Bigg Boss Kannada: ಮಾನಸಾ ಹೇಗೆ ಎಂಬ ಪ್ರಶ್ನೆ ಕೇಳಿದ ಸೃಜನ್‌ಗೆ ಹನುಮಂತ ಕೊಟ್ಟ ಉತ್ತರ ಕೇಳಿ ಬಿದ್ದು ಬಿದ್ದು ನಕ್ಕ ಮನೆಮಂದಿ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ಮಾನಸಾ ಹೇಗೆ ಎಂಬ ಪ್ರಶ್ನೆ ಕೇಳಿದ ಸೃಜನ್‌ಗೆ ಹನುಮಂತ ಕೊಟ್ಟ ಉತ್ತರ ಕೇಳಿ ಬಿದ್ದು ಬಿದ್ದು ನಕ್ಕ ಮನೆಮಂದಿ

Bigg Boss Kannada: ಮಾನಸಾ ಹೇಗೆ ಎಂಬ ಪ್ರಶ್ನೆ ಕೇಳಿದ ಸೃಜನ್‌ಗೆ ಹನುಮಂತ ಕೊಟ್ಟ ಉತ್ತರ ಕೇಳಿ ಬಿದ್ದು ಬಿದ್ದು ನಕ್ಕ ಮನೆಮಂದಿ

ಬಿಗ್‌ ಬಾಸ್‌ ಮನೆಯಲ್ಲಿ ಮಾನಸಾ ಅಂದ್ರೆ ಎಲ್ಲರಿಗೂ ಕಿರಿಕಿರಿ ಎಂದು ಆಗಾಗ ಮಾತು ಬರುತ್ತದೆ. ಅದೇ ಪ್ರಶ್ನೆಯನ್ನು ಇಂದು ಸೃಜನ್ ಹನುಮಂತನ ಬಳಿ ಕೇಳಿದ್ದಾರೆ. ಮಾನಸಾ ಅವರಿಗೆ ಸಲಹೆ ನೀಡು ಎಂದಿದ್ದಾರೆ. ಈ ಮಾತಿಗೆ ಹನುಮಂತ ಕೊಟ್ಟ ಉತ್ತರ ನೋಡಿ.

ಮಾನಸಾ ಹೇಗೆ ಎಂಬ ಪ್ರಶ್ನೆಗೆ ಹನುಮಂತ ಕೊಟ್ಟ ಉತ್ತರ ನೋಡಿ
ಮಾನಸಾ ಹೇಗೆ ಎಂಬ ಪ್ರಶ್ನೆಗೆ ಹನುಮಂತ ಕೊಟ್ಟ ಉತ್ತರ ನೋಡಿ (ಕಲರ್ಸ್‌ ಕನ್ನಡ)

ಮಾನಸಾ ಅವರು ಈ ಮನೆಯಲ್ಲಿ ಯಾವ ರೀತಿ ಇರಬೇಕು? ಮತ್ತು ಅವರು ಈಗ ಹೇಗಿದ್ದಾರೆ ಅನ್ನೋದನ್ನು ಸೃಜನ್ ಲೋಕೇಶ್‌ ಹನುಮಂತ ಅವರ ಬಳಿ ತಿಳಿಸಲು ಹೇಳುತ್ತಾರೆ. ಆಗ ಹನುಮಂತ ಅವರು ಮಾನಸಾ ಬಗ್ಗೆ ಮಾತನಾಡಿದ್ದಾರೆ. ಅವರು ಮಾತನಾಡಿದ ರೀತಿ ನೋಡಿ ಮನೆಯವರೆಲ್ಲ ನಕ್ಕಿದ್ದಾರೆ. ಆದರೆ ಸರಿಯಾದದ್ದನ್ನೇ ಹನುಮಂತ ಅವರು ಹೇಳಿದ್ದಾರೆ ಎಂದು ಮನೆಯ ಹಲವರಿಗೆ ಅನಿಸಿದಂತಿದೆ. ಸೃಜನ್ ಲೋಕೇಶ್‌ ಅವರು ಈ ವಾರದ ಪಂಚಾಯ್ತಿಯನ್ನು ನಡೆಸಲು ಬಿಗ್‌ ಬಾಸ್‌ ಮನೆಯೊಳಗಡೆ ಬಂದಿದ್ದಾರೆ.

