Lakshmi Baramma: ಬದಲಾದ ಸೀರಿಯಲ್ ನೇಮ್ "ಲಕ್ಷ್ಮೀ ಹೋಗಮ್ಮ" ಧಾರಾವಾಹಿ ನೋಡಿ ಬೋರಾದ ವೀಕ್ಷಕರು ಕೊಟ್ಟ ಹೊಸ ಹೆಸರು
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ಲಕ್ಷ್ಮೀ ಬಾರಮ್ಮದ ಕಥೆ ಮುಂದುವರಿಯುತ್ತಿಲ್ಲ ಎನ್ನುವುದು ವೀಕ್ಷಕರ ವಾದ. ಲಕ್ಷ್ಮೀ ಎಷ್ಟೇ ಕಷ್ಟಪಟ್ಟರು ಕಾವೇರಿ ಮಾತ್ರ ಆರಾಮಾಗಿದ್ದಾಳೆ. ಕಥೆ ಅಲ್ಲೇ ಸುತ್ತುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷರಿಗೆ ಬೋರಿಂಗ್ ಎನಿಸಲು ಆರಂಭವಾಗಿದೆ. ಕೀರ್ತಿ ಸಾವಿನ ನಂತರದ ಎಪಿಸೋಡ್‌ಗಳನ್ನು ವೀಕ್ಷಕರು ಅಷ್ಟಾಗಿ ಇಷ್ಟಪಡುತ್ತಿಲ್ಲ. ಕಥೆ ಮುಂದುವರೆಯುತ್ತಿಲ್ಲ ಎನ್ನುವುದು ಲಕ್ಷ್ಮಿ ಬಾರಮ್ಮ ಧಾರಾವಾಹಿ ವೀಕ್ಷಕರ ಅಭಿಪ್ರಾಯ. ಕೀರ್ತಿ ಸಾವಿನ ನಂತರದಲ್ಲಿ ಧಾರಾವಾಹಿ ಕಥೆ ಮುಂದುವರೆಯುತ್ತಿಲ್ಲ. ಲಕ್ಷ್ಮೀ ಎಷ್ಟೇ ಪ್ರಯತ್ನಪಟ್ಟರೂ ಕಾವೇರಿಯ ಗುಟ್ಟು ರಟ್ಟು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. “ಧಾರಾವಾಹಿ ಹೆಸರು ಲಕ್ಷ್ಮಿ ಬಾರಮ್ಮ ಅಲ್ಲ, ಲಕ್ಷ್ಮೀ ಹೋಗಮ್ಮ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಲಕ್ಷ್ಮೀ ಎಷ್ಟೇ ಸತ್ಯ ಹೇಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ. ಕಾವೇರಿ ಮಾತ್ರ ಚಿಕ್ಕಪುಟ್ಟ ಸುಳ್ಳುಗಳನ್ನು ಹೇಳಿಯೂ ತಪ್ಪಿಸಿಕೊಳ್ಳುತ್ತಿದ್ದಾಳೆ. ಎಷ್ಟು ಬಾರಿ ಲಕ್ಷ್ಮೀ ಪ್ರಯತ್ನ ಮಾಡುವುದು ಕಾವೇರಿ ತಪ್ಪಿಸಿಕೊಳ್ಳುವುದು ಮಾಡುತ್ತೀರಿ? ಇದನ್ನು ಬಿಟ್ಟು ಕಥೆ ಮುಂದುವರೆಸಿ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಲಕ್ಷ್ಮಿ ಅಳುತ್ತಾ ನಾನು ಈ ಮನೆಯಿಂದ ಹೋಗುತ್ತೇನೆ, ಆದರೆ ಮುಂದೊಂದು ದಿನ ನಿಮ್ಮ ಮುಖವಾಡದ ಪರದೆಯನ್ನು ಕಳಚುತ್ತೇನೆ ಎಂದು ಶಪಥ ಮಾಡುತ್ತಾಳೆ. ಈ ಪ್ರೋಮೋ ಬಿಡುಗಡೆಯಾದ ತಕ್ಷಣ ಬಂದ ಜನಾಭಿಪ್ರಾಯವನ್ನು ನಾವಿಲ್ಲಿ ನೀಡಿದ್ದೇವೆ.
ಹೀಗಿದೆ ಜನಾಭಿಪ್ರಾಯ
ಪ್ರಿಯಾಂಕಾ ರಾಧಿಕಾ ರವಿ ಅವರು ಬದಲಾದ ಸೀರಿಯಲ್ ನೇಮ್ "ಲಕ್ಷ್ಮೀ ಹೋಗಮ್ಮ" ಎಂದು ಕಾಮೆಂಟ್ ಮಾಡಿದ್ದಾರೆ.
“ಈ ಸೀರಿಯಲ್ ಹೆಸರು ಲಕ್ಷ್ಮೀ ಬಾರಮ್ಮ ಅಲ್ಲ ಗರಗಸ ಅಥವಾ ರಬ್ಬರ್ ಅಂತ ಇಡಿ ಮ್ಯಾಚ್ ಆಗತ್ತೆ” ಎಂದು ಶ್ರುತಿ ಶ್ರುತಿ ಚೇತನ್ ಕಾಮೆಂಟ್ ಮಾಡಿದ್ದಾರೆ. ಇನ್ಮೇಲೆ “ಸೀರಿಯಲ್ ಹೆಸರು ಲಕ್ಷ್ಮಿ ಬಾರಮ್ಮ ಅಲ್ಲ ಲಕ್ಷ್ಮಿ ಹೋಗಮ್ಮ ಎಂದು ಬದಲಾಗಿದೆ” ಎಂದು ಮೀನಾ ಲಹರಿ ಎಂಬುವವರು ಕಾಮೆಂಟ್ ಮಾಡಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
