Lakshmi Baramma Serial: ಅತ್ತೆಯ ವಿರುದ್ಧ ಶಪಥ ಮಾಡಿದ ಲಕ್ಷ್ಮೀ; ಕಾವೇರಿ ಕಣ್ಣಲ್ಲಿ ಈಗ ಭಯ ಎದ್ದು ಕಾಣ್ತಿದೆ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ, ಲಕ್ಷ್ಮೀಯನ್ನು ಮನೆಯಿಂದ ಹೊರ ಹಾಕಲು ರೆಡಿಯಾಗಿದ್ದಾಳೆ. ಲಕ್ಷ್ಮೀ ಶಪಥ ಮಾಡಿದ್ದಾಳೆ. ವೈಷ್ಣವ್ ತಾನೇನು ಮಾಡಬೇಕು ಎಂದು ತೋಚದೆ ಸುಮ್ಮನಾಗಿದ್ದಾನೆ.

ಲಕ್ಷ್ಮೀಯನ್ನು ಮನೆಯಿಂದ ಹೊರಗಡೆ ಕಳಿಸದೇ ಬಿಡೋಳು ಕಾವೇರಿ ಅಲ್ಲ. ಅವಳ ಕೋಪಕ್ಕೆ ಮತ್ತವಳ ಅಹಂಕಾರಕ್ಕೆ ಯಾರನ್ನು ಏನು ಬೇಕಾದರೂ ಮಾಡುತ್ತಾಳೆ ಕಾವೇರಿ. ಹೀಗಿರುವಾಗ ಇಂದು ಸಡನ್ ಆಗಿ ಪೂಜೆ ನಡೆಯುತ್ತಿರುವ ಸಂದರ್ಭದಲ್ಲೇ ಲಕ್ಷ್ಮೀಯನ್ನು ಮನೆಯಿಂದ ಹೊರಹಾಕಲು ನೋಡಿದ್ದಾಳೆ. ಏನೇ ಆಗಲಿ ಇಂದು ಅವಳು ಮಾತ್ರ ಈ ಮನೆಯಲ್ಲಿ ಇರಬಾರದು ಎಂದು ಹೇಳುತ್ತಾಳೆ. ತಾನೇ ವೈಷ್ಣವ್ ಹಾಗೂ ಲಕ್ಷ್ಮೀ ರೂಮಿಗೆ ಹೋಗುತ್ತಾಳೆ. ಹೋಗಿ ಅಲ್ಲಿಂದ ಬಟ್ಟೆಯನ್ನು ಪ್ಯಾಕ್ ಮಾಡುತ್ತಾಳೆ. ಒಂದಷ್ಟು ಬಟ್ಟೆಗಳನ್ನು ತುಂಬಿ ಲಕ್ಷ್ಮೀಯನ್ನು ಅಲ್ಲಿಂದ ಹೊರಗೆಳೆದುಕೊಂಡು ಬರುತ್ತಾಳೆ.
ಅದಕ್ಕೆ ಅವಳು ಕೊಟ್ಟ ಕಾರಣ ಏನು ಎಂದರೆ ಲಕ್ಷ್ಮೀ ಮಾನಸಿಕವಾಗಿ ಸರಿ ಇಲ್ಲ. ಆ ಕಾರಣಕ್ಕಾಗಿ ಅವಳು ಟ್ರೀಟ್ಮೆಂಟ್ ತೆಗೆದುಕೊಳ್ಳಲು ಹೋಗಬೇಕು ಎಂಬುದಾಗಿ. ಆದರೆ ಲಕ್ಷ್ಮೀಗೆ ಇದ್ಯಾವುದೂ ಇಷ್ಟ ಇರುವುದಿಲ್ಲ. ಕಾರಣ ಅವಳ ಮಾನಸಿಕ ಸ್ಥಿತಿ ಸರಿಯಾಗೇ ಇರುತ್ತದೆ. ಅವಳು ಸತ್ಯ ಹೇಳಿದರೆ ಯಾರೂ ನಂಬದ ಸ್ಥಿತಿಯಲ್ಲಿ ಇರುತ್ತಾರೆ. ಲಕ್ಷ್ಮೀಯ ಪರ ಇದ್ದ ಒಬ್ಬೊಬ್ಬರನ್ನೇ ಕಾವೇರಿ ತಲೆತಿರುಗಿಸಿ ತನ್ನ ಪರ ಮಾಡಿಕೊಂಡಿದ್ದಾಳೆ.
ಲಕ್ಷ್ಮೀ ದೇವಿಗೆ ಆರತಿ ಮಾಡುತ್ತಾ ಇರುತ್ತಾಳೆ. ಆಗ ಕಾವೇರಿ ಎಲ್ಲರ ಸಮ್ಮುಖದಲ್ಲಿ ಅವಳನ್ನು ಹೊರಹಾಕಲು ನೋಡುತ್ತಾಳೆ. ಅವಳ ಮಾತಿನ ಪ್ರಕಾರ ಲಕ್ಷ್ಮೀ ಈಗ ಹೊರಗಡೆ ಹೋಗಲೇಬೇಕು ಎಂದು ವೈಷ್ಣವ್ ಕೂಡ ಹೇಳುತ್ತಾನೆ. ಗಂಡನೂ ತನ್ನ ಪರ ನಿಲ್ಲದೆ ಇದ್ದಾಗ ಯಾರು ತಾನೆ ಏನು ಮಾಡಲು ಆಗುತ್ತದೆ. ಆ ಕಾರಣ ಈಗ ಲಕ್ಷ್ಮೀ ಕೂಡ ಒಪ್ಪಿಕೊಂಡಿದ್ದಾಳೆ. ಒಂದು ಶಪಥವನ್ನೂ ಮಾಡಿದ್ದಾಳೆ. ನಾನು ಈ ಮನೆಯಿಂದ ಹೊರಗಡೆ ಹೋಗಿ ಮತ್ತೆ ಬರುವಷ್ಟರಲ್ಲಿ ನಿಮ್ಮ ಮುಖವಾಡ ಕಳಚುತ್ತೇನೆ ಎಂದು ಹೇಳುದ್ದಾಳೆ.
ಆ ಮಾತನ್ನು ಕೇಳಿದ ಎಲ್ಲರಿಗೂ ಶಾಕ್ ಆಗಿದೆ. ಕಾವೇರಿಗೆ ಇವಳು ತನ್ನ ಬಗ್ಗೆ ಇರುವ ಸಾಕ್ಷಿಗಳನ್ನು ಖಂಡಿತ ಹುಡುಕಿ ತರುತ್ತಾಳೆ ಎಂದು ಅನಿಸಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಗಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎಡರು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಜನರು ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿಯಾಗಿದ್ದು ಪ್ರತಿಯೊಂದು ಎಪಿಸೋಡ್‌ನ ಕಥೆಗಳೂ ಕುತೂಹಲಕಾರಿಯಾಗಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