ಹನುಮಂತ ಕೊಟ್ಟ ಉತ್ತರದ ಪ್ರಕಾರ ಮಾನಸಾ ಅವರು ಎಲ್ಲ ವಿಚಾರವನ್ನು ತಿಳಿದುಕೊಳ್ಳದೆ ತಮಗೆ ಅನಿಸಿದ್ದನ್ನು ಮಾತ್ರ ಮಾತಾಡುತ್ತಾರೆ ಎಂದು ಹನುಮಂತ ಹೇಳುತ್ತಾರೆ. ಅವರು ಎಲ್ಲಾ ವಿಚಾರವನ್ನು ತಿಳಿದುಕೊಂಡು ನಂತರ ಮಾತನಾಡಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳುತ್ತಾರೆ. ಆಗ ಮಾನಸಾ ಮತ್ತ್ ಹೇಗೆ ಮಾತಾಡೋದು ಎಂದು ಕೇಳುತ್ತಾರೆ.

ಅವರು ಗಂಡು ಮಕ್ಕಳ ಮೇಲೆ ಕೈ ಮಾಡೋತರ ಸಿಟ್ಟಲ್ಲಿ ಮಾತಾಡ್ತಾರೆ. ಅವರ ಮಾತು ಕೇಳಿ ಬೇರೆಯವರಿಗೆ ಬೇಜಾರಾಗುತ್ತದೆ. ಹೊಡೆಯಲು ಇನ್ನು ಹೋಗಿಲ್ಲ. ಆದರೂ ಅವರು ಆಡುವ ಮಾತು ದೊಡ್ಡ ಕಣ್ಣು ಬಿಟ್ಟು ನೋಡುವ ರೀತಿ ಅವೆಲ್ಲವನ್ನೂ ಕಡಿಮೆ ಮಾಡಿಕೊಂಡ್ರೆ ಉತ್ತಮ ಎಂದು ಹೇಳುತ್ತಾರೆ. ಇನ್ನು ಅದಾದ ನಂತರ ನೀವು ಅವರಿಗೆ ಯಾವ ಸಲಹೆ ನೀರುತ್ತೀರಾ ಎಂದು ಕೇಳಿದಾಗ ನೋಡಣ, ಹಿಂಗಣ, ಹಿಂಗಲ್ಲಣ
ಇದಣ, ಇದಲ್ಲಣ ಎಂದರೆ ಅಷ್ಟೇ ಸಾಕು ಎಂದು ಹೇಳಿದ್ದಾರೆ. ಈ ಮಾತನ್ನು ಆಲಿಸಿ ಮನೆಯವರೆಲ್ಲ ನಕ್ಕಿದ್ದಾರೆ.

ಹನುಮಂತ ಹೇಳಿದ್ದು ನೂರಕ್ಕೆ ನೂರು ಸತ್ಯ. ಒಂದೇ ವಾರಕ್ಕೆ ಹನುಮಂತ ಎಷ್ಟು ಅರ್ಥ ಮಾಡಿಕೊಂಡಿದ್ಧಾನೆ.ಮಾನಸ ತುಕಾಲಿ ನ ಮೊದಲು ಮನೆಯಿಂದ ಹೊರಗೆ ಹಾಕಿ ಎಂದು ಯತೀಶ್‌ ಕುಮಾರ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.

ಮನೆಯ ಹೊರಗಡೆ ಬಿಗ್‌ ಬಾಸ್‌ ಕಾರ್ಯಕ್ರಮದ ಬಗ್ಗೆ ಯಾವ ರೀತಿ ಅಭಿಪ್ರಾಯ ಹುಟ್ಟಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಪ್ರಶ್ನೆಗಳನ್ನು ಅಲ್ಲಿನವರಿಗೆ ಕೇಳಲಾಗುತ್ತದೆ. ಇಂದು ಮಾನಸಾ ಅವರು ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.