ಬಿಗ್‌ಬ್ರೋ ಗೌತಮ್‌ ಎದುರು ಥರಗುಟ್ಟುತ್ತಿದ್ದಾನೆ ಜೈದೇವ್‌, ಟೆಂಡರ್‌ ವಂಚನೆಯಿಂದ ಅಕ್ರಮ ಸಂಬಂಧದವರೆಗೆ ಎಲ್ಲಾ ಸತ್ಯ ಬಹಿರಂಗ- ಅಮೃತಧಾರೆ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬ್ರೋ ಗೌತಮ್‌ ಎದುರು ಥರಗುಟ್ಟುತ್ತಿದ್ದಾನೆ ಜೈದೇವ್‌, ಟೆಂಡರ್‌ ವಂಚನೆಯಿಂದ ಅಕ್ರಮ ಸಂಬಂಧದವರೆಗೆ ಎಲ್ಲಾ ಸತ್ಯ ಬಹಿರಂಗ- ಅಮೃತಧಾರೆ

ಬಿಗ್‌ಬ್ರೋ ಗೌತಮ್‌ ಎದುರು ಥರಗುಟ್ಟುತ್ತಿದ್ದಾನೆ ಜೈದೇವ್‌, ಟೆಂಡರ್‌ ವಂಚನೆಯಿಂದ ಅಕ್ರಮ ಸಂಬಂಧದವರೆಗೆ ಎಲ್ಲಾ ಸತ್ಯ ಬಹಿರಂಗ- ಅಮೃತಧಾರೆ

Gautam diwan enquire Jaidev: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಅಕ್ಟೋಬರ್‌ 7ರ ಸಂಚಿಕೆಯಲ್ಲಿ ಪ್ರಮುಖ ವಿದ್ಯಮಾನ ನಡೆದಿದೆ. ಜೈದೇವ್‌ನನ್ನು ಗೌತಮ್‌ ವಿಚಾರಣೆ ಮಾಡುತ್ತಿದ್ದಾರೆ. ಆತ ಮಾಡಿದ ಒಂದೊಂದು ಪಾಪಕಾರ್ಯಗಳನ್ನು ಬಿಚ್ಚಿಡುತ್ತಿದ್ದಾರೆ.

ಟೆಂಡರ್‌ ಮೋಸದಿಂದ ದಿಯಾಳ ಜತೆ ಅಕ್ರಮ ಸಂಬಂಧದವರೆಗೆ ಎಲ್ಲಾ ಸತ್ಯ ಬಹಿರಂಗ- ಅಮೃತಧಾರೆ
ಟೆಂಡರ್‌ ಮೋಸದಿಂದ ದಿಯಾಳ ಜತೆ ಅಕ್ರಮ ಸಂಬಂಧದವರೆಗೆ ಎಲ್ಲಾ ಸತ್ಯ ಬಹಿರಂಗ- ಅಮೃತಧಾರೆ

