Biggboss Kannada 11: ಹನುಮಂತನಿಗೆ ಚಿನ್ನದ ಸರ ನೀಡಿದ ಗೋಲ್ಡ್ ಸುರೇಶ್, ಕಡಗ ಮಾರಿ ಸಮಾಜಸೇವೆ ಮಾಡುವೆ ಎಂದದ್ದಕ್ಕೆ ಸುದೀಪ್ ಬುದ್ದಿವಾದ
ಬಿಗ್‌ಬಾಸ್ ಕನ್ನಡ ಸೀಸನ್ 11ರ ನವೆಂಬರ್ 9ರ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳ ಜತೆ ವಾರದ ಪಂಚಾಯ್ತಿ ನಡೆಸಿದ್ದಾರೆ. ಈ ಸಮಯದಲ್ಲಿ ಗೋಲ್ಡ್ ಸುರೇಶ್ ಕುರಿತು ಸುದೀಪ್ ಮಾತನಾಡಿದ್ದಾರೆ. ಸುದೀಪ್ ತಮಾಷೆಗೆ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನು ಬಿಚ್ಚಿ ಹನುಮಂತನ ಕೊರಳಿಗೆ ಹಾಕುವ ಪರಿಸ್ಥಿತಿಯೂ ಸುರೇಶ್‌ಗೆ ಎದುರಾಯ್ತು.
Biggboss Kannada 11:ಬಿಗ್‌ಬಾಸ್ ಕನ್ನಡ ಸೀಸನ್ 11ರ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳೊಂದಿಗೆ ವಾರ ಘಟನೆಗಳನ್ನ ವಿಶ್ಲೇಷಿಸಿದ್ದಾರೆ. ಇದೇ ಸಮಯದಲ್ಲಿ ಗೋಲ್ಡ್ ಸುರೇಶ್ ಅವರ ಚಿನ್ನದ ಬಗ್ಗೆಯೂ ಮಾತನಾಡಿದರು. ಈ ಸಮಯದಲ್ಲಿ ಗೋಲ್ಡ್ ಸುರೇಶ್ ತನ್ನ ಕೊರಳಲ್ಲಿದ್ದ ಚಿನ್ನವನ್ನು ಹನುಮಂತನಿಗೆ ಹಾಕಿದ ಪ್ರಸಂಗವೂ ನಡೆಯಿತು. ನಿನ್ನೆಯ ಚರ್ಚೆಯಲ್ಲಿ ಹನುಮಂತನ ಬಗ್ಗೆ ತುಸು ಪ್ರೀತಿ ಜಾಸ್ತಿ ಇದೆ ಎಂದರು. ಅದಕ್ಕೆ ಸುದೀಪ್ ಹಾಗಾದರೆ, ಅಷ್ಟು ಪ್ರೀತಿಯಿದ್ದರೆ ನಿಮ್ಮ ಅಳಿಯನಿಗೆ ನಮ್ಮ ಕೊರಳಲ್ಲಿ ಇರುವ ಗೋಲ್ಡ್ ಚೈನ್ ಹಾಕಿ ಎಂದಾಗ ಸುರೇಶ್ ತಬ್ಬಿಬ್ಬಾದರು. ಸುದೀಪ್ ತಮಾಷೆಗೆ ಹೇಳಿದರೂ ಸುರೇಶ್‌ಗೆ "ಚಿನ್ನದ ಸರ ನೀಡುವುದಾ, ಬೇಡ್ವ" ಎಂಬ ಸಂದಿಗ್ಧತೆ ಕಾಡಿತು. ಇದು ತುಂಬಾ ದುಬಾರಿ ಚೈನ್ ಸರ್ ಎಂದರು. ಸುದೀಪ್ ತಮಾಷೆ ಮುಂದುವರೆಸಿದರು. ಒಳ್ಳದ ಮನಸ್ಸಿನಿಂದ ಚೈನ್ ಬಿಚ್ಚಿ ಹನುಮಂತನ ಕೊರಳಿಗೆ ಹಾಕಲು ಮುಂದಾದಗ "ಚಿನ್ನದ ಸರ ಕೊರಳಿಗೆ ಹಾಕಿದ ಮೇಲೆ ತೆಗೆಯುವಂತೆ ಇಲ್ಲ" ಎಂದು ಕಿಚ್ಚ ತಮಾಷೆಯಾಗಿ ನಗುತ್ತಾ ಹೇಳಿದರು.
ಹನುಮಂತನಿಗೆ ಚಿನ್ನದ ಸರ ನೀಡಿದ ಗೋಲ್ಡ್ ಸುರೇಶ್
ಗೋಲ್ಡ್ ಸುರೇಶ್ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನು ಹನುಮಂತನ ಕೊರಳಿಗೆ ಹಾಕಿದರು. "ಬೇಡ ಸರ್, ಇವರು ಒಳ್ಳದ ಮನಸ್ಸಿನಿಂದ ನೀಡಿದ್ದಾರೆ. ವಾಪಸ್ ನೀಡುವೆ" ಎಂದು ಹನುಮಂತ ಚಿನ್ನದ ಸರ ವಾಪಸ್ ನೀಡಿದರು. "ಇವರು ನನಗೆ ಸಾಕ್ಸ್ ನೀಡಲು ಹಿಂಜರಿದವರು, ಈಗ ಚಿನ್ನ ನೀಡ್ತಾರ" ಎಂದು ಹನುಮಂತ ಕೂಡ ತಮಾಷೆಯಾಗಿ ಹೇಳಿದರು. ಇದು ಗೋಲ್ಡ್ ಸುರೇಶ್‌ಗೆ ಬೇಸರ ತರಿಸಿತು.
