ಬಿಗ್‌ ಬಾಸ್‌ ಕನ್ನಡ 11: ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲ ಚರ್ಚೆಯಾಗಲಿದೆ? ವೀಕ್ಷಕರು ಸೂಚಿಸಿದ ವಿಷಯ ಇಲ್ಲಿದೆ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ ಬಾಸ್‌ ಕನ್ನಡ 11: ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲ ಚರ್ಚೆಯಾಗಲಿದೆ? ವೀಕ್ಷಕರು ಸೂಚಿಸಿದ ವಿಷಯ ಇಲ್ಲಿದೆ

ಬಿಗ್‌ ಬಾಸ್‌ ಕನ್ನಡ 11: ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲ ಚರ್ಚೆಯಾಗಲಿದೆ? ವೀಕ್ಷಕರು ಸೂಚಿಸಿದ ವಿಷಯ ಇಲ್ಲಿದೆ

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಏನೆಲ್ಲ ನಡೆದಿದೆ ಎನ್ನುವುದು ವೀಕ್ಷಕರಿಗೆ ತಿಳಿದೇ ಇದೆ. ಹಾಗಾಗಿ ವೀಕ್ಷಕರು ಇಂದಿನ ಪಂಚಾಯ್ತಿಯಲ್ಲಿ ಯಾವ ವಿಚಾರ ಚರ್ಚೆ ಆಗಬೇಕು ಎಂದು ಕಲರ್ಸ್‌ ಕನ್ನಡ ಮಾಡಿದ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.

ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲ ಚರ್ಚೆಯಾಗಲಿದೆ
ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲ ಚರ್ಚೆಯಾಗಲಿದೆ (ಕಲರ್ಸ್‌ ಕನ್ನಡ)

ಬಿಗ್‌ ಬಾಸ್‌ ಮನೆಯಲ್ಲಿ ಶನಿವಾರ ಹಾಗೂ ಭಾನುವಾರ ಬಂದಂತೆ ಸ್ಪರ್ಧಿಗಳಿಗೆ ಸ್ವಲ್ಪ ತಲೆಬಿಸಿ ಆರಂಭವಾಗುತ್ತದೆ. ಈ ಬಾರಿ ನಾನೇನು ತಪ್ಪು ಮಾಡಿದ್ದೇನೆ ಎಂದು ಅವರಿಗವರೇ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಇನ್ನು ಮನೆಯ ಹೊರಗಿನ ವೀಕ್ಷಕರಿಗೆ ಕಿಚ್ಚ ಸುದೀಪ್ ಅವರು ಬಂದು ಮನೆಯಲ್ಲಿ ನಡೆದ ಸರಿ ತಪ್ಪುಗಳನ್ನು ಗುರುತಿಸಿ ಅವರಿಗೆ ಅದನ್ನು ತಿಳಿ ಹೇಳುವುದನ್ನು ನೋಡಲು ಕುತೂಹಲ ಹೆಚ್ಚಾಗಿರುತ್ತದೆ. ಹೀಗಿರುವಾಗ ಈ ವಾರ ಬಿಗ್‌ ಬಾಸ್‌ ಪಂಚಾಯ್ತಿಯಲ್ಲಿ ಸುದೀಪ್ ಅವರು ಯಾವ ವಿಚಾರದ ಬಗ್ಗೆ ಚರ್ಚೆ ಮಾಡಬೇಕು ಎಂದು ಜನರು ತಮ್ಮ ಪಾಡಿಗೆ ತಾವು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ಬಾರಿ ಗೌತಮಿ ಹಾಗೂ ಮೋಕ್ಷಿತ ಅವರ ವಿರುದ್ಧವಾಗಿ ಸಾಕಷ್ಟು ಚರ್ಚೆಗಳು ಆಗುತ್ತಿದೆ. ಇನ್ನು ಪಾಸಿಟಿವಿಟಿ ಎಂಬ ಹೆಸರಿನಲ್ಲಿ ಗೌತಮಿ ಆಡುತ್ತಿರುವ ಆಟ ಸರಿಯಾಗಿಲ್ಲ ಎಂದು ಜನರು ಈ ವಾರವಿಡೀ ಹೇಳಿಕೊಂಡು ಬಂದಿದ್ದಾರೆ. ಹನುಮಂತನ ಕ್ಯಾಪ್ಟನ್ಸಿಯಲ್ಲಿ ಏನಾಗಿದೆ ಎಂಬುದನ್ನು ನೀವೇ ನೋಡಿದ್ದೀರಿ ಹಾಗಾಗಿ ಕ್ಯಾಪ್ಟನ್‌ ಬಗ್ಗೆ ಈ ವಾರ ಮಾತಿಲ್ಲ. ಇನ್ನು ಗೋಲ್ಡ್‌ ಸುರೇಶ್ ಅವರನ್ನು ಈ ವಾರ ಕಳಪೆ ಪಟ್ಟ ಕೊಟ್ಟು ಜೈಲಿಗೆ ಹಾಕಲಾಗಿತ್ತು.

ಗೌತಮಿ ಮುಖವಾಡದ ಬಗ್ಗೆ ಚರ್ಚೆ ಆಗ್ಲೇ ಬೇಕು. ಅದೇ ಥರಾ ಮೋಕ್ಷಿತಗೆ ಬುದ್ಧಿ ಹೇಳ್ಬೇಕು ಯಾರೋ ಹೇಳಿದ್ರು ಅಂತ ಉರ್ಕೊಂಡು ಇನ್ನೊಬ್ರನ್ನು ಬಯ್ಯೊದು ಸರಿ ಇಲ್ಲ ಅಂತ ಮನವರಿಕೆ ಮಾಡಿಸಬೇಕು ಎಂದು ಶಶಿಕಾಂತ್ ಎಸ್ ಇವರು ಕಾಮೆಂಟ್ ಮಾಡಿದ್ದಾರೆ. ತ್ರಿವಿಕ್ರಂ ಹಾಗೂ ಮೋಕ್ಷಿತಾ ನಡುವೆ ಆಗಾಗ ಜಗಳ ಆಗುತ್ತಲೇ ಇತ್ತು ಉಗ್ರಂ ಮಂಜು ಅವರು ಹೇಳಿದ ಮಾತನ್ನು ಆಧರಿಸಿಕೊಂಡು ಈ ರೀತಿ ಆಗಿದೆ ಎಂದು ಹಿಂದಿನ ಪಂಚಾಯ್ತಿಯಲ್ಲೇ ಗೊತ್ತಾಗಿತ್ತು. ಆದರೆ ಇದೀಗ ಮತ್ತೆ ಅದೇ ರೀತಿಯ ಚರ್ಚೆ ಆಗಬೇಕಿದೆ ಎಂದು ಜನಾಭಿಪ್ರಾಯ ಇದೆ.

ಮಂಜ ನ ಮ್ಯಾಚ್ ಪಿಕ್ಸಿಂಗ್, ಭವ್ಯಳ ಪೋಲ್, ಬಲಿಷ್ಠತಂಡಗಳನ್ನು ಆಚೆ ಹಾಕುವುದು. ತ್ರಿವಿಕ್ರಮ್ ಭವ್ಯಳ ನೀರು ಚೆಲ್ಲದೆ ಆಟ ಆಡಿದ್ದು ಈ ಎಲ್ಲಾ ವಿಷಯಗಳನ್ನೂ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಗ‍ಣೇಶ್‌ ಅವರು ಕಾಮೆಂಟ್ ಮಾಡಿದ್ದಾರೆ.

ಮೆಚ್ಚುಗೆಯ ಚಪ್ಪಾಳೆ ಈ ಬಾರಿ ಯಾರಿಗೆ ಸಿಗಬೇಕು?
ಎಲ್ಲರು ಮ್ಯಾಚ್ ಫಿಕ್ಸಿಂಗ್ ಮಾಡ್ಕೊಂಡು ಆಡ್ತಾರೆ, ಹನುಮಂತ ಪ್ರಾಮಾಣಿಕವಾಗಿ ಅಡಿದಾನೆ, ಈ ವಾರನು ಕೂಡ ಕಿಚ್ಚನ ಚಪ್ಪಾಳೆ ಹನುಮಂತಗೆ ಸಿಗ್ಬೇಕು ಎಂದು ವೆಂಕಟೇಶ್‌ ಕಾಮೆಂಟ್ ಮಾಡಿದ್ದಾರೆ. ಇನ್ನೂ ಹಲವರು ಇದೇ ವಿಚಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಹನುಂಮತ ಉತ್ತಮವಾಗಿ ಮನೆಯನ್ನು ನಿಭಾಯಿಸಿದ್ದಾನೆ ಈ ವಾರವು ಕಿಚ್ಚನ ಚಪ್ಪಾಳೆ ಹನುಮಂತನಿಗೆ ನೀಡಬೇಕು ಎಂದು ಹಲವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

Whats_app_banner