ಥಿಯೇಟರ್ ಆಯ್ತು, ಒಟಿಟಿಯಲ್ಲಿಯೂ ಬಂತು, ಇದೀಗ ಕಿರುತೆರೆ ಸರದಿ; ಜೀ ಕನ್ನಡದಲ್ಲಿ ಈ ದಿನ ಪ್ರಸಾರ ಕಾಣಲಿದೆ ಪೌಡರ್ ಸಿನಿಮಾ
Powder Movie Kannada: ದೂದ್‌ಪೇಡಾ ದಿಗಂತ್ ಹಾಗೂ ಧನ್ಯಾ ರಾಮ್‌ಕುಮಾರ್ ಅಭಿನಯದ 'ಪೌಡರ್' ಸಿನಿಮಾವನ್ನು ನೀವು ಈಗ ಮನೆಯಲ್ಲೇ ನೋಡಬಹುದು. ಜೀ ಕನ್ನಡ ವಾಹಿನಿಯಲ್ಲಿ ಇದೇ ಭಾನುವಾರ 3ಗಂಟೆಗೆ ಪ್ರಸಾರವಾಗಲಿದೆ. ವಾರಾಂತ್ಯ ಕಳೆಯಲು ಈ ಸಿನಿಮಾ ನೋಡಿ.
ದೂದ್‌ಪೇಡಾ ದಿಗಂತ್ ಹೀರೋ ಆಗಿ ನಟಿಸಿದ ಸಿನಿಮಾ 'ಪೌಡರ್' ಕಿರುತೆರೆಯಲ್ಲೇ ಮೊಟ್ಟಮೊದಲ ಬಾರಿಗೆ ಪ್ರಸಾರವಾಗಲಿದೆ. ಇದೇ ಭಾನುವಾರ ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ಧನ್ಯಾ ರಾಮ್‌ಕುಮಾರ್ ಕೂಡ ಈ ಸಿನಿಮಾದಲ್ಲಿ ಮುಖ್ಯಪಾತ್ರವಹಿಸಿದ್ದಾರೆ. ರಂಗಾಯಣ ರಘು ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಈ ವಿಕೇಂಡ್‌ಗೆ ಸಖತ್ ಖುಷಿ ನೀಡಲಿದೆ. ನೀವೂ ನಿಮ್ಮ ಮನೆಯಲ್ಲಿ ಉಚಿತವಾಗಿ ಹೊಸದೊಂದು ಸಿನಿಮಾ ನೋಡಲು ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬೇಡಿ. ಮಧ್ಯಾಹ್ನ 3ಗಂಟೆಗೆ ಈ ಸಿನಿಮಾ ಪ್ರಸಾರವಾಗಲಿದೆ.
ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಅವರು ಈ ಸಿನಿಮಾದಲ್ಲಿ ಹಾಸ್ಯ ಮತ್ತು ಸಸ್ಪೆನ್ಸ್ ಎರಡನ್ನೂ ನೀಡಿದ್ದಾರೆ. ಯಾರೆಲ್ಲ ಸದ್ಯ ಒಂದೂ ಕಾಮಿಡಿ ಮೂವಿ ನೊಡಿ ಆಗಿಲ್ಲ ಎಂದಿಕೊಳ್ಳುತ್ತಿದ್ದೀರೋ ಅವರೆಲ್ಲ ತಪ್ಪದೇ ನೋಡಬಹುದಾದ ಚಲನಚಿತ್ರ ಇದಾಗಿದೆ. ಈ ಚಲನಚಿತ್ರದ ಮೊದಲಾರ್ಧ ಭಾಗಕ್ಕಿಂತ, ನಂತರದ ಭಾಗ ತುಂಬಾ ಚೆನ್ನಾಗಿದೆ ಎಂದು ಕೇಳಿಬಂದಿದೆ. ಬ್ರೂಸ್ ಲೀ ಪಾತ್ರದಲ್ಲಿ ನಾಗಭೂಷಣ್ ಕಾಣಿಸಿಕೊಂಡಿದ್ದಾರೆ.
ಎಲ್ಲೇ ನೋಡಿ ನೀವು ಈ ಸಿನಿಮಾದಲ್ಲಿ ಕಾಮಿಡಿಯನ್ನು ಮಾತ್ರ ಮಿಸ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಚೀನಾದಿಂದ ಭಾರತಕ್ಕೆ ಟಾಲ್ಕಮ್ ಪೌಡರ್ ಎಂದು ಹೇಳುತ್ತಾ ಆಮದು ಮಾಡಲು ಪರವಾನಿಗೆ ಇಲ್ಲದ ಮಾಧಕ ವಸ್ತುವನ್ನು ತರುವುದೇ ಇದರ ಮೂಲ ಕಥೆ. ಚಿತ್ರವು ಹಲವಾರು ಪಾತ್ರಗಳನ್ನು ಪರಿಚಯಿಸುತ್ತದೆ, ಒಂದರ ನಂತರ ಒಂದರಂತೆ ಹಲವಾರು ಜನ ಈ ಸಿನಿಮಾದಲ್ಲಿ ಬರುತ್ತಾರೆ. ಹಿರಿಯ ನಟ ಜಗ್ಗೇಶ್ ಅವರ ನಿರೂಪಣೆಯು ಈ ಚಿತ್ರದಲ್ಲಿದೆ.
ಶರ್ಮಿಳಾ ಮಾಂಡ್ರೆ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಲನಚಿತ್ರವು ಡ್ರಗ್ ಮಾಫಿಯಾಗಳು, ಅಂತರರಾಷ್ಟ್ರೀಯ ವಿತರಕರು ಮತ್ತು ಲೋಕಲ್ ಡೀಲರ್‌ಗಳು ಹೀಗೆ ಹಲವು ಅಂಶಗಳನ್ನು ಒಳಗೊಂಡಿದೆ.
ಸೂರ್ಯ ಪಾತ್ರದಲ್ಲಿ ದಿಗಂತ್ ಮಂಚಾಲೆ ನಟಿಸಿದ್ದಾರೆ. ನಿತ್ಯ ಪಾತ್ರದಲ್ಲಿ ಧನ್ಯ ರಾಮ್‌ಕುಮಾರ್, ಮಲ್ಲಿಕಾ ಪಾತ್ರದಲ್ಲಿ ಶರ್ಮಿಳಾ ಮಾಂಡ್ರೆ ಮತ್ತು ಕರಣ್ ಪಾತ್ರದಲ್ಲಿ ಅನಿರುದ್ಧ್ ಆಚಾರ್ಯ ನಟಿಸಿದ್ದಾರೆ. ಇದೇ ರೀತಿ ಅಣ್ಣಾಚಿಯಾಗಿ ರಂಗಾಯಣ ರಘು ನಟಿಸಿದ್ದಾರೆ. ಪವನ್ ಪಾತ್ರದಲ್ಲಿ ರವಿಶಂಕರ್ ಗೌಡ, ಸುಲೇಮಾನ್ ಪಾತ್ರದಲ್ಲಿ ಗೋಪಾಲ ಕೃಷ್ಣ ದೇಶಪಾಂಡೆ, ನಾಗಭೂಷಣ ಅವರು ಡಾಕ್ಟರ್ WHO ಆಗಿ ನಟಿಸಿದ್ದಾರೆ.