ಕನ್ನಡ ಸುದ್ದಿ  /  Entertainment  /  Television News Amruthadhaare Serial Episode April 1 Malli Jaidev Love Shakuntaladevi Drama Deepansu Blackmail Pcp

Amruthadhaare: ಮಲ್ಲಿ ಜತೆ ಜೈದೇವ್‌ ಸರಸ, ಮುಂದುವರೆದ ಶಕುಂತಲಾದೇವಿ ನಾಟಕ; ದಿಪಾನ್ಶು ಬೆದರಿಕೆಯಿಂದ ಮಹಿಮಾಳಿಗೆ ಸಂಕಟ

Amruthadhaare Serial Story: ಶಕುಂತಲಾದೇವಿ ನಾಟಕ ಯಶಸ್ವಿಯಾಗಿದೆ. ಗೌತಮ್‌ ನಿದ್ದೆ ಬಿಟ್ಟು ತಾಯಿ ಸೇವೆಗೆ ನಿಂತಿದ್ದಾನೆ. ಜೈದೇವ್‌ ಪ್ರೀತಿ ಕುರಿತು ಭೂಮಿಕಾಳಿಗೆ ಅನುಮಾನ ಬಂದಿದೆ. ದೀಪಾನ್ಶು ಮಹಿಮಾಳನ್ನು ಬ್ಲ್ಯಾಕ್‌ಮೇಲ್‌ ಮಾಡುವುದನ್ನು ಮುಂದುವರೆಸಿದ್ದಾನೆ.

ಮುಂದುವರೆದ ಶಕುಂತಲಾದೇವಿ ನಾಟಕ
ಮುಂದುವರೆದ ಶಕುಂತಲಾದೇವಿ ನಾಟಕ

Amruthadhaare: ತನ್ನ ತಾಯಿ ನಾಟಕ ಮಾಡಿದ್ದು ತಿಳಿದು ಜೈದೇವ್‌ ಖುಷಿ ಪಡುತ್ತಾನೆ. "ಗೌತಮ್‌ ಸ್ವಲ್ಪ ಟ್ರ್ಯಾಕ್‌ ತಪ್ಪಿದ್ದಾನೆ, ಅದಕ್ಕೆ ಒಂದು ಬಾಂಬ್‌ ಹಾಕಿದೆ" ಎಂದು ಶಕುಂತಲಾದೇವಿ ಹೇಳುತ್ತಾರೆ. "ಇಂದು ಗೌತಮ್‌ ಎಲ್ಲೂ ಹೋಗೋಲ್ಲ, ಇಲ್ಲೇ ಇರ್ತಾನೆ" ಎಂದು ಅವರು ಹೇಳುತ್ತಾರೆ. ಗೌತಮ್‌ ತನ್ನ ತಾಯಿಯ ಕುರಿತು ಯೋಚನೆ ಮಾಡ್ತಾ ಇರುತ್ತಾನೆ. ನಾನು ತಾಯಿಯ ಕಡೆಗೆ ಕಡಿಮೆ ಗಮನ ಕೊಟ್ಟಿದ್ದೇನೆ ಎಂದೆಲ್ಲ ಭೂಮಿಕಾಳ ಬಳಿ ಹೇಳುತ್ತಾನೆ. ಭೂಮಿಕಾ ಸಾಧ್ಯವಿರುವಷ್ಟು ಸಮಧಾನ ಹೇಳುತ್ತಾಳೆ. ತಾಯಿಯ ಬಳಿಯೇ ನಿದ್ದೆ ಮಾಡಲು ಹೋಗುತ್ತಾನೆ. "ನಿನಗ್ಯಾಕೆ ತೊಂದರೆ, ಅಶ್ವಿನಿ ಇರ್ತಾಳೆ" ಎಂದು ಶಕುಂತಲಾದೇವಿ ಹೇಳುತ್ತಾರೆ. ಗೌತಮ್‌ ಮಾತ್ರೆ ಕೊಟ್ಟಾಗ ಸುಮ್ಮನೆ ಮಾತ್ರೆ ತಿಂದ ರೀತಿ ನಾಟಕವಾಡುತ್ತಾಳೆ. ರಾತ್ರಿ ನಿದ್ದೆಗೆಟ್ಟು ಶಕುಂತಲಾನ ನೋಡಿಕೊಳ್ಳುತ್ತಾನೆ. "ಮಾಡು ಮಾಡು ಚೆನ್ನಾಗಿ ಸೇವೆ ಮಾಡು" ಎಂದು ಶಕುಂತಲಾ ಮನದಲ್ಲಿ ಅಂದುಕೊಳ್ಳುತ್ತಾಳೆ.

