Lakshmi Baramma Serial: ಕಾವೇರಿ ಅಂದುಕೊಂಡದ್ದೆಲ್ಲ ಸುಳ್ಳಾಯ್ತು; ಸತ್ತಳು ಎಂದುಕೊಂಡಿದ್ದ ಲಕ್ಷ್ಮೀ ಈಗ ಮನೆಯಲ್ಲೇ ಪ್ರತ್ಯಕ್ಷ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಕಾವೇರಿ ಅಂದುಕೊಂಡದ್ದೆಲ್ಲ ಸುಳ್ಳಾಯ್ತು; ಸತ್ತಳು ಎಂದುಕೊಂಡಿದ್ದ ಲಕ್ಷ್ಮೀ ಈಗ ಮನೆಯಲ್ಲೇ ಪ್ರತ್ಯಕ್ಷ

Lakshmi Baramma Serial: ಕಾವೇರಿ ಅಂದುಕೊಂಡದ್ದೆಲ್ಲ ಸುಳ್ಳಾಯ್ತು; ಸತ್ತಳು ಎಂದುಕೊಂಡಿದ್ದ ಲಕ್ಷ್ಮೀ ಈಗ ಮನೆಯಲ್ಲೇ ಪ್ರತ್ಯಕ್ಷ

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಲಕ್ಷ್ಮೀ ಸತ್ತು ಹೋಗಿದ್ದಾಳೆ ಎಂದು ಅಂದುಕೊಂಡು ಕಾವೇರಿ ಸುಮ್ಮನಿರುತ್ತಾಳೆ. ಆದರೆ ಈಗ ಅವಳು ಮನೆಯ ಒಳಗೇ ಬಂದು ಕೂತಿರುವುದನ್ನು ನೋಡಿ ಗಾಬರಿ ಆಗಿದ್ದಾಳೆ.

ಅಹಂಕಾರದಲ್ಲಿ ಕೂತ ಕಾವೇರಿಗೆ ಕಾದಿತ್ತು ಶಾಕ್
ಅಹಂಕಾರದಲ್ಲಿ ಕೂತ ಕಾವೇರಿಗೆ ಕಾದಿತ್ತು ಶಾಕ್ (ಕಲರ್ಸ್‌ ಕನ್ನಡ)

ಪೊಲೀಸ್‌ ದುರ್ಗಾ ಮೇಲೆ ಅನುಮಾನ ಬರುವ ರೀತಿಯಲ್ಲಿ ಕಾವೇರಿ ನಡೆದುಕೊಂಡಿರುತ್ತಾಳೆ. ಮಣ್ಣಿನಲ್ಲಿ ಹೂತಿಟ್ಟ ಚೀಲದಲ್ಲಿ ಲಕ್ಷ್ಮೀ ಇರೋದಿಲ್ಲ. ಅದನ್ನು ನೋಡಿ ಕಾವೇರಿಗೆ ನಿಜಕ್ಕೂ ಬೇಸರ ಆಗಿರುತ್ತದೆ. ಆದರೆ ಒಂದು ರೀತಿಯಲ್ಲಿ ಸಂತೋಷವೂ ಆಗಿರುತ್ತದೆ. ಯಾಕೆಂದರೆ ಅಲ್ಲಿ ಏನಾದರೂ ಲಕ್ಷ್ಮೀಯ ದೇಹ ಸಿಕ್ಕಿದ್ದರೆ ಕಾವೇರಿ ಸತ್ತಂತೆ ಎಂದು ಅರ್ಥ. ಯಾಕೆಂದರೆ ಅವಳೇ ಎಲ್ಲವನ್ನೂ ಮಾಡಿಸಿದ್ದಾಳೆ. ಲಕ್ಷ್ಮೀ ಸಾವಿಗೂ ಕಾವೇರಿನೆ ಕಾರಣ ಆಗಿರುತ್ತಾಳೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಆದರೆ ಈಗ ಹಾಗಾಗಲಿಲ್ಲ ಎನ್ನುವ ನೆಮ್ಮದಿಯಲ್ಲಿ ಕಾವೇರಿ ಇರುತ್ತಾಳೆ. ಅದೇ ಸಮಯಕ್ಕೆ ಮನೆಯ ಇನ್ನೊಂದು ಕೋಣೆಯ ಹತ್ತಿರದಿಂದ ಗಂಗಕ್ಕ ಕೂಗಿಕೊಳ್ಳುತ್ತಾಳೆ.

