Bigg Boss Kannada: ಬಿಗ್‌ ಬಾಸ್‌ ಮನೆಯಲ್ಲಿ ಕೊರಗಜ್ಜನ ಮೊರೆ ಹೋದ ಚೈತ್ರಾ ಕುಂದಾಪುರ; ಕೊನೆಗೂ ಸಿಕ್ಕಿತು ಕಳೆದುಕೊಂಡ ಉಂಗುರ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ಬಿಗ್‌ ಬಾಸ್‌ ಮನೆಯಲ್ಲಿ ಕೊರಗಜ್ಜನ ಮೊರೆ ಹೋದ ಚೈತ್ರಾ ಕುಂದಾಪುರ; ಕೊನೆಗೂ ಸಿಕ್ಕಿತು ಕಳೆದುಕೊಂಡ ಉಂಗುರ

Bigg Boss Kannada: ಬಿಗ್‌ ಬಾಸ್‌ ಮನೆಯಲ್ಲಿ ಕೊರಗಜ್ಜನ ಮೊರೆ ಹೋದ ಚೈತ್ರಾ ಕುಂದಾಪುರ; ಕೊನೆಗೂ ಸಿಕ್ಕಿತು ಕಳೆದುಕೊಂಡ ಉಂಗುರ

ಬಿಗ್ ಬಾಸ್‌ ಮನೆಯಲ್ಲಿ ಚೈತ್ರಾ ಕುಂದಾಪುರ ಟಾಸ್ಕ್‌ ಸಮಯದಲ್ಲಿ ತಮ್ಮ ಕೈಗಿದ್ದ ಉಂಗುರವನ್ನು ಕಳೆದುಕೊಳ್ಳುತ್ತಾರೆ. ಇದು ನನ್ನ ಜೀವನದಲ್ಲಿ ತುಂಬಾ ಮುಖ್ಯವಾದ ಉಂಗುರ ಎಂದು ಹೇಳುತ್ತಾರೆ. ನಂತರ ಉಂಗುರ ಸಿಕ್ಕಿದ ಬಳಿಕೆ ಕೊರಗಜ್ಜನ ಹೆಸರು ಹೇಳಿ ಧನ್ಯವಾದ ತಿಳಿಸಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಕೊರಗಜ್ಜನ ಮೊರೆ ಹೋದ ಚೈತ್ರಾ ಕುಂದಾಪುರ
ಬಿಗ್‌ ಬಾಸ್‌ ಮನೆಯಲ್ಲಿ ಕೊರಗಜ್ಜನ ಮೊರೆ ಹೋದ ಚೈತ್ರಾ ಕುಂದಾಪುರ

ಬಿಗ್ ಬಾಸ್‌ ಮನೆಯಲ್ಲಿ ಟಾಸ್ಕ್‌ ಆಡುವ ವೇಳೆ ಚೈತ್ರಾ ಕುಂದಾಪುರ ಅವರು ತಮ್ಮ ಉಂಗುರವನ್ನು ಕಳೆದುಕೊಂಡಿರುತ್ತಾರೆ. ಆದರೆ ಆ ಉಂಗುರ ಅವರಿಗೆ ತುಂಬಾ ಮುಖ್ಯವಾದ ಉಂಗುರ ಎಂದು ಅವರು ಹೇಳಿಕೊಂಡಿದ್ದಾರೆ. ಆಟ ಆಡುವ ಸಂದರ್ಭದಲ್ಲಿ ಮಣ್ಣಿನಲ್ಲಿ ಉಂಗುರವು ಮಿಸ್‌ ಆಗಿರುತ್ತದೆ. ತಮಗೆ ಕೊಟ್ಟ ಜಾಗದಲ್ಲಿ ಮಣ್ಣನ್ನು ಸರಿಯಾಗಿ ಜೋಡಿಸಿ ಆ ಮಣ್ಣನ್ನು ಅಥವಾ ಮಣ್ಣಿನಿಂದ ಮಾಡಿದ ಅಕ್ಷರವನ್ನು ಯಾರೂ ಹಾಳು ಮಾಡದಂತೆ ನೋಡಿಕೊಳ್ಳುವುದು ಆಟದ ನಿಯಮವಾಗಿರುತ್ತದೆ.