ಮಲ್ಲಿ ಓದುತ್ತ ಇರುತ್ತಾಳೆ. "ಯಾಕೆ ಇಷ್ಟೆಲ್ಲ ಕಷ್ಟಪಟ್ಟು ಓದ್ತಾ ಇದ್ದೀಯಾ, ನಿನ್ನಲ್ಲಿ ಎಲ್ಲವೂ ಇದೆ ಅಲ್ವ? ಯಾಕೆ ಕಷ್ಟಪಡ್ತಾ ಇದ್ದೀ?" ಎಂದು ಜೈದೇವ್‌ ಕೇಳುತ್ತಾನೆ. "ನನ್ನದ್ದು ಏನೂ ಇಲ್ಲ, ಏನಾದರೂ ಸಾಧನೆ ಮಾಡಬೇಕು. ಭೂಮಿಕಾ ಅತ್ತಿಗೆ ಹೇಳ್ತಾ ಇದ್ರು" ಎಂದು ಮಲ್ಲಿ ಹೇಳುತ್ತಾಳೆ. "ಭೂಮಿಕಾಳ ಬಗ್ಗೆ ನನ್ನ ಎದುರು ಹೊಗಳ್ತಾ ಇದ್ದೀಯ" ಎಂದು ಮನಸ್ಸಿನಲ್ಲಿ ಕೋಪಗೊಳ್ಳುತ್ತಾನೆ.

ಶಕುಂತಲಾದೇವಿ ಅವರಿಗೆ ಟ್ಯಾಬ್ಲೆಟ್‌ ನೀಡಬೇಕು ಎಂದು ಭೂಮಿಕಾ ನೆನಪಿಸ್ತಾಳೆ. ಗೌತಮ್‌ ಎಬ್ಬಿಸಿ ಟ್ಯಾಬ್ಲೆಟ್‌ ಕೊಡುತ್ತಾನೆ. ಶಕುಂತಲಾ ಟ್ಯಾಬ್ಲೆಟ್‌ ತಿಂದ ಹಾಗೆ ನಾಟಕವಾಡುತ್ತಾಳೆ. ನಾನು ನೋಡಿಕೊಳ್ಳುವೆ ಎಂದು ಭೂಮಿಕಾ ಹೇಳಿದರೂ ಗೌತಮ್‌ ಕೇಳುವುದಿಲ್ಲ. "ನನ್ನ ಪ್ಲ್ಯಾನ್‌ ಸರಿಯಾಗಿಯೇ ವರ್ಕ್‌ ಆಗ್ತಾ ಇದೆ" ಎಂದು ಶಕುಂತಲಾದೇವಿ ಅಂದುಕೊಳ್ಳುತ್ತಾರೆ. ಅಲ್ಲಿಯೇ ಭೂಮಿಕಾ ಮತ್ತು ಗೌತಮ್‌ ಕಾಫಿ ಕುಡಿಯುತ್ತಾ ಕುಳಿತುಕೊಳ್ಳುತ್ತಾರೆ. ನೀವು ನನ್ನ ಕಾಲಬುಡದಲ್ಲೇ ಬಿದ್ದಿರಬೇಕು ಎಂದು ಶಕುಂತಲಾ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ.

ಮರುದಿನವೂ ಇದೇ ಡ್ರಾಮಾ ಮುಂದುವರೆಯುತ್ತದೆ. "ಈ ಮನೆಯಲ್ಲಿ ಏನೋ ತೊಂದರೆ ಇದೆ, ಏನೋ ನೆಗೆಟಿವ್‌ ವೈಬ್‌ ಇದೆ" ಎಂದು ಶಕುಂತಲಾ ದೇವಿ ಹೇಳುತ್ತಾರೆ. "ಇದು ಏನೋ ಕೆಟ್ಟ ಸೂಚನೆ. ಏನೋ ಕೆಟ್ಟದಾಗುತ್ತದೆ ಎಂಬ ಭಯ ಇದೆ" ಎಂದು ಹೇಳುತ್ತಾಳೆ. "ಆಗಿದ್ದೇಲ್ಲ ಒಳ್ಳೆಯದಕ್ಕೆ, ಅದರ ಬಗ್ಗೆ ಯೋಚನೆ ಬೇಡ" ಎಂದು ಗೌತಮ್‌ ಹೇಳುತ್ತಾನೆ. "ನಮ್ಮ ಎಲ್ಲರ ಜಾತಕವನ್ನು ಗುರುಗಳ ಹತ್ತಿರ ತೋರಿಸೋಣ" ಎಂದು ಶಕುಂತಲಾದೇವಿ ಹೇಳುತ್ತಾರೆ. ಓಕೆ ಅಮ್ಮ ನಿಮಗೆ ಸಮಧಾನ ಆಗೋದಾದ್ರೆ ಹಾಗೆಯೇ ಮಾಡಿ ಎನ್ನುತ್ತಾನೆ. "ಟಾಸ್‌ ಗೆದ್ದಾಯ್ತು, ಇನ್ನು ಆಟ ಶುರು" ಎಂದು ಶಕುಂತಲಾ ಅಂದುಕೊಳ್ಳುತ್ತಾಳೆ

