Lakshmi Baramma: ಮತ್ತೆ ಶುರುವಾಯ್ತು ಲಕ್ಷ್ಮೀ, ವೈಷ್ಣವ್‌ ಪ್ರೀತಿ ಪಯಣ; ಒಂದು ದಿನವೂ ಬಿಟ್ಟಿರಲಾರದು ಈ ಜೋಡಿ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma: ಮತ್ತೆ ಶುರುವಾಯ್ತು ಲಕ್ಷ್ಮೀ, ವೈಷ್ಣವ್‌ ಪ್ರೀತಿ ಪಯಣ; ಒಂದು ದಿನವೂ ಬಿಟ್ಟಿರಲಾರದು ಈ ಜೋಡಿ

Lakshmi Baramma: ಮತ್ತೆ ಶುರುವಾಯ್ತು ಲಕ್ಷ್ಮೀ, ವೈಷ್ಣವ್‌ ಪ್ರೀತಿ ಪಯಣ; ಒಂದು ದಿನವೂ ಬಿಟ್ಟಿರಲಾರದು ಈ ಜೋಡಿ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಈಗ ಲಕ್ಷ್ಮೀಯನ್ನು ಕೆಲ ದಿನಗಳ ಕಾಲ ಬಿಟ್ಟಿರುವ ಪ್ರಸಂಗ ಎದುರಾಗಿದೆ. ಆದರೆ ಲಕ್ಷ್ಮೀಯನ್ನು ಬಿಟ್ಟು ಒಂದು ದಿನ ಉಳಿಯುವುದು ಕೂಡ ವೈಷ್ಣವ್‌ಗೆ ಕಷ್ಟ ಎನಿಸುತ್ತಿದೆ. ಯಾಕೆಂದರೆ ಅವನು ಇದುವರೆಗೂ ಒಂದು ದಿನವೂ ಅವಳನ್ನು ಬಿಟ್ಟಿಲ್ಲ.

ಮತ್ತೆ ಶುರುವಾಯ್ತು ಲಕ್ಷ್ಮೀ, ವೈಷ್ಣವ್‌ ಪ್ರೀತಿ ಪಯಣ
ಮತ್ತೆ ಶುರುವಾಯ್ತು ಲಕ್ಷ್ಮೀ, ವೈಷ್ಣವ್‌ ಪ್ರೀತಿ ಪಯಣ (ಕಲರ್ಸ್‌ ಕನ್ನಡ)

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ವಿರಹ ವೇದನೆ ಅನುಭವಿಸುತ್ತಿದ್ದಾರೆ. ಮದುವೆ ಆದಾಗಿನಿಂದ ಇದುವರೆಗೆ ಒಬ್ಬರನ್ನೊಬ್ಬರು ಬಿಟ್ಟು ಇರದ ಈ ಜೋಡಿಗೆ ಈಗ ಅನಿವಾರ್ಯ ಕಾರಣದಿಂದ ದೂರ ಇರಬೇಕಾದ ಪ್ರಸಂಗ ಎದುರಾಗಿದೆ. ವೈಷ್ಣವ್ ಆಸ್ಪತ್ರೆಯ ಹೊರ ಭಾಗದಲ್ಲೇ ನಿಂತು ಕಾಯುತ್ತಾ ಇರುತ್ತಾನೆ. ಆದರೆ ಅವನು ಹೊರಗಡೆ ನಿಂತುಕೊಂಡಿದ್ದಾನೆ ಎಂದು ಲಕ್ಷ್ಮೀಗೆ ತಿಳಿದಿರುವುದಿಲ್ಲ. ಆದರೆ ವೈಷ್ಣವ್ ಕಾಲ್ ಬರುತ್ತದೆ. ವೈಷ್ಣವ್ ಕಾಲ್ ಬಂದ ತಕ್ಷಣ ಲಕ್ಷ್ಮೀ ಖುಷಿಯಿಂದ ಕಾಲ್ ಪಿಕ್ ಮಾಡುತ್ತಾಳೆ. ಆ ನಂತರದಲ್ಲಿ ಅವಳು ಮಾತನಾಡಲು ಆರಂಭಿಸುತ್ತಾಳೆ. ಮಾತಾಡುತ್ತಾ ವೈಷ್ಣವ್ ಬೇಸರ ಮಾಡಿಕೊಳ್ಳುತ್ತಾನೆ.

