Bigg Boss Kannada: ನನ್ನದಲ್ಲದ ವ್ಯಕ್ತಿತ್ವ ಬಿಗ್ ಬಾಸ್ ಮನೆಯಲ್ಲಿತ್ತು; ಈ ವಾರ ಎಲಿಮಿನೇಟ್ ಆದ ಹಂಸಾ ಮೊದಲ ಮಾತು
ಬಿಗ್ ಬಾಸ್ ಸೀಸನ್ 11ರಿಂದ ಎಲಿನಿಮಿನೇಟ್ ಆಗಿ ಹೊರಬಂದ ಹಂಸಾ ಮೊದಲ ಬಾರಿ ಲೈವ್ ಬಂದು ಮಾತನಾಡಿದ್ದಾರೆ. ಹಂಸ ಬಿಗ್ ಬಾಸ್ ಮನೆಯಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಗಮನಿಸಿ.

ಬಿಗ್ ಬಾಸ್ ಮನೆಯಲ್ಲಿ ಹಂಸಾ 4 ವಾರಗಳ ಕಾಲ ಇದ್ದು ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯಿಂದ ಹೊರಬಂದ ಹಂಸಾ ಅವರು ಇಂದು (ಅಕ್ಟೋಬರ್ 29)ರಂದು ಲೈವ್ ಬಂದು ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದುವರೆಗೆ ಏನೇನು ಮಾಡಿದ್ದರು ಎಂಬುದನ್ನು ಲೈವ್‌ನಲ್ಲಿ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಉಳಿಯುವುದು ತುಂಬಾ ಕಷ್ಟವಾಗಿತ್ತು. ನಾನು ಅಲ್ಲಿ ಸುಮಾರು ವಿಷಯಗಳನ್ನು ಕಲಿತಿದ್ದೇನೆ. ಅಲ್ಲಿ ಮುಖ್ಯವಾಗಿ ಇರುವ ಟಾಸ್ಕ್ ಎಂದರೆ ನಮಗೆ ಪರಿಚಯವೇ ಇಲ್ಲದ ಹಲವು ವ್ಯಕ್ತಿತ್ವಗಳ ಜೊತೆ ಬದುಕುವುದು ಎಂದು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಮುಖ್ಯವಾಗಿ ಟೈಮ್ ತಿಳಿಯುವುದಿಲ್ಲ. ಯಾಕೆಂದರೆ ಅಲ್ಲಿ ಯಾವುದೇ ಗಡಿಯಾರ ಇರುವುದಿಲ್ಲ ಎಂದು ಹೇಳಿದ್ದಾರೆ. ಅದಾದ ನಂತರದಲ್ಲಿ ಮೊಬೈಲ್ ಬಳಕೆ ಇಲ್ಲದೇ ಇರುವುದು ಕಷ್ಟಕರವಾಗಿತ್ತು. ನಾವೆಲ್ಲ ಮೊಬೈಲ್‌ಗೆ ಅಡಿಕ್ಟ್ ಆಗಿರುತ್ತೇವೆ ಅದನ್ನು ಬಿಟ್ಟು ಇರುವುದು ಒಂದು ಟಾಸ್ಕ್ ಎಂದು ಹೇಳಿದ್ದಾರೆ.ಇನ್ನು ಸಮಯ ತಿಳಿಯದೇ ಇರುವ ಕಾರಣ ಯಾರಿಗೆಲ್ಲ ಹಸಿವಾಗುತ್ತೋ ಆವಾಗ ಊಟ ಮಾಡಿಕೊಂಡು ತಿನ್ನುತ್ತಿದ್ವಿ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಊಟ ಮತ್ತು ನಿದ್ರೆ ನನಗೆ ಸವಾಲಾಗಿರುತ್ತದೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಅಲ್ಲಿ ಹೋದಮೇಲೆ ನನಗೆ ಹಾಗೆಲ್ಲ ಏನೂ ಅನಿಸಿಲ್ಲ ಎಂದು ಹೇಳಿದ್ದಾರೆ. ತನ್ನ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ನಡೆದುಕೊಂಡೆ ಎಂದು ಅವರು ಹೇಳಿದ್ದಾರೆ. “ನಾನು ಬೆಳೆದು ಬಂದ ವಾತಾವರಣ ಮತ್ತು ನನ್ನ ಗಂಡನ ಮನೆ, ಎರಡೂ ಕಡೆ ನನಗೆ ಬೇಕಾದ ಹಾಗೇ ಇತ್ತೂ. ಜಗಳ ಹಾಗೂ ಗಲಾಟೆಗಳನ್ನು ನಾನು ನೋಡಿಲ್ಲ. ಆದರೆ ಇಲ್ಲಿ ಅನವಶ್ಯಕವಾಗಿ ಇನ್ನೊಬ್ಬರು ನಮ್ಮ ತಪ್ಪನ್ನು ಎತ್ತಿ ತೋರಿಸುತ್ತಾರೆ” ಎಂದು ಹೇಳಿದ್ದಾರೆ.
ಮನೆಯಲ್ಲಿ ಕೆಲ ಮಂದಿ ತಾವು ಜಗಳ ಮಾಡಿದ್ರೆ ಮಾತ್ರ ಇಲ್ಲಿ ಇರೋಕೆ ಸಾಧ್ಯ ಎಂದು ಅಂದುಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ. ಅದಾದ ನಂತರದಲ್ಲಿ ಜಗದೀಶ್ ಮತ್ತು ಹಂಸಾ ನಡುವೆ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಲ್ಲಿ ಯಾರು ಯಾರಿಗೂ ದ್ವೇಷ ಇರಲಿಲ್ಲ. ಆದ್ರೆ ಅಲ್ಲಿನ ಆಟ ಆ ರೀತಿ ಮಾಡಿಸ್ತು ಎಂದು ಹೇಳಿದ್ದಾರೆ. ಮನೆಯವರನ್ನು ಬಿಟ್ಟು ಬದುಕುವಾಗ ಆಗುವ ಸ್ಟ್ರೆಸ್ ಈ ರೀತಿಯಾಗಿದೆ ಎಂದು ಹೇಳಿದ್ದಾರೆ. ಎಲ್ಲರ ಬೆಂಬಲ ಇರಲಿ ಎಂದು ಕೇಳಿಕೊಂಡಿದ್ದಾರೆ.
ಜಗದೀಶ್ ಹೊರಗೆ ಬರುವಾಗ ನಿಮಗೆ ಖುಷಿ ಆಯ್ತು ನೀನು ಹೊರಗೆ ಬರುವಾಗ ವೀಕ್ಷಕರಿಗೆ ಖುಷಿ ಆಯ್ತು ಎಂದು ಪ್ರಕಾಶ್ ಕಾಮೆಂಟ್ ಮಾಡಿದ್ದಾರೆ. ಹಂಸಾ ಲೈವ್ ಬಂದರೂ ಜಗದೀಶ್ ಅವರ ಬಗ್ಗೆಯೇ ಎಲ್ಲರೂ ಕಾಮೆಂಟ್ ಮಾಡಿದ್ದಾರೆ.
