Bigg Boss Kannada: ನಾನು ಹೋಗೋದ್ರೊಳಗೆ ಯಾರನ್ನಾದ್ರೂ ಸಾಯಿಸಿನೇ ಹೋಗೋದು; ಭವ್ಯಾ ಗೌಡ ಹೀಗಂದಿದ್ಯಾಕೆ?
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ನಾನು ಹೋಗೋದ್ರೊಳಗೆ ಯಾರನ್ನಾದ್ರೂ ಸಾಯಿಸಿನೇ ಹೋಗೋದು; ಭವ್ಯಾ ಗೌಡ ಹೀಗಂದಿದ್ಯಾಕೆ?

Bigg Boss Kannada: ನಾನು ಹೋಗೋದ್ರೊಳಗೆ ಯಾರನ್ನಾದ್ರೂ ಸಾಯಿಸಿನೇ ಹೋಗೋದು; ಭವ್ಯಾ ಗೌಡ ಹೀಗಂದಿದ್ಯಾಕೆ?

ಬಿಗ್‌ ಬಾಸ್‌ ಮನೆಯಲ್ಲಿ ಪಾಸಿಟಿವಿಟಿ ಬಗ್ಗೆ ಮಾತುಕತೆ ಆಗುತ್ತಾ ಇರುತ್ತದೆ. ಆದರೆ ಭವ್ಯಾ ಗೌಡ ಅವರು ತುಂಬಾ ಬೇಸರ ಮಾಡಿಕೊಂಡು ಮಾತಾಡ್ತಾ ಇರ್ತಾರೆ. ಅವರ ಬೇಸರಕ್ಕೆ ಕಾರಣ ಏನು ನೀವೇ ನೋಡಿ.

ಬಿಗ್‌ ಬಾಸ್‌ ಮನೆಯಲ್ಲಿ ಪಾಸಿಟಿವಿಟಿ ಬಗ್ಗೆ ಮಾತುಕತೆ
ಬಿಗ್‌ ಬಾಸ್‌ ಮನೆಯಲ್ಲಿ ಪಾಸಿಟಿವಿಟಿ ಬಗ್ಗೆ ಮಾತುಕತೆ (ಕಲರ್ಸ್ ಕನ್ನಡ)

ಬಿಗ್‌ ಬಾಸ್‌ ಮನೆಯಲ್ಲಿ ಪಾಸಿಟಿವಿಟಿ ಬಗ್ಗೆ ಚರ್ಚೆ ಆಗುತ್ತಾ ಇರುತ್ತದೆ. ಭವ್ಯಾ ಗೌಡ ಅವರು ಪಾಸಿಟಿವಿಟಿ ವಿಚಾರ ಇಟ್ಟುಕೊಂಡು ಗೌತಮಿ ಮಾತನಾಡಿದ ವಿಚಾರವಾಗಿ ನೆನಯುತ್ತಾ ಬೇಸರದಲ್ಲಿ ಕುಳಿತುಕೊಂಡಿರುತ್ತಾರೆ. ಅವರ ಸುತ್ತ ಮುತ್ತ ಇನ್ನೊಂದಷ್ಟು ಜನ ಇರುತ್ತಾರೆ. ತ್ರಿವಿಕ್ರಂ ಮತ್ತು ಅನುಷಾ ಕೂಡ ಅಲ್ಲೇ ಕೂತಿರುತ್ತಾರೆ. ಇನ್ನು ಧರ್ಮ ಹಾಗೂ ಚೈತ್ರಾ ಕುಂದಾಪುರ ಕೂಡ ಈ ಚರ್ಚೆಯಲ್ಲಿ ಭಾಗಿಯಾಗುತ್ತಾರೆ. ಭವ್ಯಾ ಗೌಡ ತುಂಬಾ ಬೇಸರ ಮಾಡಿಕೊಂಡು ಕೂತು ಈ ಮಾತನ್ನು ಆಡುತ್ತಿರುತ್ತಾರೆ. ಆದರೆ ಅವರ ಬೇಸರದ ಬಗೆಯನ್ನು ನೋಡಿ ಇವರೆಲ್ಲರೂ ನಗುತ್ತಾರೆ.

