Bigg Boss Kannada 11: ಮನೆ ಮೆಚ್ಚಿದ ಫೇಕ್ ಕಂಟೆಸ್ಟೆಂಟ್ ಹಾಗೂ ಊಸರವಳ್ಳಿ ಅವಾರ್ಡ್ ಸಿಕ್ಕಿದ್ದು ಯಾರಿಗೆ, ಮೋಕ್ಷಿತಾ ಹೇಳಿದ್ದು ಸರಿನಾ?
ಬಿಗ್ ಬಾಸ್ ಮನೆಯ ವಾರದ ಪಂಚಾಯ್ತಿಯಲ್ಲಿ ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಅವರಿಗೆ ಅವಾರ್ಡ್ ಸಿಕ್ಕಿದೆ. ಮನೆ ಮೆಚ್ಚಿದ ಫೇಕ್ ಕಂಟೆಸ್ಟೆಂಟ್ ಹಾಗೂ ಊಸರವಳ್ಳಿ ಅವಾರ್ಡ್ ಸಿಕ್ಕಿದ್ದು ಯಾರಿಗೆ ನೀವೇ ನೋಡಿ.
ಕಿಚ್ಚನ ಪಂಚಾಯ್ತಿಯಲ್ಲಿ ಈ ಬಾರಿ ಚೈತ್ರಾ ಹಾಗೂ ಸುರೇಶ್ ಅವರೇ ಎದ್ದು ಕಾಣುತ್ತಿದ್ದರು. ಇನ್ನು ಹನುಮಂತ ಕೂಡ ತಮ್ಮ ತಮಾಷೆ ಮೂಲಕ ಕಾಣಿಸಿಕೊಂಡಿದ್ದಾರೆ. ಕಿಚ್ಚ ಕೇಳಿದ ಖಡಕ್ ಪ್ರಶ್ನೆಗೆ ಮನೆಯವರು ಉತ್ತರ ನೀಡಲೇಬೇಕಾದ ಪ್ರಸಂಗ ಎದುರಾಗಿತ್ತು. ಆ ಸಂದರ್ಭದಲ್ಲಿ ಮನೆಯವರು ಯಾವ ಪ್ರಶ್ನೆಗೆ ಯಾವ ಹೆಸರನ್ನು ಸೂಚಿಸಿದ್ದಾರೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ. ಮನೆ ಮೆಚ್ಚಿನ ಫೇಕ್ ಕಂಟೆಸ್ಟೆಂಟ್ ಯಾರು ಎಂದು ಪ್ರಶ್ನೆ ಮಾಡುತ್ತಾರೆ. ಆಗ ಎಲ್ಲರೂ ಸಾಮಾನ್ಯವಾಗಿ ಚೈತ್ರಾ ಕುಂದಾಪುರ ಅವರ ಹೆಸರನ್ನು ಸೂಚಿಸುತ್ತಾರೆ. ಭವ್ಯಾ ಗೌಡ ಅವರು ಚೈತ್ರಕ್ಕ ಎಂದು ಚೈತ್ರಾ ಅವರ ಹೆಸರನ್ನೇ ಹೇಳಿದ್ದಾರೆ.
ಅದಾದ ನಂತರದಲ್ಲಿ ಮೋಕ್ಷಿತಾ, ಧರ್ಮ ಎಲ್ಲರೂ ಅವರ ಹೆಸರನ್ನೇ ಸೂಚಿಸಿದ್ದಾರೆ. ನಂತರದಲ್ಲಿ ಅನುಷಾ ಹಾಗೂ ಐಶ್ವರ್ಯ ಇಬ್ಬರೂ ಸೇರಿ ಮನೆ ಮೆಚ್ಚಿದ ಫೇಕ್ ಕಂಟೆಸ್ಟೆಂಟ್ ಎನ್ನುವ ಅವಾರ್ಡ್‌ಅನ್ನು ಚೈತ್ರಾ ಕುಂದಾಪುರ ಅವರ ಕೈಗಿಡುತ್ತಿರುವುದು ಪ್ರೋಮೋದಲ್ಲಿ ಕಾಣಿಸಿದೆ. ಅದಾದ ನಂತರದಲ್ಲಿ ಕಿಚ್ಚ ಸುದೀಪ್ ಅವರು ಇನ್ನೊಂದು ಪ್ರಶ್ನೆ ಕೇಳುತ್ತಾರೆ. ಆ ಪ್ರಶ್ನೆಯಲ್ಲಿ ಮನೆ ಮೆಚ್ಚಿದ ಊಸರವಳ್ಳಿ ಯಾರು? ಎಂದು ಕೇಳಲಾಗುತ್ತದೆ.
ಆಗ ತ್ರಿವಿಕ್ರಂ ಅವರು ಸುರೇಶ್ ಅವರ ಹೆಸರನ್ನು ಸೂಚಿಸುತ್ತಾರೆ. ನಂತರ ಹನುಮಂತ ಅವರೂ ಸಹ “ನಮ್ ಮಾವಾರೀ” ಎಂದು ಹೇಳುತ್ತಾ ಸುರೇಶ್ ಅವರ ಹೆಸರನ್ನು ಹೇಳುತ್ತಾರೆ. ಸುರೇಶ್ ಅವರು ಒಂದು ಸಾರಿ ಒಂದು ಮಾತನ್ನು ಹೇಳಿರುತ್ತಾರೆ. ನಂತರ ನಾನು ಆ ಮಾತನ್ನು ಹೇಳೇ ಇಲ್ಲ ಎಂದು ಹೇಳುತ್ತಾರೆ ಆ ರೀತಿಯಾಗಿ ಅವರು ಮಾತು ಬದಲಾಯಿಸುತ್ತಾರೆ. ಆ ಕಾರಣಕ್ಕಾಗಿ ನಾನು ಅವರ ಹೆಸರನ್ನು ಸೂಚಿಸುತ್ತೀನಿ ಎಂದು ಹನುಮಂತ ಹೇಳುತ್ತಾರೆ. ನಿನ್ನೆಯಷ್ಟೇ ಹನುಮಂತ ಮತ್ತು ಸುರೇಶ್ ಅವರ ನಡುವೆ ಇನ್ನೊಂದಷ್ಟು ಮಾತುಕತೆ ನಡೆದಿದ್ದವು.
ಆದರೆ ಹನುಮಂತ ಹೇಳಿದ ಮಾತನ್ನು ಸುರೇಶ್ ಅವರು ಒಪ್ಪಿಕೊಂಡಿಲ್ಲ. ನಾನು ಯಾರ ಮಾತನ್ನೂ ಮನೆಯಲ್ಲಿ ಅಲ್ಲಿಂದ ಇಲ್ಲಿಗೆ. ಇಲ್ಲಿಂದ ಅಲ್ಲಿಗೆ ಮಾಡೋದಿಲ್ಲ. ಆದರೆ ಹನುಮಂತ ನನ್ನ ತಪ್ಪು ತಿಳಿದುಕೊಂಡಿದ್ದಾನೆ ಎಂದು ಹೇಳಿದ್ದಾರೆ.