Amruthadhaare Kannada Serial: ಚಮಕ್‌ಚಲ್ಲೋ ದಿಯಾಳನ್ನು ಭೇಟಿಯಾಗಲು ಜೈದೇವ್‌ ಆಗಮಿಸಿದ್ದಾನೆ. ಆತ ತಡವಾಗಿ ಬಂದಿರುವುದಕ್ಕೆ ದಿಯಾ ಕೋಪದಿಂದ ಇರುತ್ತಾಳೆ. ಆತ ತನ್ನದೇ ಶೈಲಿಯಲ್ಲಿ ಸಮಾಧಾನ ಮಾಡುತ್ತಾನೆ. "ನನ್ನ ಜೀವನದಲ್ಲಿ ಇವತ್ತು ಬಂಪರ್‌ ದಿನ, ದೊಡ್ಡ ಡೀಲ್‌ಗೆ ಕೈಹಾಕಿದ್ದೇನೆ, ಅದು ಆದ್ರೆ ನನ್ನ ಜೀವನದಲ್ಲಿ ಲಾಟರಿ" ಎಂದು ಜೈದೇವ್‌ ಹೇಳುತ್ತಾನೆ. "ಇನ್ಮುಂದೆ ಎಲ್ಲದಕ್ಕೂ ಬ್ರೇಕ್‌, ನಾನು ರಾಜಾರೋಷವಾಗಿ ನಿನ್ನ ಭೇಟಿಯಾಗ್ತಿನಿ" ಎಂದು ಹೇಳುತ್ತಾನೆ. "ಮಲ್ಲಿಗೆ ನಮ್ಮಿಬ್ಬರ ವಿಷಯ ಗೊತ್ತಾಯ್ತು. ಆಕ್ಸಿಡೆಂಟ್‌ ಆದಾಗ ನಮ್ಮಿಬ್ಬರನ್ನು ನೋಡಿದ್ದಾಳೆ. ಗೊತ್ತಾದದ್ದು ಒಳ್ಳೆಯದಾಯ್ತು. ಇನ್ನು ಕದ್ದುಮುಚ್ಚಿ ಭೇಟಿಯಾಗೋ ಅಗತ್ಯವಿಲ್ಲ" ಎಂದು ಹೇಳುತ್ತಾನೆ. "ಅವಳು ಅಣ್ಣನತ್ರ ಹೇಳಿದ್ರೆ ಏನು ಮಾಡ್ತಿ?" ಎಂದು ಕೇಳುತ್ತಾಳೆ. "ಅವಳನ್ನು ಹೇಗೆ ಟೈಟ್‌ ಮಾಡಬೇಕೋ ಅಷ್ಟು ಟೈಟ್‌ ಮಾಡಿದ್ದೀನಿ. ಅವಳು ಬಾಯಿ ಬಿಡೋದಿಲ್ಲ" ಎಂದು ಹೇಳುತ್ತಾನೆ. ಹೀಗೆ, ಚಮಕ್‌ಚಲ್ಲೋ ಜತೆ ಹಾಯಾಗಿ ಕಾಲಕಳೆಯುತ್ತಾನೆ. ಆದರೆ, ಮುಂದೆ ಮಾರಿಹಬ್ಬ ಕಾದಿದೆ ಎಂದು ಅವನಿಗೆ ಗೊತ್ತಿಲ್ಲ.

