Bigg Boss Kannada 11: ಹನುಮಂತ ಮುಗ್ಧ ಅಲ್ಲ ಎಂದ ಮೋಕ್ಷಿತಾ; ಕಿಚ್ಚನ ಪ್ರಶ್ನೆಗೆ ಜವಾರಿ ಹುಡುಗನ ಖಡಕ್ ಉತ್ತರ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಹನುಮಂತ ಮುಗ್ಧ ಅಲ್ಲ ಎಂದ ಮೋಕ್ಷಿತಾ; ಕಿಚ್ಚನ ಪ್ರಶ್ನೆಗೆ ಜವಾರಿ ಹುಡುಗನ ಖಡಕ್ ಉತ್ತರ

Bigg Boss Kannada 11: ಹನುಮಂತ ಮುಗ್ಧ ಅಲ್ಲ ಎಂದ ಮೋಕ್ಷಿತಾ; ಕಿಚ್ಚನ ಪ್ರಶ್ನೆಗೆ ಜವಾರಿ ಹುಡುಗನ ಖಡಕ್ ಉತ್ತರ

ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳಿಗೆ ಹನುಮಂತ ಜಾಣನಾ ಅಥವಾ ಮುಗ್ಧನಾ ಎನ್ನುವ ಪ್ರಶ್ನೆಯನ್ನು ಕಿಚ್ಚ ಸುದೀಪ್ ಕೇಳುತ್ತಾರೆ. ಆಗ ಮನೆಯವರೆಲ್ಲ ಕೊಟ್ಟ ಉತ್ತರಕ್ಕೆ ಹನುಮಂತ ನೇರ ತಿರುಗುತ್ತರ ನೀಡಿದ್ದಾರೆ.

ಹನುಮಂತ ಮುಗ್ಧ ಅಲ್ಲ ಎಂದ ಮೋಕ್ಷಿತಾ
ಹನುಮಂತ ಮುಗ್ಧ ಅಲ್ಲ ಎಂದ ಮೋಕ್ಷಿತಾ (ಕಲರ್ಸ್ ಕನ್ನಡ)

ಇಂದು ಕಿಚ್ಚ ಸುದೀಪ್ ನಡೆಸಿಕೊಡುವ ವಾರದ ಪಂಚಾಯ್ತಿಯಲ್ಲಿ ಮನೆಯಲ್ಲಿ ಹಾಗೂ ಹೊರಗಡೆ ತುಂಬಾ ಹರಿದಾಡುತ್ತಿದ್ದ ಮಾತು ಹನುಮಂತ ಮುಗ್ಧನಾ? ಅಥವಾ ಜಾಣನಾ? ಎಂದು ಕೇಳಲಾಗಿದೆ. ಈ ಹಿಂದೆ ಯೋಗರಾಜ್‌ ಭಟ್‌ ಅವರು ಬಂದಾಗ ಕೂಡ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು. ಆಗ ಮನೆಯವರೆಲ್ಲ ಹನುಮಂತ ಮುಗ್ಧ ಅಲ್ಲ ಎಂದು ಉತ್ತರ ನೀಡಿದ್ದರು. ಈಗಲೂ ಮೋಕ್ಷಿತಾ ಅವರು ಅದೇ ರೀತಿ ಉತ್ತರ ನೀಡಿದ್ದಾರೆ. ಇಲ್ಲ ಸರ್ ಹನುಮಂತ ಅವರು ತುಂಬಾ ಜಾಣ ಅವರಿಗೆ ಎಲ್ಲಿ ಯಾವ ರೀತಿ ಆಟ ಆಡಬೇಕು ಅನ್ನೋದು ಗೊತ್ತಿದೆ. ಅವರು ಅವರ ಆಟವನ್ನು ಆಡ್ತಾ ಇದ್ದಾರೆ. ಅವರು ಖಂಡಿತ ಮುಗ್ಧರಲ್ಲ ಎಂದು ಹೇಳಿದ್ದಾರೆ.

