BBK 11: ಜಗದೀಶ್ ಹೊರಗೆ ಕಾಣಿಸುವಂತೆ ಇಲ್ಲ, ಹೆಣ್ಣುಮಕ್ಕಳ ಟೂತ್ ಬ್ರಷ್ ಬಳಸಿ ಟಾಯ್ಲೆಟ್ ಕ್ಲೀನ್ ಮಾಡುತ್ತಿದ್ದರು; ರಂಜಿತ್ ಪ್ರತಿಕ್ರಿಯೆ
ಬಿಗ್ ಬಾಸ್ ಸೀಸನ್ 11ರಿಂದ ಹೊರಬಂದ ರಂಜಿತ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಜಗದೀಶ್ ಮನೆಯೊಳಗಡೆ ಯಾವ ರೀತಿ ನಡೆದುಕೊಳ್ಳುತ್ತಿದ್ದರು ಮತ್ತು ಬಿಗ್ ಬಾಸ್ ಮನೆಯಲ್ಲಿ ಮೂರು ವಾರಗಳಿಂದ ಏನೆಲ್ಲ ನಡೆದಿತ್ತು ಎಂಬುದನ್ನು ಹೇಳಿದ್ದಾರೆ.
ಬಿಗ್ ಬಾಸ್ ಕಪ್ ಗೆಲ್ಲುತ್ತಾರೆ ಎಂದು ಹಲವಾರು ಜನ ನಿರೀಕ್ಷೆ ಇಟ್ಟುಕೊಂಡ ಸ್ಪರ್ಧಿ ರಂಜಿತ್ ಬಿಗ್ ಬಾಸ್ ಮನೆಯಿಂದ ಹಲ್ಲೆ ಆರೋಪ ಹೊತ್ತು ಹೊರಬಂದಿದ್ದಾರೆ. ಹೀಗಿರುವಾಗ ಅವರು ಮತ್ತೆ ಬಿಗ್ ಬಾಸ್ ಸ್ಪರ್ಧೆಗೆ ಬರ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲಿ ಮನೆ ಮಾಡಿತ್ತು. ಕಾರಣ ಅವರು ಇದುವರೆಗೂ ಯಾವ ಮಾಧ್ಯಮಗಳಿಗೂ ತಮ್ಮ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಅವರು ಹೊರಬಂದದಕ್ಕೆ ಸ್ಪಷ್ಟನೆ ನೀಡಿದ್ದಾರೆ.
“ನಾನೇ ಶಾಕ್‌ನಲ್ಲಿದಿನಿ ಎಲ್ಲರೂ ಹೇಳುತ್ತಿರುವ ಹಾಗೆ ನಾನು ಹಲ್ಲೆ ಮಾಡಿಲ್ಲ. ಹಲ್ಲೆ ಯಾವುದೇ ಕಾರಣಕ್ಕೂ ಆಗಿಲ್ಲ. ಒಳಗಡೆ ಇರುವಾಗ ಜಗದೀಶ್ ಅವರೇ ಮಾನಸಿಕವಾಗಿ ಹಲ್ಲೆ ಮಾಡ್ತಾ ಇದ್ರು. ಬೆಳಗಿಂದ ಸಾಯಂಕಾಲದವರೆಗೆ ಅವರು ಆಡುತ್ತಿದ್ದ ಮಾತುಗಳನ್ನು ನಾವೆಲ್ಲ ಸಹಿಸಿಕೊಂಡು ಇರಬೇಕಿತ್ತು” ಎಂದು ಹೇಳಿದ್ದಾರೆ. ಜಗಳ, ನಿಂದನೆ, ಕೆಟ್ಟ ಮಾತು, ಬೈಕೊಂಡು ಓಡಾಡೋದು ಇದೆಲ್ಲವನ್ನೂ ಮಾಡಿದ್ದು ಆ ಮನೆಯಲ್ಲಿ ಜಗದೀಶ್ ಅವರು ಎಂದಿದ್ಧಾರೆ.
ಅವರು ಆ ರೀತಿ ಮಾತನಾಡುವುದು ಹಾಗೂ ಅವರ ವರ್ತನೆಗೆ ಆ ಮನೆಯಲ್ಲಿ ಎಲ್ಲರೂ ಧ್ವನಿ ಎತ್ತಿದರು. ಆದರೆ ನಾನು ಅದನ್ನು ಸಹಿಸಿಕೊಳ್ಳಲಿಲ್ಲ. ಮಹಿಳಾ ಸ್ಪರ್ಧಿಗಳಿಗೆ ಅವರು ಯಾವಾಗಲೂ ನಿಂದನೆ ಮಾಡುತ್ತಿದ್ರು. ಕೆಟ್ಟ ಪದ ಬಳಕೆ ಮಾಡಿ ಮಾತಾಡ್ತಾ ಇದ್ರು. ಹೀಗೆ ಮಾಡ್ತಾ ಅವರ ಮೈಮೇಲೆ ಬೀಳ್ತಾ ಇರುವ ಕಾರಣ ನಾನು ಅವರನ್ನು ತಡೆಯುವ ಪ್ರಯತ್ನ ಮಾಡಿದ್ದೆ. ಕೊನೆಯಲ್ಲಿ ನಾನು ತಳ್ಳಿದ್ದೆ ಬಿಟ್ರೆ ಮತ್ತೇನೂ ಮಾಡಿಲ್ಲ ಎಂದು ಹೇಳಿದ್ದಾರೆ
ಜಗದೀಶ್ ಅವರು ನಮ್ಮನ್ನು ಪ್ರವೋಕ್ ಮಾಡುತ್ತಿದ್ರು. ರಂಜಿತ್ ಎಲ್ಲರ ತರ ಅಲ್ಲ, ನನಗೂ ಅಕ್ಕ ತಂಗಿಯರಿದ್ದಾರೆ. ಅದಕ್ಕಾಗಿ ನೋಡಿಕೊಂಡು ಸುಮ್ಮನಾಗಲಿಲ್ಲ ಎಂದು ಹೇಳಿದ್ದಾರೆ. ನಾನು ಏನು ಮಾಡಿದ್ದೇನೆ ಮತ್ತು ಅಲ್ಲಿ ಏನೇನು ನಡೆದಿದೆ ಎಂದು ಒಂದುವರೆಗೆ ಗಂಟೆಗೆ ಎಡಿಟ್ ಮಾಡುತ್ತಾರೆ ಅಷ್ಟನ್ನೇ ನೀವು ನೋಡಿರುತ್ತೀರಾ. ಆದರೆ ಮನೆಯಲ್ಲಿ ಇಡೀ ದಿನ ಏನಾಗುತ್ತಿತ್ತು ಅನ್ನೋದು ಹೊರ ಪ್ರಪಂಚಕ್ಕೆ ಗೊತ್ತಿಲ್ಲ ಎಂದಿದ್ದಾರೆ. ಆ ಪದ ಬಳಕೆ ಬಂದಾಗ ನಮಗೂ ಟ್ರಿಗರ್ ಆಗುತ್ತದೆ. ಮೂರನೇ ವಾರದವರೆಗೆ ಬರುವಾಗ ನಮಗೆ ಎಷ್ಟು ಟ್ರಿಗರ್ ಆಗಿರಬೇಕು ಯೋಚಿಸಿ.
