BBK 11: ವಾರದ ಮಧ್ಯೆ ದಿಢೀರ್ ಶಾಕ್ ನೀಡಿದ ಬಿಗ್ ಬಾಸ್; ದೊಡ್ಮನೆಯಿಂದ ಔಟಾದ್ರ ಲಾಯರ್ ಜಗದೀಶ್, ರಂಜಿತ್?
ಬಿಗ್ ಬಾಸ್ ಸೀಸನ್ 11: ವಾರದ ಮಧ್ಯದಲ್ಲೇ ಎಲಿಮಿನೇಷನ್! ಲಾಯರ್ ಜಗದೀಶ್ ಮತ್ತು ರಂಜಿತ್ ಇಬ್ಬರನ್ನೂ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವು ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11ರಲ್ಲಿ ಯಾರೂ ಬಿಗ್ ಬಾಸ್ ಮಾತು ಕೇಳುತ್ತಿಲ್ಲ. ಬಿಗ್ ಬಾಸ್‌ಗೆ ಸ್ಪರ್ಧಿಗಳನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಿಗ್ ಬಾಸ್ ಮಾತಾಡುವುದನ್ನೇ ನಿಲ್ಲಿಸಿದ್ದರು. ಆದರೆ ಇದೀಗ ಬಿಗ್ ಬಾಸ್ ಮನೆಯಲ್ಲಿ ದಿನೇ ದಿನೇ ಜಗಳ ನಡೆಯುತ್ತಿದೆ. ಬಿಗ್ ಬಾಸ್ ಮಾತನಾಡುತ್ತಿರುವ ಸಂದರ್ಭದಲ್ಲೇ ಬೇರೆ ರೀತಿಯ ವರ್ತನೆಗಳು ಮನೆಯಲ್ಲಿ ನಡೆಯುತ್ತಿದೆ. ಅಷ್ಟೇ ಅಲ್ಲದೆ ಇಂದು ಶಿಶಿರ್ ಎಲಿಮಿನೇಟ್ ಮಾಡುವ ಸಮಯದಲ್ಲಿ ಮತ್ತೆ ಜಗಳ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಅವರ ಹತ್ತಿರ ಯಾರೂ ಅಷ್ಟಾಗಿ ಮಾತಾಡುತ್ತಿರಲಿಲ್ಲ. ಆದರೆ ಅವರು ಮಾತ್ರ ತಮಾಷೆ ಮಾಡುತ್ತ ಎಲ್ಲರನ್ನೂ ಮಾತನಾಡಿಸುವ ಪ್ರಯತ್ನ ಮಾಡುತ್ತಿದ್ದರು. ಅವರ ಅಭಿಪ್ರಾಯವನ್ನು ತಿಳಿಸುವ ರೀತಿ ಮನೆಯ ಇತರರಿಗೆ ಇಷ್ಟ ಆಗುತ್ತಿರಲಿಲ್ಲ. ಆ ಕಾರಣಕ್ಕಾಗಿ ಕೆಲವರು ಜಗದೀಶ್ ಅವರ ಮೇಲೆ ವಾದ ಮಾಡುತ್ತಾ ತೀರಾ ಹತ್ತಿರ ಬಂದು ನಿಂತು. ಇನ್ನೇನು ಹೊಡೆದಾಟವೇ ಆಗುತ್ತದೆ ಎನ್ನುವ ಮಟ್ಟಿಗೆ ಜಗಳ ಮಾಡಿಕೊಂಡಿದ್ದರು.
ಅವರು ಜಗಳ ಮಾಡುತ್ತಿರುವ ಸಂದರ್ಭದಲ್ಲಿ ಬಿಡಿಸಲು ಪ್ರಯತ್ನಿಸಿದರೂ ಸಹ, ಉಗ್ರಂ ಮಂಜು ಹಾಗೂ ರಂಜಿತ್ ಮತ್ತು ತ್ರಿವಿಕ್ರಮ್ ದಾಳಿ ಮಾಡಲು ಮುಂದಾದವರಂತೆ ಕಾಣುತ್ತಿದ್ದರು. ಮನೆಯ ಎಲ್ಲ ಸದಸ್ಯರಿಗೂ ಇದರಿಂದ ತುಂಬಾ ಭಯವಾಗಿದೆ.
ಈ ವಿಡಿಯೋದಲ್ಲಿ ಬಿಗ್ ಬಾಸ್ ಕೋಪ ಮಾಡಿಕೊಂಡು ಎಲ್ಲರಿಗೂ ಬೈಯ್ಯುವುದನ್ನು ನೀವು ಕಾಣಬಹುದು. ಮನೆಯಲ್ಲಿ ಎಷ್ಟೇ ಸಮಸ್ಯೆ ಆದರೂ ಆ ಸ್ಥಳಕ್ಕೆ ಬಂದು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲದಿದ್ದರೂ ಈ ಕ್ಷಣಕ್ಕೆ ಮಾತಿನಲ್ಲೇ ಹಿಡಿತ ಸಾಧಿಸಿದ್ದಾರೆ.
ಬಿಗ್ ಬಾಸ್ ಕೂಡ ಇವರ ವರ್ತನೆಯಿಂದ ರೋಸಿ ಹೋಗಿದ್ದರು. ಈಗ ಸಾಮಾಜಿಕ ಜಾಲತಾಣಗಳಲ್ಲಿ ರಂಜಿತ್ ಮತ್ತು ಲಾಯರ್ ಜಗದೀಶ್ ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇಂದು ರಿಲೀಸ್ ಆದ ಪ್ರೋಮೋದಲ್ಲಿ ಬಿಗ್ ಬಾಸ್ ವಾರ್ನಿಂಗ್ ಮಾಡಿರುವ ಸಮಯದಲ್ಲೇ ಈ ರೀತಿಯಾಗಿ ಒಬ್ಬರು ಫೋಟೋ ಹಂಚಿಕೊಂಡಿದ್ದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಇದು ಇಂದೇ ತೆಗದ ಫೋಟೋ ಎಂದು ರಾಜುರಾಜ್ ಎಂಬ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ.
ಏನಾದ್ರೂ ರಿಪ್ಲೈ ಮಾಡಿ.. ಲಾಯರ್ ಜಗದೀಶ್ ಹೊರಬಂದ್ರಾ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಬಿಗ್ ಬಾಸ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.