ಕನ್ನಡ ಸುದ್ದಿ  /  ಮನರಂಜನೆ  /  ಮಲ್ಲಿ ಗರ್ಭಿಣಿಯಾಗಲು ಕೇಡಿ ಜೈದೇವ್‌ ಕಾರಣ ಎಂಬ ಸತ್ಯ ಭೂಮಿಕಾಳಿಗೆ ತಿಳಿದಾಯ್ತು, ಮುಂದೆ? ಓದಿ ಅಮೃತಧಾರೆ ಸೀರಿಯಲ್‌ ಸ್ಟೋರಿ

ಮಲ್ಲಿ ಗರ್ಭಿಣಿಯಾಗಲು ಕೇಡಿ ಜೈದೇವ್‌ ಕಾರಣ ಎಂಬ ಸತ್ಯ ಭೂಮಿಕಾಳಿಗೆ ತಿಳಿದಾಯ್ತು, ಮುಂದೆ? ಓದಿ ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhaare Kannada Serial: ಒಂದೆಡೆ ಭೂಮಿಕಾ ಮತ್ತಿನಲ್ಲಿ ಗೌತಮ್‌ಗೆ ಮುತ್ತು ನೀಡುತ್ತಾಳೆ. ಇನ್ನೊಂದೆಡೆ ಅಪೇಕ್ಷಾ ಮತ್ತು ಪಾರ್ಥ ದುಃಖದಲ್ಲಿ ನಿದ್ದೆಯೇ ಮಾಡುವುದಿಲ್ಲ. ಇದೇ ಸಮಯದಲ್ಲಿ ಮಲ್ಲಿ ಗರ್ಭಿಣಿಯಾಗಲು ಜೈದೇವ್‌ ಕಾರಣ ಎಂಬ ಸತ್ಯ ಭೂಮಿಕಾಳಿಗೆ ತಿಳಿಯುತ್ತದೆ.

ಅಮೃತಧಾರೆ ಸೀರಿಯಲ್‌ ಸ್ಟೋರಿ
ಅಮೃತಧಾರೆ ಸೀರಿಯಲ್‌ ಸ್ಟೋರಿ

ಅಮೃತಧಾರೆ ಶುಕ್ರವಾರದ ಸಂಚಿಕೆಯಲ್ಲಿ ಕವಿತೆಯ ಮೂಲಕ ಗೌತಮ್‌ಗೆ ಪ್ರಪೋಸ್‌ ಮಾಡಿದ್ದ ಭೂಮಿಕಾ ಶನಿವಾರದ ಸಂಚಿಕೆಯಲ್ಲಿ ಏನು ಮಾಡಿದ್ರು ಎಂದು ನೋಡೋಣ.. ಗೆಳೆಯ ಆನಂದ ಮತ್ತು ಅಪರ್ಣಾ ಜ್ಯೂಸ್‌ಗೆ ಮದ್ಯ ಮಿಕ್ಸ್‌ ಮಾಡಿಕೊಟ್ಟಿರುವುದರಿಂದ ಭೂಮಿಕಾ ಮತ್ತಿನಲ್ಲಿದ್ದಾರೆ. "ಗೌತಮ್‌ ಅವರೇ ತುಂಬಾನೇ ಸ್ಮಾರ್ಟ್‌ ಆಗಿದ್ದೀರ, ಸುಂದರಾಂಗ" ಎಂದು ಭೂಮಿಕಾ ಹೇಳುತ್ತಾರೆ. ಥೇಟ್‌ ಕುಡುಕಿಯಂತೆ ನಟಿಸಿದ್ದಾರೆ. ನಮ್ಮಿಬ್ಬರ ನಡುವೆ ಎರಡು ನೂರು ಎಪಿಸೋಡ್‌ ಆಗುವಷ್ಟು ಕಂಟೆಂಟ್‌ ನಡೆದು ಹೋಗಿದೆ. ಇಷ್ಟು ಆದರೂ ಏನು ಕಡೆದುಹಾಕಿದ್ದೇವೆ. ಹತ್ತಿರವಿದ್ದರೂ ದೂರ ಇರುವೆವು" ಎಂದೆಲ್ಲ ಮಾತನಾಡುತ್ತಾ, ವಾಲಾಡುತ್ತಾ ಇರುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಗೌತಮ್‌ಗೆ ಮುತ್ತು ನೀಡಿದ ಭೂಮಿಕಾ