ನಾನು ಎಲ್ಲೂ ಯಾರ ಬಗ್ಗೆನೂ ಮಾತಾಡಿಲ್ಲ. ಕೊನೆಯಲ್ಲಿ ನಾನು ಬಂದಿದ್ದು, ಯಾವುದೇ ಕ್ಯಾಮರಾ ಮುಂದೆ ಹೋಗಿ ನಾನು ಮಾತಾಡಿಲ್ಲ. ರಂಜಿತ್ ಎಲ್ಲೂ ಕಾಣಿಸಿಕೊಂಡಿಲ್ಲ. ಯಾರಿಗೂ ಟಾಂಟ್ ಮಾಡಿಲ್ಲ. ತಪ್ಪು ನಡೆಯುವಾಗ ವಾಯ್ಸ್ ರೈಸ್ ಮಾಡಿದಿನಿ ಅಷ್ಟೇ ನಾನು ಮಾಡಿದ್ದು ಎಂದಿದ್ಧಾರೆ. ಬೇಕು ಎಂದು ಜಗಳ ಮಾಡಿಲ್ಲ, ಜಗಳ ಆಗುತ್ತಿರುವ ಸಂದರ್ಭದಲ್ಲಿ ತಪ್ಪನ್ನು ತಡೆಯಲು ಮಾತ್ರ ನಾನು ಹೋಗಿದ್ದೇನೆ. ಎಂದಿದ್ದಾರೆ. ಅವನು ಮಾಡಿರುವ ಎಷ್ಟೋ ವಿಷಯಗಳನ್ನು, ಆಡಿರುವ ಮಾತುಗಳನ್ನು ಬಿಗ್ಬಾಸ್ ತೋರಿಸಿಲ್ಲ. “ಅವನು ಹೆಣ್ಣು ಮಕ್ಕಳು ಮೈ ಉಜ್ಜುವ ಮತ್ತು ಹಲ್ಲುಜ್ಜುವ ಬ್ರಷ್ ಬಳಸಿ ಟಾಯ್ಲೆಟ್ ಕ್ಲೀನ್ ಮಾಡುತ್ತಿದ್ದ” ಎಂದಿದ್ಧಾರೆ.
ಇನ್ನು ಲಾಯರ್ ಜಗದೀಶ್ ಅವರ ಆಡಿಯೋ ಪ್ಲೇ ಆಗುತ್ತದೆ. ಆದರೆ ರಂಜಿತ್ ಅವರ ಮಾತು ಎಲ್ಲೂ ಬರೋದಿಲ್ಲ ಎಂದಾಗ ನಾನೂ ಶಾಕಲ್ಲಿದ್ದೇನೆ. ನನಗೂ ಹರ್ಟ್ ಆಗಿದೆ. ಎಲ್ಲವೂ ಆರಂಭವಾಗಿದ್ದೂ ಜಗದೀಶ್ ಅವರಿಂದ ಅದರ ವಿರುದ್ಧವಾಗಿ ನಿಂತಿದ್ದು ನಾನು ಎಂದು ಟಿವಿನೈನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಜನರೇ ನಿರ್ಧಾರ ಮಾಡಬೇಕು. ರಂಜಿತ್‌ಗೆ ಯಾಕೆ ಆಪ್ಶನ್ ನೀಡುತ್ತಿಲ್ಲ ಎಂಬುದನ್ನು ನೀವೇ ನಿರ್ಧಾರ ಮಾಡಬೇಕು ಎಂದಿದ್ದಾರೆ. ಸಹನೆ ಎಲ್ಲೆ ಮೀರಿ ಹೋದಾಗ ರಿಯಾಕ್ಟ್ ಮಾಡಲೇಬೇಕು. ನೀವೆಲ್ಲ ಸಂಪೂರ್ಣ ಸಂಚಿಕೆಯನ್ನು ನೋಡಿಲ್ಲ ಆದರೆ ನಾನು ಮಾಡಿದ್ದು ಸಂಪೂರ್ಣ ತಪ್ಪಲ್ಲ ಎಂದು ಹೇಳಿಕೊಂಡಿದ್ದಾರೆ.