Bigg Boss Kannada: ಧರ್ಮ ನಡವಳಿಕೆಯಿಂದ ಬೇಸರಗೊಂಡ ಅನುಷಾ; ಲವ್ ಬರ್ಡ್ಸ್ ಮಧ್ಯೆ ಇದೇನಾಯ್ತು?
Bigg Boss Kannada 11: ಯಾವಾಗಲು ಬಿಗ್ ಬಾಸ್ ಮನೆಯಲ್ಲಿ ಅನ್ಯೂನ್ಯವಾಗಿ ಇರ್ತಾ ಇದ್ದ ಧರ್ಮ ಹಾಗೂ ಅನುಷಾ ಇವರಿಬ್ಬರ ನಡುವೆ ಅಸಮಾಧಾನ ಉಂಟಾಗಿದೆ. ಬಿಗ್ ಬಾಸ್ ಮನೆಯ ಕ್ಯಾಪ್ಟನ್ಸಿ ಟಾಸ್ಕ್ ಆಡುವಾಗ ಆದ ಒಂದು ಸಣ್ಣ ಬದಲಾವಣೆ ಇದಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಧರ್ಮ ಹಾಗೂ ಅನುಷಾ ಅವರನ್ನು ಕಂಡರೆ ಎಲ್ಲರೂ ಇವರಿಬ್ಬರು ಪ್ರಣಯ ಪಕ್ಷಿಗಳು ಎಂದೇ ಅಂದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಕಿಚ್ಚನ ಶನಿವಾರದ ಪಂಚಾಯ್ತಿಯಲ್ಲಿ ಕೂಡ ಐಶ್ವರ್ಯ ಅವರ ಹತ್ತಿರ ನೀವು ಹೆಚ್ಚಾಗಿ ಸಮಯ ಕಳೆಯುವ ಬದಲು ಎಲ್ಲರ ಜೊತೆ ಮಿಂಗಲ್ ಆಗಿ, ಮನೆಯಲ್ಲಿ ಬೇರೆ ಸದಸ್ಯರೂ ಇದ್ದಾರೆ ಎಂದು ಹೇಳಿದ್ದರು. ಇನ್ನು ಒಬ್ಬರನ್ನು ಇನ್ನೊಬ್ಬರು ಕಾಳಜಿ ಮಾಡುವುದನ್ನು ನೋಡಿ ವೀಕ್ಷಕರೂ ಕೂಡ ಇವರಿಬ್ಬರ ನಡುವೆ ಏನೋ ಸಂಬಂಧ ಇದೆ ಎಂದು ಹೇಳುತ್ತಿದ್ದರು.
ಇನ್ನು ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಇರುತ್ತದೆ. ಆ ಟಾಸ್ಕ್‌ನಲ್ಲಿ ಎಲ್ಲರೂ ತಾವೇ ಗೆಲ್ಲಬೇಕು ಎಂದುಕೊಂಡು ಆಟ ಆಡುತ್ತಾ ಇರುತ್ತಾರೆ. ಆದರೆ ಆಟಕ್ಕೂ ಮುನ್ನ ಕೆಲವರು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಯಾರ ಭಾವಚಿತ್ರವನ್ನು ಯಾರು ಹೊರಗಡೆ ತರಬೇಕು ಎಂದು ಮಾತಾಗಿರುತ್ತದೆ. ಆ ಪ್ರಕಾರ ಆಟ ನೆಡೆಯುವುದಿಲ್ಲ. ಚೈತ್ರಾ ಹಾಗೂ ಧರ್ಮ ಅವರ ಬಳಿ ನೀವು ನನ್ನ ಭಾವಚಿತ್ರ ಇರುವ ಪೆಟ್ಟಿಗೆಯನ್ನು ಹೊರಗೆ ತನ್ನಿ, ನಾನು ನಿಮ್ಮ ಭಾವಚಿತ್ರದ ಪೆಟ್ಟಿಗೆ ತರುತ್ತೇನೆ ಎಂದು ಅವರು ಮೊದಲು ಮಾತಾಡಿಕೊಂಡಿದ್ದರಂತೆ. ಆದರೆ ಕೊನೆ ಘಳಿಗೆಯಲ್ಲಿ ಆ ನಿರ್ಧಾರ ಬದಲಾಗುತ್ತದೆ. ಈ ನಿರ್ಧಾರ ಅನುಷಾ ಅವರಿಗೆ ಗೊತ್ತಾಗಿರುವುದಿಲ್ಲ.
ಆ ನಿರ್ಧಾರ ಬದಲಾದ ವಿಷಯವೇ ಅನುಷಾ ಅವರಿಗೆ ತಿಳಿದಿರುವುದಿಲ್ಲ. ಹಾಗಾಗಿ ಅವರು ತಮ್ಮ ಕೆಲಸವನ್ನು ತಾವು ಮಾಡುತ್ತಾರೆ. ಆದರೆ ಅವರ ಭಾವಚಿತ್ರ ಮಾತ್ರ ಹೊರಗಡೆ ಬರೋದಿಲ್ಲ, ಅದನ್ನು ನೆನೆಸಿಕೊಂಡು ಅವರಿಗೆ ತುಂಬಾ ಬೇಸರ ಆಗುತ್ತದೆ.
