Bigg Boss Kannada 11: ಆಟಕ್ಕಿಂತ ಗಲಾಟೆಯೇ ಜಾಸ್ತಿ; ಬಿಗ್‌ ಬಾಸ್‌ ಕೊಟ್ಟ ಟಾಸ್ಕ್‌ನಲ್ಲೂ ಫೈಟ್‌ - ಭವ್ಯಾ ಗೌಡ ಕೋಪಕ್ಕೆ ಕಾರಣ ತ್ರಿವಿಕ್ರಂ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಆಟಕ್ಕಿಂತ ಗಲಾಟೆಯೇ ಜಾಸ್ತಿ; ಬಿಗ್‌ ಬಾಸ್‌ ಕೊಟ್ಟ ಟಾಸ್ಕ್‌ನಲ್ಲೂ ಫೈಟ್‌ - ಭವ್ಯಾ ಗೌಡ ಕೋಪಕ್ಕೆ ಕಾರಣ ತ್ರಿವಿಕ್ರಂ

Bigg Boss Kannada 11: ಆಟಕ್ಕಿಂತ ಗಲಾಟೆಯೇ ಜಾಸ್ತಿ; ಬಿಗ್‌ ಬಾಸ್‌ ಕೊಟ್ಟ ಟಾಸ್ಕ್‌ನಲ್ಲೂ ಫೈಟ್‌ - ಭವ್ಯಾ ಗೌಡ ಕೋಪಕ್ಕೆ ಕಾರಣ ತ್ರಿವಿಕ್ರಂ

Bigg Boss Kannada 11: ಕನ್ನಡ ಬಿಗ್‌ ಬಾಸ್‌ ಸೀಸನ್ 11ರ ಕ್ಯಾಪ್ಟನ್ಸಿ ಟಾಸ್ಕ್‌ ಆಡುವಾಗ ಆಟಕ್ಕಿಂತ ಜಗಳವೇ ಹೆಚ್ಚಾಗಿದೆ. ಒಮ್ಮೆ ಶಿಶಿರ್ ಮತ್ತು ಉಗ್ರಂ ಮಂಜು ನಡುವೆ ಜಗಳ. ಈಗ ಭವ್ಯಾ ಗೌಡ ಹಾಗೂ ತ್ರಿವಿಕ್ರಂ ನಡುವೆ ಜಗಳ ಆರಂಭವಾಗಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಆಟಕ್ಕಿಂತ ಗಲಾಟೆಯೇ ಜಾಸ್ತಿ
ಬಿಗ್‌ ಬಾಸ್‌ ಮನೆಯಲ್ಲಿ ಆಟಕ್ಕಿಂತ ಗಲಾಟೆಯೇ ಜಾಸ್ತಿ

ಕನ್ನಡ ಬಿಗ್‌ ಬಾಸ್‌ ಸೀಸನ್ 11ರ ಕ್ಯಾಪ್ಟನ್ಸಿ ಟಾಸ್ಕ್‌ ಆಡುವಾಗ ಹಲವಾರು ರೀತಿಯ ವಾದ ವಿವಾದಗಳು ಆದವು. ಆದರೆ ಆಟ ಆಡುವಾಗ ವಿಕ್ರಂ ಮಾಡಿದ್ದು ತಪ್ಪು ಎಂದು ಹಲವರು ಹೇಳುತ್ತಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ ಆಟದಲ್ಲಿ ಸ್ಪರ್ಧಿಗಳು ಗಡಿಯಾರದ ಮುಳ್ಳನ್ನು ಹಿಡಿದುಕೊಂಡು ಸುತ್ತಬೇಕು. ಯಾರು ಹದಿನೇಳು ನಿಮಿಷವನ್ನು ಸರಿಯಾಗಿ ಸೂಚಿಸುತ್ತಾರೋ ಅವರೇ ಈ ಆಟದಲ್ಲಿ ಗೆದ್ದಂತೆ. ಅಥವಾ ಯಾರು ಆ ಸಂಖ್ಯೆಗೆ ಸಮೀಪ ಇರುತ್ತಾರೋ ಅವರಿಗೆ ಈ ಬಾರಿಯ ಕ್ಯಾಪ್ಟನ್ಸಿ ಪಟ್ಟ ಎಂದಾಗಿರುತ್ತದೆ. ಅದೇ ರೀತಿ ಆಟ ಆಡುವ ಸಮಯದಲ್ಲಿ, ಯಾರು ಯಾರಿಗೆ ಬೇಕಾದರೂ ತಡೆಯೊಡ್ಡಬಹುದು ಆದರೆ ಅವರ ದೇಹವನ್ನು ಮುಟ್ಟುವಂತಿಲ್ಲ ಎಂದು ಹೇಳಿರುತ್ತಾರೆ.

ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಸ್ಪರ್ಧಿಗಳು ಆಟ ಆಡಲು ಪ್ರಾರಂಭಿಸುತ್ತಾರೆ. ಆಟ ಆಡುತ್ತಾ ಮುಂದೆ ಸಾಗಿದಂತೆ, ಒಬ್ಬರಿಗೊಬ್ಬರು ತಡೆ ಒಡ್ಡುತ್ತಾರೆ. ಈ ರೀತಿ ಮಾಡುವುದರಿಂದ ಆಟ ಆಡುವವರಿಗೆ ತೊಂದರೆ ಆಗುತ್ತಾ ಇರುತ್ತದೆ. ಆದರೆ ಏನೂ ಮಾಡಲು ಸಾಧ್ಯವಿಲ್ಲ ಇದು ಆಟದ ನಿಯಮ ಎಂದುಕೊಂಡು ಎಲ್ಲರೂ ಆಡುತ್ತಾರೆ. ಆದರೆ ಯಾವಾಗ ಇದು ಅತೀವವಾಗಿ ದೇಹಕ್ಕೆ ನೋವುಂಟು ಮಾಡಲು ಆರಂಭಿಸುತ್ತಾರೋ ಆಗ ಎಲ್ಲರಿಗೂ ಕೋಪ ಆರಂಭವಾಗುತ್ತದೆ.

