ಲಕ್ಷ್ಮೀ ಬದುಕಿ ಬಂದದ್ದು ಹೇಗೆ ಎಂಬ ಭಯದಲ್ಲಿದ್ದಾಳೆ ಕಾವೇರಿ; ತನ್ನನ್ನು ಕಾಪಾಡಿದ್ದಕ್ಕೆ ದುರ್ಗಾಗೆ ಧನ್ಯವಾದ ತಿಳಿಸಿದ ಲಕ್ಷ್ಮೀ
ಕನ್ನಡ ಸುದ್ದಿ  /  ಮನರಂಜನೆ  /  ಲಕ್ಷ್ಮೀ ಬದುಕಿ ಬಂದದ್ದು ಹೇಗೆ ಎಂಬ ಭಯದಲ್ಲಿದ್ದಾಳೆ ಕಾವೇರಿ; ತನ್ನನ್ನು ಕಾಪಾಡಿದ್ದಕ್ಕೆ ದುರ್ಗಾಗೆ ಧನ್ಯವಾದ ತಿಳಿಸಿದ ಲಕ್ಷ್ಮೀ

ಲಕ್ಷ್ಮೀ ಬದುಕಿ ಬಂದದ್ದು ಹೇಗೆ ಎಂಬ ಭಯದಲ್ಲಿದ್ದಾಳೆ ಕಾವೇರಿ; ತನ್ನನ್ನು ಕಾಪಾಡಿದ್ದಕ್ಕೆ ದುರ್ಗಾಗೆ ಧನ್ಯವಾದ ತಿಳಿಸಿದ ಲಕ್ಷ್ಮೀ

Lakshmi Baramma: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿದುರ್ಗಾ ಯಾರು ಎಂದು ಕಂಡುಹಿಡಿಯಲು ಕಾವೇರಿ ಪ್ರಯತ್ನ ಮಾಡುತ್ತಾ ಇದ್ದಾಳೆ. ಎಷ್ಟು ಆಲೋಚನೆ ಮಾಡಿದರೂ ಲಕ್ಷ್ಮೀ ಬದುಕಿ ಬಂದದ್ದು ಹೇಗೆ ಎಂಬುದು ಅವಳಿಗೆ ಅರ್ಥವೇ ಆಗುತ್ತಿಲ್ಲ. ಹೀಗಿರುವಾಗ ಅವಳ ಫೋಟೋ ಕೂಡ ಬಿದ್ದು ಒಡೆದು ಹೋಗುತ್ತದೆ.

ಲಕ್ಷ್ಮೀಯನ್ನು ಕಾಪಾಡಿದ ದುರ್ಗಾ ಯಾರು ಅನ್ನೋದೆ ಕಾವೇರಿಯ ಅನುಮಾನ
ಲಕ್ಷ್ಮೀಯನ್ನು ಕಾಪಾಡಿದ ದುರ್ಗಾ ಯಾರು ಅನ್ನೋದೆ ಕಾವೇರಿಯ ಅನುಮಾನ (ಕಲರ್ಸ್‌ ಕನ್ನಡ)

ದುರ್ಗಾ ಹೇಗೋ ಮಾಡಿ ಲಕ್ಷ್ಮೀಯನ್ನು ಕಾಪಾಡಿದ್ದಾಳೆ. ಅವಳು ಮಾತನಾಡುವುದನ್ನು ನೋಡಿದರೆ ಇವಳು ಮನುಷ್ಯಳಲ್ಲ ಎಂದು ತೋರುತ್ತದೆ. ಯಾಕೆಂದರೆ ಅವಳು ಆಡುವ ಪ್ರತಿಯೊಂದು ಮಾತಿಗೂ ಅಷ್ಟು ತೂಕವಿದೆ. ಲಕ್ಷ್ಮೀ ದುರ್ಗಾಳನ್ನು ಮಾತನಾಡಿಸುತ್ತಾ ತುಂಬಾ ಸಮಯ ಕಳೆಯುತ್ತಾಳೆ. ನೀವು ಯಾರು? ಎಂದು ಪ್ರಶ್ನೆ ಮಾಡುತ್ತಾಳೆ. ಆದರೆ ದುರ್ಗಾ ನೀಡುವ ಎಲ್ಲ ಉತ್ತರಗಳೂ ತುಂಬಾ ಒಗಟಾಗಿರುತ್ತದೆ. ಅವಳು ನೀಡಿದ ಎಲ್ಲ ಉತ್ತರಗಳನ್ನು ಅರ್ಥ ಮಾಡಿಕೊಳ್ಳಲಾಗದೆ ಲಕ್ಷ್ಮೀ ನಿಂತಿರುತ್ತಾಳೆ. ಲಕ್ಷ್ಮೀ ದುರ್ಗಾಳಿಗೆ ಧನ್ಯವಾದ ಹೇಳುತ್ತಾಳೆ. ನೀವು ಯಾರು ಅಂತಾನೇ ನನಗೆ ಗೊತ್ತಿಲ್ಲ. ಆದರೂ ನೀವು ನನ್ನ ಕಾಪಾಡಿದ್ದೀರಿ ಅದಕ್ಕೆ ಧನ್ಯವಾದ ಎಂದು ಹೇಳುತ್ತಾಳೆ.

