ಬಿಗ್‌ಬಾಸ್‌ ಬಳಿಕ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋಗೆ ಬಂದ ಲಾಯರ್‌ ಜಗದೀಶ್; ಜಗ್ಗು ಮಾತಿಗೆ ನಾಚಿದ ರಕ್ಷಿತಾ ಪ್ರೇಮ್‌, ‘You Naughty’ ಅಂದ್ರು
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಬಳಿಕ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋಗೆ ಬಂದ ಲಾಯರ್‌ ಜಗದೀಶ್; ಜಗ್ಗು ಮಾತಿಗೆ ನಾಚಿದ ರಕ್ಷಿತಾ ಪ್ರೇಮ್‌, ‘You Naughty’ ಅಂದ್ರು

ಬಿಗ್‌ಬಾಸ್‌ ಬಳಿಕ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋಗೆ ಬಂದ ಲಾಯರ್‌ ಜಗದೀಶ್; ಜಗ್ಗು ಮಾತಿಗೆ ನಾಚಿದ ರಕ್ಷಿತಾ ಪ್ರೇಮ್‌, ‘You Naughty’ ಅಂದ್ರು

Lawyer Jagadish: ಬಿಗ್‌ ಬಾಸ್‌ ಕನ್ನಡ 11ರಿಂದ ಹೊರಬಂದ ಮೇಲೆ ಇದೀಗ ಜೀ ಕನ್ನಡದ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋನಲ್ಲಿ ಕಾಣಿಸಿಕೊಂಡಿದ್ದಾರೆ ಲಾಯರ್‌ ಜಗದೀಶ್‌. ಅಷ್ಟೇ ಅಲ್ಲ ಜಡ್ಜ್‌ ರಕ್ಷಿತಾ ಪ್ರೇಮ್‌ಗೂ ಕಾಲೆಳೆದಿದ್ದಾರೆ.

ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋಗೆ ಬಂದ ಜಗದೀಶ್‌, ಜಗ್ಗು ಮಾತಿಗೆ ನಾಚಿದ ರಕ್ಷಿತಾ ಪ್ರೇಮ್‌
ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋಗೆ ಬಂದ ಜಗದೀಶ್‌, ಜಗ್ಗು ಮಾತಿಗೆ ನಾಚಿದ ರಕ್ಷಿತಾ ಪ್ರೇಮ್‌ (Zee Kannada Facebook )

Dance Karnataka Dance: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಕೋಲಾಹಲವನ್ನೇ ಎಬ್ಬಿಸಿದ್ದ ಲಾಯರ್‌ ಜಗದೀಶ್‌, ಇಡೀ ಬಿಗ್‌ ಬಾಸ್‌ ಮನೆ ಮಂದಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಸಣ್ಣ ಸಣ್ಣ ವಿಷಯವನ್ನೂ ಸೀರಿಯಸ್‌ ಆಗಿ ತೆಗೆದುಕೊಳ್ಳುತ್ತಿದ್ದ ಜಗದೀಶ್‌, ಮನೆಯಲ್ಲಿದ್ದಷ್ಟು ದಿನ ಎಲ್ಲರನ್ನೂ ತಮ್ಮ ಮಾತಿನಿಂದಲೇ ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಈ ಮನುಷ್ಯ ಮೊದಲು ಮನೆಯಿಂದ ಹೊರಹೋಗಲಿ ಎಂದೇ ಇತರ ಸ್ಪರ್ಧಿಗಳು ಶಪಿಸುತ್ತಿದ್ದರು. ಇತ್ತ ಟಿವಿ ವೀಕ್ಷಕರಿಗೆ ಜಗದೀಶ್‌ ಅವರ ರೋಷಾವೇಷವೇ ಇಷ್ಟವಾಗಿತ್ತು.