“ಸಿಕ್ಕಾಪಟೆ ಪಾಸಿಟಿವ್ ಆಗೆಲ್ಲ ಇರೋಕೆ ಬರೋದಿಲ್ಲ ನಂಗೆ. ನಾನು ಇಷ್ಟೇ ಪಾಸಿಟ್ ಆಗಿ ಇರೋದು. ಮುಖವಾಡ ಹಾಕಿಕೊಂಡು ಬದುಕಲು ನನ್ನಿಂದ ಸಾಧ್ಯ ಇಲ್ಲ” ಎಂದು ಭವ್ಯಾ ಗೌಡ ಹೇಳುತ್ತಾರೆ. ಸಾಕು ಈಗಿರುವಷ್ಟು ಪಾಸಿಟಿವಿಟಿ ಸಾಕು ಎಂದು ಚೈತ್ರಾ ಕುಂದಾಪುರ ಹೇಳುತ್ತಾರೆ. ಆ ನಂತರ ಗೌತಮಿ ಅವರ ನಡವಳಿಗೆ ಬಗ್ಗೆ ಅಭಿನಯ ಮಾಡಿ ಭವ್ಯಾ ತೋರಿಸುತ್ತಾರೆ. ಆ ನಂತರ ತ್ರಿವಿಕ್ರಂ ಅವರು ಚಟುವಟಿಕೆಯಿಂದ ಇರಿ ಎಂದು ಹೇಳುತ್ತಾರೆ. ಆಗ ಭವ್ಯಾ ಈ ವಾರ ಹಂಗಿರೋದಕ್ಕೆ ಈ ರೀತಿ ಆಗಿದ್ದು ಎಂದು ಹೇಳುತ್ತಾರೆ. ಆಗ ಎಲ್ಲರೂ ಅವರ ಮಾತಿಗೆ ನಗುತ್ತಾರೆ.

ಇಲ್ಲ ಏನೇ ಆದ್ರೂ ಅದನ್ನು ಒಳ್ಳೆದು ಅಂತನೇ ಅಂದುಕೊಳ್ಳಿ. ಯಾಕೆ ನಕಾರಾತ್ಮಕವಾಗಿ ಆಲೋಚನೆ ಮಾಡ್ತೀರಾ ಎಂದು ಧರ್ಮ ಹೇಳುತ್ತಾರೆ. 75 ದಿನ ಇರ್ಬೇಕು ಈಗಾಲೇ 45 ದಿನಗಳಂತೂ ಕಳೆದಿದೆ ಎಂದು ಅನುಷಾ ಹೇಳುತ್ತಾರೆ. ಆಗ ಭವ್ಯಾ ಹೇಳುತ್ತಾರೆ “ನಾನು ಹೋಗೋದ್ರಲ್ಲಿ ಇಲ್ಲಿ ಯಾರ್ನಾದ್ರೂ ಸಾಯ್ಸಿನೆ ಹೋಗೋದು, ಮಾನಸಿಕವಾಗಿ” ಎಂದು. ಇನ್ನು ಗೌತಮಿ ಹಾಗೂ ಮೋಕ್ಷಿತಾ ಈ ಇಬ್ಬರೂ ಮುಖವಾಡ ಹಾಕಿಕೊಂಡಿದ್ದಾರೆ. ತಾವು ತುಂಬಾ ಪಾಸಿಟಿವ್ ಎಂದು ತೋರಿಸಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ಅವರು ಹಾಗಲ್ಲ ಎಂದು ಹೇಳುತ್ತಿದ್ದಾರೆ. ಜನರ ಕಾಮೆಂಟ್ ಕೂಡ ಗೌತಮಿಗೆ ವಿರುದ್ಧವಾಗಿಯೇ ಇದೆ.

ಹೀಗಿದೆ ಜನರ ಅಭಿಪ್ರಾಯ

ಭವ್ಯ ಈ ವಾರ ಚೆಂದ ಆಟ ಆಡಿದ್ದೀಯ ಬಿಡು, ಜನ ವೋಟ್ ಹಾಕ್ತಾರೆ ಸೇವ್ ಆಗೇ ಆಗ್ತೀಯ ಡೋಟ್ ವರಿ. ಅವ್ರ್ ಯಾರ್ ಬೇಕಾದ್ರೂ ಪೊಸಿಟೀವ್ ಆಗಿರಲಿ ನೀ ಹಿಂಗೆ ಇದ್ರೆ ಸಾಕು ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ.

ಮೋಕ್ಷಿತ, ಗೌತಮಿ ಬಂದಿರೋದು ತಲೆ ಬುಡ ಇಲ್ಲದೇ ಕಿರುಚಾಡೋಕೆ, ಸಿಂಪಥಿ ಕಾರ್ಡ್ ಪ್ಲೇ ಮಾಡೋಕೆ ಅಷ್ಟೇ. ಇದುವರೆಗೆ ಇವ್ರು ಮಾಡಿರೋದೂ ಅಷ್ಟೇ. ನಿಜವಾದ ಗೋಮುಖ ವ್ಯಾಘ್ರಗಳು ಇವರುಗಳೇ ಎಂದು ಸಂತೋಷ್ ವಿಶ್ವಾಮಿತ್ರ ಅವರು ಕಾಮೆಂಟ್ ಮಾಡಿದ್ದಾರೆ.

Whats_app_banner