ಅದರಲ್ಲಿ ಧನ್ಯವಾದ ಹೇಳುವುದೇನಿದೆ. ನಿನ್ನನ್ನು ಕಾಪಾಡುವುದು ನನ್ನ ಕರ್ತವ್ಯ. ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಹೇಳುತ್ತಾಳೆ. ನಿಮ್ಮ ಹೆಸರು ಎಂದು ಹೆಸರು ತಿಳಿದುಕೊಳ್ಳಲು ಕೇಳಿದಾಗ ದುರ್ಗಾ ತನ್ನ ಹೆಸರನ್ನು ಹೇಳುವುದಿಲ್ಲ. ಒಬ್ಬೊಬ್ಬರು ನನ್ನನ್ನು ಒಂದೊಂದು ಹೆಸರಿನಿಂದ ಕರೆಯುತ್ತಾರೆ ಎಂದು ಹೇಳುತ್ತಾಳೆ. ನಿನ್ನ ಹೆಸರೇ ನನ್ನ ಹೆಸರೂ ಕೂಡ ಕೆಲವರು ಲಕ್ಷ್ಮೀ ಎಂದು ನನ್ನ ಕರೆಯುತ್ತಾರೆ ಎಂದು ಹೇಳುತ್ತಾಳೆ.

ಆದ್ರೆ ನಾನು ನಿಮ್ಮನ್ನು ಯಾವ ಹೆಸರಿನಿಂದಲೂ ಕರೆದಿಲ್ಲ. ಆದ್ರೂ ನೀವು ಬಂದು ನನ್ನ ಕಾಪಾಡಿದ್ರಿ ಎಂದು ಲಕ್ಷ್ಮೀ ಹೇಳುತ್ತಾಳೆ. ಕಾಲಾ ಯಾವಾಗ ನಮ್ಮನ್ನು ಎಲ್ಲಿಗೆ ಕರೆಯುತ್ತೋ ನಾವು ಅಲ್ಲಿಗೆ ಹೋಗಲೇಬೇಕು ಎಂದು ಹೇಳುತ್ತಾಳೆ ದುರ್ಗಾ.

ಕಾವೇರಿ ಆಲೋಚನೆ ಏನು?
ಕಾವೇರಿ ತುಂಬಾ ಹೊತ್ತು ಆಲೋಚಿಸುತ್ತಾಳೆ. ಏನು ಮಾಡಬೇಕು ಎಂದು ತಿಳಿಯದೇ ಅತ್ತಿಂದಿತ್ತ ಓಡಾಡುತ್ತಾ ಇದ್ಧಾಳೆ. ಹೇಗೆ ಲಕ್ಷ್ಮೀ ಸಾವಿನಿಂದ ಗೆದ್ದು ಬಂದಿದ್ಧಾಳೆ? ಯಾಕೆ ನಾನು ಮಾಡಿದ ಐಡಿಯಾ ಪ್ಲಾಪ್ ಆಯ್ತು ಎಂದು ಯೋಚಿಸುತ್ತಾಳೆ. ಕೀರ್ತಿ ಆತ್ಮ ಏನಾದ್ರೂ ಲಕ್ಷ್ಮೀ ಮೇಲೆ ಬಂದು ಅವಳನ್ನು ಕಾಪಾಡಿತ್ತಾ ಅನ್ನೋ ಆಲೋಚನೆಯನ್ನು ಕೂಡ ಮಾಡುತ್ತಾ ಇರುತ್ತಾಳೆ. ಅಷ್ಟರಲ್ಲಿ ಅವಳ ಫೋಟೋ ಮೇಲಿನಿಂದ ಬಿದ್ದು ಒಡೆದು ಹೋಗುತ್ತದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಗಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎಡರು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಜನರು ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿಯಾಗಿದ್ದು ಪ್ರತಿಯೊಂದು ಎಪಿಸೋಡ್‌ನ ಕಥೆಗಳೂ ಕುತೂಹಲಕಾರಿಯಾಗಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner