ಕನ್ನಡ ಸುದ್ದಿ / ಮನರಂಜನೆ /
Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 1-10 ಗೆದ್ದವರು ಯಾರು, ರನ್ನರ್ ಅಪ್ ಯಾರಾಗಿದ್ರು? ಇಲ್ಲಿದೆ ಸಂಪೂರ್ಣ ಪಟ್ಟಿ
Bigg Boss Kannada Winners List: ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಕನ್ನಡದ 11ನೇ ಸೀಸನ್‌ನಲ್ಲಿ ಯಾರು ಗೆಲುವು ಪಡೆಯಲಿದ್ದಾರೆ? ಯಾರು ರನ್ನರ್ ಅಪ್ ಆಗಲಿದ್ದಾರೆ ಎಂಬ ಪ್ರಶ್ನೆಗೆ ಸದ್ಯದಲ್ಲಿಯೇ ಉತ್ತರ ದೊರಕಲಿದೆ. ಇದೇ ಸಮಯದಲ್ಲಿ ಈ ಹಿಂದಿನ ಹತ್ತು ಸೀಸನ್‌ಗಳಲ್ಲಿ ಯಾರೆಲ್ಲ ಗೆಲುವು ಪಡೆದಿದ್ದರು? ಯಾರು ರನ್ನರ್ ಅಪ್ ಆಗಿದ್ದರು ಎಂದು ತಿಳಿಯೋಣ.

Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 1-10 ಗೆದ್ದವರು ಯಾರು, ರನ್ನರ್ ಅಪ್ ಯಾರಾಗಿದ್ರು? ಇಲ್ಲಿದೆ ಸಂಪೂರ್ಣ ಪಟ್ಟಿ
Bigg Boss Kannada Winners List: ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 11 ಅಂತಿಮ ಘಟ್ಟದಲ್ಲಿದೆ. ಈ ಸಮಯದಲ್ಲಿ ಯಾರು ವಿನ್ನರ್ ಆಗಿ ಹೊರಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಮೋಕ್ಷಿತಾ ಪೈ, ಹನುಮಂತ, ತ್ರಿವಿಕ್ರಂ, ಮಂಜು, ಭವ್ಯಾ ಹಾಗೂ ರಜತ್ ನಡುವೆ ಯಾರು ಗೆಲ್ಲುತ್ತಾರೆ? ಹನುಮಂತ್ ಗೆಲ್ಲಬಹುದೇ? ಮೋಕ್ಷಿತಾ ಪೈ ಗೆಲ್ಲಬಹುದೇ, ತ್ರಿವಿಕ್ರಮ್ ಅಥವಾ ಮಂಜು ಗೆಲ್ಲಬಹುದೇ, ಭವ್ಯಾಳಿಗೆ ಗೆಲುವಿನ ಕಿರೀಟ ದೊರಕಬಹುದೇ? ಹೀಗೆ ಬಿಗ್‌ಬಾಸ್ ಅಭಿಮಾನಿಗಳು ಉತ್ತರಕ್ಕಾಗಿ ಕಾಯುತ್ತಿರಬಹುದು. ಶನಿವಾರದ ಎಪಿಸೋಡ್‌ನಲ್ಲಿ ಬಿಗ್‌ಬಾಸ್ ಕನ್ನಡ ಮನೆಯಿಂದ ಯಾರು ಹೊರಬೀಳಬಹುದು? ನಾಳೆ ಅಂತಿಮವಾಗಿ ಕಿಚ್ಚ ಸುದೀಪ್ ಯಾರ ಕೈ ಎತ್ತಿ ವಿನ್ನರ್ ಎಂದು ಘೋಷಿಸಬಹುದು ಎಂಬ ಕಾತರ ಎಲ್ಲರಲ್ಲಿಯೂ ಇದೆ.
- ಬಿಗ್‌ಬಾಸ್ ಕನ್ನಡ ಸೀಸನ್ 1: ಬಿಗ್‌ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ 50 ಲಕ್ಷ ರೂಪಾಯಿ ಗೆದ್ದ ಖ್ಯಾತಿ ಕನ್ನಡ ನಟ ವಿಜಯ ರಾಘವೇಂದ್ರ ಅವರದ್ದು. ಈ ಸಂದರ್ಭದಲ್ಲಿ ಅರುಣ್ ಸಾಗರ್ ರನ್ನರ್ ಅಪ್ ಆಗಿದ್ದರು.
- ಬಿಗ್‌ಬಾಸ್ ಕನ್ನಡ ಸೀಸನ್ 2: ಬಿಗ್ ಬಾಸ್ ಕನ್ನಡ ಸೀಸನ್ 2ನಲ್ಲಿ ಅಕುಲ್ ಬಾಲಾಜಿ ವಿನ್ನರ್, ಸೃಜನ್ ಲೋಕೇಶ್ ರನ್ನರ್ ಅಪ್ ಆಗಿದ್ದರು. ಇವರಿಬ್ಬರೂ ಈಗಲೂ ಹಲವು ಕಿರುತೆರೆ ಶೋಗಳಲ್ಲಿ ಜನಪ್ರಿಯತೆ ಪಡೆದಿದ್ದಾರೆ.
- ಬಿಗ್‌ಬಾಸ್ ಕನ್ನಡ ಸೀಸನ್ 3: ಈ ಸೀಸನ್ ತುಂಬಾ ವಿಶೇಷವಾದದ್ದು. ಮೊದಲ ಬಾರಿಗೆ ಮಹಿಳಾ ಸ್ಪರ್ಧಿಯೊಬ್ಬರು ವಿನ್ನರ್ ಆಗಿ ಹೊರಹೊಮ್ಮಿದ್ದರು. ನಟಿ ಶ್ರುತಿ ಈ ಸ್ಪರ್ಧೆಯಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದರು. ಚಂದನ್ ಕುಮಾರ್ ರನ್ನರ್ ಅಪ್ ಸ್ಥಾನ ಪಡೆದರು.
- ಬಿಗ್‌ಬಾಸ್ ಕನ್ನಡ ಸೀಸನ್ 4: ಈ ಶೋ ಯಾರೂ ಕೂಡ ಮರೆಯಲು ಸಾಧ್ಯವಿಲ್ಲ. ಯಾಕೆಂದರೆ, ಅದು ಒಳ್ಳೆ ಹುಡುಗ ಪ್ರಥಮ್‌ನ ಅದ್ಭುತ ಆಟದ ಶೋ ಆಗಿತ್ತು. ಪ್ರಥಮ್ ಗೆಲುವು ಪಡೆದರು. ಈ ಆಟದಲ್ಲಿ ಕಿರಿಕ್ ಕೀರ್ತೀ ರನ್ನರ್ ಅಪ್ ಆಗಿ ಹೊರಹೊಮ್ಮಿದರು.
- ಬಿಗ್‌ಬಾಸ್ ಕನ್ನಡ ಸೀಸನ್ 5: ಕನ್ನಡ ಬಿಗ್‌ಬಾಸ್ 5ನ ಐದರ ಸಂಚಿಕೆಯಲ್ಲಿ ಚಂದನ್ ಶೆಟ್ಟಿ ಗೆಲುವು ಪಡೆದರು. ರಾಪರ್ ಚಂದನ್ ಶೆಟ್ಟಿ ತನ್ನ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇಲ್ಲಿ ಇವರಿಗೆ ನಿವೇದಿತಾ ಗೌಡರ ಪರಿಚಯವಾಗಿತ್ತು. ಇವರು ಬಳಿಕ ಮದುವೆಯಾಗಿದ್ದರು. ಇತ್ತೀಚಿಗೆ ಡಿವೋರ್ಸ್ ಪಡೆದಿದ್ದಾರೆ. ಈ ಶೋನಲ್ಲಿ ದಿವಾಕರ್ ರನ್ನರ್ ಅಪ್ ಆಗಿ ಹೊರಹೊಮ್ಮಿದರು.
- ಬಿಗ್‌ಬಾಸ್ ಕನ್ನಡ ಸೀಸನ್ 6: ಈ ಶೋನಲ್ಲಿ ಶಶಿ ಕುಮಾರ್ ಗೆಲುವು ಪಡೆದಿದ್ದಾರೆ. ನವೀನ್ ಸಜ್ಜು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.ಶಶಿ ಕುಮಾರ್ ಯುವ ಕೃಷಿಕನಾಗಿ ಎಂಟ್ರಿ ನೀಡಿದ್ದರು.
- ಬಿಗ್‌ಬಾಸ್ ಕನ್ನಡ ಸೀಸನ್ 7: ಈ ಶೋನಲ್ಲಿ ಶೈನ್ ಶೆಟ್ಟಿ ಗೆಲುವು ಪಡೆದರು. ಕುರಿ ಪ್ರತಾಪ್ ಅವರು ರನ್ನರ್ ಆಪ್ ಆಗಿ ಹೊರಹೊಮ್ಮಿದ್ದರು.
- ಬಿಗ್ ಬಾಸ್ ಕನ್ನಡ ಸೀಸನ್ 8: ಈ ರಿಯಾಲಿಟಿ ಶೋನಲ್ಲಿ ಮಂಜು ಪಾವಗಡ ಗೆಲುವು ಪಡೆದಿದ್ದರು. ಬೈಕರ್ ಅರವಿಂದ್ ಕೆಪಿ ಅವರು ರನ್ನರ್ ಅಪ್ ಆಗಿದ್ದರು.
- ಬಿಗ್‌ಬಾಸ್ ಕನ್ನಡ ಸೀಸನ್ 9: ಈ ಸಂಚಿಕೆಯಲ್ಲಿ ನಟ ರೂಪೇಶ್ ಶೆಟ್ಟಿ ಗೆಲುವು ಪಡೆದಿದ್ದರು. ರಾಕೇಶ್ ಅಡಿಗ ಅವರು ರನ್ನರ್ ಅಪ್ ಆಗಿದ್ದರು. ಈ ಸಮಯದಲ್ಲಿ ಒಟಿಟಿಯಲ್ಲಿಯೂ ಬಿಗ್‌ಬಾಸ್ ಪ್ರಸಾರವಾಗಿತ್ತು.
- ಬಿಗ್‌ಬಾಸ್ ಕನ್ನಡ ಸೀಸನ್ 10: ಬಿಗ್‌ಬಾಸ್ ಕನ್ನಡ ಹತ್ತರ ಸೀಸನ್‌ನಲ್ಲಿ ಕಾರ್ತಿಕ್ ಮಹೇಶ್ ಗೆಲುವು ಪಡೆದಿದ್ದರು. ಡ್ರೋನ್ ಪ್ರತಾಪ್ ರನ್ನರ್‌ಅಪ್ ಆಗಿದ್ದರು.
- ಬಿಗ್‌ಬಾಸ್ ಕನ್ನಡ ಸೀಸನ್ 11: ಮೋಕ್ಷಿತಾ ಪೈ, ಹನುಮಂತ, ತ್ರಿವಿಕ್ರಂ, ಮಂಜು, ಭವ್ಯಾ ಹಾಗೂ ರಜತ್‌ರಲ್ಲಿ ಯಾರು ವಿನ್ನರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಜನವರಿ 27, 2025ರಂದು ತಿಳಿಯಲಿದೆ.

ಕನ್ನಡ ಚಲನಚಿತ್ರ ಸುದ್ದಿ, ಟಿವಿ ಧಾರಾವಾಹಿಗಳು, ಒಟಿಟಿ, ವೆಬ್ ಸಿರೀಸ್, ಸಿನಿಮಾ ವಿಮರ್ಶೆ, ಸ್ಯಾಂಡಲ್ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್, ಕಾಲಿವುಡ್ ಲೋಕದ ತಾಜಾ ವಿದ್ಯಮಾನಗಳಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಮನರಂಜನೆ ವಿಭಾಗ ನೋಡಿ.