ಆಗ ಧರ್ಮ ಅವರೂ ಸಹ ನನಗೆ ಮೋಸ ಮಾಡಿದ್ರೂ ನನ್ನ ಭಾವಚಿತ್ರ ತರಲಿಲ್ಲ. ಆ ಕಾರಣ ನನಗೆ ಅವರ ಮೇಲೆ ಅಸಮಾಧಾನ ಇದೆ ಎಂದು ಅವರು ಹೇಳಿಕೊಂಡಿದ್ದಾರೆ. ಇನ್ನು ಚೈತ್ರಾ ಕುಂದಾಪುರ ಅವರೂ ಸಹ ಇದೇ ರೀತಿ ಮಾಡಿದ್ರೂ ಹಾಗಾಗಿ ನನಗೆ ಅವರ ಮೇಲೂ ಬೇಸರ ಇದೆ ಎಂದು ಕಿಚ್ಚ ಸುದೀಪ್ ಅವರ ಹತ್ತಿರ ಹೇಳುತ್ತಾರೆ.
ಈ ಆಟದಲ್ಲಿ ಕ್ಯಾಪ್ಟನ್ ಆಗಿದ್ದು ಹನುಮಂತ
ಹನುಮಂತ ಅವರು ಕಷ್ಟಪಟ್ಟು ಆಡಿದ್ದಕ್ಕೆ ಅವರು ಕ್ಯಾಪ್ಟನ್ ಆಗ್ತಾರೆ ಎಂದು ಹಲವರು ಹೇಳಿದರೆ. ಇನ್ನು ಕೆಲವರು ಇಲ್ಲ ನಾವು ಮಾಡಿದ ಐಡಿಯಾದಿಂದ ಹನುಮಂತ ಅವರು ಗೆದ್ದಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಆಗ ಕಿಚ್ಚ ಸುದೀಪ್ ಒಂದು ಮಾತು ಹೇಳುತ್ತಾರೆ. ನಾವು ಪರೀಕ್ಷೆ ಬರೆಯುವಾಗ ಯಾವ ರೀತಿ ಬರೆದರೆ ಹೆಚ್ಚು ಅಂಕ ಪಡೆದುಕೊಳ್ಳಲು ಸಾಧ್ಯವಿದೆ ಎಂದು ತಿಳಿದುಕೊಳ್ಳಬೇಕು ಮತ್ತು ಆ ಕುರಿತು ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಇನ್ನೊಬ್ಬರನ್ನು ಯಾವ ರೀತಿ ಫೇಲ್ ಮಾಡಬಹುದು ಎಂದು ನಾವು ಪ್ರಯತ್ನ ಪಟ್ಟರೆ ನಮ್ಮ ಅಂಕವೇ ಕೊನೆಗೆ ನಮಗೆ ಸಿಗೋದಿಲ್ಲ ಎಂದು ಹೇಳುತ್ತಾರೆ.
ಇನ್ನು ಹನುಮಂತನಿಗೆ ಕಿಚ್ಚ ಚಪ್ಪಾಳೆ ಸಿಕ್ಕ ತಕ್ಷಣ ಸುದೀಪ್ ಇನ್ನೊಂದು ಮಾತು ಕೇಳುತ್ತಾರೆ. ಹನುಮಂತ ನಿಮಗೆ ಕಿಚ್ಚನ ಚಪ್ಪಾಳೆ ಅಂದ್ರೆ ಏನು ಅಂತ ಗೊತ್ತಿದ್ಯಾ? ಎಂದು ಆಗ ಹನುಮಂತ ಹೌದು ನನಗೆ ಗೊತ್ತಿದೆ ಎಂದು ಹೇಳುತ್ತಾ, ಈ ವಾರ ಯಾರು ಚೆನ್ನಾಗಿ ಆಟ ಆಡಿದ್ದಾರೋ ಅವರಿಗೆ ನೀವು ಕೊಡುವ ಚಪ್ಪಾಳೆ ಇದು ಎಂದು ಹೇಳುತ್ತಾರೆ. ಅದಾದ ನಂತರದಲ್ಲಿ ಅವರನ್ನು ಸ್ಟೋರ್ ರೂಮ್‌ಗೆ ಕಳಿಸುತ್ತಾರೆ. ಕಳಿಸಿ ಏನಿದೆ ಎಂದು ನೋಡಿದಾಗ ವಾಲ್ ಹ್ಯಾಂಗಿಂಗ್ ಫೋಟೋ ಬಂದಿರುತ್ತದೆ. ಅದನ್ನು ತೆಗೆದುಕೊಂಡು ಬರುತ್ತಾರೆ.
ವಿಭಾಗ