುತ್ತಾರೆ. ಆದರೆ ಏನೇ ಮಾಡಿದರೂ ಅವರು ನೆಲದಿಂದ ಮೇಲಕ್ಕೆ ಆಗದ ರೀತಿಯಲ್ಲಿ ಬಿದ್ದುಕೊಂಡಿರುತ್ತಾರೆ. ಅದಾದ ನಂತರದಲ್ಲಿ ಐಶ್ವರ್ಯ ಹಾಗೂ ಉಗ್ರಂ ಮಂಜು ಅವರನ್ನು ನಡೆಸಿಕೊಂಡು ಹೋಗುವುದನ್ನು ನಾವು ಪ್ರೋಮೋದಲ್ಲಿ ಕಾಣಬಹುದು. ಎಲ್ಲ ವಿಷಯಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ತೆಗೆದುಕೊಂಡು ಆಟವನ್ನು ಇನ್ನೊಷ್ಟು ಕ್ಲಿಷ್ಟ ಮಾಡಿಕೊಂಡಂತೆ ಕಾಣುತ್ತದೆ.