ಆ ಕಾರಣದಿಂದ ಎಲ್ಲರೂ ತುಂಬಾ ಎಚ್ಚರಿಕೆಯಿಂದ ತಮಗೆ ನೀಡಿದ ಜಾಗವನ್ನು ಮತ್ತು ಆ ಜಾಗದಲ್ಲಿ ಬರೆಯಲಾಗಿದ್ದ ಮಣ್ಣಿನ ಅಕ್ಷರವನ್ನು ಕಾಪಾಡುವುದರಲ್ಲಿ ನಿರತಾಗಿರುತ್ತಾರೆ. ಇನ್ನು ಚೈತ್ರಾ ಕುಂದಾಪುರ ಅವರೂ ಸಹ ಅದನ್ನೇ ಮಾಡುತ್ತಿರುತ್ತಾರೆ. ಆದರೆ ಮಣ್ಣಿನಲ್ಲಿ ಹೆಚ್ಚಿನ ಸಮಯ ಕಾಲ ಕಳೆಯ ಬೇಕಾದ ಸಂದರ್ಭ ಇರುತ್ತದೆ. ಕಿತ್ತಾಟ ನಡೆಯುತ್ತದೆ. ಒಬ್ಬರನ್ನೊಬ್ಬರು ಎಳೆದಾಡುತ್ತಾರೆ. ಹೀಗೆಲ್ಲ ಇರುವಾಗ ಮುಂದೇನಾಗುತ್ತದೆ ಎಂದರೆ ಚೈತ್ರಾ ಕುಂದಾಪುರ ಅವರ ಉಂಗುರ ಕಾಣೆಯಾಗುತ್ತದೆ.

ಆದರೆ ಆ ಹಸಿ ಮಣ್ಣಿನಲ್ಲಿ ಉಂಗುರ ಹುಡುಕುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ ಅವರು ತಮ್ಮ ಪ್ರಯತ್ನವನ್ನು ಬಿಡಲಿಲ್ಲ. ಇದು ತನಗೆ ತುಂಬಾ ಮುಖ್ಯವಾದ ಉಂಗುರ ಎಂದು ಹೇಳಿಕೊಂಡಿದ್ದರು. ನಂತರ ಕೆಲವರು ಉಂಗುರ ಹುಡುಕಲು ಸಹಾಯ ಮಾಡಿದರು. ಅವರು ಮನದಲ್ಲಿ ದೇವರನ್ನು ಬೇಡಿಕೊಳ್ಳುತ್ತಿದ್ದರು. ಕೊನೆಗೂ ಉಂಗುರ ಸಿಕ್ಕಿತ್ತು. ಉಂಗುರ ಸಿಕ್ಕಿದ ನಂತರ ಕೊರಗಜ್ಜನನ್ನು ನೆನೆದು ಖುಷಿ ಪಟ್ಟಿದ್ದಾರೆ.

ದಕ್ಷಿಣ ಕನ್ನಡ ಭಾಗದಲ್ಲಿ ಅಪಾರ ಜನರು ದೈವವನ್ನು ನಂಬುತ್ತಾರೆ. ಅದರಲ್ಲೂ ಕೊರಗಜ್ಜನನ್ನು ಬೇಡಿಕೊಳ್ಳುವವರು ಹಾಗೂ ಕೊರಗಜ್ಜನನ್ನು ನಂಬುವ ಸಾಕಷ್ಟು ಜನರಿದ್ದಾರೆ. ಚೈತ್ರಾ ಕುಂದಾಪುರ ಅವರೂ ಸಹ ಅದೇ ರೀತಿ ತುಂಬಾ ಭಕ್ತಿಯಿಂದ ಬೇಡಿಕೊಂಡಿದ್ದಾರೆ. ನಂಬಿದ ದೈವ ಕೈ ಬಿಡುವುದಿಲ್ಲ ಎಂಬುದು ಸಾಬೀತಾಗಿದೆ.

ಶಿಶಿರ್ ಜೊತೆ ಜೋಡಿಯಾಗಿದ್ದ ಚೈತ್ರಾ ಕುಂದಾಪುರ ನಂತರದಲ್ಲಿ ತ್ರಿವಿಕ್ರಂ ಜೊತೆ ಜೋಡಿಯಾಗಿ ಆಟ ಆಡಿದ್ದಾರೆ. ಇದರಿಂದಾಗಿ ಶಿಶಿರ್ ತುಂಬಾ ಕೋಪಗೊಂಡಿದ್ದಾರೆ. ಚೈತ್ರಾ ಅವರ ವಿರುದ್ಧವಾಗಿ ಮಾತನಾಡಿದ್ದಾರೆ. ಚೈತ್ರಾ ಅವರು ಕಳೆದುಕೊಂಡ ಉಂಗುವರನ್ನು ತ್ರಿವಿಕ್ರಂ ಹುಡುಕಿಕೊಟ್ಟಿದ್ದಾರೆ. ಕೆಸರು ಮಣ್ಣಿನಲ್ಲಿ ಚಿಕ್ಕ ಉಂಗುರವೊಂದನ್ನು ಹುಡುಕುವುದು ಅಷ್ಟು ಸುಲಭದ ವಿಚಾರವಂತೂ ಆಗಿರಿಲ್ಲ. ಆದರೂ ಉಂಗುರ ಸಿಕ್ಕಿದೆ.

Whats_app_banner