ವೈಷ್ಣವ್ ನಾನೂ ನಿಮ್ ಜೊತೆನೇ ಇರ್ತೀನಿ ಎಂದು ಹೇಳುತ್ತಾನೆ. ಆ ಮಾತು ಕೇಳಿ ಲಕ್ಷ್ಮೀಗೆ ತುಂಬಾ ಖುಷಿ ಆಗುತ್ತದೆ. ಆದರೆ ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಾವು ಈಗ ದೂರ ಇರಲೇಬೇಕು. ಇನ್ನೊಂದೇ ದಿನ ನಾನು ಬಂದು ಬಿಡ್ತೀನಿ ಎಂದು ಅವಳು ಉತ್ತರಿಸುತ್ತಾಳೆ. ಆಗ ವೈಷ್ಣವ್ ಆದ್ರೂ ಒಂದು ದಿನ ಪೂರ್ತಿ ಬಿಟ್ಟಿರಬೇಕಲ್ಲ ಎಂದು ಮತ್ತೆ ರಾಗ ಎಳೆಯುತ್ತಾನೆ. ಆಗ ಅವಳಿಗೆ ಇನ್ನೂ ಸಂತೋಷ ಆಗುತ್ತದೆ. ನನ್ನ ಗಂಡ ನನ್ನನ್ನು ಒಂದು ದಿನವೂ ಬಿಟ್ಟಿರಲ್ಲ ಎಂದು ಅಂದುಕೊಳ್ಳುತ್ತಾಳೆ.

ನೀವೂ ಈಗ ಒಮ್ಮೆ ಬಾಲ್ಕನಿಗೆ ಬನ್ನಿ ಎಂದು ಹೇಳುತ್ತಾನೆ, ಆದರೆ ವಿಷಯ ಏನು ಎಂದು ಮಾತ್ರ ಹೇಳುವುದಿಲ್ಲ. ಬಂದು ನೋಡುವಷ್ಟರಲ್ಲಿ ಅವನೇ ಅಲ್ಲಿ ನಿಂತಿರುತ್ತಾನೆ. ಅವನನ್ನು ನೋಡಿ ಅವಳ ಖುಷಿಗೆ ಪಾರವೇ ಇಲ್ಲದಂತಾಗುತ್ತದೆ. ಅವನಿಗೆ ಒಂದಷ್ಟು ಸಮಾಧಾನ ಮಾಡುತ್ತಾಳೆ. ನಂತರದಲ್ಲಿ ಅವನ ಜೊತೆ ಮಾತನಾಡಿ, ಮನೆಗೆ ಕಳಿಸುತ್ತಾಳೆ. ಅವನು ಹೋಗುವಾಗ ಊಟ ಸರಿಯಾಗಿ ಮಾಡು ಎಂದು ಸನ್ನೆ ಮಾಡಿ ಕಳಿಸುತ್ತಾನೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

ಇನ್ನು ಧಾರಾವಾಹಿಯ ಬಗ್ಗೆ ಲಕ್ಷ್ಮಕ್ಕಾ ಧಾರವಾಹಿ ಮುಗಿಯೋವರೆಗೂ ಪ್ರತಿತಂತ್ರ ಹಣೆದ್ರು ನೀನು ಮಾತ್ರ ಹಾಸ್ಪಿಟಲ್ ನಿಂದ ಹೋರಗೆ ಬರಲ್ಲಾ ಬೀಡು....

ನೀನು ಧಾರವಾಹಿ ಬಿಟ್ಟು ಹೋಗುದು ಒಳ್ಳೆಯದು ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ.

Whats_app_banner