ಹನುಮಂತ ಕೂಡ ಮೈಂಡ್‌ ಗೇಮ್ ಆಡ್ತಾನೆ ಎಂದು ಮೋಕ್ಷಿತಾ ಹೇಳಿದ್ದಾರೆ. ಮೊದಲು ಕಿಚ್ಚ ಸುದೀಪ್ ಅವರು ಗೋಲ್ಡ್‌ ಸುರೇಶ್‌ ಅವರ ಬಳಿ ಪ್ರಶ್ನೆ ಕೇಳುತ್ತಾರೆ. ಯಾರು ಏನೇ ಅಂದ್ರು ನೀವು ಪ್ರಶ್ನೆ ಮಾಡ್ತೀರಾ. ಆದ್ರೆ ಹನುಮಂತ ಏನೇ ಅಂದ್ರೂ ನೀವು ತಿರುಗಿ ಮಾತಾಡೋದಿಲ್ಲ ಯಾಕೆ ಎಂದು? ಆಗ ಸುರೇಶ್‌ ಹೇಳ್ತಾರೆ ಮಾವ ನೋಡು ನಾನೀಗ ಮಾತಾಡೀನಿ ನಿಂದ್ ಬಂದಾಗ ನೀನ್ ಮಾತಾಡು ಅಂತ ಸುಮ್ನಾಗ್ತಾನೆ ಹಾಗಾಗಿ ನಾನು ಏನೂ ಹೇಳೋಕೋಗಲ್ಲ ಎಂದು ಹೇಳುತ್ತಾರೆ.

ಅದಾದ ನಂತರದಲ್ಲಿ ಹನುಮಂತ ಅವರ ಮುಗ್ಧತೆಯ ಪ್ರಶ್ನೆಗಳು ಮನೆಯಲ್ಲಿ ಹುಟ್ಟಿಕೊಳ್ಳುತ್ತದೆ. ಮನೆಯವರು ಕೊಟ್ಟ ಉತ್ತರಕ್ಕೆ ಹನುಮಂತ ಸರಿಯಾಗಿ ಉತ್ತರ ನೀಡಿದ್ದಾರೆ. ನಾನಲ್ಲ ಇಲ್ಲಿ ಇರೋ ಯಾರೂ ಮುಗ್ಧರಲ್ಲ ಎಲ್ಲರೂ ನನ್ನ ಬಗ್ಗೆ ಮಾತ್ರ ಯಾವಾಗಲೂ ಮಾತಾಡ್ತಾರೆ ಎಂದು ಹೇಳಿದ್ದಾರೆ. ನೇರಾ ನೇರವಾಗಿ ಈ ಮನೆಯಲ್ಲಿ ಯಾರೂ ಅಷ್ಟೊಂದು ಮುಗ್ಧರಲ್ಲ ಎಂಬುದನ್ನು ಹೇಳಿದ್ದಾರೆ. ಹನುಮಂತ ಅವರಿಗೆ ಮನೆಯ ಹೊರಗಡೆ ಇದೇ ಕಾರಣಕ್ಕೆ ಅಭಿಮಾನಿಗಳು ಹೆಚ್ಚಾಗಿದ್ದಾರೆ.

