Lakshmi Baramma: ಕಾವೇರಿ ಮುಖವಾಡ ಬಯಲು ಮಾಡಲು ನಡೆದಿದೆ ತಯಾರಿ; ಲಕ್ಷ್ಮೀ ಮಾತಲ್ಲೇ ಇತ್ತು ಕಾವೇರಿ ಕುತಂತ್ರದ ಸುಳಿವು
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಲಕ್ಷ್ಮೀ ಕಾವೇರಿಗೆ ಬಾಣ ಬಿಟ್ಟಿದ್ದಾಳೆ. ಬರಿ ಮಾತಿನ ಬಾಣಕ್ಕೇ ಹೆದರಿ ಕಂಗಾಲಾಗಿದ್ದಾಳೆ ಕಾವೇರಿ. ಜೊತೆಗಿದ್ದರೂ ಏನೂ ಮಾಡಲಾಗದ ವೈಷ್ಣವ್.

ಆಶ್ರಮಕ್ಕೆ ಲಕ್ಷ್ಮೀಯನ್ನು ಕರೆತಂದ ವೈಷ್ಣವ್ ಅಲ್ಲಿನವರ ವರ್ತನೆ ನೋಡಿ ಬೇಸರಗೊಂಡಿದ್ದಾನೆ. ಅಲ್ಲಿದ್ದವರೆಲ್ಲರೂ ಒಂದೊಂದು ರೀತಿಯಲ್ಲಿ ನಾಟಕೀಯವಾಗಿ ಮಾತಾಡುತ್ತಾ ಇದ್ದಾರೆ. ಆದರೆ ಯಾಕೆ ಎಂದು ಗೊತ್ತಾಗುತ್ತಿಲ್ಲ. ಪ್ರಭ್ರು ಎಂದು ವೈಷ್ಣವ್‌ನನ್ನು ಕೂಗಿದ್ದಾರೆ. ಇನ್ನು ಕಾವೇರಿಯನ್ನು ರಾವಣ ಎಂದುಕೊಂಡಿದ್ದಾರೆ. ಅವರೆಲ್ಲ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಅರ್ಥ ಆಗದೆ ಸೋತು ಹೋಗಿದ್ದಾನೆ. ಇನ್ನು ಲಕ್ಷ್ಮೀಗೂ ಇವರೇನು ಮಾಡುತ್ತಿದ್ದಾರೆ ಎಂದು ಅರ್ಥ ಆಗುತ್ತಿಲ್ಲ. ಅವಳು ಆತಂಕದಿಂದ ಎಲ್ಲವನ್ನೂ ನೋಡುತ್ತಿದ್ದಾಳೆ.
ಕಾವೇರಿಗೆ ಒಂದಷ್ಟು ಜನ ಸೇರಿಕೊಂಡು ಬಿದಿರಿನ ಬಾಣಗಳನ್ನು ಬಿಡುತ್ತಾರೆ. ಕಾವೇರಿ ನೋವಿನಿಂದ ಕೂಗಿಕೊಳ್ಳುತ್ತಾಳೆ. ಅಲ್ಲಿಗೆ ಆಶ್ರಮದ ಮೇಲ್ವಿಚಾರಕರು ಬಂದು ತಪ್ಪಿಸುತ್ತಾರೆ. “ಕ್ಷಮಿಸಿ ಅವರಿಗೆ ಏನೂ ತಿಳಿಯುವುದಿಲ್ಲ. ಅವರು ನಾಟಕ ಅಭ್ಯಾಸ ಮಾಡುತ್ತಿದ್ದರು. ಹಾಗಾಗಿ ನೀವೇ ರಾವಣ ಎಂದುಕೊಂಡು ಬಾಣ ಬಿಟ್ಟಿದ್ದಾರೆ” ಎಂದು ಹೇಳುತ್ತಾರೆ. ಆಗ ಕಾವೇರಿಗೆ ಕೋಪ ಇನ್ನಷ್ಟು ಹೆಚ್ಚಾಗುತ್ತದೆ.
ಇತ್ತ ವೈಷ್ಣವ್ ಹಾಗೂ ಲಕ್ಷ್ಮೀ ಇಬ್ಬರೂ ಆ ಜಾಗಕ್ಕೆ ಬರುತ್ತಾರೆ. ವೈಷ್ಣವ್ ಕಾವೇರಿಗೆ ಏನು ತೊಂದರೆಯಾಗಿದೆ ಎಂದು ಗಮನಿಸುತ್ತಾನೆ. ಸಮಾಧಾನ ಮಾಡುತ್ತಾನೆ. ಆದರೆ ಲಕ್ಷ್ಮೀ ಮಾತ್ರ ನಗುತ್ತಾಳೆ. “ಯಾಕೆ ನೀನು ನಗ್ತಾ ಇದ್ದೀಯಾ?” ಎಂದು ಕಾವೇರಿ ಕೇಳುತ್ತಾಳೆ. ಆಗ ಅವಳು ಹೇಳುತ್ತಾಳೆ “ನೀವು ತುಂಬಾ ಪ್ಲ್ಯಾನ್ ಮಾಡಿಕೊಂಡು ಬಂದು ನನ್ನ ಇಲ್ಲಿಗೆ ಸೇರಿಸ್ತಾ ಇದೀರಾ. ಆದ್ರೆ ಒಂದಲ್ಲ ಒಂದು ದಿನ ನಾನು ನಿಮ್ಮ ಮುಖವಾಡ ಕಳಚುತ್ತೇನೆ” ಎನ್ನುತ್ತಾಳೆ. ಆಗ ಕಾವೇರಿ ಮತ್ತೆ ಹೇಳುತ್ತಾಳೆ. ನೀನು ಈ ರೀತಿ ಹುಚ್ಚಾಗಿ ಮಾತಾಡುವುದರಿಂದಲೇ ನಿನ್ನನ್ನು ಇಲ್ಲಿಗೆ ತಂದಿರೋದು ಎಂದು.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಗಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಜನರು ತುಂಬಾ ಇಷ್ಟಪಟ್ಟು ನೋಡುವ ಧಾರಾವಾಹಿಯಾಗಿದ್ದು ಪ್ರತಿಯೊಂದು ಎಪಿಸೋಡ್‌ನ ಕಥೆಗಳೂ ಕುತೂಹಲಕಾರಿಯಾಗಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
