ಅರೇ! ಇಷ್ಟು ಬೇಗ ವೈಲ್ಡ್‌ಕಾರ್ಡ್ ಎಂಟ್ರಿನಾ? ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಹನುಮಂತನಿಗೆ ಮೊದಲ ದಿನವೇ ಕ್ಯಾಪ್ಟನ್ ಪಟ್ಟ
Bigg Boss: ಬಿಗ್ ಬಾಸ್ ಮನೆಯ ಹೊಸ ಅಧ್ಯಾಯದಲ್ಲಿ ಹನುಮಂತ ಅವರು ಎಂಟ್ರಿ ಕೊಟ್ಟಿದ್ದಾರೆ. ಇಂದು ರಾತ್ರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ನೀವು ಈ ಎಪಿಸೋಡ್ ವೀಕ್ಷಣೆ ಮಾಡಬಹುದು. ಹನುಮಂತ್ ಅವರು ಈ ವಾರದ ಕ್ಯಾಪ್ಟನ್ ಕೂಡ ಆಗಿದ್ದಾರೆ.

ಬಿಗ್ ಬಾಸ್ ಸ್ಪರ್ಧೆಯಲ್ಲಿ ಒಂದರಿಂದ ಇನ್ನೊಂದು ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ದಿನೇ ದಿನೇ ವೀಕ್ಷಕರಿಗೆ ಹೊಸದೊಂದು ಟ್ವಿಸ್ಟ್ ಸಿಗುತ್ತಿದೆ. ಈಗಾಗಲೇ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಸರಿಗಮಪ ಖ್ಯಾತಿಯ ಹಾಡುಗಾರ ಹನುಮಂತ ಬಿಗ್ ಬಾಸ್ ಮನೆ ಸೇರಿದ್ದಾರೆ. ಬಿಗ್ ಬಾಸ್ ಮನೆಗೆ ಹನುಮಂತ ಎಂಟ್ರಿ ಕೊಟ್ಟಿರುವುದನ್ನು ನೋಡಿ ಹಲವರಿಗೆ ಅನುಮಾನ ಆರಂಭವಾಗಿದೆ. ಇವರು ಬಂದಿರುವುದು ಅತಿಥಿಯಾಗೋ ಅಥವಾ ಈ ಮನೆಯ ಸ್ಪರ್ಧಿಯಾಗೋ ಎಂದು ಹಲವರು ಕಂಗಾಲಾಗಿದ್ದಾರೆ.
ಬಿಗ್ ಬಾಸ್ ಮನೆಗೆ ಹನುಮಂತ ಎಂಟ್ರಿ ಕೊಡುವ ಸಂದರ್ಭದಲ್ಲಿ ಒಂದು ಸಾಂಗ್ ಪ್ಲೇ ಆಗುತ್ತದೆ. ಆಗ ಕೆಲಸದಲ್ಲಿ ನಿರತರಾದ ಸ್ಪರ್ಧಿಗಳಿಗೆಲ್ಲ ಒಂದೇ ಸಾರಿ ಶಾಕ್ ಆಗುತ್ತದೆ. ಏನಿದು ಸಾಂಗ್ ಪ್ಲೇ ಆಗುತ್ತಿದೆ ಎಂದು ಎಲ್ಲರೂ ಆಶ್ಚರ್ಯದಿಂದ ಅತ್ತಿಂದಿತ್ತ ನೋಡುತ್ತಾರೆ. ಹುಡುಕಾಡುತ್ತಾರೆ, ನಂತರ ಮುಖ್ಯ ದ್ವಾರದ ಹತ್ತಿರ ಬರುತ್ತಾರೆ. ಅಲ್ಲಿಗೆ ಬಂದಾಗ ಬಾಗಿಲು ಸರಿಯುವುದು ಕಾಣುತ್ತದೆ. ಎಲ್ಲರೂ ಕೂತೂಹಲದ ಕಣ್ಣಿನಿಂದ ನೋಡುತ್ತಿದ್ದರು ಅದೇ ಸಂದರ್ಭದಲ್ಲಿ ಹನುಮಂತ ಅವರು ಮನೆಯೊಳಗಡೆ ಬರುತ್ತಾರೆ.
ಆಗ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಬೆಳ್ಳಿ ಮೂಡಿತೋ, ಕೋಳಿ ಕೂಗಿತೋ ಹಾಡಿಗೆ ನೃತ್ಯ ಮಾಡುತ್ತಾ ಎಲ್ಲರೂ ಮನೆಯ ಹೊರ ಭಾಗಕ್ಕೆ ಬರುತ್ತಾರೆ. ಅಪ್ಪಟ ಹಳ್ಳಿಯ ಪ್ರತಿಭೆ ಆಗಿರುವ ಹನುಮಂತ ಅವರನ್ನು ಕಂಡು ಎಲ್ಲರೂ ಅವರೊಟ್ಟಿಗೆ ಡಾನ್ಸ್ ಮಾಡುತ್ತಾರೆ. ಅದಾದ ನಂತರದಲ್ಲಿ ಎಲ್ಲರೂ ಅವರನ್ನು ಮಾತನಾಡಿಸುತ್ತಾರೆ. ತುಂಬಾ ಕಾಮಿಡಿಯಾಗಿ ಮತ್ತು ಬಹಳ ನೈಜವಾಗಿ ಮಾತನಾಡುತ್ತಾ ಒಳಬರುತ್ತಾರೆ.
ನಂತರ ಅವರಿಗೆ ಊಟ ಬಡಿಸುತ್ತಾರೆ. ಊಟ ಬಡಿಸಿದ ತಕ್ಷಣ ಅವರು ಊಟ ಮಾಡುತ್ತಿರುವ ಸಂದರ್ಭದಲ್ಲಿ ಈ ಮನೆಗೆ ಸ್ವಾಗತ ಎಂದು ಬಿಗ್ ಬಾಸ್ ಹೇಳುತ್ತಾರೆ. ಆಗ ಹನುಮಂತ ಅವರು ನಾನು ಊಟ ಮಾಡುತ್ತಿದ್ದೇನೆ ಈ ಸಂದರ್ಭದಲ್ಲಿ ನೀವು ಏನೇ ಹೇಳಿದರೂ ನನಗೆ ಉತ್ತರ ಕೊಡಲು ತಿಳಿಯುವುದಿಲ್ಲ. ನಾನು ಆನಂತರ ಮಾತಾಡುತ್ತೇನೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿ ಮನೆಯವರೆಲ್ಲ ಮತ್ತೆ ನಗುತ್ತಾರೆ.
ಅದಾದ ನಂತರದಲ್ಲಿ ಧನಂಜಯ್ ಅವರೊಟ್ಟಿಗೆ ಮಾತನಾಡುವುದು ಪ್ರೋಮೋದಲ್ಲಿ ಕಾಣಿಸುತ್ತದೆ. ಅದಾದ ನಂತರದಲ್ಲಿ ಎಲ್ಲರನ್ನೂ ಲಿವಿಂಗ್ ಏರಿಯಾದಲ್ಲಿ ಕೂರಿಸಿ ಮಾತನಾಡುತ್ತಾರೆ. ಅದರಲ್ಲಿ ಘೋಷಣೆ ಮಾಡಿದ ಪ್ರಕಾರ ಹನುಂತ ಅವರು ಈ ವಾರದ ಕ್ಯಾಪ್ಟನ್ ಎಂದು ಹೇಳಲಾಗಿದೆ. ಇದರಿಂದಾಗಿ ಉಳಿದವರಿಗೆಲ್ಲ ಆಶ್ಚರ್ಯ ಆಗುತ್ತದೆ.