ಜೈದೇವ್‌ಗೆ ಕಾಫಿ ತಂದುಕೊಡುತ್ತಾಳೆ ಮಲ್ಲಿ. ಜೈದೇವ್‌ ಒಂದಿಷ್ಟು ಸರಸದ ಮಾತುಗಳನ್ನಾಡುತ್ತಾನೆ. ಒಂದಿಷ್ಟು ರೋಮಾನ್ಸ್‌ ಮಾಡುವ ಪ್ರಯತ್ನ ಮಾಡುತ್ತಾನೆ. ಆಗ ಅಲ್ಲಿಗೆ ಭೂಮಿಕಾ ಬರುತ್ತಾಳೆ. ಜೈದೇವ್‌ ಹೋಗುತ್ತಾನೆ. "ಓದುವ ಬಗ್ಗೆ ಗಮನ ನೀಡಬೇಕು, ಗುರಿಯ ಕುರಿತು ಗಮನ ತಪ್ಪಬಾರದು" ಎಂದು ಭೂಮಿಕಾ ಹೇಳುತ್ತಾಳೆ. ಭೂಮಿಕಾ ಹೋದ ತಕ್ಷಣ ಮಲ್ಲಿಯನ್ನು ಹಿಂದಿನಿಂದ ತಬ್ಬಿಕೊಳ್ಳುತ್ತಾನೆ. ಅವಳ ಹಾ ಅಂದದ್ದು ಭೂಮಿಕಾ ಕಿವಿಗೆ ಬೀಳುತ್ತದೆ. ಮಲ್ಲಿ ಜತೆ ನಿಜವಾಗಿಯೂ ಜೈದೇವ್‌ ಚೆನ್ನಾಗಿದ್ದಾನ ಅಥವಾ ಡ್ರಾಮಾ ಮಾಡುತ್ತಾನ ಎಂದು ಭೂಮಿಕಾ ಯೋಚಿಸುತ್ತಾಳೆ. ಇನ್ನೊಂದೆಡೆ ಮಲ್ಲಿಯನ್ನು ಓದಲು ಬಿಡದೆ ಜೈದೇವ್‌ ಮಾತನಾಡುತ್ತ ಇರುತ್ತಾನೆ.

ಮತ್ತೊಂದೆಡೆ ಮಹಿಮಾ ಇರುವಲ್ಲಿಗೆ ದೀಪಾನ್ಶು ಬರುತ್ತಾನೆ. "ನಾನು ಹೇಳಿದರ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀಯ?" ಎಂದು ಕೇಳುತ್ತಾನೆ. "ನಿನ್ನನ್ನು ಒಳ್ಳೆಯ ಫ್ರೆಂಡ್‌ ಅಂದುಕೊಂಡಿದ್ದೆ, ಎಷ್ಟು ಚೀಫ್‌ ಆಗಿ ಬಿಹೇವ್‌ ಮಾಡ್ತಾ ಇದ್ದೀಯಾ" ಎಂದು ಹೇಳುತ್ತಾನೆ. "ರಿಜೆಕ್ಷನ್‌ ಅನ್ನೋದನ್ನು ಸಹಿಸಲಾಗದು" ಎಂದು ಹೇಳುತ್ತಾನೆ. "ನೀನು ನನ್ನ ಲವ್‌ ಆಸೆಪ್ಟ್‌ ಮಾಡಲೇಬೇಕು, ಇಲ್ಲದೆ ಇದ್ದರೆ ಮುಂದೆ ಅನುಭವಿಸುವೆ" ಎಂದು ಹೇಳುತ್ತಾನೆ. ನೀನು ನನ್ನ ಲವ್‌ ಆಸೆಪ್ಟ್‌ ಮಾಡದೆ ಇದ್ದರೆ ಎಲ್ಲವನ್ನೂ ನಿನ್ನ ಮನೆಯಲ್ಲಿ ಹೇಳುವೆ. ನೀನು ನಿನ್ನ ಮಗುವನ್ನು ಅಬಾರ್ಟ್‌ ಮಾಡಿದ್ದು ಎಲ್ಲವನ್ನೂ ಹೇಳುವೆ ಎಂದು ಬೆದರಿಸುತ್ತಾನೆ. ನಾನು ಕರೆದಾಗ ನೀನು ಬರಲೇಬೇಕು ಇಲ್ಲಾ ಎಲ್ಲಾ ಹೇಳುವೆ ಎಂದು ಬೆದರಿಸುತ್ತಾನೆ. ಮಹಿಮಾ ಇಕ್ಕಟ್ಟಿನಲ್ಲಿ ಸಿಲುಕಿಕೊಳ್ಳುತ್ತಾಳೆ. ಅಮೃತಧಾರೆ ಧಾರಾವಾಹಿ ಮುಂದಿನ ಸಂಚಿಕೆಗೆ ಮುಂದುವರೆದಿದೆ.