"ನಮ್ಮಿಬ್ಬರದ್ದು ಒಟ್ಟಿಗೆ ಇರೋ ಒಂದು ಫೋಟೋ ಇಲ್ಲ" ಅಂತಾರೆ ಭೂಮಿಕಾ. "ಮದುವೆ ಆಲ್ಬಂನಲ್ಲಿ ಇದೆಯಲ್ವ" ಅಂತಾರೆ ಗೌತಮ್‌. "ಅದನ್ನು ಯಾರಾದರೂ ಫೋಟೋ ಅಂತಾರ?" ಹೀಗೆಲ್ಲ ಸಂಭಾಷಣೆ ನಡೆದು ಕೊನೆಗೆ ಒಂದು ಸೆಲ್ಫಿ ತೆಗೆದುಕೊಳ್ಳಲು ಒಪ್ಪಿಸುತ್ತಾರೆ. ವಾಲಾಡುತ್ತಾ ಫೋಟೋ ತೆಗೆಯಲು ಪ್ರಯತ್ನಿಸುವಾಗ ಡುಮ್ಮ ಸರ್‌ನ ಸುಂದರ ಮುಖ ಕಾಣಿಸಿ ಒಂದು ಮುತ್ತು ನೀಡುತ್ತಾರೆ. ಓಹೋಹೋ ಎಂದು ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಬರುತ್ತದೆ. ಇದರಿಂದ ಗೌತಮ್‌ ಅಚ್ಚರಿಯಾಗಿ "ಏನ್ರಿ ಇದು" ಅಂತಾರೆ. "ಐ ಲವ್‌ ಯು ಗೌತಮ್‌ ಅವರೇ" ಎನ್ನುತ್ತಾರೆ ಭೂಮಿಕಾ. "ಸರಿ ಮನೆಗೆ ಹೋಗೋಣ" ಎನ್ನುತ್ತಾರೆ. "ಹೌದು ಮನೆ ಎಲ್ಲಾದರೂ ಹೋಗಿ ಬಿಟ್ಟರೆ ಕಷ್ಟ" ಎಂದು ಗೌತಮ್‌ ಹೇಳುತ್ತಾರೆ. ಒಟ್ಟಾರೆ ಈ ಸಂಚಿಕೆಯಲ್ಲಿ ಭೂಮಿಕಾ ಮತ್ತಿನ ಆಕ್ಟಿಂಗ್‌ ಸೂಪರ್‌ ಎನ್ನಬಹುದು. ಮನೆಗೆ ಹೋಗುತ್ತಾರೆ.

ಮನೆಗೆ ತಲುಪಿ ಗೌತಮ್‌ ಜತೆ ಒಂದಿಷ್ಟು ಮತ್ತಿನಲ್ಲೇ ಮಾತನಾಡುತ್ತ ಇರುವಾಗ ಅಮ್ಮನ ಫೋನ್‌ ಬರುತ್ತದೆ. ಕುಡಿತದ ಅಮಲಿನಲ್ಲಿ ಅಮ್ಮನಲ್ಲಿ ಭೂಮಿಕಾ ಮಾತನಾಡುತ್ತಾರೆ. "ನಾನು ಅಮ್ಮ ಪ್ರೈವೇಟ್‌ ಆಗಿ ಮಾತನಾಡ್ತ ಇದ್ದೇವೆ" ಎಂದು ಗೌತಮ್‌ನನ್ನು ಹೊರಕ್ಕೆ ಕಳುಹಿಸುತ್ತಾಳೆ. "ಅಳಿಯಂದಿರಿಗೆ ಏನಾದರೂ ಹೇಳಿದ್ದೀಯಾ?" ಅಂತ ಅಮ್ಮ ಕೇಳುತ್ತಾರೆ. ಗೌತಮ್‌ಗೆ ಮುತ್ತು ನೀಡಿದ ಸಂಗತಿಯನ್ನು ಮತ್ತಿನಲ್ಲೇ ಭೂಮಿಕಾ ಹೇಳುತ್ತಾಳೆ. ಎಲ್ಲರ ಎದುರುಗಡೆ ಖುಲ್ಲಾಂಖುಲ್ಲಾಂ ಕಿಸ್‌ ಕೊಟ್ಟೆ ಎಂದು ಹೇಳುತ್ತಾಳೆ. ಅಮ್ಮ ಅಚ್ಚರಿಗೊಳ್ಳುತ್ತಾಳೆ. ಆಮೇಲೆ ಮತ್ತಿನಲ್ಲೇ ಒಂದಿಷ್ಟು ಮಾತಾಗುತ್ತದೆ. "ಭೂಮಿ ಏನಾಗಿದೆ ನಿನಗೆ" ಎಂದಾಗ ಭೂಮಿ ಫೋನ್‌ ಕಟ್‌ ಆಗುತ್ತದೆ.

ಪಾರ್ಥ- ಅಪೇಕ್ಷಾರಿಗೆ ಪ್ರೀತಿ ಕಳೆದುಕೊಂಡ ನೋವು

ಪಾರ್ಥ ಮತ್ತು ಅಪೇಕ್ಷಾ ದುಃಖದಲ್ಲಿರುತ್ತಾರೆ. ಮಲಗಿದ್ದಾಗ ಪಾರ್ಥನಿಗೆ ಅಪೇಕ್ಷಾಳನ್ನು "ಅತ್ತಿಗೆ" ಎಂದು ಕರೆದ ವಿಷಯ ನೆನಪಾಗುತ್ತದೆ. ಇದೇ ಸಮಯದಲ್ಲಿ ಪಾರ್ಥ ಅಳುತ್ತಿರುವಾಗ ಆತನ ಅಮ್ಮ ಶಕುಂತಲಾ ಬರುತ್ತಾರೆ. ಇದೇ ರೀತಿ ಅಪೇಕ್ಷಾ ಅವಳ ಮನೆಯಲ್ಲಿ ಅಳುತ್ತಿರುವಾಗ ಅಮ್ಮ ಬರುತ್ತಾರೆ. ಇಬ್ಬರೂ ಏನಾಯಿತು ಎಂದು ತಮ್ಮ ಮಗ/ಮಗಳನ್ನು ಕೇಳುತ್ತಾರೆ. ಏನೂ ಹೇಳುವುದಿಲ್ಲ. ಪಾರ್ಥ ಶಕುಂತಲಾದೇವಿ ಮಡಿಲಲ್ಲಿ ಮಲಗಿ ದುಃಖಿಸುತ್ತಾನೆ. ಅಪೇಕ್ಷಾಳು ಅಮ್ಮನ ಮಡಿಲಲ್ಲಿ ದುಃಖಿಸುತ್ತಾಳೆ. "ನೀನು ಒಂದು ದೊಡ್ಡ ಮನೆ ಸೇರುತ್ತೀಯ" ಎಂದು ಅಮ್ಮ ಹೇಳುತ್ತಾಳೆ. ಪಾರ್ಥನ ಅಮ್ಮನಿಗೂ ಏನೋ ಸಂದೇಹ ಬರುತ್ತದೆ. "ಸಮ್‌ಥಿಂಗ್‌ ರಾಂಗ್‌, ಏನಾದರೂ ಬೇಕಿದ್ದರೆ ಕೇಳು, ತಂದುಕೊಡ್ತಿನಿ" ಎಂದು ಶಕುಂತಲಾದೇವಿ ಕೇಳ್ತಾರೆ. "ಅದು ಸಾಧ್ಯವಿಲ್ಲ" ಎಂದು ಪಾರ್ಥನ ಸ್ವಗತ ಇರುತ್ತದೆ. "ಯಾರನ್ನಾದರೂ ಪ್ರೀತಿಸ್ತಿಯಾ? ಅವಳು ಬೇಡ ಅಂದ್ಲ" ಎಂದು ಪಾರ್ಥನ ಅಮ್ಮ ಕೇಳುತ್ತಾರೆ. "ಅಂತಹದ್ದು ಏನೂ ಇಲ್ಲ" ಎಂದು ಪಾರ್ಥ ಹೇಳುತ್ತಾನೆ. ಇದೇ ರೀತಿ ಅಪೇಕ್ಷಾಳನ್ನು ಅಮ್ಮ ಸಮಧಾನ ಪಡಿಸ್ತಾರೆ.

