Lakshmi Baramma Serial: ಮಾಸ್ಟರ್ ಮೈಂಡ್ ಕಾವೇರಿ ಮಾಡಿದ ಎಲ್ಲ ಕೆಲಸಕ್ಕೂ ಜಯ; ಹೆಂಡತಿ ಕಾಣದೆ ಕಂಗಾಲಾಗಿದ್ದಾನೆ ವೈಷ್ಣವ್
ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಕಾವೇರಿ ಮಾಡಿದ ಎಲ್ಲಾ ಉಪಾಯಗಳು ಸಫಲವಾಗಿದೆ. ವೈಷ್ಣವ್ ಮಾತ್ರ ಲಕ್ಷ್ಮೀ ಎಲ್ಲಿ ಹೋಗಿದ್ದಾಳೆ ಎಂದು ತಿಳಿದುಕೊಳ್ಳಲಾಗದೆ ಕಂಗಾಲಾಗಿದ್ದಾನೆ. ಸುಪ್ರಿತಾಗೆ ಇದು ಕಾವೇರಿಯದೇ ಹೊಸ ಆಟ ಎಂದು ತಿಳಿದಿದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಈಗ ಕಾಣೆಯಾಗಿದ್ಧಾಳೆ. ಮನೆಯಲ್ಲಿ ಎಲ್ಲರೂ ಗಾಬರಿಯಿಂದ ಇದ್ದಾರೆ. ಆದರೆ ಈ ಸಮಯವನ್ನು ಗಾಬರಿಯಿಂದ ಕಳೆದರೆ ಪ್ರಯೋಜನವಿಲ್ಲ. ಈಗ ಏನಾದರೂ ಮಾಡಬೇಕು. ಮೊದಲಿಗೆ ಲಕ್ಷ್ಮೀ ಎಲ್ಲಿದ್ದಾಳೆ ಎಂದು ಪತ್ತೆ ಮಾಡಬೇಕು ಎಂದು ಸುಪ್ರಿತಾ ಹೇಳುತ್ತಾಳೆ. ಸುಪ್ರಿತಾ ಮಾತು ಕೇಳಿ ಕಾವೇರಿಗೆ ಗಾಬರಿ ಆಗುತ್ತದೆ. ಯಾಕೆಂದರೆ ಸುಪ್ರಿತಾ ಹೇಳಿದ ಯಾವ ಮಾತೂ ಕಾವೇರಿಗೆ ಇಷ್ಟ ಆಗೋದಿಲ್ಲ. ಅವರಿಬ್ಬರ ಉದ್ದೇಶವೂ ಬೇರೆ ಬೇರೆ ಆಗಿರುತ್ತದೆ. ಹೀಗಿರುವಾಗ ವೈಷ್ಣವ್ ಒಂದು ಉಪಾಯ ಮಾಡುತ್ತಾನೆ.
ಕಾಣೆಯಾದ್ಲು ಲಕ್ಷ್ಮೀ
ಲಕ್ಷ್ಮೀ ಎಲ್ಲಿಗೆ ಹೋಗಿದ್ಧಾಳೆ ಎಂದು ಕಂಡು ಹಿಡಿಯಲು ಮೊದಲು ಸಿಸಿಟಿವಿ ಕ್ಯಾಮರಾ ಚೆಕ್ ಮಾಡಬೇಕು ಎಂದು ಒಳಗಡೆ ಹೋಗಿ ಚೆಕ್ ಮಾಡುತ್ತಾನೆ. ಆಗ ಮನೆಯ ಎಲ್ಲರೂ ಅಲ್ಲಿಗೆ ಬಂದು ನಿಂತಿರುತ್ತಾರೆ. ಈ ಸಂದರ್ಭದಲ್ಲಿ ಸುಪ್ರಿತಾಗೆ ಆದಷ್ಟು ಗಾಬರಿ ಇನ್ಯಾರಿಗೂ ಆಗಿಲ್ಲ. ಯಾಕೆಂದರೆ ಇದು ನಿಜವಾಗಿಯೂ ಕಾವೇರಿನೇ ಮಾಡಿಸುತ್ತಿರುವ ಕೆಲಸ ಎಂದು ಅವಳಿಗೆ ಗೊತ್ತಿದೆ. ಯಾರೋ ರೌಡಿಗಳಿಗೆ ಹೇಳಿ ಈ ರೀತಿ ಮಾಡಿಸಿದ್ದಾಳೆ ಎಂಬ ಅಂದಾಜು ಅವಳಿಗೆ ಇದೆ. ಹಾಗಾಗಿ “ಬೇಡ ವೈಷ್ಣವ್ ತಡ ಮಾಡೋದು, ಮೊದಲು ನಾವು ಪೊಲೀಸ್ ಕಂಪ್ಲೇಂಟ್ ಕೊಟ್ಟು ಬಿಡೋಣ” ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಕಾವೇರಿಗೆ ಗಾಬರಿ ಆಗುತ್ತದೆ. “ನಾನೇ ಮಾಡಿಸಿದ್ದು ಎಂದು ಗೊತ್ತಾದರೆ ಏನು ಮಾಡೋದು” ಎಂದು ಮನಸಿಲ್ಲೇ ಆಲೋಚಿಸುತ್ತಾಳೆ.
ಕಾವೇರಿ ಮಾಸ್ಟರ್ ಮೈಂಡ್
ಆದರೆ ಅಷ್ಟರಲ್ಲಾಗಲೇ ಸಮಯ ಆಗಿದೆ ಅವಳನ್ನು ಕರೆದುಕೊಂಡು ಹೋಗಿರ್ತಾರೆ ಎನ್ನುವ ಭರವಸೆ ಕೂಡ ಅವಳಿಗೆ ಇರುತ್ತದೆ. ಅವಳು ಮತ್ತೆ ಹೆಚ್ಚಿಗೆ ಆಲೋಚನೆ ಮಾಡೋದಿಲ್ಲ. ಈ ಸಮಯವನ್ನು ಹೇಗಾದರೂ ಹಾಳು ಮಾಡಬೇಕು ಎಂದು ಜೋರು, ಜೋರಾಗಿ ಮಾತನಾಡಲು ಆರಂಭಿಸುತ್ತಾಳೆ. "ನಾನು ಮೊದಲೇ ಹೇಳಿದೆ, ಆದರೆ ನೀವ್ಯಾರೂ ನನ್ನ ಮಾತು ಕೇಳಲೇ ಇಲ್ಲ. ಈ ಕೃಷ್ಣ ಅಂತು ನನ್ನ ಮಾತನ್ನು ಸುತಾರಾಂ ಒಪ್ಪಲಿಲ್ಲ. ಅವತ್ತು ನೋಡಿದ್ರೆ ಬೆಟ್ಟದ ಮೇಲಿನಿಂದ ಬಿದ್ದು ಸಾಯೋಕೆ ಪ್ರಯತ್ನ ಮಾಡಿದ್ಲು. ಮತ್ತೊಂದು ದಿನ ತನ್ನ ಕೈನಾ ತಾನೇ ಕುಯ್ದುಕೊಳ್ಳುವ ಪ್ರಯತ್ನ ಮಾಡಿದ್ಧಾಳೆ.
ಇಷ್ಟೆಲ್ಲ ಅವಾಂತರ ಆಗ್ತಾ ಇದ್ರೂ ನಿಮಗೆ ಅವಳ ಬಗ್ಗೆ ಯೋಚನೆ ಇಲ್ಲ. ಆಸ್ಪತ್ರೆಗೆ ಹಾಕೋಣ ಅಂತ ಅಂದ್ರೆ ನೀವು ಅದಕ್ಕೂ ಒಪ್ತಾ ಇಲ್ಲ." ಹೀಗೆಲ್ಲ ನಾನಾ ರೀತಿಯ ಬಣ್ಣದ ಮಾತುಗಳನ್ನು ಆಡಿ ಅವರ ಗಮನ ಸೆಳೆದಿದ್ದಾಳೆ. ಇತ್ತ ರೌಡಿಗಳು ಮಾತ್ರ ಲಕ್ಷ್ಮೀಯನ್ನು ಕೊಲೆ ಮಾಡಲು ಮೂಟೆ ಕಟ್ಟಿಕೊಂಡು ಹೊಗಿದ್ದಾರೆ. ಮುಂದೆನಾಗುತ್ತದೆ ಎಂದು ಕಾದು ನೋಡಬೇಕಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಗಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎಡರು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಜನರು ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿಯಾಗಿದ್ದು ಪ್ರತಿಯೊಂದು ಎಪಿಸೋಡ್‌ನ ಕಥೆಗಳೂ ಕುತೂಹಲಕಾರಿಯಾಗಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
