Kalki 2898 AD: ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಭಾಸ್‌ ನಟನೆಯ ಕಲ್ಕಿ ಸಿನಿಮಾ; ಎಲ್ಲಿ, ಯಾವಾಗ ಎಂಬ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad: ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಭಾಸ್‌ ನಟನೆಯ ಕಲ್ಕಿ ಸಿನಿಮಾ; ಎಲ್ಲಿ, ಯಾವಾಗ ಎಂಬ ವಿವರ ಇಲ್ಲಿದೆ

Kalki 2898 AD: ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಭಾಸ್‌ ನಟನೆಯ ಕಲ್ಕಿ ಸಿನಿಮಾ; ಎಲ್ಲಿ, ಯಾವಾಗ ಎಂಬ ವಿವರ ಇಲ್ಲಿದೆ

Kalki 2898 ad in tv: ಪ್ರಭಾಸ್‌, ಅಮಿತಾಬ್‌ ಬಚ್ಚನ್‌, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕಲ್ಕಿ 2898 ಎಡಿ ಸಿನಿಮಾವು ಕನ್ನಡ ಕಿರುತೆರೆಯಲ್ಲಿ ಇದೇ ಭಾನುವಾರ ಪ್ರೀಮಿಯರ್‌ ಆಗಲಿದೆ. ಈ ಸಿನಿಮಾ ಯಾವ ಚಾನೆಲ್‌ನಲ್ಲಿ, ಎಷ್ಟು ಗಂಟೆಗೆ ಪ್ರಸಾರವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

Kalki 2898 AD: ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಭಾಸ್‌ ನಟನೆಯ ಕಲ್ಕಿ ಸಿನಿಮಾ
Kalki 2898 AD: ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಭಾಸ್‌ ನಟನೆಯ ಕಲ್ಕಿ ಸಿನಿಮಾ

Kalki 2898 ad in tv: ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಪ್ರಭಾಸ್‌, ಅಮಿತಾಬ್‌ ಬಚ್ಚನ್‌, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕಲ್ಕಿ 2898 ಎಡಿ ಸಿನಿಮಾವು ಸಾಕಷ್ಟು ಸದ್ದು ಮಾಡಿತ್ತು. ಈ ಸಿನಿಮಾ ಒಟಿಟಿಗಳಲ್ಲಿಯೂ ಸ್ಟ್ರೀಮಿಂಗ್‌ ಆಗಿತ್ತು. ಇದೀಗ ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಕಲ್ಕಿ 2898 ಎಡಿ ಈ ಸಿನಿಮಾವು ಟಿವಿಯಲ್ಲಿ ಪ್ರಸಾರವಾಗಲಿದೆ. ಥಿಯೇಟರ್‌ನಲ್ಲಿ ಈ ಸಿನಿಮಾ ನೋಡದೆ ಇರುವವರು, ಒಟಿಟಿಯಲ್ಲಿ ಈ ಸಿನಿಮಾ ನೋಡದೆ ಇರುವವರು ಮಿಸ್‌ ಮಾಡದೆ ಟಿವಿಯಲ್ಲಿ ಕಲ್ಕಿ ಸಿನಿಮಾವನ್ನು ನೋಡಬಹುದು. ಈಗಾಗಲೇ ಈ ಸಿನಿಮಾ ನೋಡಿದವರು ಸಮಯವಿದ್ದರೆ ಇನ್ನೊಮ್ಮೆ ಈ ಚಿತ್ರವನ್ನು ಮನೆಯಲ್ಲಿ ಎಲ್ಲರೊಂದಿಗೆ ಕಣ್ತುಂಬಿಕೊಳ್ಳಬಹುದು.

ಜೀ ಕನ್ನಡದಲ್ಲಿ ಕಲ್ಕಿ ಸಿನಿಮಾ ಪ್ರಸಾರ

ಜೀ ಕನ್ನಡ ವಾಹಿನಿಯು ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಅಪ್‌ಡೇಟ್‌ ನೀಡಲಾಗಿದೆ. "ಯುಗ ಯಾವುದೇ ಇರಲಿ, ಆಪತ್ತಿನಲ್ಲಿ ಇರೋರನ್ನ ಪಾರು ಮಾಡೋಕೆ ಅವ್ನು ಬಂದೇ ಬರ್ತಾನೆ!