ಮಲ್ಲಿ ಗರ್ಭಿಣಿಯಾಗಲು ಜೈದೇವ್‌ ಕಾರಣ, ಭೂಮಿಕಾಳಿಗೆ ತಿಳಿಯಿತು ಸತ್ಯ

ಇನ್ನೊಂದೆಡೆ ಗೌತಮ್‌ ಗೊರಕೆ ಹೊಡೆಯುತ್ತ ಮಲಗಿದ್ದಾರೆ. ಇನ್ನೊಂದೆಡೆ ಗೊರಕೆಯ ಸದ್ದಿಗೆ ನಿದ್ದೆಯಿಲ್ಲದೆ ಭೂಮಿಕಾ ಪರಿತಪಿಸುತ್ತ ಇದ್ದಾಗ ಏನೋ ನೆನಪಾಗುತ್ತದೆ. ಸಿಕ್ಕಾಪಟ್ಟೆ ತಲೆನೋವು ಆಗ್ತ ಇದೆ. ಪಾರ್ಟಿಗೆ ಹೋಗಿದ್ದೆ ಎಂದೆಲ್ಲ ಕನವರಿಸುತ್ತಾರೆ. ಅದೇ ಸಮಯದಲ್ಲಿ ಮಲ್ಲಿ ಹೇಳಿದ ಸಂಗತಿ ನೆನಪಾಗುತ್ತದೆ. ಏನೋ ತಲೆಯಲ್ಲಿ ಫ್ಲಾಷ್‌ ಆಗುತ್ತದೆ. "ಅವರು ತುಂಬಾ ದೊಡ್ಡವರು. ಅವರು ಯಾರು ಎಂದು ಗೊತ್ತಾದರೆ ನೀವು ಹೀಗೆ ಸಪೋರ್ಟ್‌ ನೀಡೋಲ್ಲ" ಎಂದದ್ದು ನೆನಪಾಗುತ್ತದೆ. ವಾಚ್‌ ಇತ್ಯಾದಿಗಳು ನೆನಪಾಗುತ್ತದೆ. ಮಲ್ಲಿ ಜತೆ ಮಾತನಾಡಬೇಕು ಎಂದುಕೊಂಡು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಹೋಗುತ್ತಾಳೆ. ಮಲ್ಲಿ ಮನೆಯ ಕದ ತಟ್ಟುತ್ತಾಳೆ. ಮಲ್ಲಿ ನಿದ್ದೆಯಿಂದ ಎದ್ದು ಬಾಗಿಲು ತೆರೆಯುತ್ತಾಳೆ ಮಲ್ಲಿ. ತಾತಾ ಇರುವುದಿಲ್ಲ. ಕಾಫಿ ಮಾಡಲೆಂದು ಮಲ್ಲಿ ಹೋದಾಗ ಹಿಂದೆಯೇ ಹೋದ ಭೂಮಿಕಾ "ಜೈದೇವ್‌ ಇಲ್ಲಿಗೆ ಬಂದಿದ್ರ?" ಎಂದು ಕೇಳುತ್ತಾರೆ. ಕೈಯಿಂದ ಟೀ ಪಾತ್ರೆ ಬೀಳುತ್ತದೆ.

ಮತ್ತೊಂದೆಡೆ ಅಪೇಕ್ಷಾ ಬೇಗ ಎದ್ದಿರುತ್ತಾಳೆ. ಅಲ್ಲಿಗೆ ತಂದೆ ಬರುತ್ತಾರೆ. ಯಾಕೆ ಒಂದು ರೀತಿ ಇದ್ದೀಯಾ? ಮದುವೆ ಬಗ್ಗೆ ಆತಂಕನ? ಎಂದು ಪ್ರಶ್ನಿಸುತ್ತಾರೆ. "ಜೀವನದಲ್ಲಿ ನಾವು ಎಲ್ಲಾ ಹಂತಗಳನ್ನು ದಾಟಿ ಮುಂದೆ ಹೋಗಬೇಕು. ಮದುವೆ ಎನ್ನುವುದು ಹೆಣ್ಣಿನ ಜೀವನದಲ್ಲಿ ತುಂಬಾ ಮಹತ್ವದ ಹಂತ" ಎಂದೆಲ್ಲ ಸದಾಶಿವ ತನ್ನ ಮಗಳಿಗೆ ಹೇಳುತ್ತಾರೆ. ಸದಾಶಿವ ಮತ್ತು ಮಂದಾಕಿಣಿ ಇಬ್ಬರ ಮಾತು ಕೂಡ "ಅಲ್ಲಿ ಭೂಮಿಕಾ ಇರುತ್ತಾಳೆ. ನಿನಗೆ ಒಳ್ಳೆಯ ಮನೆ ಸಿಕ್ಕಿದೆ" ಎಂದೇ ಮಾತನಾಡುತ್ತಾರೆ.

"ಮಲ್ಲಿ ನಿಜ ಹೇಳು. ಅದು ಜೈದೇವ್‌ನ. ಜೈದೇವ್‌ನೇ ಇದಕ್ಕೆ ಕಾರಣ" ಎಂದು ಭೂಮಿಕಾ ಕೇಳುತ್ತಾಳೆ. "ಮಲ್ಲಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳು. ಸತ್ಯ ಹೇಳು. ಇದಕ್ಕೆ ಕಾರಣ ಜೈದೇವ್‌ನ?" "ನೀನು ಹೀಗೆ ಮುಚ್ಚಿಟ್ಟರೆ ನಿನ್ನ ಜೀವನ ಮಾತ್ರವಲ್ಲದೆ ನನ್ನ ತಂಗಿ ಜೀವನನೂ ಹಾಳಾಗುತ್ತದೆ. ನಿನ್ನ ಹೊಟ್ಟೆಯೊಳಗಿರುವ ಮಗುವಿಗೆ ಕಾರಣ ಜೈದೇವ್‌ ತಾನೇ?" ಎಂದು ಭೂಮಿಕಾ ಪ್ರಶ್ನಿಸುತ್ತಾಳೆ. "ಹುಂ" ಎಂದು ಮಲ್ಲಿ ತಲೆಯಾಡಿಸುತ್ತಾಳೆ. ಸೀರಿಯಲ್‌ ಭಾನುವಾರಕ್ಕೆ ಮುಂದುವರೆಯುತ್ತದೆ.

ಅಮೃತಧಾರೆ ಧಾರಾವಾಹಿ ಪಾತ್ರ ಪರಿಚಯ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

ಟಿ20 ವರ್ಲ್ಡ್‌ಕಪ್ 2024