ಕೋಪಗೊಂಡ ಭವ್ಯಾ ಗೌಡ

ಒಂದೇ ಸ್ಪರ್ಧಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ರೀತಿ ಮಾಡಿದರೆ ಆಗೋದಿಲ್ಲ ಎಂದು ಭವ್ಯಾ ಗೌಡ ಹೇಳುತ್ತಾರೆ. ಹೀಗೆ ಆಟ ಆಡುವಾಗ ವಿಕ್ರಂ ಅವರು ತಲೆದಿಂಬನ್ನು ತಂದು ಎಸೆಯುತ್ತಾರೆ. ಅದರಲ್ಲೂ ಅನುಷಾ ಅವರ ಕಾಲಿಗೆ ಟಾರ್ಗೆಟ್ ಮಾಡಿ ಹೊಡೆಯುತ್ತಾರೆ. ಯಾರಾದರೂ ನಡೆಯುವ ಸಂದರ್ಭದಲ್ಲಿ ಅವರ ಕಾಲಿಗೆ ತಡೆಯುಂಟಾದರೆ ಹೇಗೆ ಬೀಳುತ್ತಾರೋ ಅದೇ ರೀತಿ ಅನುಷಾ ಅವರು ಒಂದೇ ಬಾರಿಗೆ ಬಿದ್ದು ಬಿಡುತ್ತಾರೆ. ಅವರಿಗೆ ತುಂಬಾ ನೋವಾಗುತ್ತದೆ. ಮಹಿಳಾ ಸ್ಪರ್ಧಿಗಳು ಅವರನ್ನು ನೆಲಕ್ಕೆ ಮಲಗಿಸಿ ಅವರ ನೋವನ್ನು ವಿಚಾರಿಸುತ್ತಾರೆ. ಅನುಷಾ ಅಳುತ್ತಾ ಇರುತ್ತಾರೆ.

ಇಷ್ಟೆಲ್ಲ ಆದ ನಂತರ ಮನೆಯ ಲಿವಿಂಗ್ ಏರಿಯಾದಲ್ಲಿ ಎಲ್ಲರೂ ಕೂತು ಆಟದ ಬಗ್ಗೆ ಮಾತುಕತೆ ಮಾಡುತ್ತಾರೆ. ಯಾಕೆ ಈ ರೀತಿ ಮಾಡ್ತೀರಾ? ಒಬ್ಬರನ್ನೇ ಪದೇ ಪದೇ ಟಾರ್ಗೆಟ್ ಮಾಡಿದ್ರೆ ಆಡೋದು ಹೇಗೆ ಎಂದು ಭವ್ಯಾ ಗೌಡ ಪ್ರಶ್ನೆ ಮಾಡ್ತಾರೆ. ಆಗ ವಿಕ್ರಂ ಇಲ್ಲಿ ಟಾರ್ಗೆಟ್ ಮಾಡಿ ಹೊಡೆಯುವುದೇ ಆಟ ಎಂದು ತ್ರಿವಿಕ್ರಂ ಹೇಳುತ್ತಾರೆ. ಇದರಿಂದ ಕೋಪಗೊಂಡ ಭ್ಯವ್ಯಾ ಗೌಡ ಅಲ್ಲಿಂದ ಎದ್ದು ಹೋಗುತ್ತಾರೆ. ಈ ಹಿಂದೆ ಇದೇ ಆಟದಲ್ಲಿ ಉಗ್ರಂ ಮಂಜು ಹಾಗೂ ಶಿಶಿರ್‌ಗೂ ಇದೇ ರೀತಿ ಮನಸ್ಥಾಪ ಆಗಿತ್ತು.

ಶಿಶರ್ ಮತ್ತು ಉಗ್ರಂ ಮಂಜು

ಒಬ್ಬರಿಗೊಬ್ಬರು ಪರಸ್ಫರ ಹೊಡೆದಾಡಿಕೊಂಡು ಬೈದುಕೊಂಡಿದ್ದರು. ಉಗ್ರಂ ಮಂಜು ಕೂಡ ಶಿಶಿರ್ ಆಟವನ್ನು ಹಾಳು ಮಾಡಬೇಕು ಎಂದೇ ಪ್ರಯತ್ನ ಮಾಡಿದ್ದರು. ಈ ರೀತಿ ಮಾಡಲು ಬಿಗ್‌ ಬಾಸ್‌ ಅನುಮತಿ ಕೂಡ ಇತ್ತು. ಆದರೆ ಆಟಕ್ಕೆ ತೊಂದರೆ ಉಂಟು ಮಾಡುವಾಗ ಸ್ಪರ್ಧಿಗಳಿಗೆ ನೋವಾಗಬಾರದಿತ್ತು. ಉಗ್ರಂ ಮಂಜು ನೋವಾಗುವಂತೆ ನೆಲವರೆಸುವ ಸ್ಟಿಕ್ ಬಳಸಿಕೊಂಡು ನೋವುಂಟು ಮಾಡಿದ್ದಾರೆ ಎಂದು ಶಿಶಿರ್ ಹೇಳುತ್ತಿದ್ದಾರೆ. ಅವರ ಕೈಗೆ ಗಾಯವಾಗಿದೆ. ಇನ್ನು ಇದಾದ ನಂತರ ಶಿಬಶಿರ್ ಕೋಪ ಮಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಬೈದುಕೊಂಡಿದ್ದಾರೆ.

Whats_app_banner