ಗೌತಮ್‌ಗೆ ಗೊತ್ತಾಯ್ತು ಜೈದೇವ್‌ನ ನಿಜಬಣ್ಣ

ಈಗಾಗಲೇ ಭೂಮಿಕಾ, ಆನಂದ್‌, ಅಪರ್ಣಾ ಸಾಕ್ಷ್ಯ ಸಮೇತ ಗೌತಮ್‌ಗೆ ಎಲ್ಲಾ ಮಾಹಿತಿ ನೀಡಿದ್ದಾರೆ. ಪಾರ್ಥನ ಕೊಲೆಯತ್ನ, ಆನಂದ್‌ನ ಕೊಲೆ ಪ್ರಯತ್ನ, ಭೂಮಿಕಾಳ ಕಿಡ್ನ್ಯಾಪ್‌, ಟೆಂಡರ್‌ ತಪ್ಪಿಸಿದ್ದು ಸೇರಿದಂತೆ ಎಲ್ಲಾ ವಿಚಾರಗಳನ್ನು ಸಾಕ್ಷ್ಯ ಸಮೇತ ಹೇಳಿದ್ದಾರೆ. "ನಿನ್ನ ಒಳ್ಳೆಯತನವನ್ನು ಅವನು ಮಿಸ್‌ ಯೂಸ್‌ ಮಾಡಿಕೊಂಡಿದ್ದಾನೆ" ಎಂದು ಆನಂದ್‌ ಹೇಳುತ್ತಾನೆ. "ಅವನು ತುಂಬಾ ಡೇಂಜರ್‌, ದೊಡ್ಡ ಸೈಕೋ" ಎಂದು ಹೇಳುತ್ತಾರೆ ಎಲ್ಲರೂ. "ಅವಳ ಅಪ್ಪನ ಜತೆ ದೆಹಲಿಗೆ ಹೋಗಲು ವ್ಯವಸ್ಥೆ ಮಾಡಿದ್ದೇನಲ್ವ" ಎಂದು ಗೌತಮ್‌ ಹೇಳುತ್ತಾನೆ. ವಿಶ್ವನಾಥ್‌ಗೆ ಕಾಲ್‌ ಮಾಡಿದಾಗ ನಾನೊಬ್ಬನೇ ದೆಹಲಿಗೆ ಬಂದದ್ದು ಎನ್ನುತ್ತಾನೆ. ಇನ್ನೊಂದೆಡೆ ಈ ಎಲ್ಲಾ ಮಾತುಗಳನ್ನು ಮಲ್ಲಿ ಕೇಳಿಸಿಕೊಳ್ಳುತ್ತಿದ್ದಾಳೆ. "ಜೈದೇವ್‌ನ ನಂಬಿ ಕೆಟ್ಟೆ" ಎಂದು ಗೌತಮ್‌ ಹೇಳುತ್ತಾರೆ.

ಆ ಸಮಯದಲ್ಲಿ ಮಲ್ಲಿ ಅಳುತ್ತಾ ಬರುತ್ತಾಳೆ. "ಭಾವರೇ ನಾನು ಆಗಲೇ ನಿಮ್‌ ತಾವ ಏನೋ ಹೇಳಲು ಬಂದೆ. ಅವರು ತಡೆದುಬಿಟ್ರು" ಎಂದು ಮಲ್ಲಿ ಹೇಳುತ್ತಾಳೆ. ನಾನು ಏನಾದ್ರೂ ಹೇಳಿದ್ರೆ ತಾತಾನ ಸಾಯಿಸ್ತಿನಿ ಎಂದು ಹೇಳಿದ್ದಾರೆ. ತಾತಾನ ನೀವೇ ಕಾಪಾಡಬೇಕು ಎಂದು ಮಲ್ಲಿ ಬೇಡಿಕೊಳ್ಳುತ್ತಾಳೆ. ಏನಾಯ್ತು ಎಂದು ಗೌತಮ್‌ ಕೇಳುತ್ತಾಳೆ. ಸೀಮಂತ ಶಾಸ್ತ್ರ ಮುಗಿಸಿ ಹೋದ ಬಳಿಕ ನಡೆದ ಎಲ್ಲಾ ಘಟನೆಗಳನ್ನು ಹೇಳುತ್ತಾಳೆ. ದಿಯಾ ಮತ್ತು ಜೈದೇವ್‌ ಜತೆಗೆ ಇದ್ದದ್ದು, ಆಸ್ಪತ್ರೆಯಲ್ಲಿ ಮಾಡಿದ ಕೊಲೆಪ್ರಯತ್ನ, ಎಲ್ಲವನ್ನೂ ಹೇಳುತ್ತಾಳೆ. ಈಗ ತಾತಾನ ಎಲ್ಲೋ ಕೂಡಿಹಾಕಿ ಬೆದರಿಸ್ತಾ ಇದ್ದಾರೆ ಎಂದು ಹೇಳುತ್ತಾಳೆ.