ಪ್ರಭಾಸ್ ಅಭಿನಯದ World Television Premiere 'ಕಲ್ಕಿ' ಇನ್ನು 3 ದಿನಗಳಲ್ಲಿಭಾನುವಾರ ಮಧ್ಯಾಹ್ನ 3ಕ್ಕೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ" ಎಂದು ಪೋಸ್ಟ್‌ ಮಾಡಲಾಗಿದೆ. ಅಂದರೆ, ಈ ಸಿನಿಮಾವು ಮಾರ್ಚ್‌ 16ರಂದು ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಭಾನುವಾರ ಸಂಜೆಯಿಂದ ಎಲ್ಲರ ಮನೆಯಲ್ಲಿಯೂ ಕಲ್ಕಿ ಹವಾ ಇರಲಿದೆ.

ಒಟಿಟಿಯಲ್ಲಿದೆ ಕಲ್ಕಿ ಸಿನಿಮಾ

ಪ್ರಭಾಸ್ ಮತ್ತು ದೀಪಿಕಾ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಈ ವೈಜ್ಞಾನಿಕ ಚಿತ್ರವು ಏಕಕಾಲದಲ್ಲಿ ಎರಡು ಒಟಿಟಿಗಳಲ್ಲಿ ಬಿಡುಗಡೆಯಾಗಿತ್ತು. ಕಲ್ಕಿ 2898 ಎಡಿ ವಿಶ್ವಾದ್ಯಂತ 1200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಾಧನೆ ಮಾಡಿದ ಆರನೇ ಭಾರತೀಯ ಸಿನಿಮಾವಾಗಿದೆ. ಆಗಸ್ಟ್‌ 22ರಂದು ಈ ಸಿನಿಮಾ ಒಟಿಟಿಗಳಲ್ಲಿ ರಿಲೀಸ್‌ ಆಗಿತ್ತು. ಕನ್ನಡ ಭಾಷೆಯಲ್ಲೂ ಕಲ್ಕಿ ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗಿತ್ತು. ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿತ್ತು. ಈಗಲೂ ಇದೇ ಒಟಿಟಿಗಳಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಇದು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿ ಅವತರಣಿಕೆ ಬಿಡುಗಡೆಯಾಗಿತ್ತು.

ಈ ಸಿನಿಮಾದಲ್ಲಿ 81 ವರ್ಷ ವಯಸ್ಸಿನ ಅಮಿತಾಬ್‌ ಬಚ್ಚನ್‌ ಅವರು ಅಮರ ಯೋಧ ಅಶ್ವತ್ಥಾಮನ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕ ನಟನಿಗಿಂತ ಅಶ್ವತ್ಥಾಮನ ಪಾತ್ರವು ಕಲ್ಕಿ ಸಿನಿಮಾದ ಮೊದಲ ಅಧ್ಯಾಯದಲ್ಲಿ ಗಮನ ಸೆಳೆದಿದೆ. ನಾಗ್‌ ಅಶ್ವಿನ್‌ ನಿರ್ದೇಶನದ ಈ ಸಿನಿಮಾವು ಜಾಗತಿಕ ಸಿನಿಪ್ರೇಕ್ಷಕರ ಗಮನ ಸೆಳೆದಿದೆ. ಈ ಹಿಂದೆ ನಾಗ್‌ ಅಶ್ವಿನ್‌ ಅವರು ಮಹಾನಟಿ ಮತ್ತು ಯೆವಡೆ ಸುಬ್ರಹ್ಮಣ್ಯಂನಂತಹ ಸಿನಿಮಾಗಳನ್ನು ಮಾಡಿದ್ದರು. ಈ ಸಿನಿಮಾವನ್ನು ವೈಜಯಂತಿ ಮೂವಿಸ್‌ನಡಿ ನಿರ್ಮಾಣ ಮಾಡಲಾಗಿದೆ. ಕಲ್ಕಿ ಸಿನಿಮಾದ ವಿಮರ್ಶೆ ಮತ್ತು ಸಂಪೂರ್ಣ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner