Lakshmi Baramma: ಕಾವೇರಿ ಮಾತಿಗೆ ಸಮ್ಮತಿ ನೀಡದ ಡಾಕ್ಟರ್; ಲಕ್ಷ್ಮೀ ಅಂದುಕೊಂಡಂತೆ ಎಲ್ಲವೂ ನಡಿತಿದೆ
Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಅಂದುಕೊಂಡಂತೆ ಈಗ ಯಾವುದೂ ಆಗುತ್ತಿಲ್ಲ. ವೈಷ್ಣವ್ಗೆ ತಾನೀಗ ಏನು ಮಾಡಬೇಕು ಅನ್ನೋದು ತಿಳಿಯುತ್ತಿಲ್ಲ. ಲಕ್ಷ್ಮೀ ಏನು ಅಂದುಕೊಂಡಿದ್ದಾಳೋ ಅದೇ ಈಗ ನಿಜವಾಗುತ್ತಾ ಇದೆ. ಅವಳಿಗೂ ಸಹಾಯವಾಗುತ್ತಿದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಅಂದುಕೊಂಡಂತೆ ಈಗ ಯಾವುದೂ ಆಗುತ್ತಿಲ್ಲ. ಅದೇ ಅವಳಿಗೆ ಬೇಸರದ ಸಂಗತಿ. ಜೂನಿಯರ್ ಡಾಕ್ಟರ್ ಬಳಿ ಮಾತಾಡಿಕೊಂಡು ಅವರಿಗೆ ಹಣ ನೀಡಿ ಮೋಸ ಮಾಡಲು ಕಾವೇರಿ ಮುಂದಾಗಿದ್ದಳು. ಆದರೆ ಸೀನಿಯರ್ ಡಾಕ್ಟರ್ ಮಾತ್ರ ಇದಕ್ಕೆ ಒಪ್ಪಿಕೊಂಡಿಲ್ಲ. ಅವರು ಮೊದಲೇ ಲಕ್ಷ್ಮೀ ಬಳಿ ಮಾತಾಡಿರುತ್ತಾರೆ. ಒಮ್ಮೆ ಮಾತಾಡಿದರೆ ಸಾಕು ನನಗೆ ಯಾರು ಹೇಗೆ ಅನ್ನೋದು ತಿಳಿದು ಬಿಡುತ್ತದೆ ಎಂದು ಡಾಕ್ಟರ್ ಹೇಳಿದ್ದಾರೆ. ಆದರೂ ಕಾವೇರಿ ಅವರನ್ನು ಒಪ್ಪಿಸಲು ಪ್ರಯತ್ನ ಮಾಡುತ್ತಿದ್ದಾಳೆ. ಯಾವುದೇ ಕಾರಣಕ್ಕೂ ಇವಳನ್ನು ನಮ್ಮಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಡಾಕ್ಟರ್ ಹೇಳುತ್ತಿದ್ದಾರೆ.
ಕೃಷ್ಣ ಬಂದ ತಕ್ಷಣ ಎಲ್ಲವನ್ನೂ ವಿಚಾರಿಸಿ ಆಯ್ತು. ಎಲ್ಲವೂ ನಮಗೆ ಒಪ್ಪಿಗೆ ಇದೆ. ಇನ್ನು ಅಡ್ಮಿಷನ್ ಮಾಡಿಸುವುದೊಂದೇ ಬಾಕಿ ಎಂದು ಹೇಳುತ್ತಾನೆ. ಆಗ ಡಾಕ್ಟರ್ “ಯಾರಿಗೆ? ಏನಾಗಿದೆ?” ಎಂದು ಪ್ರಶ್ನೆ ಮಾಡುತ್ತಾರೆ. ಆಗ ಕಾವೇರಿ ಹೇಳುತ್ತಾಳೆ “ನನ್ನ ಸೊಸೆ ಲಕ್ಷ್ಮೀಯನ್ನು ಇಲ್ಲಿ ಅಡ್ಮಿಟ್ ಮಾಡಿ ಹೋಗುತ್ತೇವೆ” ಎಂದು ಹೇಳುತ್ತಾಳೆ. “ಹಾಗೆಲ್ಲ ವಿನಾಕಾರಣ ನಾವು ಯಾರನ್ನಾದರೂ ಇಲ್ಲಿ ಇಟ್ಟುಕೊಳ್ಳಲು ಬರೋದಿಲ್ಲ” ಎಂದು ಡಾಕ್ಟರ್ ಹೇಳುತ್ತಾರೆ. ಆಗ ಕಾವೇರಿ ಇಲ್ಲ ಅವಳು ನಾರ್ಮಲ್ ಆಗಿಲ್ಲ. ತುಂಬಾ ಕೋಪ ಮಾಡಿಕೊಳ್ಳುತ್ತಾಳೆ ಎಂದೆಲ್ಲ ಪುಕಾರು ಹೇಳಲು ಆರಂಭಿಸುತ್ತಾಳೆ.
ಇನ್ನು ಲಕ್ಷ್ಮೀಗೆ ಗೊತ್ತಾಗದ ರೀತಿ ಅವಳ ಬಳಿ ಏನೇನೋ ಹೇಳಲು ಪಕ್ಕಕ್ಕೆ ಕರೆದುಕೊಂಡು ಹೋಗಲು ನೋಡುತ್ತಾಳೆ. ಆದರೆ ಕರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ಲಕ್ಷ್ಮೀ ಅಡ್ಡ ಬರುತ್ತಾಳೆ. ನನಗೆ ತಲೆಕೆಟ್ಟಿದೆ ಎಂದು ಊರಲ್ಲೆಲ್ಲ ಹೇಳಿದ್ದಾಗಿದೆ. ಈಗ ಇದನ್ನೊಂದು ನೀವು ಪಕ್ಕಕ್ಕೆ ಕರೆದು ಹೇಳುವುದು ಬೇಡ ಇಲ್ಲೇ ಹೇಳಿ ಎನ್ನುತ್ತಾಳೆ. ಆಗ ಆ ಮಾತು ಮುಂದುವರೆಯುತ್ತದೆ. ಆದರೆ ಡಾಕ್ಟರ್ ಮಾತ್ರ ಒಪ್ಪಿಕೊಳ್ಳುವುದಿಲ್ಲ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಗಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್ಪಿ ರೇಟಿಂಗ್ಸ್ನಲ್ಲೂ ಈ ಧಾರಾವಾಹಿ ಮುಂದಿದೆ. ಜನರು ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿಯಾಗಿದ್ದು ಪ್ರತಿಯೊಂದು ಎಪಿಸೋಡ್ನ ಕಥೆಗಳೂ ಕುತೂಹಲಕಾರಿಯಾಗಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್ಗಳ ಕಥೆಯನ್ನು ಇಲ್ಲಿ ಓದಬಹುದು.