ಕೆಟ್ಟ ಮಾತಾಡಿ ಬಿಗ್‌ಬಾಸ್‌ನಿಂದ ಹೊರಬಂದಿದ್ದ ಜಗದೀಶ್‌

ಹೀಗಿರುವಾಗಲೇ ಹಂಸಾ ನಾರಾಯಣಸ್ವಾಮಿಗೆ ಕೆಟ್ಟ ಪದ ಬಳಸಿ, ಮಾತಿಗೆ ಮಾತು ಬೆಳೆದು ಬಿಗ್‌ ಬಾಸ್‌ ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದಿತ್ತು. ಇದೇ ವೇಳೆ ಲಾಯರ್‌ ಜಗದೀಶ್‌ ಮೇಲೆ ರಂಜಿತ್‌ ದೈಹಿಕ ಹಲ್ಲೆಗೆ ಮುಂದಾದರು. ಈ ಹಿನ್ನೆಲೆಯಲ್ಲಿ ಕೆಟ್ಟ ಪದ ಬಳಕೆ ಮತ್ತು ದೈಹಿಕ ಹಲ್ಲೆ ಹಿನ್ನೆಲೆಯಲ್ಲಿ ಇಬ್ಬರನ್ನೂ ಮನೆಯಿಂದ ನೇರವಾಗಿಎಲಿಮಿನೇಟ್‌ ಮಾಡಲಾಯ್ತು. ಅದಾದ ಮೇಲೆ ಕಲರ್ಸ್‌ ಕನ್ನಡದ ಸವಿರುಚಿ ಕಾರ್ಯಕ್ರಮಕ್ಕೂ ಹೋಗಿ ಬಂದಿದ್ದರು ಜಗದೀಶ್.‌ ಇದೀಗ ಸದ್ದಿಲ್ಲದೆ, ಜೀ ಕನ್ನಡದ ರಿಯಾಲಿಟಿ ಶೋಗೆ ಎಂಟ್ರಿಕೊಟ್ಟಿದ್ದಾರೆ.

DKDಗೆ ಬಂದ ಜಗ್ಗುದಾದ

ಜೀ ಕನ್ನಡದ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋನಲ್ಲಿ ಹಾಡೊಂದರಲ್ಲಿ ಹೆಜ್ಜೆ ಹಾಕುತ್ತ ಜಗದೀಶ್‌ ಎಂಟ್ರಿಕೊಟ್ಟಿದ್ದಾರೆ. ದರ್ಶನ್‌ ನಟನೆಯ ಜಗ್ಗುದಾದ ಸಿನಿಮಾದ ಹಾಡಿಗೆ, ಥೇಟ್‌ ಸಿನಿಮಾದಲ್ಲಿ ದರ್ಶನ್‌ ಹಾಕಿದ ಕಾಸ್ಟ್ಯೂಮ್‌ ಅನ್ನೇ ಹೋಲುವ ಉಡುಗೆಯಲ್ಲಿ ಆಗಮಿಸಿ, ಸಖತ್ತಾಗಿಯೇ ಇತರ ಸ್ಪರ್ಧಿಗಳ ಜತೆಗೆ ಡಾನ್ಸ್‌ ಮಾಡಿದ್ದಾರೆ. ಜಗದೀಶ್‌ ಅವರ ಈ ಡಾನ್ಸ್‌ ನೋಡಿ, ವೆಲ್‌ಕಮ್‌ ಜಗದೀಶ್‌, ಡಾನ್ಸು ಸೂಪರ್‌ ಆಗಿಯೇ ಮಾಡಿದ್ರಿ" ಎಂದು ಕಾಂಪ್ಲಿಮೆಂಟ್‌ ಕೊಟ್ಟಿದ್ದಾರೆ.

ರಕ್ಷಿತಾ ನೋಡಿ ಫುಲ್‌ ಫಿದಾ

ನಮ್ಮಂಥವರು ಅವರ ಮುಂದೆ ನಿಂತಿರುವುದೇ ನಮ್ಮ ಅದೃಷ್ಟ ಎಂದು ಜಗದೀಶ್‌ ಹೇಳುತ್ತಿದ್ದಂತೆ, ವೆಲ್‌ಕಮ್‌ ಟು ಡಿಕೆಡಿ ಎಂದು ಜಗದೀಶ್‌ ಅವರನ್ನು ರಕ್ಷಿತಾ ಪ್ರೇಮ್‌ ಸ್ವಾಗತಿಸಿದ್ದಾರೆ. "ರಕ್ಷಿತಾನಾ ನೋಡಿದೆ ಎಲ್ಲವನ್ನೂ ಮರೆತುಬಿಟ್ಟೆ" ಎಂದೂ ಡೈಲಾಗ್‌ ಬಿಟ್ಟಿದ್ದಾರೆ. ಮೇಡಂ ನೀವು.. ನಿಮ್ಮ ಲುಕ್ಕು.. ಎಂದೆಲ್ಲ ಮಾತನಾಡಿ, ನಿಮ್ಮನ್ನ ನೋಡಿ ಶಾರುಖ್‌ ಖಾನ್‌ ಆಗಿಬಿಟ್ಟಿದ್ದೀನಿ ಇವತ್ತು. ಬಳಿಕ ಮುಂಗಾರುಮಳೆ ಸಿನಿಮಾದ ಅನಿಸುತಿದೆ ಯಾಕೋ ಇಂದು ಹಾಡಿಗೆ ಆಂಕರ್‌ ಅನುಶ್ರೀ ಜತೆ ಡಾನ್ಸ್‌ ಮಾಡಿದ್ದಾರೆ. ಕೊನೆಗೆ ಇವರ ವರ್ತನೆ ನೋಡಿ, "You are Naughty at 40" ಸರ್‌ ಎಂದಿದ್ದಾರೆ ರಕ್ಷಿತಾ ಪ್ರೇಮ್.

ಡಿಕೆಡಿಗೆ ಜಗದೀಶ್‌ ಆಗಮನ; ನೆಟ್ಟಿಗರು ಏನಂದ್ರು?

  • ಶಿವರಾಜ್‌ಕುಮಾರ್‌ ಅವರು ಈ ಥರದ ಶೋಗಳಿಗೆ ಜಡ್ಜ್‌ ಆಗುವ ಮೂಲಕ ತಮ್ಮ ವ್ಯಾಲ್ಯೂವನ್ನು ಕಳೆದುಕೊಳ್ಳುತ್ತಿದ್ದಾರೆ.
  • ಜೀ ಕನ್ನಡ ಟಿಆರ್‌ಪಿಗೋಸ್ಕರ ಜಗದೀಶ್‌ನಾ ಕರ್ಸಿದ್ದು.
  • ಅರುಂಧತಿ ನಾಗ್ ಅವರು ಸರಿಯಾಗಿ ಹೇಳಿದ್ದಾರೆ. ಟಿವಿ ಪ್ರೋಗ್ರಾಂಗಳು ಅದರ ಬೆಲೆ ಕಳ್ಕೊಂಡಿದೆ, ಹಾಳಾಗಿದೆ ಅಂತ. ಅದು 200% ರೈಟ್.
  • ಈ ಟಿವಿ ಚಾನಲ್ ಅವರಿಗೆ ಮೊದಲು ಟಿಆರ್‌ಪಿ ಮುಖ್ಯ. ನೀನು ಸಂಗೀತ ಕಲಿತಿದ್ದರೂ, ಡ್ಯಾನ್ಸ್ ಕಲಿತಿದ್ದರು ವೇಸ್ಟ್.
  • ಜೀ ಚಾನೆಲ್ ಆಲ್ರೆಡಿ ಟಾಪ್ ಅಲ್ಲಿ ಇದೆ. ಇನ್ನೂ ಟಾಪ್ ಅಲ್ಲಿ ಹೋಗುತ್ತೆ ನೋಡಿ. ಬಂದಿರೋದು ಯಾರು? ಜಗ್ಗು ಸರ್ ಚೆನ್ನಾಗಿ ಕಂಟೆಂಟ್ ಕೊಡಿ ಸರ್, ಚೆನ್ನಾಗಿ ಮನರಂಜಿಸಿ. ಆಲ್ ದ ಬೆಸ್ಟ್ ಸರ್
  • ಪುಟ್ಟಕ್ಕನ ಮಗಳು ಧಾರಾವಾಹಿಯಲ್ಲಿ ಒಂದು ಪಾತ್ರ ಮಾಡಿಸಿರಿ ಇನ್ನೂ ಹೆಚ್ಚಿನ ಟಿಆರ್ಪಿ ಬರುತ್ತದೆ..

Whats_app_banner