Lakshmi Baramma: ಲಕ್ಷ್ಮೀ ವರ್ತನೆ ನೋಡಿ ಕಂಗಾಲಾದ ವೈಷ್ಣವ್; ಲಕ್ಷ್ಮೀಯನ್ನು ಮತ್ತೆ ಹುಚ್ಚಿ ಎಂದ ಕಾವೇರಿ
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾರಿನಲ್ಲಿ ಕೀರ್ತಿ ಇದ್ದಾಳೆ ಎಂದು ಲಕ್ಷ್ಮೀ ಅಂದುಕೊಳ್ಳುತ್ತಾ ಕಾರಿನ ಮೇಲೆ ಕಲ್ಲು ಬಿಸಾಡಿದ್ದಾಳೆ. ಆದರೆ ಅವಳ ವರ್ತನೆ ನೋಡಿ ಅವಳನ್ನು ಮತ್ತೆ ಹುಚ್ಚಿ ಎಂದು ಹೇಳುತ್ತಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಎಷ್ಟೇ ಸಮಾಧಾನ ಮಾಡಲು ಪ್ರಯತ್ನ ಮಾಡುತ್ತಿದ್ದರೂ ಲಕ್ಷ್ಮೀ ಮಾತ್ರ ಯಾವುದನ್ನೂ ಕೇಳುತ್ತಿಲ್ಲ. ಕೀರ್ತಿ ಎಲ್ಲಿದಿರಾ ಕೀರ್ತಿ ಎಂದು ದೊಡ್ಡದಾಗಿ ಕಿರುಚುತ್ತಾ ಇದ್ದಾಳೆ. ಆದರೆ ವೈಷ್ಣವ್ ಮಾತ್ರ ಅವಳು ಎಲ್ಲಿಗೂ ಹೋಗದ ಹಾಗೆ ಗಟ್ಟಿಯಾಗಿ ಅವಳ ಕೈ ಹಿಡಿದುಕೊಂಡು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿದ್ದಾನೆ. ಆಗ ಕಾವೆರಿ “ಮತ್ತೇನು ನಾಟಕ ಶುರು ಮಾಡಿದ್ಲು ಇವ್ಳು” ಎಂದು ಪ್ರಶ್ನೆ ಮಾಡುತ್ತಾಳೆ. ಆಗ ವೈಷ್ಣವ್ ಅಮ್ಮಾ ನಾಟ್ಕ್ ಅಂತೆಲ್ಲ ಹೇಳ್ಬೇಡ ನೀನು ಎಂದು ಮತ್ತೊಮ್ಮೆ ತನ್ನ ತಾಯಿಗೆ ಬೈತಾನೆ. ಅವಳನ್ನು ಸುಮ್ಮನಿರಿಸುವ ಪ್ರಯತ್ನ ಮಾಡುತ್ತಾನೆ. ಅದಾದ ನಂತರಲ್ಲಿ ಲಕ್ಷ್ಮೀ ಹಾಗೂ ಕಾವೇರಿ ಇಬ್ಬರೂ ಸುಮ್ಮನಾಗುವುದಿಲ್ಲ.
ಲಕ್ಷ್ಮೀಗೆ ಹುಚ್ಚು ಎಂದ ಕಾವೇರಿ
ಲಕ್ಷ್ಮೀಗೆ ಹುಚ್ಚು ಎಂದು ಕಾವೇರಿ ಸಾಬೀತು ಮಾಡುತ್ತಲೇ ಹೋಗುತ್ತಾಳೆ. ಇನ್ನು ನಾನು ಕೀರ್ತಿನಾ ನೋಡಿದಿನಿ ಎಂದು ಹೇಳುವುದನ್ನು ಲಕ್ಷ್ಮೀ ಮಾತ್ರ ನಿಲ್ಲಿಸೋದಿಲ್ಲ. ಒಟ್ಟಿನಲ್ಲಿ ಇವರಿಬ್ಬರನ್ನು ನೋಡಿ ಮನೆಯವರು ತಾವು ಇನ್ನೇನು ಮಾಡಬೇಕು ಎಂದು ತೋಚದೆ ಸುಮ್ಮನೆ ನಿಂತಿದ್ಧಾರೆ. ಆಗ ಗಂಗಕ್ಕ ಹೇಳುತ್ತಾಳೆ. ನಾನು ಈ ರೀತಿ ಯೋಚನೆ ಮಾಡಿಕೊಂಡು ಕೂತ್ರೆ ಆಗೋದಿಲ್ಲ. ಸುಪ್ರಿತಾ ಅಕ್ಕ ನೀವು ಈಗ ಏನಾದ್ರೂ ಮಾತಾಡ್ಲೇ ಬೇಕು. ಕಾವೇರಮ್ಮನ ಅಭಿನಯ ನೋಡಿದ್ರೆ ಎಲ್ಲರೂ ಲಕ್ಷ್ಮಕ್ಕಂಗೆ ಹುಚ್ಚು ಎಂದೇ ಅಂದುಕೊಳ್ಳುತ್ತಾರೆ ಎಂದು ಹೇಳುತ್ತಾಳೆ. ಆಗ ಸುಪ್ರಿತಾ ಕೂಡ ಹೌದು ಗಂಗಕ್ಕ ಹೇಳ್ತಾ ಇರುವ ಮಾತು ನಿಜ ಎಂದು ಅಂದುಕೊಂಡು ಅವಳು ಹೇಳಿದ ಹಾಗೇ ತಾನು ಲಕ್ಷ್ಮೀ ಪರ ಧ್ವನಿ ಎತ್ತುತ್ತಾಳೆ.
“ಆಗ ವೈಷ್ಣವ್ ಮತ್ತೆ ಮಾತಾಡ್ತಾನೆ. ನೋಡಿ ಮಹಾಲಕ್ಷ್ಮೀ ನಾನು ನನ್ನ ಕೈಯ್ಯಾರೆ ಕೀರ್ತಿ ಚಿತೆಗೆ ಬೆಂಕಿ ಇಟ್ಟು ಬಂದಿದ್ದೇನೆ. ಅದನ್ನು ನೀವೂ ಕೂಡ ನೋಡಿದ್ದೀರಾ. ಆದ್ರೆ ಈಗ ಮತ್ತೆ ಅದೇ ವಿಷಯವನ್ನು ಇಟ್ಕೊಂಡು ನೀವು ನಿಮ್ಮ ಮನಸು ಕೆಡಿಸಿಕೊಂಡಿದ್ದೀರಾ. ಈ ರೀತಿ ಮಾಡೋದು ಸರಿ ಅಲ್ಲ. ನಾವು ನಮ್ಮ ಜೀವನ ಮಾಡ್ಬೇಕಲ್ವ?” ಎಂದು ಪ್ರಶ್ನೆ ಮಾಡುತ್ತಾನೆ. ಹೇಗಾದರೂ ಮಾಡಿ ಸುಮ್ಮನಿರಿಸಬೇಕು ಎಂದು ಅಂದುಕೊಳ್ಳುತ್ತಾನೆ. ಆದರೆ ಅದು ಮಾತ್ರ ಸಾಧ್ಯ ಆಗುವ ರೀತಿ ಕಾಣುತ್ತಿಲ್ಲ.
ನಿಜವಾಗಿ ಕೀರ್ತಿ ಸತ್ತಿಲ್ಲ ಎಂದಾದರೆ ವೀಕ್ಷಕರಿಗೂ ಒಂದು ರೀತಿಯ ಖುಷಿ ಇರ್ತಾ ಇತ್ತು.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.