ವೈಷ್ಣವ್‌ ಅಣ್ಣ… ಎಂದು ಗಂಗಕ್ಕ ಕರೆದ ಶಬ್ಧಕ್ಕೆ ಎಲ್ಲರೂ ಹೆದರಿಕೊಂಡು ಆ ಕಡೆಗೇ ಓಡಿ ಹೋಗುತ್ತಾರೆ. ಓಡಿ ಹೋಗಿ ನೋಡುವಷ್ಟರಲ್ಲಿ ಗಂಗಕ್ಕ ಬೆವತು ಹೋಗಿರುತ್ತಾಳೆ. ಅದೇ ಸಮಯಕ್ಕೆ ಕಾವೇರಿಗೆ ಒಂದು ಮೆಸೆಜ್ ಬರುತ್ತದೆ. ಆ ಮೆಸೆಜ್‌ನಲ್ಲಿ ಬರೆದಿರುವುದು ಏನೆಂದರೆ "ಭಾನುಮತಿಯ ಕಡೆಯಿಂದ ಎಲ್ಲ ಕೆಲಸ ಆಗಿದೆ. ನಿಮ್ಮ ಮನೆಯಿಂದ ತೆಗೆದುಕೊಂಡು ಹೋದ ಪಾರ್ಸಲ್‌ ನೆಲದ ಅಡಿಯಲ್ಲಿ ಸರಿಯಾಗಿ ಡೆಲವರಿ ಆಗಿದೆ" ಎಂದು. ಆ ಮೆಸೆಜ್ ಓದುತ್ತಿದ್ದಂತೆ ಕಾವೇರಿಗೆ ಎಲ್ಲಿಲ್ಲದ ಆನಂದ. ಅಂತೂ ತಾನು ಅಂದುಕೊಂಡದ್ದನ್ನು ಸಾಧಿಸಿಬಿಟ್ಟಿದ್ದೇನೆ ಎನ್ನುವ ಒಂದು ಮಹದಾನಂದದಿಂದ ಅವಳು ಕಳೆದು ಹೋಗಿದ್ದಾಳೆ.

ಇನ್ನು ಇತ್ತ ವೈಷ್ಣವ್‌ಗೆ ಗಾಬರಿ ಹೆಚ್ಚಾಗಿದೆ. “ಏನಾಯ್ತು ಗಂಗಕ್ಕ ಇಷ್ಟು ಜೋರಾಗಿ ಕಿರುಚಿದ್ರಿ?” ಎಂದು ಅವನು ಕೇಳುತ್ತಾನೆ. ಅದಕ್ಕೆ ಗಂಗ ಉತ್ತರ ಕೊಡುವ ಬದಲು ತೊದಲುತ್ತಾ ಇರುತ್ತಾಳೆ. ಇನ್ನು ಸುಪ್ರಿತಾ ಕೂಡ ತುಂಬಾ ಗಾಬರಿಯಿಂದ ಅವಳನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಾಳೆ. ಆದರೆ ಅಷ್ಟರಲ್ಲಾಗಲೇ ಗಂಗಕ್ಕ ಬೆವತು ಹೋಗಿರುತ್ತಾಳೆ. ತಾನು ಏನು ಮಾತಾಡುತ್ತಾ ಇದ್ದೇನೆ ಅನ್ನೋದು ಕೂಡ ಅವಳಿಗೆ ಗೊತ್ತಾಗುತ್ತಾ ಇರೋದಿಲ್ಲ.

ಇನ್ನು ವೈಷ್ಣವ್‌ಗೆ ಕೋಪ ಬರುತ್ತದೆ. ಆಗ ಕಾವೇರಿ ಕೂಡ ಇಲ್ಲಿ ಏನಾಗ್ತಾ ಇದೆ ಒಮ್ಮೆ ಗಮನಿಸೋಣ ಎಂದು ಎದ್ದು ಬರುತ್ತಾಳೆ. ಅವಳ ಮನಸಿನ ತುಂಬಾ ಆನಂದ ಇರುತ್ತದೆ. ಗಂಗಕ್ಕನಿಗೆ ಬೈದು “ಏನೇ ಅದು ಆಗಿನಿಂದ ತೊದಲುತ್ತ ಇದ್ದೀಯಾ? ಏನಾಯ್ತು ಅಂತ ಬಾಯ್ಬಿಡು” ಎಂದು ಗದರುತ್ತಾಳೆ. ಆಗ ಗಂಗಕ್ಕ ಎಲ್ಲ ಅಯೋಮಯ ಎಂದು ಹೇಳುತ್ತಾ ಕೋಣೆಯ ಒಳಗಡೆ ಕೈ ತೋರಿಸುತ್ತಾಳೆ. ಅಲ್ಲಿ ನೋಡಿದರೆ ಲಕ್ಷ್ಮೀ ಕೂತಿರುತ್ತಾಳೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಗಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎಡರು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಜನರು ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿಯಾಗಿದ್ದು ಪ್ರತಿಯೊಂದು ಎಪಿಸೋಡ್‌ನ ಕಥೆಗಳೂ ಕುತೂಹಲಕಾರಿಯಾಗಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner