ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಗ್ರ್ಯಾಂಡ್‌ ಫಿನಾಲೆ ಶೋಗೆ ಬಂದ ಬಾಲಿವುಡ್‌ ಬಿಗ್‌ ಬಿ ಜೂ. ಅಮಿತಾಬ್‌ ಬಚ್ಚನ್! ‌
ಕನ್ನಡ ಸುದ್ದಿ  /  ಮನರಂಜನೆ  /  ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಗ್ರ್ಯಾಂಡ್‌ ಫಿನಾಲೆ ಶೋಗೆ ಬಂದ ಬಾಲಿವುಡ್‌ ಬಿಗ್‌ ಬಿ ಜೂ. ಅಮಿತಾಬ್‌ ಬಚ್ಚನ್! ‌

ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಗ್ರ್ಯಾಂಡ್‌ ಫಿನಾಲೆ ಶೋಗೆ ಬಂದ ಬಾಲಿವುಡ್‌ ಬಿಗ್‌ ಬಿ ಜೂ. ಅಮಿತಾಬ್‌ ಬಚ್ಚನ್! ‌

ಕಳೆದ 25 ವಾರಗಳಿಂದ ಮನರಂಜನೆಯ ಮಹಾಮಳೆಯನ್ನೇ ಸುರಿಸಿದ್ದಾರೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನ ಐದು ತಂಡಗಳು. ಇದೀಗ ಈ ಶೋ ಕೊನೇ ಘಟ್ಟಕ್ಕೆ ಬಂದಿದೆ. ಇದೇ ಶನಿವಾರ ಮತ್ತು ಭಾನುವಾರ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ.

ಯಾರಾಗ್ತಾರೆ ಈ ಸಲದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನ ವಿನ್ನರ್
ಯಾರಾಗ್ತಾರೆ ಈ ಸಲದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನ ವಿನ್ನರ್

Comedy Khiladigalu Premier League Grand Finale: ಜೀ ಕನ್ನಡ ವಾಹಿನಿಯಲ್ಲಿ ಕಳೆದ ಆರು ತಿಂಗಳಿಂದ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರ ಕಾಣುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಇದೀಗ ಕೊನೇ ಹಂತಕ್ಕೆ ಬಂದಿದೆ. ಕಿರುತೆರೆ ಪ್ರೇಕ್ಷಕನಿಗೆ ನಗುವಿನ ಹೂರಣವನ್ನೇ ಬಡಿಸಿದ ಈ ಶೋ, ಈ ಸಲ ಹೊಸ ರೂಪದಲ್ಲಿ ನೋಡುಗರ ಮನರಂಜಿಸಿತ್ತು. ಪ್ರತಿ ಸಲ ಒಂದಷ್ಟು ಸ್ಪರ್ಧಿಗಳು, ಮೂವರು ತೀರ್ಪುಗಾರರು, ಓರ್ವ ನಿರೂಪಕರು ಇರುತ್ತಿದ್ದರು. ಆದರೆ ಈ ಸಲದ ಶೋನ ಪರಿಕಲ್ಪನೆಯನ್ನೇ ಬದಲಿಸಲಾಗಿತ್ತು. ಅದರಂತೆ ಈಗ ಈ ಶೋ ಫಿನಾಲೆ ಹಂತಕ್ಕೆ ಬಂದಿದೆ.

ಕಳೆದ 25 ವಾರಗಳಿಂದ ನಗುವಿನ ಟಾನಿಕ್‌ ನೀಡುತ್ತ ಬಂದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಕೊನೇ ಘಟ್ಟಕ್ಕೆ ಬಂದು ನಿಂತಿದೆ. ಇದೇ ಶನಿವಾರ (ಅ. 19 ) ಮತ್ತು ಭಾನುವಾರ (ಅ. 20) ಒಟ್ಟು ಐದು ತಂಡಗಳ ಪೈಕಿ ಒಂದು ವಿಜೇತ ತಂಡದ ಘೋಷಣೆ ಆಗಲಿದೆ. ಈಗಾಗಲೇ ಗ್ರ್ಯಾಂಡ್‌ ಫಿನಾಲೆಯ ಶೂಟಿಂಗ್‌ ಸಹ ಮುಗಿದಿದ್ದು, ಈ ಹಾಸ್ಯ ಕಾರ್ಯಕ್ರಮದ ಪ್ರೋಮೋ ಝಲಕ್‌ಗಳನ್ನು ಜೀ ಕನ್ನಡ ತನ್ನ ಸೋಷಿಯಲ್‌ ಮೀಡಿಯಾ ಪುಟಗಳಲ್ಲಿ ಶೇರ್‌ ಮಾಡಿದೆ. ಆ ಪ್ರೋಮೋದಲ್ಲಿ ಅಚ್ಚರಿಯ ಮುಖಗಳು ಕಂಡಿವೆ. ಅದರಲ್ಲೂ ಜೂನಿಯರ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರೂ ಎಂಟ್ರಿಯಾಗಿದ್ದಾರೆ.

ಪ್ರತಿ ವರ್ಷ ಇಂತಿಷ್ಟು ಜನ ಕಾಮಿಡಿಯನ್‌ಗಳನ್ನು ಆಯ್ದುಕೊಂಡು, ಅವರಿಂದ ಬಗೆಬಗೆ ಸ್ಕೀಟ್‌ಗಳನ್ನ ಮಾಡಿಸಲಾಗುತ್ತಿತ್ತು. ಆ ಪೈಕಿ ಕೊನೆಗೆ ಒಬ್ಬ ವಿನ್ನರ್‌ಗೆ ನಗದು ಬಹುಮಾನದ ಜತೆಗೆ ಟ್ರೋಫಿ ನೀಡಲಾಗುತ್ತಿತ್ತು. ಆದರೆ, ಈ ಸಲದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿ ಜೀ ಕನ್ನಡದ ಎಲ್ಲ ನಿರೂಪಕರನ್ನು ಒಂದೆಡೆ ಸೇರಿಸಿ, ತೀರ್ಪುಗಾರರ ಸ್ಥಾನ ಕೊಡಲಾಗಿತ್ತು. ಆಂಕರ್‌ ಅನುಶ್ರೀ, ಶ್ವೇತಾ ಚಂಗಪ್ಪ, ಕುರಿ ಪ್ರತಾಪ್‌, ಮಾಸ್ಟರ್‌ ಆನಂದ್‌ ಮತ್ತು ಅಕುಲ್‌ ಬಾಲಾಜಿ ಐದು ತಂಡದ ಮಾಲೀಕರು. ಒಂದೊಂದು ತಂಡಕ್ಕೆ ಒಬ್ಬೊಬ್ಬ ಮೆಂಟರ್‌ಗಳು, ಅವರ ಕೆಳಗೆ ಮೂರ್ನಾಲ್ಕು ಹಾಸ್ಯಕಲಾವಿದರು. ಮಹಾಗುರುವಾಗಿ ಜಗ್ಗೇಶ್‌ ನಗಿಸುತ್ತಿದ್ದರು.

ಫಿನಾಲೆ ವೇದಿಕೆ ಮೇಲೆ ಭರ್ಜರಿ ಕಾಮಿಡಿ

ಇವರೆಲ್ಲರ ಜತೆಗೆ ಪ್ರತಿ ವಾರ ಮೆಚ್ಚುಗೆ ಪಡೆದ ಸ್ಕೀಟ್‌ ಮತ್ತು ಆ ತಂಡಕ್ಕೆ ಒಂದು ಲಕ್ಷ ಹಣ ಸಿಗುತ್ತಿತ್ತು. ಅದರಂತೆ ಇದೀಗ 25 ವಾರಗಳನ್ನು ಈ ಶೋ ಪೂರೈಸಿದೆ. ಈಗ ಫಿನಾಲೆ ವೇದಿಕೆ ಮೇಲೆ ಐದು ತಂಡಗಳ ಭರ್ಜರಿಯಾಗಿಯೇ ಫರ್ಫಾರ್ಮ್‌ ಮಾಡಿವೆ. ಆನಂದ್‌ ಸನ್‌ ರೈಸರ್ಸ್‌ನಿಂದ ಗಿಲ್ಲಿ ನಟ, ಅನು ವಾರಿಯರ್ಸ್‌ನಿಂದ ಹರೀಶ್‌, ರಾಯಲ್‌ ಚಂಗಪ್ಪ ಬುಲ್ಡೋಜರ್ಸ್‌ ತಂಡದಿಂದ ನಯನಾ, ಅಕುಲ್‌ ಟೈಟನ್ಸ್‌, ಕುರಿ ಸೂಪರ್‌ಕಿಂಗ್ಸ್‌ನಿಂದ ಜಗಪ್ಪ ಮೆಂಟರ್‌ ಆಗಿ ಸಿಡಿಲಬ್ಬರದ ನಗುವಿನ ಹೂರಣವನ್ನು ಬಡಿಸಿದ್ದಾರೆ.

ಬಿಗ್‌ ಬಿ ಜೂ. ಅಮಿತಾಬ್‌ ಬಚ್ಚನ್‌ ಎಂಟ್ರಿ

ಈ ನಡುವೆ ಕಳೆದ ಕೆಲ ವಾರಗಳ ಹಿಂದೆ ಸ್ಯಾಂಡಲ್‌ವುಡ್‌ನ ಸ್ಟಾರ್‌ ಕಲಾವಿದರನ್ನೇ ಹೋಲುವ ಜೂನಿಯರ್‌ ಕಲಾವಿದರು ಆಗಮಿಸಿ ಮನರಂಜನೆಯ ಹಬ್ಬದೂಟ ಬಡಿಸಿದ್ದರು. ಇದೀಗ ಫಿನಾಲೆ ವೇದಿಕೆ ಮೇಲೆ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರನ್ನೇ ಹೋಲುವ ಜೂನಿಯರ್‌ ಅಮಿತಾಬ್‌ ಬಚ್ಚನ್‌ ಅವರ ಆಗಮನವಾಗಿದೆ. ತಮ್ಮ ಕೌನ್‌ ಬನೇಗಾ ಕ್ರೋರ್‌ ಪತಿ ಮೂಲಕ ವೇ ವೇದಿಕೆ ಮೇಲೆ ಥೇಟ್‌ ಅಮಿತಾಭ್‌ ಅವರಂತೆ ಹಾವ ಭಾವ ಮಾಡುತ್ತ, ಧ್ವನಿ ಅನುಕರಣೆ ಮಾಡಿ ವೀಕ್ಷಕರ ಮನಗೆದ್ದಿದ್ದಾರೆ. ಒಟ್ಟಾರೆ ಕಳೆದ 25 ವಾರಗಳಿಂದ ಹಾಸ್ಯದ ಹೊನಲನು ಹರಿಸಿದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನ ವಿಜೇತರು ಯಾರು? ಎಂಬ ಈ ಕುತುಹಲ ತಣಿಯಲು ಭಾನುವಾರದವರೆಗೂ ಕಾಯಲೇಬೇಕು.