ಹನುಮಂತ ಏನು ನಿಮ್ ಹತ್ತಿರ ಬಂದು ಹೇಳಿದ್ದಾನಾ? ನಾನು ಮುಗ್ಧ ,ಪೆದ್ದ ಅಂತ ಇಲ್ವಲ್ಲ.. ನೀವ್ ನೀವ್ಗಳೇ ನಿಮ್ಮನ್ನು ದೊಡ್ ಬುದ್ದಿವಂತ್ರು ಅಂದ್ಕೊಂಡ್ ಬಿಟ್ಟಿದ್ದೀರಿ, ಹನುಮಂತ ಅವ್ನ್ ಆಟ ಅವ್ನ್ ಆಡ್ತಿದ್ದಾನೆ.. ನಿಮ್ಮ ಹಾಗೆ ಒಳಗೊಂದು ಹೊರಗೊಂದು ಇಲ್ಲಾ ಅವನಲ್ಲಿ. ನೀವೆಲ್ಲ ಕುತಂತ್ರಿಗಳು, ಗ್ರೂಪಿಸ್ಮ್ ಮಾಡ್ಕೊಂಡ್ ಆಟ ಆಡ್ತಿದ್ದೀರಿ, ಆದ್ರೆ ಅವ್ನು ಹಾಗೆ ಆಡ್ತಿಲ್ಲ. ನಿಯತ್ತಾಗಿ ಇರೋದು ಅಂದ್ರೆ ಅವ್ನ್ ಒಬ್ನೇ. ಧನರಾಜ್ ಅವ್ನು ಬಂದಾಗಿಂದ ಅವ್ನ್ ಹಿಂದೆ ತಿರುಗ್ತಾ ಇದ್ರೂ ಅವನಿಗೂ ಫೇವರಿಸಮ್ ಮಾಡಲ್ಲ ಹನುಮಂತು. ಉತ್ತರ ಕರ್ನಾಟಕದವರೇ ಆಗಿದ್ರು ಗೋಲ್ಡ್ ಸುರೇಶ್ ತಪ್ಪನ್ನು ಎತ್ತಿ ಹಿಡೀತಾನೆ, ನಿರ್ಧಾರ ತೊಗೊಳುವಾಗ ಸರಿಯಾದ ನಿರ್ಧಾರ ತೊಗೊಳೋದು ಅಂದ್ರೆ ಹನುಮಂತ ಒಬ್ನೇ ಎಂದು ದಿವ್ಯಾ ಪನೀಶ್‌ ಕಾಮೆಂಟ್ ಮಾಡಿದ್ದಾರೆ.

ಭವ್ಯಾ ತನ್ನ ಟೀಮ್ ಗೆ ಅಥವಾ ತನ್ನ ಆಟಕ್ಕೆ ಮೋಸ ಮಾಡಿಲ್ಲ, ನಿಯತ್ತಾಗಿ ಕಷ್ಟಪಟ್ಟು ಆಟ ಆಡಿದ್ದಾಳೆ. ಮಂಜುವಿನ ಮೇಲೆ ನಂಬಿಕೆ ಇಟ್ಟುಕೊಂಡು ಮಂಜು ಟೀಮ್ ಸೇರಿಕೊಂಡಳು, ಮಂಜು ಹೇಳಿದ್ದಕ್ಕೆ ನಾಮಿನೇಟ್ ಕೂಡ ಆದಳು. ಎರಡು ಬಾರಿ ಭವ್ಯಾ ಇಂದ ಮಂಜು ಟೀಮ್ ಗೆದ್ದರೂ ಕೂಡ, ಭವ್ಯನ ನಾಮಿನೇಷನ್ ನಿಂದ ಪಾರು ಮಾಡಲಿಲ್ಲ, ಕ್ಯಾಪ್ಟನ್ ಗೆ ಕೂಡ ಸೆಲೆಕ್ಟ್ ಮಾಡಲಿಲ್ಲ, ಉತ್ತಮ ಕೂಡ ಭವ್ಯಾಗೆ ಕೊಡಲಿಲ್ಲ ಮಂಜು. ಒಟ್ಟಿನಲ್ಲಿ ಭವ್ಯಾಗೆ ಮಂಜು ತುಂಬಾ ಮೋಸ ಮಾಡಿದ ಹಾಗೆ ಅನಿಸ್ತು ಎಂದು ಮೆಲೆನಾಡ ಹೆಣ್ಣು ಎಂಬ ಪೇಸ್ಬುಕ್ ಖಾತೆಯಿಂದ ಕಾಮೆಂಟ್ ಬಂದಿದೆ. ಹೀಗೆ ಇನ್ನೂ ಹಲವರು ಭವ್ಯಾ ಅವರ ಪರವಾಗಿ ಕೆಲವರು ಕಾಮೆಂಟ್ ಮಾಡಿದ್ದಾರೆ. ಈ ಬಾರಿ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಭವ್ಯಾ ಅವರಿಗೆ ಸಿಗುವ ಸಾಧ್ಯತೆ ಇದೆ.

Whats_app_banner