Bigg Boss Kannada: ಹನುಮಂತನ ಆಟ ನೋಡಿ ಕಂಗಾಲಾದ ಸ್ಪರ್ಧಿಗಳು; ತ್ರಿವಿಕ್ರಂ ಹೊಡೆತಕ್ಕೆ ಜಾರಿ ಬಿದ್ದ ಧನರಾಜ್
ಬಿಗ್ ಬಾಸ್ ಮನೆಯ ಟಾಸ್ಕ್ ಆದ ನಂತರ ಎಲ್ಲರ ಮನೋಭಾವ ಬದಲಾಗಿದೆ. ಹನುಮಂತ ಆಡಿದ ಆಟ ನೋಡಿ ಹಲವಾರು ಜನ ಕಂಗಾಲಾಗಿದ್ದಾರೆ. ಹೀಗಿರುವಾಗ ಮನೆಯವರ ಅಭಿಪ್ರಾಯ ಯಾವ ರೀತಿ ಬದಲಾಗಿದೆ ಎಂಬುದನ್ನು ನೀವೇ ಗಮನಿಸಿ.
ಹನುಮಂತನ ಆಟ ನೋಡಿ ಎಲ್ಲರೂ ಬೆರಗಾಗಿದ್ದಾರೆ. ಹನುಮಂತ ಯಾರನ್ನೂ ಬಿಡದೆ ಟಾರ್‍ಗೆಟ್ ಮಾಡಿ ಆಟ ಆಡಿದ್ದಾನೆ. ಅದನ್ನು ನೋಡಿ ಎಲ್ಲರೂ ಕಂಗಾಲಾಗಿದ್ದಾರೆ. ಇದೇನಿದು ಹನುಮಂತ ಈ ರೀತಿ ಆಟ ಆಡಿದ್ದಾನೆ ಎಂದು ಆಲೋಚನೆ ಮಾಡುತ್ತಾ ಕೂತಿದ್ದಾರೆ. ಯಾರು ಏನೇ ಆದ್ರೂ ನಾನು ಮಾತ್ರ ಗೆದ್ದೇ ಗೆಲ್ತೀನಿ ಅನ್ನೋತರ ಅವನ ಆಟ ಇತ್ತು. ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಆ ಟಾಸ್ಕ್ ಪ್ರಕಾರ ಎಲ್ಲರೂ ಒಂದು ಸೌರ ಮಂಡಲದ ಸೆಟ್‌ನ ಸುತ್ತ ತಮ್ಮ ಕೈಯ್ಯಲ್ಲಿ ಒಂದು ಗಾಜಿನ ಜಾರ್ ಹಿಡಿದುಕೊಂಡು ಅದರಲ್ಲಿನ ನೀರು ನೆಲಕ್ಕೆ ಚೆಲ್ಲದಂತೆ ನೋಡಿಕೊಳ್ಳುತ್ತಾ ಸುತ್ತಬೇಕಿತ್ತು. ಈ ರೀತಿ ಆಟದಲ್ಲಿ ಯಾರು ವಿನ್ ಆಗ್ತಾರೆ ಎಂದು ನೋಡಲಾಗುತ್ತಿತ್ತು. ಹೀಗಿರುವಾಗ ಸುತ್ತ ಸುತ್ತಲು ಬಿಡದೆ ಇನ್ನೊಬ್ಬರ ಜಾರ್‍ನಲ್ಲಿರುವ ನೀರನ್ನು ಚೆಲ್ಲುವ ಪ್ರಯತ್ನ ಮಾಡಲು ಅನುಮತಿ ನೀಡಲಾಗಿತ್ತು. ಇದೇ ಅವಕಾಶವನ್ನು ಬಳಸಿಕೊಂಡು ಹನುಮಂತ ಅದ್ಭುತವಾಗಿ ಆಟ ಆಡಿದ್ದಾನೆ.
ಹನುಮಂತ ಆಟ ಆಡುತ್ತಿರುವ ಸಂದರ್ಭದಲ್ಲಿ ಇತರ ಎಲ್ಲ ಸ್ಪರ್ಧಿಗಳು ಕೂಡ ಹನುಂತನ ಆಟ ನೋಡಿ ಶಾಕ್ ಆಗಿದ್ದಾರೆ. ಹಾಗಾದರೆ ಆ ರೀತಿ ಏನು ಆಡಿದ್ದಾನೆ ಎಂಬ ಪ್ರಶ್ನೆ ನಿಮೆ ಮೂಡುವುದಾದರೆ ಅದಕ್ಕೆ ಉತ್ತರವನ್ನೂ ನಾವಿಲ್ಲಿ ನೀಡಿದ್ದೇವೆ. ಅವನು ಗೋಲಾಕಾರವಾಗಿ ಸುತ್ತುವ ಸಂದರ್ಭದಲ್ಲಿ ಅವನ ಅಕ್ಕಪಕ್ಕ ಸಿಕ್ಕ ಎಲ್ಲರ ಗಾಜಿನ ಜಾರ್‍ನಲ್ಲಿರುವ ನೀರನ್ನು ಚೆಲ್ಲುವ ಪ್ರಯತ್ನ ಮಾಡಿದ್ದಾನೆ ಮತ್ತು ಆ ಎಲ್ಲ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾನೆ.
ಭವ್ಯಾ ಗೌಡ ಅವರ ಕೈಯ್ಯಲ್ಲಿನ ಜಾರ್ ಒಡೆಯಲು ತುಂಬಾ ಸಲ ಪ್ರಯತ್ನ ಮಾಡಿದ್ದರು. ಆದರೆ ಭವ್ಯಾ ಗೌಡ ತಮ್ಮ ಜಾರ್‍ಅನ್ನು ಬಜಾವ್ ಮಾಡಿದ್ದಾರೆ. ಇನ್ನು ಆಟದಿಂದ ಹೊರಗಡೆ ಇದ್ದ ಅನುಷಾ ಹನುಮಂತನ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಹನುಮಂತ ಅಂತು ಎಲ್ಲರನ್ನು ಟಾರ್ಗೆಟ್ ಮಾಡಿದ್ದಾನೆ ಎಂದು. ಇದನ್ನೆಲ್ಲ ನೋಡುತ್ತಿದ್ದರೆ ಈ ಸೀಸನ್ ವಿನ್ನರ್ ಹನುಮಂತನೇ ಆಗುತ್ತಾನೆ ಎಂದು ಕಲರ್‍ಸ್ ಕನ್ನಡ ಪ್ರೋಮೊಗೆ ಜನ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಹನುಮಂತ ಹಾಗೂ ಧನರಾಜ್ ಅವರ ಸ್ನೇಹದಲ್ಲೂ ಬದಲಾವಣೆ ಆಗುವಂತೆ ಕಾಣುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ಕೊಂಚ ಜೋರಾಗಿಯೇ ನಡೆದಿದೆ. ಹನುಮಂತನ ಮೇಲೆ ಮನೆಮಂದಿಗೆ ಇದ್ದ ಭಾವನೆ ಈಗ ಸಂಪೂರ್ಣ ಬದಲಾದಂತಿದೆ. ಮನೆಯ ಕ್ಯಾಪ್ಟನ್ ಪಟ್ಟ ಅಲಂಕರಿಸುವ ಸಲುವಾಗಿ ಜಿದ್ದಾಜಿದ್ದಿನ ಟಾಸ್ಕ್‌ಗಳಲ್ಲಿ ಎಲ್ಲರೂ ಭಾಗವಹಿಸಿದ್ದಾರೆ. ಅದರಂತೆ ನಾಲ್ಕು ತಂಡಗಳಾಗಿ ಮಾಡಿ, ಒಂದೊಂದು ತಂಡದಲ್ಲಿ ಮೂರು ಸ್ಪರ್ಧಿಗಳಿದ್ದಾರೆ. ಈಗಾಗಲೇ ಬುಧವಾರವೂ ನಿಲ್ಲೆ ನಿಲ್ಲೆ ಕಾವೇರಿ ಟಾಸ್ಕ್ ಸ್ಪರ್ಧಿಗಳ ನಡುವೆ ಕಿಚ್ಚು ಹಚ್ಚಿದೆ. ಮಾತಿನ ಚಕಮಕಿ ನಡೆದಿವೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಇಷ್ಟು ದಿನ ನಾವು ಇದ್ದ ರೀತಿನೆ ಬೇರೆ ಇನ್ನು ಮುಂದೆ ಆಟ ನಡೆಯುವುದೇ ಬೇರೆ ರೀತಿ ಎಂದು ಎಲ್ಲರೂ ಹೇಳಿಕೊಂಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಸ್ಪರ್ಧಿಗಳು ತಮ್ಮ ಆಟದ ಚುರುಕನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದು ಎನಿಸುತ್ತದೆ. ಹೀಗಾದಾಗ ಆಟ ನೋಡುವವರಿಗೆ ಇನ್ನಷ್ಟು ಮಜ ಸಿಗಲಿದೆ.