ನೀವು ಹೇಳಿದ್ಮೇಲೆ ಚಿನ್ನದ ಕಡಗ ಧರಿಸುತ್ತಿಲ್ಲ ಎಂದ ಸುರೇಶ್
ಸಾಕ್ಸ್ ವಿಷಯ ಕೇಳಿದಾಗ ಗೋಲ್ಡ್ ಸುರೇಶ್‌ಗೆ ಬೇಸರವಾಯಿತು. ನಾನು ಜಿಪುಣನಲ್ಲ ಎಂದು ಅವರು ಹೇಳಿದರು. "ಯಾಕೆ ಸುರೇಶ್, ಬೇಸರವಾಯ್ತ" ಎಂದು ಸುದೀಪ್ ಪ್ರಶ್ನಿಸಿದಾಗ "ಹೌದು ಸರ್, ನನ್ನನ್ನು ಹೀಗೆ ಕರೆದದ್ದು ಬೇಸರವಾಯಿತು. ನಾನು ಕೊಡುವ ವಿಚಾರದಲ್ಲಿ ಧಾರಾಳಿಯಾಗಿದ್ದೇನೆ ಸರ್. ಸಾಕಷ್ಟು ಜನರಿಗೆ ಸಹಾಯ ಮಾಡಿದ್ದೇನೆ. ಕಳೆದ ಬಾರಿ ಚಿನ್ನದ ಕಡಗದ ಬಗ್ಗೆ ಹೇಳಿದ್ರಿ. ಆ ಕಡಗ ಮಾರಿದರೆ ಸಮಾಜ ಸೇವೆ ಮಾಡಬಹುದು ಎಂದಿದ್ರಿ. ನಾನು ಅವತ್ತಿನಿಂದ ಆ ಕಡಗ ಬಳಸುತ್ತಿಲ್ಲ. ಬಿಗ್‌ಬಾಸ್‌ನಿದ ಹೊರಗೆ ಹೋದಮೇಲೆ ಆ ಕಡಗ ಮಾರಿ ಸೋಷಿಯಲ್ ವರ್ಕ್ ಮಾಡುವೆ" ಎಂದು ಸುರೇಶ್ ಹೇಳಿದರು.
ಬುದ್ದಿವಾದ ಹೇಳಿದ ಸುದೀಪ್
"ಗೋಲ್ಡ್ ಸುರೇಶ್ ಅವರೇ, ಹಾಗೆಲ್ಲ ಮಾಡಲು ಹೋಗಬೇಡಿ. ನೀವು ನಿಮ್ಮ ಸಂತೋಷಕ್ಕಾಗಿ ಚಿನ್ನ ಹಾಕುವಿರಿ. ಅದನ್ನು ದಾನ ಮಾಡೋದು ಬೇಡ. ನಿಮ್ಮಲ್ಲಿ ಹೆಚ್ಚು ಹಣ ಇದ್ದಾಗ ಸೋಷಿಯಲ್ ವರ್ಕ್ ಮಾಡಿ" ಎಂದು ಸುದೀಪ್ ಹೇಳಿದಾಗ "ಸರಿ ಸರ್" ಎಂದು ಗೋಲ್ಡ್ ಸುರೇಶ್ ಸಮ್ಮತಿ ನೀಡಿದರು.
ಬಿಗ್‌ಬಾಸ್ ಕನ್ನಡದ ನಿನ್ನೆಯ ಸಂಚಿಕೆಯಲ್ಲಿ ತ್ರಿವಿಕ್ರಮ್‌ನನ್ನು ಕ್ಯಾಪ್ಟನ್ ಮಾಡಲು ಮ್ಯಾಚ್ ಫಿಕ್ಸಿಂಗ್ ಮಾಡಿದ್ದರ ಕುರಿತೂ ಚರ್ಚೆ ನಡೆಯಿತು. "ನಾನು ನಿಮ್ಮನ್ನು ನಾಮಿನೇಷನ್ ಮಾಡೋಲ್ಲ ಎಂದಿದ್ದೆ. ನಾಮಿನೇಟ್ ಮಾಡುವುದಿಲ್ಲ ಎಂದಿಲ್ಲ" ಎಂದು ತ್ರಿವಿಕ್ರಮ್ ಹೇಳಿದಾಗ ಉಗ್ರಂ ಮಂಜು ಬೇಸರಗೊಂಡು. "ಕ್ಯಾಪ್ಟನ್ ಆಗುವ ಉದ್ದೇಶದಿಂದ ಅವರು ಆಗ ನಾನು ನೀಡಿದ ಷರತ್ತು ಒಪ್ಪಿದ್ದರು. ಈಗ ನಾನು ಹಾಗೇ ಹೇಳಿಲ್ಲ ಎನ್ನುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು. "ಇವರಿಬ್ಬರ ಮ್ಯಾಚ್ ಫಿಕ್ಸಿಂಗ್ ಅನ್ನು ಉಳಿದವರು ಪಾಠವಾಗಿ ತೆಗೆದುಕೊಳ್ಳಿ" ಎಂದು ಸುದೀಪ್ ಹೇಳಿದರು. ಈ ಮೂಲಕ ಈ ಮನೆಯಲ್ಲಿ ಯಾರನ್ನೂ ನಂಬಬೇಡಿ ಎಂದು ಸೂಚ್ಯವಾಗಿ ಹೇಳಿದರು.