ಚಮಕ್‌ಚಲ್ಲೋ ಜತೆ ಇದ್ದ ಜೈದೇವ್‌ಗೆ ಕಾಲ್‌ ಬರುತ್ತದೆ. ಪ್ರೋಗ್ರಾಂ ಕ್ಯಾನ್ಸಲ್‌ ಮಾಡಿ ತಕ್ಷಣ ವಾಪಸ್‌ ಬಾ ಎಂದು ಗೌತಮ್‌ ಹೇಳುತ್ತಾರೆ. ಟೆಂಡರ್‌ ಕುರಿತು ಇನ್ನೊಂದು ಡಿಸ್ಕಷನ್‌ ಇತ್ತು, ಬಾ ನೀನು ಮನೆಗೆ ಬಾ, ಮಾತನಾಡೋಣ" ಎನ್ನುತ್ತಾರೆ. ಅನಿವಾರ್ಯವಾಗಿ ವಾಪಸ್‌ ಬರಬೇಕಾಗುತ್ತದೆ ಜೈದೇವ್‌.

ಎಲ್ಲರೂ ಮನೆಯಲ್ಲಿ ಜೈದೇವ್‌ಗೆ ಕಾಯುತ್ತಿದ್ದಾರೆ. ನಾನು ಯಾರು ಎಂದು ಹಾಡು ಹೇಳುತ್ತಾ ಜೈದೇವ್‌ ಎಂಟ್ರಿ ನೀಡುತ್ತಾನೆ. ಎಲ್ಲರೂ ಕಾಯುತ್ತ ನಿಂತಿರುವುದು ನೋಡಿ ಆತನಿಗೆ ಅಚ್ಚರಿಯಾಗುತ್ತದೆ. "ಬ್ರೋ ಬಂದೆ, ಏನು ಎಲ್ಲಾ ಫ್ಯಾಮಿಲಿಯವರು ಒಟ್ಟಿಗೆ ಸೇರಿದ್ದೀರಿ" ಎಂದು ಕೇಳುತ್ತಾನೆ. "ಒಂದಿಷ್ಟು ಡೌಟ್ಸ್‌ ಇತ್ತು, ಕ್ಲಿಯರ್‌ ಮಾಡಬೇಕಿತ್ತು" ಎಂದು ಗೌತಮ್‌ ಹೇಳುತ್ತಾರೆ. ಮೊದಲಿಗೆ ಕಳೆದುಕೊಂಡ ಹಳೆಯ ಟೆಂಡರ್‌ ಬಗ್ಗೆ ಕೇಳುತ್ತಾನೆ. ಇದು ಮಾಡಿದ್ದು ಯಾರೆಂದು ನಮಗೆ ಗೊತ್ತಾಗಿದೆ, ಒಂದು ಫೋಟೋ ಕಳುಹಿಸಿದ್ದಾರೆ ಎಂದು ಗೌತಮ್‌ ಮೊಬೈಲ್‌ನಲ್ಲಿ ಜೈದೇವ್‌ನ ಫೋಟೋ ತೋರಿಸುತ್ತಾರೆ. ಮೊಬೈಲ್‌ನಲ್ಲಿ ಫ್ರಂಟ್‌ ಕ್ಯಾಮೆರಾ ಆನ್‌ ಮಾಡಿ ತೋರಿಸುತ್ತಾನೆ. ಅದರಲ್ಲಿ ಜೈದೇವ್‌ ಸೆಲ್ಫಿ ಕಾಣಿಸುತ್ತದೆ. ವಿಷಯದ ಗಂಭೀರತೆ ಜೈದೇವ್‌ಗೆ ಗೊತ್ತಾಗುತ್ತದೆ. "ನಾಣು ಏನೂ ಮಾಡಿಲ್ಲ ಬ್ರೋ" ಎಂದು ಹೇಳುತ್ತಾನೆ ಜೈದೇವ್‌.

"ಸ್ಟಾಪ್‌ ದಿಸ್‌ ಡ್ರಾಮಾ ಜೈ, ಇನಫ್‌" ಎಂದು ಗೌತಮ್‌ ಅಬ್ಬರಿಸುತ್ತಾರೆ. "ನನ್ನಲ್ಲಿ ನೀನು ಮಾಡಿರುವ ಎಲ್ಲಾ ಘನಕಾರ್ಯಗಳ ಲಿಸ್ಟ್‌ ಇದೆ. ಇಲ್ಲಾಂದ್ರೆ ಪಾರಾಗಲು ದಾರಿ ಹುಡುಕ್ತಿ. ನಿನ್ನ ಎಲ್ಲಾ ದಾರಿ ಬಂದ್‌ ಆಗಿದೆ" ಎಂದು ಹೇಳುತ್ತಾರೆ ಗೌತಮ್‌. "ಏನು ಸಾಕ್ಷಿ ಬ್ರೋ" ಎಂದು ಜೈ ಕೇಳುತ್ತಾನೆ. ಟೆಂಡರ್‌ ಪಡೆದ ಉಮಾಶಂಕರ್‌ ಬರುತ್ತಾರೆ. "ಇವರೇ ಅಲ್ವಾ ನಿನಗೆ ದುಡ್ಡು ತಂದುಕೊಟ್ಟದ್ದು" ಎಂದು ಕೇಳಿದಾಗ ಜೈದೇವ್‌ ತಬ್ಬಿಬ್ಬಾಗುತ್ತಾನೆ. "ಟೆಂಡರ್‌ ಲೀಕ್‌ ಮಾಡಿದ್ದಕ್ಕೆ ಎಷ್ಟು ಕೊಟ್ಟಿದ್ದೀರಿ" ಎಂದು ಗೌತಮ್‌ ಕೇಳಿದಾಗ ಉಮಾಶಂಕರ್‌ "ಎರಡು ಕೋಟಿ ಕೊಟ್ಟಿದ್ದೆ ಸರ್‌" ಎಂದು ಹೇಳುತ್ತಾರೆ. "ಮನೆಯಲ್ಲೇ ನೂರಾರು ಕೋಟಿ ಇದೆ, ಎರಡು ಕೋಟಿಗೆ ನಿನ್ನನ್ನು ನೀನು ಮಾರಿಕೊಂಡ್ಯ" ಎಂದು ಗೌತಮ್‌ ಕೇಳುತ್ತಾರೆ. ಈ ಸಂದರ್ಭದಲ್ಲಿ ಶಕುಂತಲಾದೇವಿ "ಗೌತಮ್‌" ಎಂದಾಗ ಸುಮ್ಮನಿರಮ್ಮ ಎಂದು ಗೌತಮ್‌ ತಡೆಯುತ್ತಾರೆ. "ಇವತ್ತು ಯಾರೂ ಇವನ ಪರ ಮಾತನಾಡಬೇಡಿ. ಇವನು ಮಾಡಿದ್ದು ಕೇಳಿದ್ರೆ ಶಾಕ್‌ ಆಗ್ತೀರ, ಅಸಹ್ಯ ಆಗುತ್ತೆ" ಎಂದು ಗೌತಮ್‌ ಹೇಳುತ್ತಾರೆ.

"ಮನೆಯಲ್ಲಿ ಬಂಗಾರದಂತಹ ಹೆಂಡತಿ ಇದ್ದರೂ ಹೊರಗೆ ದಿಯಾಳ ಜತೆ ಅಫೇರ್‌ ಇಟ್ಟುಕೊಂಡಿದ್ದಾನೆ" ಎಂದು ಗೌತಮ್‌ ಹೇಳುತ್ತಾರೆ. ಶಕುಂತಲಾದೇವಿಗೂ ಅಚ್ಚರಿಯಾಗುತ್ತದೆ. ಹೀಗೆ ಜೈದೇವ್‌ನ ಒಂದೊಂದು ಬಣ್ಣ ಬಿಚ್ಚುತ್ತ ಹೋಗುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಧಾರಾವಾಹಿಯ ಎಲ್ಲಾ ಎಪಿಸೋಡ್‌ಗಳು ಇಲ್ಲಿವೆ ಓದಿ

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner